• English
  • Login / Register

ಮಾರ್ಚ್ 2023 ರಲ್ಲಿ ನಿರೀಕ್ಷಿಸಬಹುದಾದ 4 ಹೊಸ ಕಾರುಗಳು ಯಾವುವು ಗೊತ್ತಾ ?

ಸಿಟ್ರೊಯೆನ್ ಇಸಿ3 ಗಾಗಿ tarun ಮೂಲಕ ಫೆಬ್ರವಾರಿ 28, 2023 04:44 pm ರಂದು ಪ್ರಕಟಿಸಲಾಗಿದೆ

  • 35 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ-ಜನರೇಷನ್ ಸೆಡಾನ್ ಮತ್ತು ಅದರ ನವೀಕೃತ ಪ್ರತಿಸ್ಪರ್ಧಿಯೊಂದಿಗೆ ಹೊಸ SUV-ಕ್ರಾಸ್‌ಓವರ್ ಈ ಮಾರ್ಚ್‌ನಲ್ಲಿ ಮಾರಾಟಕ್ಕೆ ಬರಲಿದೆ.

Upcoming Cars March 2023

2023 ರ ಮೂರನೇ ತಿಂಗಳು ಕೆಲವು, ಬಹುಮುಖ್ಯವಾದ ಬಿಡುಗಡೆಗೆ ಸಾಕ್ಷಿಯಾಗಲಿದೆ. ಹ್ಯುಂಡೈ ತನ್ನ ಸೆಡಾನ್‌ನ ಸಂಪೂರ್ಣ ಹೊಸ-ಜನರೇಷನ್ ಅನ್ನು ಮಾರುಕಟ್ಟೆಗೆ ತರುತ್ತಿದ್ದರೆ ಇನ್ನೊಂದೆಡೆ ಅದರ ಪ್ರಮುಖ ಪ್ರತಿಸ್ಪರ್ಧಿಯಾದ ಹೋಂಡಾ ಸಹ ನವೀಕರಣವನ್ನು ಪಡೆಯುತ್ತಿದೆ. ಅಷ್ಟೇ ಅಲ್ಲ, ನಾವು ಮಾರುತಿಯಿಂದ ಹೊಸ ಕ್ರಾಸ್ಓವರ್-SUV ಮತ್ತು ಹೊಸ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

ಮಾರ್ಚ್‌ನಲ್ಲಿ ನಾವು ನಿರೀಕ್ಷಿಸುತ್ತಿರುವ ನಾಲ್ಕು ಕಾರುಗಳು ಇಲ್ಲಿವೆ: 

ಹೊಸ ಹ್ಯುಂಡೈ ವರ್ನಾ

New Hyundai Verna front design sketchಬಿಡುಗಡೆಯ ದಿನಾಂಕ - 21 ಮಾರ್ಚ್

ನಿರೀಕ್ಷಿತ ಬೆಲೆ – ರೂ. 10 ಲಕ್ಷದಿಂದ ಪ್ರಾರಂಭ

ಸಂಪೂರ್ಣ-ಹೊಸ ವರ್ನಾ ಅನ್ನು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಹ್ಯುಂಡೈ ದೃಢಪಡಿಸಿದೆ. ಈ ಸೆಡಾನ್‌ನ ಬುಕಿಂಗ್‌ಗಳು ಈಗಾಗಲೇ ತೆರೆದಿದ್ದು, ಮೊದಲ ಸೆಟ್‌ನ ಸ್ಕೆಚ್‌ಗಳು ನಿರ್ಗಮಿತ ಮಾಡೆಲ್‌ಗಿಂತ ಸ್ಪೋರ್ಟಿಯರ್-ನೋಟವನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತವೆ. ಈ ಹೊಸ ವರ್ನಾ ದೊಡ್ಡದಾಗಿರುತ್ತದೆ ಮತ್ತು ಹೆಚ್ಚು ಪ್ರೀಮಿಯಂ ಸಹ ಆಗಿರುತ್ತದೆ. ಫೀಚರ್‌ಗಳ ವಿಷಯದಲ್ಲಿ, ನಾವು ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ಹೊಸ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ADAS ಅನ್ನು ಪಡೆಯಬಹುದು. ಡಿಸೇಲ್ ಇಂಜಿನ್ ಅನ್ನು ನಿಲ್ಲಿಸಿದ್ದರೂ, ಅದರ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಇದು ಉಳಿಸಿಕೊಂಡಿದೆ.

ಇದಲ್ಲದೇ, ಈ ಹೊಸ ವರ್ನಾ 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು, ಅದು 160PS ಅನ್ನು ಬಿಡುಗಡೆಗೊಳಿಸುತ್ತದೆ. 

ನವೀಕೃತ ಹೋಂಡಾ ಸಿಟಿ

ಬಿಡುಗಡೆಯ ದಿನಾಂಕ - 2 ಮಾರ್ಚ್

ನಿರೀಕ್ಷಿತ ಬೆಲೆ – ರೂ. 11 ಲಕ್ಷದಿಂದ ಪ್ರಾರಂಭ

Honda City faceliftವರ್ನಾದ ಪ್ರತಿಸ್ಪರ್ಧಿಯನ್ನು ಸಹ ಮಾರ್ಚ್ ಆರಂಭದಲ್ಲಿ ಸಣ್ಣ ಬದಲಾವಣೆಯೊಂದಿಗೆ ನವೀಕೃತಗೊಳಿಸಲಾಗುತ್ತಿದೆ. ಹೊಸ ಹೋಂಡಾ ಸಿಟಿ ಒಳಗೆ ಮತ್ತು ಹೊರಗೆ ಸಣ್ಣ ನೋಟ ಬದಲಾವಣೆಯನ್ನು ಪಡೆಯುತ್ತಿದೆ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜರ್, ಮತ್ತು ADAS (ಇದರ ಹೈಬ್ರಿಡ್ ವೇರಿಯೆಂಟ್‌ನಿಂದ) ನಂತಹ ಫೀಚರ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ನಮ್ಮ ಇತ್ತೀಚಿನ ಸಂಶೋಧನೆಯ ಪ್ರಕಾರ, ಈ ಸಿಟಿಯು ಹೆಚ್ಚು ಕೈಗೆಟಕುವ ನವೀಕೃತಗೊಂಡ ‘SV’ ವೇರಿಯೆಂಟ್ ಅನ್ನು ಸಹ ಪಡೆಯಬಹುದು. ಅಂತೆಯೇ, ಅದರ ಹೈಬ್ರಿಡ್ ಪ್ರತಿರೂಪವು ಸಹ, ಹೆಚ್ಚು ಕೈಗೆಟುಕಬಲ್ಲ ‘V’ ವೇರಿಯೆಂಟ್ ಅನ್ನು ಹೊಂದಬಹುದು ಎಂದು ನಿರೀಕ್ಷಿಸುತ್ತಿದ್ದೇವೆ. ಈ ಸೆಡಾನ್ ತನ್ನ 1.5-ಲೀಟರ್ ಪೆಟ್ರೋಲ್ ಮತ್ತು ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಆದರೆ BS6 ಹಂತ 2 ಅನುಸರಣೆಯೊಂದಿಗೆ ಮುಂದುವರಿಯುತ್ತದೆ. 

ಮಾರುತಿ ಫ್ರಾಂಕ್ಸ್

ನಿರೀಕ್ಷಿತ ಬಿಡುಗಡೆಯ ದಿನಾಂಕ – ಮಾರ್ಚ್ ಮಧ್ಯದಲ್ಲಿ

ನಿರೀಕ್ಷಿತ ಬೆಲೆ – ರೂ. 8 ಲಕ್ಷದಿಂದ ಪ್ರಾರಂಭ

Maruti Fronx front

ಮಾರುತಿಯು ಮಾರ್ಚ್ ಮಧ್ಯದ ವೇಳೆಯಲ್ಲಿ ಫ್ರಾಂಕ್ಸ್ SUV-ಕ್ರಾಸ್ಓವರ್ ಬೆಲೆಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಈ ಫ್ರಾಂಕ್ಸ್ ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾದ ಮಿಶ್ರ ಡಿಸೈನ್ ಅನ್ನು ಹೊಂದಿದೆ. ಕ್ಯಾಬಿನ್‌ಗೆ ಬಲೆನೊ ಹೋಲಿಕೆಯಿದ್ದರೆ, ಸ್ಟ್ರಾಂಗ್-ಹೈಬ್ರಿಡ್ ಮಾರುತಿ SUV ಇಂದ ಕೆಲವು ಪ್ರಮುಖ ಅಂಶಗಳನ್ನು ಎರವಲು ಪಡೆಯಲಾಗಿದೆ. ಇದು ಬಲೆನೊದ 1.2-ಲೀಟರ್ ಪೆಟ್ರೋಲ್ ಇಂಜಿನ್ ಪಡೆದರೆ ಫ್ರಾಂಕ್ಸ್ ಮಾರುತಿಯ 1-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಮೈಲ್ಡ್-ಹೈಬ್ರಿಡ್ ಅವತಾರದಲ್ಲಿ ಮರಳಿ ತರುತ್ತಿದೆ. ಫೀಚರ್ ವಿಷಯದಲ್ಲಿ, ಈ ಫ್ರಾಂಕ್ಸ್ ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಹೆಡ್-ಅಪ್ ಡಿಸ್‌ಪ್ಲೇ, 360-ಡಿಗ್ರಿ ಕ್ಯಾಮರಾ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ.

 ಇದನ್ನೂ ಓದಿ: ಮಾರುತಿ ಫ್ರಾಂಕ್ಸ್‌ನ ನಿರೀಕ್ಷಿತ ಬೆಲೆಗಳು: ಬಲೆನೊಗಿಂತ ಇದೆಷ್ಟು ದುಬಾರಿ?

