Login or Register ಅತ್ಯುತ್ತಮ CarDekho experience ಗೆ
Login

ಕೆಲವು ಡೀಲರ್‌ಶಿಪ್‌ಗಳಲ್ಲಿ ಪ್ರಾರಂಭವಾಗಿದೆ Tata Nexon Faceliftನ ಆಫ್‌ಲೈನ್ ಬುಕಿಂಗ್‌ಗಳು

published on ಸೆಪ್ಟೆಂಬರ್ 01, 2023 07:23 pm by rohit for ಟಾಟಾ ನೆಕ್ಸ್ಂನ್‌

ನೆಕ್ಸಾನ್ EV ಫೇಸ್‌ಲಿಫ್ಟ್‌ನೊಂದಿಗೆ ನವೀಕೃತ ಟಾಟಾ ನೆಕ್ಸಾನ್ ಸೆಪ್ಟೆಂಬರ್ 14 ರಂದು ಮಾರಾಟಕ್ಕೆ ಲಭ್ಯವಾಗಲಿದೆ

  • ಟಾಟಾ ತನ್ನ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಎರಡನೇ ಬಾರಿಗೆ ನವೀಕರಿಸಿದೆ; 2020 ರಲ್ಲಿ ಮೊದಲ ಬಾರಿ ನವೀಕರಿಸಿತ್ತು.
  • ಹೊರಭಾಗದ ಪರಿಷ್ಕರಣೆಗಳಲ್ಲಿ ಹೊಸ ಮುಂಭಾಗದ ವಿನ್ಯಾಸ, ಹೊಸ ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ ಟೈಲ್‌ಲೈಟ್‌ಗಳು ಸೇರಿವೆ.
  • ಒಳಭಾಗದಲ್ಲಿ, ಇದು ಕರ್ವ್ ತರಹದ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಡ್ಯುಯಲ್-ಟೋನ್ ಥೀಮ್ ಅನ್ನು ಪಡೆಯುತ್ತದೆ.
  • ಹೊಸ ನೆಕ್ಸಾನ್‌ನಲ್ಲಿನ ಫೀಚರ್‌ಗಳಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಮತ್ತು ಆರು ಏರ್‌ಬ್ಯಾಗ್‌ಗಳು ಸೇರಿವೆ.
  • ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಾಗಲಿದೆ; ಟಾಟಾದ ಹೊಸ 1.2-ಲೀಟರ್ ಟರ್ಬೊ ಯುನಿಟ್ ಅನ್ನು ಸಹ ಪಡೆಯಬಹುದು.
  • ಬೆಲೆಗಳು ರೂ. 8 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು.

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಭಾರತದಲ್ಲಿ ಸೆಪ್ಟೆಂಬರ್ 14 ರಂದು ಬಿಡುಗಡೆಯಾಗಲಿದೆ. ಇದುವರೆಗಿನ ಪರೀಕ್ಷೆಯ ಸಮಯದಲ್ಲಿ ಇದನ್ನು ಹಲವಾರು ಬಾರಿ ಗುರುತಿಸಲಾಗಿದೆ, ಇದರಿಂದಾಗಿ ಅದರ ಹೊರಭಾಗ ಮತ್ತು ಒಳಭಾಗದ ಅಪ್‌ಡೇಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯು ಲಭ್ಯವಾಗಿದೆ. ಈಗ ಕೆಲವು ಡೀಲರ್‌ಶಿಪ್‌ಗಳು ಹೊಸ ನೆಕ್ಸಾನ್ ಕಾರಿಗೆ ಆಫ್‌ಲೈನ್ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿವೆ. 2020 ರ ಆರಂಭಿಕ ನವೀಕರಣದ ನಂತರ ಟಾಟಾ ಎಸ್‌ಯುವಿಗೆ ಇದು ಎರಡನೇ ಅತಿದೊಡ್ಡ ನವೀಕರಣ ಆಗಿದೆ. ಇಲ್ಲಿಯವರೆಗೆ ನಮಗೆ ತಿಳಿದಿರುವ ಎಲ್ಲಾ ಮಾಹಿತಿಯ ಬಗ್ಗೆ ತ್ವರಿತ ಅವಲೋಕನವನ್ನು ಕೆಳಗೆ ನೀಡಲಾಗಿದೆ.

