ಟಾಟಾ ಪಂಚ್‌ನ ಪ್ರತಿಸ್ಪರ್ಧಿಯಾಗಿ ಹ್ಯುಂಡೈನಿಂದ ಶೀಘ್ರದಲ್ಲೇ ಬರಲಿದೆ ಒಂದು ಎಸ್‌ಯುವಿ!
ಈ ಹೊಸ ಎಸ್‌ಯುವಿಯು ಪಂಚ್‌ನಂತೆಯೇ ರೂ. 6 ಲಕ್ಷದಿಂದ ರೂ. 10 ಲಕ್ಷಗಳವರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರಲಿದೆ .
- ರಹಸ್ಯ ಫೋಟೋಗಳ ಆಧಾರದ ಮೇಲೆ, ಈ ಎಸ್‌ಯುವಿ ಗಟ್ಟಿಮುಟ್ಟಾದ ಸ್ಟೈಲಿಂಗ್ ಅಂಶಗಳೊಂದಿಗೆ ಬಾಕ್ಸಿ ಮತ್ತು ನೇರವಾದ ಸ್ಟ್ಯಾನ್ಸ್‌ಗಳನ್ನು ಹೊಂದಿರುತ್ತದೆ.
- ಎಲೆಕ್ಟ್ರಿಕ್ ಸನ್‌ರೂಫ್, ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು ಮತ್ತು ಇಎಸ್‌ಪಿ ಫೀಚರ್‌ಗಳನ್ನು ಹೊಂದಿರಬಹುದು.
- ಗ್ರ್ಯಾಂಡ್ i10 ನಿಯೋಸ್‌ನ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಇದರಲ್ಲಿ ನಿರೀಕ್ಷಿಸಲಾಗಿದೆ; 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಸಹ ಪಡೆಯಬಹುದು.
- ಬಿಡುಗಡೆ “ಸನ್ನಿಹಿತ” ಎಂದು ಹೇಳುತ್ತಿದೆ ಹ್ಯುಂಡೈನ ಎಸ್‌ಯುವಿಯ ಮೊದಲ ಟೀಸರ್.
ಹ್ಯುಂಡೈ ತನ್ನ ಸಂಪೂರ್ಣ ಹೊಸ ಎಸ್‌ಯುವಿಯ ಬಿಡುಗಡೆಯು ಸನ್ನಿಹಿತವಾಗಿದೆ ಎಂದು ಘೋಷಿಸಿದೆ. ಇದು ಹೆಚ್ಚು ಮಾರಾಟವಾಗುವ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿರುವ ಮೈಕ್ರೋ ಎಸ್‌ಯುವಿ ಎಂದು ನಿರೀಕ್ಷಿಸಲಾಗಿದೆ ಮತ್ತು ಈಗಾಗಲೇ ಭಾರತದಲ್ಲಿ ಮತ್ತು ದಕ್ಷಿಣ ಕೊರಿಯಾದಲ್ಲಿ ಇದನ್ನು ಸ್ಪೈ ಮಾಡಲಾಗಿದೆ.
ಬಾಕ್ಸಿ ಎಸ್‌ಯುವಿ ಸ್ಟ್ಯಾನ್ಸ್ ಹೊಂದಿರುವ ಸಾಧ್ಯತೆ
ರಹಸ್ಯ ಫೊಟೋಗಳ ಆಧಾರದ ಮೇಲೆ, ಈ ಹೊಸ ಹ್ಯುಂಡೈ ಎಸ್‌ಯುವಿ ಬಾಕ್ಸಿ ಮತ್ತು ನೇರವಾದ ಸ್ಟ್ಯಾನ್ಸ್ ಹೊಂದಿರುವ ಸಾಧ್ಯತೆಯಿದೆ. ಪ್ರಸ್ತುತ ಆರಂಭಿಕ ಮಟ್ಟದ ಹ್ಯುಂಡೈ ಎಸ್‌ಯುವಿಗೆ ಹೋಲಿಸಿದರೆ ಇದು ಚಿಕ್ಕ ಪ್ರಮಾಣವನ್ನು ಹೊಂದಿರುವಂತೆ ಕಾಣುತ್ತದೆ. ಮುಖ್ಯವಾಗಿ, ಇದು ಬಾಡಿ ಕ್ಲಾಡಿಂಗ್, ರೂಫ್ ರೈಲ್‌ಗಳು, ದಪ್ಪನಾದ ಬಾನೆಟ್ ಸೇರಿದಂತೆ ಕೆಲವು ಗಟ್ಟಿಮುಟ್ಟಾದ ಅಂಶಗಳನ್ನು ಸಹ ಹೊಂದಿರುವ ಸಾಧ್ಯತೆಯಿದೆ.
ಪರೀಕ್ಷಾರ್ಥ ಕಾರುಗಳಲ್ಲಿ ಕಂಡುಬರುವ ಹಲವಾರು ಸೊಗಸಾದ ಅಂಶಗಳೆಂದರೆ ದೊಡ್ಡ ಗ್ರಿಲ್, H-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು, ಆಕರ್ಷಕ ಅಲಾಯ್ ವ್ಹೀಲ್‌ಗಳು ಮತ್ತು H-ಆಕಾರದ ಟೈಲ್ ಲ್ಯಾಂಪ್‌ಗಳು.
