• English
  • Login / Register

ಈ ಮಾರ್ಚ್‌ನಲ್ಲಿ Tata Tiago EV, Tigor EV, ಮತ್ತು Nexon EV ಯ ಮೇಲೆ 1 ಲಕ್ಷ ರೂ.ಗಿಂತ ಹೆಚ್ಚಿನ ರಿಯಾಯಿತಿ

ಟಾಟಾ ಟಿಯಾಗೋ ಇವಿ ಗಾಗಿ shreyash ಮೂಲಕ ಮಾರ್ಚ್‌ 12, 2024 09:35 pm ರಂದು ಪ್ರಕಟಿಸಲಾಗಿದೆ

  • 47 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೇಸ್‌ಲಿಫ್ಟ್‌ಗಿಂತ ಹಿಂದಿನ ನೆಕ್ಸಾನ್‌ ಇವಿ ಕಾರುಗಳ ಮೇಲೆ ದೊಡ್ಡ ಉಳಿತಾಯ ಲಭ್ಯವಿದೆ, ಆದರೆ ಇವು ನಗರದಿಂದ ನಗರಕ್ಕೆ ಬದಲಾಗುತ್ತವೆ

Tata EVs

  • ಟಾಟಾ ಟಿಗೋರ್‌ನೊಂದಿಗೆ 1.15 ಲಕ್ಷ ರೂ.ವರೆಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ.
  • ಟಾಟಾ ಟಿಯಾಗೊ ಇವಿಯ ಮೇಲೆ 72,000 ರೂ.ವರೆಗೆ ಉಳಿತಾಯವನ್ನು ಪಡೆಯಬಹುದು. 
  • ಟಾಟಾ ನೆಕ್ಸಾನ್ ಇವಿಯನ್ನು 55,000 ರೂ.ವರೆಗಿನ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.
  • ಟಾಟಾ ಪಂಚ್ EV ಯೊಂದಿಗೆ ಯಾವುದೇ ರಿಯಾಯಿತಿಗಳನ್ನು ನೀಡಲಾಗುತ್ತಿಲ್ಲ.
  • ಎಲ್ಲಾ ಕೊಡುಗೆಗಳು ಮಾರ್ಚ್ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ಈ ಮಾರ್ಚ್‌ನಲ್ಲಿ ನೀವು ಟಾಟಾ ಇವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಫೇಸ್‌ಲಿಫ್ಟ್‌ಗಿಂತ ಹಿಂದಿನ Tata Nexon EV ಯ ಕೆಲವು ಮಾರಾಟವಾಗದ ಕಾರುಗಳನ್ನು ಖರೀದಿಸಲು ನೀವು ಇಚ್ಚಿಸುವುದಾದರೆ ಸುಮಾರು 1 ಲಕ್ಷಕ್ಕಿಂತ ಹೆಚ್ಚು ಉಳಿಸಬಹುದು. ಲಭ್ಯವಿರುವ ಪ್ರಯೋಜನಗಳಲ್ಲಿ ಹಸಿರು ಮತ್ತು ವಿನಿಮಯ ಬೋನಸ್, ನಗದು ರಿಯಾಯಿತಿ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ. ಈ ಪ್ರಯೋಜನಗಳು ಅವುಗಳ MY23 ಮೊಡೆಲ್‌ಗಳು ಸೇರಿದಂತೆ ಹೆಚ್ಚಿನ ಟಾಟಾ ಇವಿಗಳಲ್ಲಿ ಅನ್ವಯಿಸುತ್ತವೆ, ಆದರೆ ಇದರ ಹೊಸ Tata Punch EV ಗೆ ಇದು ಅನ್ವಯಿಸುವುದಿಲ್ಲ. ಮೊಡೆಲ್‌-ವಾರು ಆಫರ್‌ಗಳ ವಿವರಗಳನ್ನು ನೋಡೋಣ.

ಟಾಟಾ ನೆಕ್ಸಾನ್‌ ಇವಿ

2023 Tata Nexon EV

ಆಫರ್‌ಗಳು

ಮೊತ್ತ

ಗ್ರೀನ್ ಬೋನಸ್ (MY23ಗೆ ಮಾತ್ರ)

50,000 ರೂ.ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್ 

5,000 ರೂ.ವರೆಗೆ

ಗರಿಷ್ಠ ಪ್ರಯೋಜನಗಳು

55,000 ರೂ.ವರೆಗೆ

  • ಮೇಲೆ ತಿಳಿಸಲಾದ ಹಸಿರು ಬೋನಸ್ ಅನ್ನು ಟಾಟಾ ನೆಕ್ಸಾನ್ ಇವಿಯ MY23 ಘಟಕಗಳೊಂದಿಗೆ ಮಾತ್ರ ಪಡೆಯಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಈ ಬೋನಸ್ ಮೊದಲ ಬಾರಿಗೆ EV ಖರೀದಿದಾರರಿಗೆ ಮಾತ್ರ ಲಭ್ಯವಿದೆ.