ಸಿಟ್ರಾನ್ eC3

 ನಿರೀಕ್ಷಿತ ಬಿಡುಗಡೆ ದಿನಾಂಕ – ಮಾರ್ಚ್ ಆರಂಭದಲ್ಲಿ

 ನಿರೀಕ್ಷಿತ ಬೆಲೆ – ರೂ. 11 ಲಕ್ಷದಿಂದ ಆರಂಭ

Citroen eC3ಈ ಹ್ಯಾಚ್‌ಬ್ಯಾಕ್ C3 ಯ ಎಲೆಕ್ಟ್ರಿಕ್ ಆವೃತ್ತಿ ಮಾರ್ಚ್ ಆರಂಭದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಇದು ಎಕ್ಸಾಸ್ಟ್ ಪೈಪ್ ಇಲ್ಲದ ಪೆಟ್ರೋಲ್ ಪ್ರತಿರೂಪದಂತೆ ಕಾಣುತ್ತದೆ. ಇದು 29.2kWh ಬ್ಯಾಟರಿ ಪ್ಯಾಕ್ ಅನ್ನು ಪಡೆದಿದ್ದು 320 ಕಿಮೀಗಳನ್ನು (ARAI-ಕ್ಲೈಮ್) ಕ್ಲೈಮ್ ಮಾಡುತ್ತದೆ. ಈ eC3 ಟ್ಯಾಪ್‌ನಲ್ಲಿ  57PS ಮತ್ತು 143Nm ಬಿಡುಗಡೆಗೊಳಿಸುತ್ತದೆ ಎಂದು ಹೇಳಲಾಗಿದೆ. ಇದು 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕೀರಹಿತ ಪ್ರವೇಶ, ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳೊಂದಿಗೆ ಪೆಟ್ರೋಲ್ ಪ್ರತಿರೂಪದಲ್ಲಿರುವಂತಹ ಫೀಚರ್‌ಗಳನ್ನು ಪಡೆದಿದೆ.

ಟೊಯೋಟಾ ಇನೋವಾ ಕ್ರಿಸ್ಟಾ

Toyota Innova Crystaನಿರೀಕ್ಷಿತ ಬಿಡುಗಡೆ ದಿನಾಂಕ – ಮಾರ್ಚ್ ಮಧ್ಯದಲ್ಲಿ

ನಿರೀಕ್ಷಿತ ಬೆಲೆ – ರೂ. 20 ಲಕ್ಷದಿಂದ ಪ್ರಾರಂಭ

ಇನೋವಾ ಕ್ರಿಸ್ಟಾ, ಪೆಬ್ರವರಿಯಲ್ಲಿ ಮಾರಾಟಕ್ಕೆ ಬರುತ್ತದೆಂದು ನಿರೀಕ್ಷಿಸಲಾಗುತ್ತು, ಆದರೆ ಬರಲಿಲ್ಲ. ಈಗ, ಈ MPV ಬೆಲೆಗಳನ್ನು ಈ ತಿಂಗಳಿನಲ್ಲಿ ಬಹಿರಂಗಪಡಿಸಲಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ಹೊಸ ಜನರೇಷನ್ ಇನೋವಾ ಈಗಾಗಲೇ ಮಾರಾಟಕ್ಕೆ ಬಂದಿದ್ದರೆ, ಹಳೆಯ ಮಾಡೆಲ್ ಸಿಂಗಲ್ ಡಿಸೇಲ್-ಮ್ಯಾನ್ಯುವಲ್‌ನೊಂದಿಗೆ ಅಸ್ತಿತ್ವದಲ್ಲಿರಲಿದೆ. ಇದು ಆಟೋಮ್ಯಾಟಿಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಚಾಲಿತ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಮತ್ತು ಏಳು ಏರ್‌ಬ್ಯಾಗ್‌ಗಳಂತಹ ಫೀಚರ್‌ಗಳೊಂದಿಗೆ ಅನೇಕ ಟ್ರಿಮ್‌ಗಳಲ್ಲಿ ಲಭ್ಯವಿದೆ.

 ಈ ಕಾರುಗಳ ಹೊರತಾಗಿ, ನಾವು ಹೊಸ-ಜನರೇಷನ್ ಲೆಕ್ಸಸ್ RH ಮತ್ತು ಮಾರುತಿ ಬ್ರೆಝಾ CNG ಅನ್ನು ಸಹ ನಿರೀಕ್ಷಿಸುತ್ತಿದ್ದೇವೆ. ಈ ಕಾರುಗಳನ್ನು ಫೆಬ್ರವರಿಯಲ್ಲಿ ನಿರೀಕ್ಷಿಸಲಾಗಿತ್ತು ಆದರೆ ಬಿಡುಗಡೆಗೊಳ್ಳಲಿಲ್ಲ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Citroen ಇಸಿ3

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • Kia Syros
    Kia Syros
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ಲೆಕ್ಸಸ್ lbx
    ಲೆಕ್ಸಸ್ lbx
    Rs.45 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
×
We need your ನಗರ to customize your experience