ಕವರ್ ಇಲ್ಲದೆಯೇ ಟೆಸ್ಟ್ ಮಾಡಿದ ಟಾಟಾ ಪಂಚ್ CNG, ಶೀಘ್ರದಲ್ಲೇ ಬಿಡುಗಡೆಯ ನಿರೀಕ್ಷೆ
ಈ ಪರೀಕ್ಷಾರ್ಥ ಕಾರಿಗೆ ಬಿಳಿ ಬಣ್ಣದ ಫಿನಿಶ್ ನೀಡಲಾಗಿದ್ದು ಮತ್ತು ಟೇಲ್‌ಗೇಟ್‌ನಲ್ಲಿ ‘iCNG’ ಬ್ಯಾಡ್ಜ್‌ನಿಂದ ಕವರ್ ಮಾಡಲಾಗಿದೆ
-
ಆಟೋ ಎಕ್ಸ್‌ಪೋ 2023ರಲ್ಲಿ ಟಾಟಾ ಮೊದಲ ಬಾರಿಗೆ ಪಂಚ್ CNG ಅನ್ನು ಪ್ರದರ್ಶಿಸಿತ್ತು.
-
ಅಲ್ಲದೇ ಸ್ಪೈ ಶಾಟ್ ಕೂಡಾ ಪರೀಕ್ಷಾರ್ಥ ಕಾರಿನ ಅಡಿಯಲ್ಲಿ ಹೆಚ್ಚುವರಿ ವ್ಹೀಲ್ ಇರುವುದನ್ನು ತೋರಿಸಿದೆ.
-
ಪಂಚ್ CNG ಕೂಡಾ ಆಲ್ಟ್ರೋಝ್ CNG ನಂತೆಯೇ 73.5PS, 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ.
-
ಪಟ್ಟಿಯಲ್ಲಿರುವ ಸಂಭಾವ್ಯ ಫೀಚರ್‌ಗಳ ಬೋರ್ಡ್ ಎಂದರೆ, 7-ಇಂಚು ಟಚ್‌ಸ್ಕ್ರೀನ್ ಮತ್ತು ಸಿಂಗಲ್-ಪೇನ್ ಸನ್‌ರೂಫ್.
-
ಆಲ್ಟ್ರೋಝ್ CNG ರೀತಿಯಲ್ಲಿ ಟಾಟಾದ ಸ್ಪ್ಲಿಟ್-ಟ್ಯಾಂಕ್ ಸಿಲಿಂಡರ್ ಸೆಟಪ್ ಪಡೆಯಲಿದೆ.
-
ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ; ಆಲ್ಟ್ರೋಝ್ CNGಗೆ ಹೋಲಿಸಿದರೆ ಸುಮಾರು ಒಂದು ಲಕ್ಷದಷ್ಟು ದುಬಾರಿಯಾಗಬಹುದು.
-
ಆಲ್ಟ್ರೋಝ್ CNGಯಲ್ಲಿ ಸ್ಪ್ಲಿಟ್-ಟ್ಯಾಂಕ್ ತಂತ್ರಜ್ಞಾನವನ್ನು ಪರಿಚಯಿಸಿದ ನಂತರ, ಇದೆ ಸೂತ್ರವನ್ನು ಶೀಘ್ರದಲ್ಲೇ ಟಾಟಾ ಪಂಚ್ CNGನಲ್ಲೂ ನೋಡಬಹುದು. ಈಗ, ಸನ್ನಿಹಿತ ಬಿಡುಗಡೆಯನ್ನು ಸೂಚಿಸುತ್ತಿರುವ ಈ ಮೈಕ್ರೋ SUV ಯಾವುದೇ ಕವರ್ ಇಲ್ಲದೆಯೇ ಪರೀಕ್ಷೆ ಮಾಡುತ್ತಿರುವುದು ಗುರುತಿಸಲ್ಪಟ್ಟಿದೆ. ಆಟೋ ಎಕ್ಸ್‌ಪೋ 2023ರಲ್ಲಿ ಟಾಟಾ ಮೊದಲ ಬಾರಿಗೆ ಪಂಚ್ CNG ಅನ್ನು ಪ್ರದರ್ಶಿಸಿತು.
ಇತ್ತೀಚಿನ ಅನಾವರಣಗಳು
ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ, ಯಾವುದೇ ಕವರ್ ಹೊಂದಿರದ ಬಿಳಿ ಟಾಟಾ ಪಂಚ್ ಅನ್ನು ನಾವು ನೋಡಬಹುದು. CNG ಆವೃತ್ತಿಯ ಪ್ರಮುಖ ಕೊಡುಗೆಯೆಂದರೆ, ಟೇಲ್‌ಗೇಟ್‌ನಲ್ಲಿ ಅಡಗಿರುವ iCNG’ ಬ್ಯಾಡ್ಜ್. ಅಲ್ಲದೇ ಸ್ಪೈ ಚಿತ್ರಗಳು ಕೂಡಾ ಪರೀಕ್ಷಾ ಕಾರಿನ ಅಡಿಯಲ್ಲಿ ಹೆಚ್ಚುವರಿ ವ್ಹೀಲ್ ಇರುವುದನ್ನು ತೋರಿಸಿದ್ದು, ಇದು ಪರೀಕ್ಷೆಯಲ್ಲಿರುವುದು CNG ಆವೃತ್ತಿ ಎಂದು ಮತ್ತಷ್ಟು ದೃಢಪಡಿಸುತ್ತದೆ.
ಇದನ್ನೂ ಓದಿ: ಟಾಟಾ EV ಖರೀದಿದಾರರಲ್ಲಿ ಬಹುತೇಕ ಕಾಲು ಭಾಗದಷ್ಟು ಹೊಸ ಕಾರು ಮಾಲೀಕರು
ಪವರ್‌ಟ್ರೇನ್ ವಿವರಗಳು
ಪಂಚ್ CNG ಗೆ ಟಾಟಾ ಆಲ್ಟ್ರೋಝ್ CNGಯಲ್ಲಿರುವಂತೆಯೇ 73.5PS ಮತ್ತು 103Nm ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಇಂಜಿನ್‌ನೊಂದಿಗೆ ಸಜ್ಜುಗೊಳಿಸುತ್ತದೆ. ಹೊಸ ಟಾಟಾ CNG ಮಾಡೆಲ್‌ಗಳಂತೆ, ಪಂಚ್ ಕೂಡಾ CNG ಮೋಡ್‍ನಲ್ಲಿ ಸ್ಟಾರ್ಟ್ ಆಗುವ ಆಯ್ಕೆಯನ್ನೂ ಪಡೆಯುತ್ತದೆ.
ಪ್ರಮುಖ ಫೀಚರ್‌ಗಳು
ಈ ಪಂಚ್ CNG 7-ಇಂಚು ಟಚ್‌ಸ್ಕ್ರೀನ್, ಸಿಂಗಲ್ ಪೇನ್ ಸನ್‌ರೂಫ್(ಈ ಮಾಡೆಲ್‌ಗೆ ಹೊಸದಾಗಿ ಪರಿಚಯಿಸಲಾಗಿದೆ), ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಸಂಪರ್ಕಿತ ಕಾರ್ ಟೆಕ್ ಮುಂತಾದ ಫೀಚರ್‌ಗಳನ್ನು ಹೊಂದಿರುವ ಸಾಧ್ಯತೆ ಇದೆ. ಇದರ ಸುರಕ್ಷತಾ ಕಿಟ್‌ನಲ್ಲಿ ಅನೇಕ ಏರ್‌ಬ್ಯಾಗ್‌ಗಳು,ರಿವರ್ಸಿಂಗ್ ಕ್ಯಾಮರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ನಿರೀಕ್ಷಿಸಬಹುದು.
ಬಳಸಬಹುದಾದ ಬೂಟ್ ಸ್ಪೇಸ್
ಬೂಟ್ ಫ್ಲೋರ್ ಅಡಿಯಲ್ಲಿ ಇರುವ ಎರಡು CNG ಸಿಲಿಂಡರ್‌ಗಳೊಂದಿಗೆ ಬಳಸಬಹುದಾದ ಬೂಟ್ ಸ್ಪೇಸ್ ಬಹುಶಃ ಪಂಚ್ CNG ಅತ್ಯಂತ ದೊಡ್ಡ USP ಆಗಿದೆ. ಅಂದರೆ, ಟಾಟಾ ನಿಖರವಾದ ಬೂಟ್ ಸ್ಪೇಸ್ ಚಿತ್ರವನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ಇದು ಒಂದು ಸಣ್ಣ ಲಗೇಜ್ ಹಾಗೂ ಒಂದು ಜೊತೆ ಡಫಲ್ ಅಥವಾ ಸಾಫ್ಟ್ ಬ್ಯಾಗ್‌ಗಳನ್ನು ಇಡುವಷ್ಟು ಜಾಗ ಇರಬಹುದೆಂಬುದು ನಮ್ಮ ನಿರೀಕ್ಷೆ.
ಇದನ್ನೂ ಓದಿ: ಟಾಟಾ ಆಲ್ಟ್ರೋಝ್ CNG ವಿಮರ್ಷೆಯ 5 ಟೇಕ್ಅವೇಗಳು
ಬೆಲೆ ಮತ್ತು ಸ್ಪರ್ಧೆ
ಈ ಕಾರುತಯಾರಕರು ಟಾಟಾ ಪಂಚ್ CNG ಬೆಲೆಯನ್ನು ಆಲ್ಟ್ರೋಝ್ CNG ಯಲ್ಲಿ ಕಂಡುಬರುವ, ತನ್ನ ಪ್ರಸ್ತುತ ಪೆಟ್ರೋಲ್-ಮಾತ್ರ ಪ್ರತಿರೂಪಿಗಿಂತ ಸುಮಾರು ಒಂದು ಲಕ್ಷದಷ್ಟು ಹೆಚ್ಚು ನಿಗದಿಪಡಿಸುವ ನಿರೀಕ್ಷೆ ಇದೆ. ಇದು ಮುಂಬರುವ ಹ್ಯುಂಡೈ ಎಕ್ಸ್‌ಟರ್‌ನ CNG ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಓದಿ : ಪಂಚ್ AMT