  • ಹೆಚ್ಚುವರಿಯಾಗಿ, ಕೆಲವು ಟಾಟಾದ ಡೀಲರ್‌ಶಿಪ್‌ಗಳು 2023 ರ ಟಾಟಾ ನೆಕ್ಸಾನ್ ಇವಿ ಪ್ರೈಮ್ ಮತ್ತು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನ ಮಾರಾಟವಾಗದ ಹಳೆಯ ಕಾರುಗಳಿಗೆ ಗಣನೀಯವಾಗಿ ಹೆಚ್ಚಿನ ಉಳಿತಾಯವನ್ನು ನೀಡುತ್ತಿದ್ದು,  2 ಲಕ್ಷ ರೂ.ಗಿಂತ ಹೆಚ್ಚಿನ ನಗದು ರಿಯಾಯಿತಿಯೊಂದಿಗೆ ರೂ 50,000 ವರೆಗಿನ ಹೆಚ್ಚುವರಿ ವಿನಿಮಯ ಬೋನಸ್ ನ್ನು ಪಡೆಯಬಹುದು. 

  • ಪ್ರಸ್ತುತ ನೆಕ್ಸಾನ್‌ ಇವಿಯು ಎಕ್ಸ್‌ಚೇಂಜ್ ಬೋನಸ್‌ನೊಂದಿಗೆ ಬರುವುದಿಲ್ಲ, ಆದರೂ ಇದು ರೂ 5,000 ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತದೆ, ಇದು ಎಲೆಕ್ಟ್ರಿಕ್ ಎಸ್‌ಯುವಿಯ MY23 ಮತ್ತು MY24 ಎರಡೂ ಕಾರುಗಳಿಗೆ ಮಾನ್ಯವಾಗಿದೆ.

  • ಫೇಸ್‌ಲಿಫ್ಟೆಡ್ ಟಾಟಾ ನೆಕ್ಸಾನ್ ಇವಿ 14.49 ಲಕ್ಷ ರೂ. ವಿನಿಂದ 19.49 ಲಕ್ಷ  ರೂ. ವರೆಗೆ ಎಕ್ಸ್‌ಶೋರೂಮ್‌ ಬೆಲೆಯನ್ನು ಹೊಂದಿದ್ದು, ಇದನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದು 465 ಕಿಮೀ ವರೆಗೆ ಗರಿಷ್ಠ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ಹೊಂದಿದೆ.

ಇದನ್ನು ಸಹ ಓದಿ: 2024 ರ ಫೆಬ್ರವರಿಯಲ್ಲಿ Tata Nexon ಮತ್ತು Kia Sonet ಅನ್ನು ಹಿಂದಿಕ್ಕಿ ಅತ್ಯುತ್ತಮ ಮಾರಾಟವಾದ ಸಬ್-4m SUV ಎನಿಸಿಕೊಂಡ Maruti Brezza

ಟಾಟಾ ಟಿಯಾಗೊ ಇವಿ

ಆಫರ್‌ಗಳು

ಮೊತ್ತ

 

MY23

MY24

ಗ್ರೀನ್ ಬೋನಸ್ 

50,000 ರೂ.ವರೆಗೆ

25,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್ 

15,000 ರೂ.ವರೆಗೆ

10,000 ರೂ.ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್ 

7,000 ರೂ.ವರೆಗೆ

7,000 ರೂ.ವರೆಗೆ

ಗರಿಷ್ಠ ಪ್ರಯೋಜನಗಳು

72,000 ರೂ.ವರೆಗೆ

44,000 ರೂ.ವರೆಗೆ

  • ಟಾಟಾ ಟಿಯಾಗೊ ಇವಿಯ MY23 ಘಟಕಗಳು ಹೆಚ್ಚಿನ ಗ್ರೀನ್‌ ಮತ್ತು ವಿನಿಮಯ ಬೋನಸ್‌ಗಳೊಂದಿಗೆ ಬರುತ್ತವೆ.

  • ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ MY24 ಯುನಿಟ್‌ಗಳಿಗೆ, ಮೇಲೆ ತಿಳಿಸಲಾದ ಕೊಡುಗೆಗಳು ಟಿಯಾಗೋ ಇವಿಯ ಲಾಂಗ್ ರೇಂಜ್ (LR) ಆವೃತ್ತಿಗಳಲ್ಲಿ ಮಾತ್ರ ಮಾನ್ಯವಾಗಿರುತ್ತವೆ.

  • ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಮಿಡ್‌ ರೇಂಜ್‌ನ (MR) ಆವೃತ್ತಿಗಳಿಗೆ ಹಸಿರು ಬೋನಸ್ ರೂ 10,000 ಕ್ಕೆ ಇಳಿಯುತ್ತದೆ.

  • ಅಲ್ಲದೆ, MY24 ಮೊಡೆಲ್‌ಗಳಿಗೆ ಎಕ್ಸ್‌ಚೇಂಜ್‌ ಬೋನಸ್ ಸಹ ರೂ 15,000 ಕ್ಕೆ ಕಡಿಮೆಯಾಗುತ್ತದೆ

  • ಎಲ್ಲಾ ಮೊಡೆಲ್‌ಗಳಿಗೆ ಕಾರ್ಪೊರೇಟ್ ರಿಯಾಯಿತಿಯು ಒಂದೇ ಆಗಿರುತ್ತದೆ.