ಹೊರಭಾಗದಲ್ಲಿ ಏನೇನು ಬದಲಾವಣೆಗಳನ್ನು ಮಾಡಲಾಗಿದೆ?

ಇದರ ಮುಂಭಾಗದ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಮುಂಭಾಗದಲ್ಲಿ, ಇದು ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳು, ಸ್ಲೀಕರ್ ಗ್ರಿಲ್ ಮತ್ತು ಹೊಸ ಎಲ್‌ಇಡಿ DRLಗಳನ್ನು ಪಡೆಯುತ್ತದೆ. ಹೊಸ ನೆಕ್ಸಾನ್‌ನ ಬಂಪರ್ ಕೂಡ ಹೊಸದಾಗಿದೆ.

ಹೊಸ ಅಲಾಯ್ ವ್ಹೀಲ್‌ಗಳನ್ನು ಹೊರತುಪಡಿಸಿ ಸೈಡ್ ಪ್ರೊಫೈಲ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ. ನೆಕ್ಸಾನ್ EV ಯಲ್ಲಿಯೂ ಟಾಟಾ ಈ ಎಲ್ಲಾ ಪರಿಷ್ಕರಣೆಗಳನ್ನು ಒದಗಿಸುವ ಸಾಧ್ಯತೆಯಿದೆ, ಇದು EV-ನಿರ್ದಿಷ್ಟ ಬ್ಲ್ಯೂ ಹೈಲೈಟ್‌ಗಳು ಮತ್ತು ಮುಚ್ಚಿದ ಪ್ಯಾನೆಲ್‌ಗಳನ್ನು ಹೊಂದಿರುತ್ತದೆ.

ಹೊಸ ನೆಕ್ಸಾನ್‌ನ ರಿಯರ್ ಪ್ರೊಫೈಲ್ ಈಗ ಸ್ಲಿಮ್ಮರ್ ಮತ್ತು ಸಂಪರ್ಕಿತ ಎಲ್‌ಇಡಿ ಟೈಲ್‌ಲೈಟ್ ಸೆಟಪ್, 'ನೆಕ್ಸಾನ್' ಬ್ಯಾಡ್ಜಿಂಗ್ ಹೊಂದಿರುವ ಪರಿಷ್ಕೃತ ಟೈಲ್‌ಗೇಟ್ ಮತ್ತು ಫಾಕ್ಸ್ ಸ್ಕಿಡ್ ಪ್ಲೇಟ್‌ನೊಂದಿಗೆ ವಿಶಾಲವಾದ ಬಂಪರ್ ಅನ್ನು ಹೊಂದಿದೆ. ಹಿಂಬದಿಯ ಬಂಪರ್ ಕೂಡ ಹೊಸದಾಗಿದ್ದು, ರಿಯರ್ ರಿಫ್ಲೆಕ್ಟರ್‌ಗಳು ಮೊದಲಿಗಿಂತ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತವೆ.

ಇದನ್ನೂ ಓದಿ: 'ಟಾಟಾ.EV' ಎಂಬ ಹೊಸ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟವಾಗಲಿರುವ ಟಾಟಾದ ಎಲೆಕ್ಟ್ರಿಕ್ ಕಾರುಗಳು.

ಕ್ಯಾಬಿನ್‌ನ ಬದಲಾವಣೆಗಳ ಮಾಹಿತಿ

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಹೊಸ ಡ್ಯಾಶ್‌ಬೋರ್ಡ್ ಲೇಔಟ್ ಮತ್ತು ಕರ್ವ್‌ನಲ್ಲಿರುವಂತಹ 2-ಸ್ಪೋಕ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್ (ಪ್ರಕಾಶಿತ ಟಾಟಾ ಲೋಗೋವನ್ನು ಒಳಗೊಂಡಿದೆ) ಅನ್ನು ಪಡೆಯುತ್ತದೆ. ಇತರ ಕ್ಯಾಬಿನ್ ಪರಿಷ್ಕರಣೆಗಳು ಸೀಟುಗಳು, ಡ್ಯಾಶ್‌ಬೋರ್ಡ್ ಮತ್ತು ಸ್ಟೀರಿಂಗ್ ವ್ಹೀಲ್‌ಗಳ ಮೇಲೆ ಪರ್ಪಲ್ ಕಲ‌ರ್‌ನ ಡ್ಯುಯಲ್-ಟೋನ್ ಥೀಮ್ ಅನ್ನು ಒಳಗೊಂಡಿವೆ.

