ಇವುಗಳು 2024ರ ಜನವರಿಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು
ಮಾರುತಿ ಬಾಲೆನೋ ಗಾಗಿ rohit ಮೂಲಕ ಫೆಬ್ರವಾರಿ 13, 2024 12:11 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಪಟ್ಟಿಯಲ್ಲಿರುವ 10 ಕಾರುಗಳಲ್ಲಿ, ಮೂರು ಮಾಡೆಲ್‌ಗಳು 2024ರ ಜನವರಿಯ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ (YoY) 50 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿವೆ.
2024 ರ ಮೊದಲ ತಿಂಗಳು ಮುಗಿದಿದೆ ಮತ್ತು 2023 ರ ಅಂತ್ಯದ ವೇಳೆಗೆ ಮಾರಾಟದಲ್ಲಿ ಕುಸಿತದ ನಂತರ ಭಾರತೀಯ ವಾಹನ ಉದ್ಯಮದಲ್ಲಿ ತಿಂಗಳಿನಿಂದ ತಿಂಗಳಿಗೆ (MoM) ಬೇಡಿಕೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಈ ಪಟ್ಟಿಯಲ್ಲಿರುವ ಬಹುತೇಕ ಎಲ್ಲಾ ಕಾರುಗಳು ಬೇಡಿಕೆಯಲ್ಲಿ ವರ್ಷದಿಂದ ವರ್ಷಕ್ಕೆ (YoY) ಧನಾತ್ಮಕ ಬೆಳವಣಿಗೆಯನ್ನು ಕಂಡಿವೆ. 2024 ರ ಜನವರಿಯ ಮಾರಾಟದಲ್ಲಿ ಪ್ರತಿ ಮೊಡೆಲ್‌ಗಳು ಹೇಗೆ ಮಾರಾಟವನ್ನು ಕಂಡಿತು ಎಂಬುದರ ವಿವರವಾದ ನೋಟ ಇಲ್ಲಿದೆ:
ಮೊಡೆಲ್ |
ಜನವರಿ 2024 |
ಜನವರಿ 2023 |
ಡಿಸೆಂಬರ್ 2023 |
ಮಾರುತಿ ಬಲೆನೋ |
19,630 |
16,357 |
10,669 |
ಟಾಟಾ ಪಂಚ್ |
17,978 |
12,006 |
13,787 |
ಮಾರುತಿ ವ್ಯಾಗನ್ ಆರ್ |
17,756 |
20,466 |
8,578 |
ಟಾಟಾ ನೆಕ್ಸಾನ್ |
17,182 |
15,567 |
15,284 |
ಮಾರುತಿ ಡಿಜೈರ್ |
16,773 |
11,317 |
14,012 |
ಮಾರುತಿ ಸ್ವಿಫ್ಟ್ |
15,370 |
16,440 |
11,843 |
ಮಾರುತಿ ಬ್ರೆಜ್ಜಾ |
15,303 |
14,359 |
12,844 |
ಮಾರುತಿ ಎರ್ಟಿಗಾ |
14,632 |
9,750 |
12,975 |
ಮಹೀಂದ್ರಾ ಸ್ಕಾರ್ಪಿಯೋ |
14,293 |
8,715 |
11,355 |
ಮಾರುತಿ ಫ್ರಾಂಕ್ಸ್ |
13,643 |
– |
9,692 |
ಇದನ್ನು ಸಹ ಓದಿ: 2024ರ ಜನವರಿಯ ಕಾರು ಮಾರಾಟದಲ್ಲಿ 10 ಕಾರ್ ಬ್ರಾಂಡ್‌ಗಳದ್ದೇ ಮೆಲುಗೈ: ಟಾಟಾವನ್ನು ಹಿಂದಿಕ್ಕಿ 2 ನೇ ಸ್ಥಾನವನ್ನು ಮರಳಿ ಪಡೆದ ಹ್ಯುಂಡೈ
ಗಮನಿಸಬೇಕಾದ ಪ್ರಮುಖ ಅಂಶಗಳು
- ಮಾರುತಿ ಬಲೆನೊ, ಸುಮಾರು 20,000 ಯುನಿಟ್‌ಗಳಷ್ಟು ಮಾರಾಟವನ್ನು ಕಂಡಿದ್ದು, ಜನವರಿ 2024 ರ ಮಾರಾಟ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಅದರ ವರ್ಷದಿಂದ ವರ್ಷಕ್ಕೆ (YoY) ಅಂಕಿಅಂಶವು 20 ಪ್ರತಿಶತದಷ್ಟು ಏರಿತು. ಹಾಗೆಯೇ ತಿಂಗಳಿನಿಂದ ತಿಂಗಳಿಗೆ ಇದರಲ್ಲಾದ ಮಾರಾಟದ ಜಂಪ್ ಅದರ ಬೇಡಿಕೆಯನ್ನು ದ್ವಿಗುಣಗೊಳಿಸಿತು.