  • ಟಾಟಾ ಟಿಯಾಗೊ ಇವಿ ಬೆಲೆ 7.99 ಲಕ್ಷದಿಂದ 11.89 ಲಕ್ಷ ರೂಪಾಯಿ ವರೆಗೆ ಇದೆ. ಇದು ಗರಿಷ್ಠ ಕ್ಲೈಮ್ ಮಾಡಲಾದ 315 ಕಿಮೀ ವ್ಯಾಪ್ತಿಯೊಂದಿಗೆ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಸಹ ಪಡೆಯುತ್ತದೆ.

ಇದನ್ನು ಸಹ ಓದಿ: ಈ ನಗರಗಳಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮನೆಯನ್ನು ಕೊಂಡೊಯ್ಯಲು ಎಂಟು ತಿಂಗಳವರೆಗೆ ಕಾಯಬೇಕು..! 

ಟಾಟಾ ಟಿಗೋರ್ ಇವಿ

ಆಫರ್‌ಗಳು

ಮೊತ್ತ

ಕ್ಯಾಶ್ ಡಿಸ್ಕೌಂಟ್‌ (MY23 ಮಾತ್ರ) 

75,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌ (MY23 ಮಾತ್ರ)

30,000 ರೂ.ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್ 

10,000 ರೂ.ವರೆಗೆ

ಗರಿಷ್ಠ ಪ್ರಯೋಜನಗಳು

1.15 ಲಕ್ಷದವರೆಗೆ

  • ಟಾಟಾ ಟಿಗೋರ್ ಇವಿಯು ಗ್ರೀನ್‌ ಬೋನಸ್ ಅನ್ನು ಪಡೆಯುವುದಿಲ್ಲ, ಆದರೆ ಇದು 75,000 ರೂಪಾಯಿಗಳ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ಬರುತ್ತದೆ.

  • ಇದು ಅತ್ಯಧಿಕ ಎಕ್ಸ್‌ಚೇಂಜ್‌ ಬೋನಸ್ ಮತ್ತು  30,000 ರೂ.ವರೆಗಿನ ಕಾರ್ಪೊರೇಟ್ ರಿಯಾಯಿತಿಯನ್ನು ಸಹ ಪಡೆಯುತ್ತದೆ.

  • Tigor EV ಗಾಗಿ ನಮೂದಿಸಲಾದ ಕ್ಯಾಶ್‌ ಡಿಸ್ಕೌಂಟ್‌ ಮತ್ತು ವಿನಿಮಯ ಬೋನಸ್ MY23 ಘಟಕಗಳಲ್ಲಿ ಮಾತ್ರ ಮಾನ್ಯವಾಗಿರುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ.

  • ಟಾಟಾದ ಎಲೆಕ್ಟ್ರಿಕ್ ಸೆಡಾನ್ MY23 ಮತ್ತು MY24 ಯುನಿಟ್‌ಗಳೆರಡರಲ್ಲೂ ಮಾನ್ಯವಾಗಿರುವ 10,000 ರೂ.ಗಳ ಅತ್ಯಧಿಕ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತದೆ.

  • ಟಾಟಾ ಟಿಗೋರ್ ಇವಿಯ ಬೆಲೆ 12.49 ಲಕ್ಷ ರೂ.ನಿಂದ 13.75 ಲಕ್ಷ ರೂ ವರೆಗೆ ಇದೆ. ಈ ಟಾಟಾ EV ಕೇವಲ ಒಂದು ಬ್ಯಾಟರಿ ಆಯ್ಕೆಯನ್ನು ಮಾತ್ರ ಹೊಂದಿದೆ ಮತ್ತು ಇದು 315 ಕಿಮೀ ವ್ಯಾಪ್ತಿಯನ್ನು ಹೊಂದಿದೆ.

ಗಮನಿಸಿ

  • ಆಯ್ಕೆ ಮಾಡಿದ ಆವೃತ್ತಿ, ರಾಜ್ಯ ಮತ್ತು ನಗರವನ್ನು ಅವಲಂಬಿಸಿ ರಿಯಾಯಿತಿಗಳು ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಟಾಟಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ವಿವಿಧ ಕೆಟಗರಿಯನ್ನು ಅವಲಂಬಿಸಿ ಕಾರ್ಪೊರೇಟ್ ರಿಯಾಯಿತಿಗಳು ಸಹ ಬದಲಾಗಬಹುದು.

  • ಉಲ್ಲೇಖಿಸಲಾದ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಬೆಲೆಗಳಾಗಿವೆ. 

ಇನ್ನಷ್ಟು ಓದಿ:  ಟಾಟಾ ಟಿಯಾಗೊ ಇವಿ ಆಟೋಮ್ಯಾಟಿಕ್ 

was this article helpful ?

Write your Comment on Tata Tia ಗೋ EV

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ��ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience