Kia Sonet Facelift X-ಲೈನ್ ವೇರಿಯಂಟ್ ನ ರಹಸ್ಯ ನೋಟವನ್ನು ಬಿಚ್ಚಿಡುವ ಈ 7 ಚಿತ್ರಗಳು
ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 20, 2023 02:50 pm ರಂದು ಪ್ರಕಟಿಸಲಾಗಿದೆ
- 81 Views
- ಕಾಮೆಂಟ್ ಅನ್ನು ಬರೆಯಿರಿ
ಇದು ಕಿಯಾ ಸೆಲ್ಟೋಸ್ X-ಲೈನ್ ವೇರಿಯಂಟ್ ನಲ್ಲಿ ಶೈಲಿ ಮತ್ತು ವಿನ್ಯಾಸದ ಪ್ರೇರಣೆಯನ್ನು ಪಡೆದಿದ್ದು ಕ್ಯಾಬಿನ್ ಮತ್ತು ಅಫೋಲ್ಸ್ಟರಿಗೆ ಸೇಜ್ ಗ್ರೀನ್ ನೋಟವನ್ನು ನೀಡಿದೆ
ನಾವು ಇತ್ತೀಚೆಗೆ ಪರಿಷ್ಕೃತ ಕಿಯಾ ಸೋನೆಟ್ ವಾಹನದ ಮೊದಲ ನೋಟವನ್ನು ನೋಡಿದ್ದು ಬೇರೆ ಬೇರೆ ಆವೃತ್ತಿಗಳ ವಿವಿಧ ವೈಶಿಷ್ಟ್ಯಗಳು ಕಾಣಸಿಕ್ಕಿವೆ. ಕಾರು ತಯಾರಕ ಸಂಸ್ಥೆಯು ಒಳಗಡೆ ಮತ್ತು ಹೊರಗಡೆಯಲ್ಲಿ ಶೈಲಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿದ್ದು ಮೊದಲಿನ ವೇರಿಯಂಟ್ ಮಟ್ಟಗಳನ್ನೇ ಮುಂದುವರಿಸಿದೆ. ಇವುಗಳಲ್ಲಿ ಟೆಕ್ (HT) ಲೈನ್, GT ಲೈನ್, ಮತ್ತು X-ಲೈನ್ (‘Xಕ್ಲೂಸಿವ್ ಮ್ಯಾಟ್ ಗ್ರಾಫೈಟ್’ ಶೇಡ್ ನಲ್ಲಿ ಫಿನಿಶಿಂಗ್ ನೀಡಲಾಗಿದೆ). ಈ ವರದಿಯಲ್ಲಿ ಚಿತ್ರಗಳ ಮೂಲಕ ಟಾಪ್ ಆಫ್ ದ ಲೈನ್ X-ಲೈನ್ ವೇರಿಯಂಟ್ ಅನ್ನು ನೋಡೋಣ:
ಹೊರಾಂಗಣ
ಸೋನೆಟ್ X-ಲೈನ್ ನ ಫೇಶಿಯಾವು ಸೋನೆಟ್ GTX+ ನ ಫೇಶಿಯಾವನ್ನೇ ಹೋಲುತ್ತದೆ. ಇದು ಕಪ್ಪು ಬಣ್ಣದ ಗ್ರಿಲ್ (ಅದೇ ಸಿಲ್ವರ್ ಇನ್ಸರ್ಟ್ ಗಳೊಂದಿಗೆ ಬರುತ್ತದೆ) ಮತ್ತು ಕೆಳಭಾಗದ ಏರ್ ಡ್ಯಾಮ್ ಗೆ ಹೆಚ್ಚು ಗ್ಲಾಸಿ ಫಿನಿಶ್ ಅನ್ನು ಹೊಂದಿದೆ. ಸೋನೆಟ್ X-ಲೈನ್ ನ ಗ್ರಿಲ್ ಅನ್ನು GTX+ ವೇರಿಯಂಟ್ ನಲ್ಲಿ ಇರುವಂತೆಯೇ 3-ಪೀಸ್ LED ಹೆಡ್ ಲೈಟ್ ಗಳು ಸುತ್ತುವರಿದಿದ್ದು, LED DRL ಗಳು ಬಂಪರ್ ತನಕ ವ್ಯಾಪಿಸಿವೆ. ಅಲ್ಲದೆ ಇದು ನುಣುಪಾದ LED ಫಾಗ್ ಲ್ಯಾಂಪ್ ಗಳನ್ನು ಹೊಂದಿದೆ.