ವಿಶಿಷ್ಟ ಕ್ಯಾಬಿನ್ ಥೀಮ್ ಅನ್ನು ಪಡೆಯುವ ಸಾಧ್ಯತೆ
ಹೊಸ ಎಸ್‌ಯುವಿ ಗ್ರ್ಯಾಂಡ್ i10 ನಿಯೋಸ್ ಮತ್ತು ವೆನ್ಯೂನ ಇಂಟೀರಿಯರ್ ಥೀಮ್‌ನ ಸಮ್ಮಿಳಿತವನ್ನು ಇದರಲ್ಲಿ ಕಾಣಬಹುದು. ಕ್ಯಾಬಿನ್‌ನಾದ್ಯಂತ ಹಲವಾರು ಪ್ರೀಮಿಯಂ ಸ್ಪರ್ಶಗಳೊಂದಿಗೆ ನಾವು ಡ್ಯುಯಲ್-ಟೋನ್ ಥೀನ್ ಅನ್ನು ನೋಡಬಹುದು.
ಇದನ್ನೂ ಓದಿ: 2023 ಹ್ಯುಂಡೈ ವರ್ನಾ ವೇರಿಯೆಂಟ್‌ಗಳ ಮಾಹಿತಿ: ನಿಮಗೆ ಖರೀದಿಗೆ ಯಾವುದು ಉತ್ತಮ?
ಫೀಚರ್-ಭರಿತ ಕ್ಯಾಬಿನ್
(ಪರಾಮರ್ಶೆಗಾಗಿ ಗ್ರ್ಯಾಂಡ್ i10 ನಿಯೋಸ್ ಚಿತ್ರವನ್ನು ಬಳಸಲಾಗಿದೆ)
ಇತರ ಹ್ಯುಂಡೈಗಳೆಂತೆಯೇ, ಈ ಎಸ್‌ಯುವಿ ಸಹ ಪ್ರೀಮಿಯಂ ಫೀಚರ್ ಪ್ಯಾಕೇಜ್ ಅನ್ನು ಹೊಂದುವ ನಿರೀಕ್ಷೆಯಿದೆ. ಇದು ಟಚ್‌ಸ್ಕ್ರೀನ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್ ಅನ್ನು ಪಡೆಯಬಹುದು.
ಸುರಕ್ಷತೆಯ ವಿಷಯದಲ್ಲಿ, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾವನ್ನು ಇದು ಹೊಂದಿರುವ ಸಾಧ್ಯತೆಯಿದೆ.
ಗ್ರ್ಯಾಂಡ್ i10 ನಿಯೋಸ್‌ನ ಪವರ್‌ಟ್ರೇನ್ ಅನ್ನು ಪಡೆಯಬಹುದು
ಹೊಸ ಹ್ಯುಂಡೈನ ಈ ಎಸ್‌ಯುವಿ ಗ್ರ್ಯಾಂಡ್ i10 ನಿಯೋಸ್‌ನ 83PS 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಎಂಬುದನ್ನು ನಿರೀಕ್ಷಿಸಬಹುದು. ಹ್ಯಾಚ್‌ಬ್ಯಾಕ್‌ನಂತೆಯೇ, ಮುಂಬರುವ ಮಾದರಿಯು ಐದು-ಸ್ಪೀಡ್ ಮ್ಯಾನ್ಯುವಲ್ ಮತ್ತು AMT ಆಯ್ಕೆಗಳನ್ನು ಹೊಂದಿರಬಹುದು. ನಾವು 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಸಹ ನಿರೀಕ್ಷಿಸಬಹುದು. 1.2-ಲೀಟರ್ ಎಂಜಿನ್ ಚಾಲನೆಯಲ್ಲಿರುವ ಕೆಲವು ವೇರಿಯೆಂಟ್‌ಗಳೊಂದಿಗೆ ಸಿಎನ್‌ಜಿ ಆಯ್ಕೆಯನ್ನು ಸಹ ಪಡೆಯಬಹುದು.
ಇದನ್ನೂ ಓದಿ: ರೂ. 10 ಲಕ್ಷದೊಳಗಿನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಅತ್ಯಂತ ಕೈಗೆಟಕುವ 10 ಕಾರುಗಳು
ನಿರೀಕ್ಷಿತ ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಈ ಹೊಸ ಹ್ಯುಂಡೈ ಮೈಕ್ರೋ ಎಸ್‌ಯುವಿ ಬೆಲೆ ಸುಮಾರು ರೂ. 6 ಲಕ್ಷಗಳಿಂದ (ಎಕ್ಸ್-ಶೋರೂಮ್) ನಿರೀಕ್ಷಿಸಲಾಗಿದೆ. ಇದು ಟಾಟಾ ಪಂಚ್, ಸಿಟ್ರೊಯೆನ್ C3, ಮತ್ತು ಮಾರುತಿ ಇಗ್ನಿಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.
ಚಿತ್ರ ಮೂಲ