Login or Register ಅತ್ಯುತ್ತಮ CarDekho experience ಗೆ
Login

Tata Safari ಯ ಬಂಡೀಪುರ ಎಡಿಷನ್‌ ಸಹ ಅನಾವರಣ; ಏನಿದರ ವಿಶೇಷತೆ ? ಇಲ್ಲಿದೆ ವಿವರಗಳು..

ಟಾಟಾ ಸಫಾರಿ ಗಾಗಿ dipan ಮೂಲಕ ಜನವರಿ 17, 2025 08:54 pm ರಂದು ಪ್ರಕಟಿಸಲಾಗಿದೆ

ಸಫಾರಿಯ ಯಾಂತ್ರಿಕ ಅಂಶಗಳು ಬದಲಾಗದೆ ಇದ್ದರೂ, ಬಂಡೀಪುರ ಎಡಿಷನ್‌ ಹೊಸ ಬಣ್ಣದ ಥೀಮ್ ಮತ್ತು ಹೊರಗೆ ಮತ್ತು ಒಳಗೆ ಕೆಲವು ಬಣ್ಣದ ಅಂಶಗಳನ್ನು ಪರಿಚಯಿಸುತ್ತದೆ

ಹಿಂದಿನ ಆಟೋ ಎಕ್ಸ್‌ಪೋ ಪುನರಾವರ್ತನೆಗಳಂತೆ, ಟಾಟಾ ಕಂಪನಿಯು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಒಂದೆರಡು ಹೊಸ ಮೊಡೆಲ್‌ಗಳ ಕಾನ್ಸೆಪ್ಟ್ ಮತ್ತು ಕೆಲವು ವಿಶೇಷ ಎಡಿಷನ್‌ನ ಕಾರುಗಳೊಂದಿಗೆ ತನ್ನ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಇವುಗಳಲ್ಲಿ 2025 ರ ಆಟೋ ಎಕ್ಸ್‌ಪೋದಲ್ಲಿ ಬಹಿರಂಗಪಡಿಸಲಾದ ಟಾಟಾ ಸಫಾರಿ ಬಂಡೀಪುರ ಎಡಿಷನ್‌ ಸೇರಿದೆ. ಹೊಸ ಬಂಡೀಪುರ ಆವೃತ್ತಿಯು ಸ್ಥಗಿತಗೊಂಡಿರುವ ಸಫಾರಿಯ ಕಾಜಿರಂಗ ಆವೃತ್ತಿಯಿಂದ ಸ್ಫೂರ್ತಿ ಪಡೆಯುತ್ತದೆ, ಆದರೆ ರೆಗ್ಯುಲರ್‌ ಸಫಾರಿಯಂತೆಯೇ ಯಾಂತ್ರಿಕ ವಿಶೇಷಣಗಳೊಂದಿಗೆ ಬರುತ್ತದೆ. ಟಾಟಾ ಸಫಾರಿಯ ಬಂಡೀಪುರ ಎಡಿಷನ್‌ನಲ್ಲಿ ಹೊಸದೇನಿದೆ ಎಂಬುದನ್ನು ನೋಡೋಣ:

ಏನು ಭಿನ್ನ?

ವಿಶಿಷ್ಟ ಬಣ್ಣವನ್ನು ಹೊಂದಿದ್ದ ಸ್ಥಗಿತಗೊಂಡ ಕಾಜಿರಂಗ ಆವೃತ್ತಿಯಂತೆ, ಸಫಾರಿ ಬಂಡೀಪುರ ಆವೃತ್ತಿಯು ವಿಶೇಷವಾದ ಬಂಡೀಪುರ ಕಂಚಿನ ಬಣ್ಣದ ಆಯ್ಕೆಯೊಂದಿಗೆ ಬರುತ್ತದೆ. ಇದು ಮುಂಭಾಗದ ಫೆಂಡರ್‌ನಲ್ಲಿ ಆನೆಯ ಲಾಂಛನವನ್ನು ಸಹ ಪಡೆಯುತ್ತದೆ. ಇದಲ್ಲದೆ, 2025ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಸಫಾರಿ ಬಂಡೀಪುರ ಆವೃತ್ತಿಯು ಬಂಪರ್ ಮೇಲೆ ಎಲ್‌ಇಡಿ ಲೈಟ್ ಬಾರ್ ಮತ್ತು ರೂಫ್‌ಟಾಪ್ ಬಾಕ್ಸ್‌ನೊಂದಿಗೆ ಸಜ್ಜುಗೊಂಡಿತ್ತು.

ಒಳಭಾಗದಲ್ಲಿ, ಸಫಾರಿ ಬಂಡೀಪುರ ಆವೃತ್ತಿಯು ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳ ಮೇಲೆ ಖಾಕಿ ಲೆದರೆಟ್ ಮೆಟಿರಿಯಲ್‌ಗಳೊಂದಿಗೆ ಬರುತ್ತದೆ. ಸೀಟುಗಳನ್ನು ಖಾಕಿ ಲೆದರೆಟ್ ಕವರ್‌ನಲ್ಲಿ ಕಾಂಟ್ರಾಸ್ಟ್ ಕಪ್ಪು ಹೊಲಿಗೆ ಮತ್ತು ಹೆಡ್‌ರೆಸ್ಟ್‌ಗಳ ಮೇಲೆ ಆನೆ ಲಾಂಛನವನ್ನು ಸಹ ಅಳವಡಿಸಲಾಗಿದೆ. ಆದರೆ, ಒಟ್ಟಾರೆ ಇಂಟೀರಿಯರ್‌ ವಿನ್ಯಾಸ ಅಥವಾ ಫೀಚರ್‌ಗಳ ಸೂಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ನೀಡಲಾಗಿಲ್ಲ.

ಬಂಡೀಪುರ ಬಗ್ಗೆ ?

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯ್ನಾಡ್ ವನ್ಯಜೀವಿ ಅಭಯಾರಣ್ಯ ಇದಕ್ಕೆ ಹೊಂದಿಕೊಂಡಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವು 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿಮೀಸಲು ಪ್ರದೇಶವಾಗಿ ಸ್ಥಾಪಿಸಲ್ಪಟ್ಟಿದೆ.

ಫೀಚರ್‌ಗಳು ಮತ್ತು ಸುರಕ್ಷತೆ

ಮೊದಲೇ ಹೇಳಿದಂತೆ, ಹೊಸ ಎಡಿಷನ್‌ನ ಫೀಚರ್‌ಗಳ ಸೂಟ್ ರೆಗ್ಯುಲರ್‌ ಸಫಾರಿಯಂತೆಯೇ ಇರುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 10-ಸ್ಪೀಕರ್ JBL ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಇದರ ಪ್ರಮುಖ ಅಂಶಗಳಾಗಿವೆ. ಹೆಚ್ಚುವರಿ ಸೌಲಭ್ಯಗಳಲ್ಲಿ ಚಾಲಿತ ಟೈಲ್‌ಗೇಟ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್‌ ಎಸಿ, ಪನೋರಮಿಕ್ ಸನ್‌ರೂಫ್, ಮುಂಭಾಗ ಮತ್ತು ಎರಡನೇ ಸಾಲಿನ ಸೀಟುಗಳಲ್ಲಿ ವೆಂಟಿಲೇಶನ್‌ (6-ಆಸನಗಳ ಆವೃತ್ತಿಯಲ್ಲಿ), ಏರ್ ಪ್ಯೂರಿಫೈಯರ್, ಮೆಮೊರಿ ಮತ್ತು ವೆಲ್‌ಕಮ್‌ ಫಂಕ್ಷನ್‌ ಅನ್ನು ಹೊಂದಿರುವ 6-ವೇ ಪವರ್-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು ಮತ್ತು ಬಾಸ್ ಮೋಡ್ ಫೀಚರ್‌ನೊಂದಿಗೆ 4-ವೇ ಚಾಲಿತ ಸಹ-ಚಾಲಕರ ಸೀಟು ಸೇರಿವೆ.

ಸುರಕ್ಷತಾ ವೈಶಿಷ್ಟ್ಯಗಳಲ್ಲಿ 7 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳು (ADAS) ಸೇರಿವೆ.

ಪವರ್‌ಟ್ರೇನ್ ಆಯ್ಕೆಗಳು

ಟಾಟಾ ಸಫಾರಿ 2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ, ಅದರ ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜನ್‌

2-ಲೀಟರ್ ಡೀಸೆಲ್

ಪವರ್‌

170 ಪಿಎಸ್‌

ಟಾರ್ಕ್‌

350 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನ್ಯುವಲ್‌ / 6-ಸ್ಪೀಡ್ ಆಟೋಮ್ಯಾಟಿಕ್‌

ಡ್ರೈವ್‌ಟ್ರೈನ್‌

ಫ್ರಂಟ್-ವೀಲ್-ಡ್ರೈವ್ (FWD)

ಎಸ್‌ಯುವಿಯ ಬಂಡೀಪುರ ಎಡಿಷನ್‌ನಲ್ಲೂ ಅದೇ ಎಂಜಿನ್ ಆಯ್ಕೆಯನ್ನು ಒದಗಿಸಲಾಗುತ್ತಿದ್ದು, ರೆಗ್ಯುಲರ್‌ ಮೊಡೆಲ್‌ನಂತೆಯೇ ಟ್ಯೂನಿಂಗ್ ಅನ್ನು ಒದಗಿಸಲಾಗುತ್ತಿದೆ.

ಟಾಟಾ ಸಫಾರಿ: ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಟಾಟಾ ಸಫಾರಿಯ ಬೆಲೆಗಳು 15.49 ಲಕ್ಷ ರೂ.ನಿಂದ 26.79 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ನವದೆಹಲಿ) ಇದೆ. ಬಂಡೀಪುರ ಎಡಿಷನ್‌ ರೆಗ್ಯುಲರ್‌ ಮೊಡೆಲ್‌ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಟಾಟಾ ಸಫಾರಿಯು, ಎಮ್‌ಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ700 ಗಳಿಗೆ ಪೈಪೋಟಿ ನೀಡುತ್ತದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Tata ಸಫಾರಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