ಅಲ್ಲದೆ ಸೋನೆಟ್ X-ಲೈನ್ ಮತ್ತು GTX+ ನಡುವೆ ಇನ್ನೊಂದು ಏಕರೂಪತೆ ಇದೆ. ಅದೆಂದರೆ 16 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಗಳು. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಬಾಡಿ ಸೈಡ್ ಕ್ಲಾಡಿಂಗ್ ಇನ್ಸರ್ಟ್ ಗಳು ಗ್ಲಾಸ್ ಬ್ಲ್ಯಾಕ್ ಫಿನಿಶ್ ಅನ್ನು ಹೊಂದಿದ್ದು, GTX+ ಅವುಗಳನ್ನು ಬೆಳ್ಳಿಯ ಬಣ್ಣದಲ್ಲಿ ಹೊಂದಿದೆ.
ಇದರ ಹಿಂಭಾಗವು ಹೊಸದಾಗಿ ಅಳವಡಿಸಲಾದ ಸಂಪರ್ಕಿತ LED ಟೇಲ್ ಲೈಟ್ ಗಳನ್ನು ಹೊಂದಿದ್ದು, ಇದನ್ನು ಹೊಸ ಸೆಲ್ಟೋಸ್ ನಿಂದ ಎರವಲು ಪಡೆಯಲಾಗಿದೆ. ಇದು ಈಗಾಗಲೇ ‘Sonet’ ಬ್ಯಾಜ್ ಅನ್ನು ಹೊಂದಿದ್ದು, ಟೇಲ್ ಗೇಟ್ ಮೇಲೆ ಈ ವೇರಿಯಂಟ್ ಗೆ ಸೀಮಿತವಾದ ‘X-Line’ ಹೆಸರು ಮತ್ತು ಸ್ಕಿಡ್ ಪ್ಲೇಟ್ ಮೇಲೆ ಕಪ್ಪು ಬಣ್ಣದ ಫಿನಿಶ್ ಅನ್ನು ಪಡೆದಿದೆ.
ಒಳಾಂಗಣ
GTX+ ವೇರಿಯಂಟ್ ಗೆ ಹೋಲಿಸಿದರೆ ಕಿಯಾವು ಸೋನೆಟ್ X-ಲೈನ್ ನ ಕ್ಯಾಬಿನ್ ವಿನ್ಯಾಸಕ್ಕೆ ಅನೇಕ ಬದಲಾವಣೆಗಳನ್ನು ಮಾಡಿದ್ದು ಕಪ್ಪು ಮತ್ತು ಸೇಜ್ ಗ್ರೀನ್ ಥೀಮ್ ಅನ್ನು ನೀಡಿದೆ. ಅಲ್ಲದೆ ಈ ವಾಹನವು ಲೆದರೆಟ್ ಅಫೋಲ್ಸ್ಟರಿಯನ್ನು ಹೊಂದಿದ್ದು, ಪರಿಷ್ಕೃತ ಸೆಲ್ಟೋಸ್ X-ಲೈನ್ ನಲ್ಲಿ ಅದೇ ಫಾರ್ಮುಲಾವನ್ನು ಬಳಸಲಾಗಿದೆ.
ಶ್ರೇಣಿಯಲ್ಲಿ ಉನ್ನತ ಸ್ತರದಲ್ಲಿ ಬರುವ ಈ ವೇರಿಯಂಟ್ ನಲ್ಲಿ ಕಿಯಾ ಸಂಸ್ಥೆಯು 4-ವೇ ಪವರ್ಡ್ ಡ್ರೈವರ್ ಸೀಟ್, 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮರಾ, ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳು (ADAS) ಇತ್ಯಾದಿ ಪ್ರೀಮಿಯಂ ಸೌಲಭ್ಯಗಳನ್ನು ನೀಡಿದೆ.
ಹಿಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು AC ವೆಂಟ್ ಗಳು, ಕಪ್ ಹೋಲ್ಡರ್ ಜೊತೆಗೆ ಆರ್ಮ್ ರೆಸ್ಟ್, ಎರಡು ಟೈಪ್-C USB ಪೋರ್ಟ್ ಗಳು, ರಿಯರ್ ಸನ್ ಶೇಡ್ ಗಳು, ಎಲ್ಲಾ ಪ್ರಯಾಣಿಕರಿಗಾಗಿ 3-ಪಾಯಿಂಟ್ ಸೀಟ್ ಬೆಲ್ಟ್ ಗಳು ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ಗಳನ್ನು ಪಡೆಯಲಿದ್ದಾರೆ.
ಸೋನೆಟ್ X-ಲೈನ್ ಕಾರು ಕೇವಲ 1 ಲೀಟರಿನ ಟರ್ಬೊ ಪೆಟ್ರೋಲ್ (120 PS/172 Nm) ಮತ್ತು 1.5 ಲೀಟರಿನ ಡೀಸೆಲ್ ಎಂಜಿನ್ (116 PS/250 Nm) ಆಯ್ಕೆಗಳೊಂದಿಗೆ ದೊರೆಯಲಿದೆ. ಈ X-ಲೈನ್ ವೇರಿಯಂಟ್ ನಲ್ಲಿ ಮೊದಲನೆಯದ್ದನ್ನು 7-ಸ್ಪೀಡ್ DCT ಜೊತೆಗೆ ಪಡೆದರೆ ಎರಡನೆಯದ್ದು ಕೇವಲ 6-ಸ್ಪೀಡ್ ಅಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಬರಲಿದೆ.
ಸಂಬಂಧಿತ: ಭಿನ್ನತೆಗಳನ್ನು ಭೇದಿಸುವುದು: ಹೊಸ ಮತ್ತು ಹಳೆಯ ಕಿಯಾ ಸೋನೆಟ್
ಇದರ ಮಾರಾಟ ಯಾವಾಗ ಪ್ರಾರಂಭವಾಗಲಿದೆ?
ನಮ್ಮ ಪ್ರಕಾರ ಪರಿಷ್ಕೃತ ಕಿಯಾ ಸೋನೆಟ್ ಕಾರು 2024ರ ಜನವರಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಇದರ ಬೆಲೆಯು ಸುಮಾರು ರೂ. 8 ಲಕ್ಷದಿಂದ (ಎಕ್ಸ್ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಸೋನೆಟ್ X-ಲೈನ್ ವಾಹನವು ಅಗ್ರ ಶ್ರೇಣಿಯ ವೇರಿಯಂಟ್ ಆಗಿರುವುದರಿಂದ ಇದರ ಬೆಲೆಯು ರೂ. 14 ಲಕ್ಷದಿಂದ ಪ್ರಾರಂಭಗೊಳ್ಳಲಿದೆ. ಈ ಪರಿಷ್ಕೃತ SUV ಯು ಮಹೀಂದ್ರಾ XUV300, ಮಾರುತಿ ಬ್ರೆಜ್ಜಾ, ಟಾಟಾ ನೆಕ್ಸನ್, ಹ್ಯುಂಡೈ ವೆನ್ಯು, ರೆನೋ ಕೈಗರ್, ನಿಸ್ಸಾನ್ ಮ್ಯಾಗ್ನೈಟ್, ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ ಜೊತೆಗೆ ಸ್ಪರ್ಧಿಸಲಿದೆ.
ಇದನ್ನು ಸಹ ಓದಿರಿ: ಭಾರತದಲ್ಲಿ ಕಿಯಾದಲ್ಲಿ 2023ರಲ್ಲಿ ಕಾಣಿಸಿಕೊಂಡು ಎಲ್ಲಾ ಹೊಸ ವೈಶಿಷ್ಟ್ಯಗಳು
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್ ಅಟೋಮ್ಯಾಟಿಕ್
0 out of 0 found this helpful