ಹೊಸ ಫೀಚರ್‌ಗಳು

ನವೀಕೃತ ಟಾಟಾ ನೆಕ್ಸಾನ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಕೆಲವು ಹೊಸ ಫೀಚರ್‌ಗಳನ್ನು ಪಡೆಯುತ್ತದೆ. ಹೊಸ ಮಾಡೆಲ್‌ನ ಇತರ ಫೀಚರ್‌ಗಳಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಸೇರಿವೆ.

ಪ್ರಯಾಣಿಕರ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ಸುರಕ್ಷತಾ ಫೀಚರ್‌ಗಳನ್ನು ಇದರಲ್ಲಿ ಒದಗಿಸುವ ನಿರೀಕ್ಷೆಯಿದೆ.

ಎಂಜಿನ್

ಟಾಟಾ ಇದನ್ನು ಪ್ರಸ್ತುತ ಮಾಡೆಲ್‌ನ 1.5-ಲೀಟರ್ ಡೀಸೆಲ್ ಎಂಜಿನ್ (115PS/260Nm) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ AMT ಯೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ. ನೆಕ್ಸಾನ್ ಫೇಸ್‌ಲಿಫ್ಟ್ ಟಾಟಾದ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (125PS/225Nm) ಜೊತೆಗೆ ಹೊಸ DCT (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಆಯ್ಕೆಯೊಂದಿಗೆ ಬರಬಹುದು. ನೆಕ್ಸಾನ್ EV ಫೇಸ್‌ಲಿಫ್ಟ್‌ಗೆ ಸಂಬಂಧಿಸಿದಂತೆ ಯಾವುದೇ ಪವರ್‌ಟ್ರೇನ್ ಪರಿಷ್ಕರಣೆಗಳನ್ನು ಮಾಡುವ ನಿರೀಕ್ಷೆಯಿಲ್ಲ. ಮೊದಲಿನಂತೆ, ಇದು ಪ್ರೈಮ್ ಮತ್ತು ಮ್ಯಾಕ್ಸ್ ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ದೊರೆಯುತ್ತದೆ.

ಇದನ್ನೂ ಓದಿ: ಡಿಜಿಟಲ್ ಫೀಚರ್‌ಗಳೊಂದಿಗೆ ಲೋಡ್ ಆಗಿರುವ ನವೀಕೃತ ಟಾಟಾ ನೆಕ್ಸಾನ್‌ನ ಕ್ಯಾಬಿನ್

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಾರು ತಯಾರಕರು ಹೊಸ ನೆಕ್ಸಾನ್‌ನ ಬೆಲೆ ಅಸ್ತಿತ್ವದಲ್ಲಿರುವ ಮಾಡೆಲ್‌ನ ಬೆಲೆಗಿಂತ (ರೂ. 8 ಲಕ್ಷದಿಂದ ರೂ. 14.60 ಲಕ್ಷ ಎಕ್ಸ್ ಶೋರೂಂ ದೆಹಲಿ) ಹೆಚ್ಚಾಗಿರುವ ನಿರೀಕ್ಷೆಯಿದೆ. ನವೀಕೃತ ಎಸ್‌ಯುವಿಯು ಹುಂಡೈ ವೆನ್ಯೂ, ಮಾರುತಿ ಬ್ರೆಝಾ, ಕಿಯಾ ಸಾನೆಟ್, ನಿಸ್ಸಾನ್ ಮ್ಯಾಗ್ನೈಟ್, ಮಹೀಂದ್ರಾ ಎಕ್ಸ್‌ಯುವಿ300, ರೆನಾಲ್ಟ್ ಕಿಗರ್ ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್‌ಒವರ್‌ಗಳಿಂದ ಸ್ಪರ್ಧೆಯನ್ನು ಎದುರಿಸಲಿದೆ.

ಇನ್ನಷ್ಟು ಓದಿ: ಟಾಟಾ ನೆಕ್ಸಾನ್ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 84 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ನೆಕ್ಸ್ಂನ್‌

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