- 2024 ರ ಜನವರಿಯ ಮುಂದಿನ ಮೂರು ಟಾಪ್-ಸೆಲ್ಲರ್‌ಗಳೆಂದರೆ ಟಾಟಾ ಪಂಚ್, ಮಾರುತಿ ವ್ಯಾಗನ್ ಆರ್ ಮತ್ತು ಟಾಟಾ ನೆಕ್ಸಾನ್. ಇವುಗಳ ಮಾರಾಟವು 17,000 ಮತ್ತು 18,000 ಯುನಿಟ್‌ಗಳ ನಡುವೆ ಇತ್ತು. ಈ ಮೂರರಲ್ಲಿ, ಪಂಚ್ 50 ಪ್ರತಿಶತದಷ್ಟು ಬೃಹತ್ತಾದ ವರ್ಷದಿಂದ ವರ್ಷದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಪಂಚ್ ಮತ್ತು ನೆಕ್ಸಾನ್‌ನ ಸಂಖ್ಯೆಗಳು ಕ್ರಮವಾಗಿ ಪಂಚ್ ಇವಿ ಮತ್ತು ನೆಕ್ಸಾನ್ ಇವಿ ಮಾರಾಟವನ್ನು ಒಳಗೊಂಡಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
- ಮಾರಾಟದಲ್ಲಿ ನೆಕ್ಸಾನ್‌ಗೆ ಸಮೀಪದಲ್ಲಿರುವ ಮಾರುತಿ ಡಿಜೈರ್ (ಪಟ್ಟಿಯಲ್ಲಿರುವ ಏಕೈಕ ಸೆಡಾನ್) ಸುಮಾರು 16,800 ಯುನಿಟ್‌ಗಳ ಒಟ್ಟು ಮಾರಾಟವನ್ನು ಕಂಡಿದೆ. ಅದರ ತಿಂಗಳಿನಿಂದ ತಿಂಗಳ (MoM) ಮಾರಾಟವು 2,000-ಕ್ಕೂ ಮಿಕ್ಕಿ ಸಂಖ್ಯೆಯಿಂದ ಹೆಚ್ಚಾಗಿದೆ.
- 15,000 ರಿಂದ 16,000 ಯುನಿಟ್‌ಗಳ ನಡುವಿನ ಮಾರಾಟ ಸಂಖ್ಯೆಗಳೊಂದಿಗೆ, ಮಾರುತಿ ಸ್ವಿಫ್ಟ್ ಮತ್ತು ಮಾರುತಿ ಬ್ರೆಝಾ 2024ರ ಜನವರಿಯ ಪಟ್ಟಿಯಲ್ಲಿ ಮುಂದಿನ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ವರ್ಷದಿಂದ ವರ್ಷದ ಮಾರಾಟದಲ್ಲಿ ಸ್ವಿಫ್ಟ್ ಏಳು ಪ್ರತಿಶತದಷ್ಟು ಕುಸಿತವನ್ನು ಕಂಡರೆ, ಬ್ರೆಜ್ಜಾದ ವರ್ಷದಿಂದ ವರ್ಷದ ಮಾರಾಟದ ಸಂಖ್ಯೆಯು ಏಳು ಪ್ರತಿಶತದಷ್ಟು ಬೆಳೆದಿದೆ.
- ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಸ್ಕಾರ್ಪಿಯೊ (ಕ್ಲಾಸಿಕ್ ಮತ್ತು ಸ್ಕಾರ್ಪಿಯೊ ಎನ್ ಎರಡನ್ನೂ ಒಳಗೊಂಡಂತೆ) ಎರಡರ ವರ್ಷದಿಂದ ವರ್ಷದ ಮಾರಾಟ ಸಂಖ್ಯೆಗಳು ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
- 13,600 ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಟ ಮಾಡುವುದರೊಂದಿಗೆ, ಮಾರುತಿ ಫ್ರಾಂಕ್ಸ್ ಈ ಪಟ್ಟಿಗೆ ಸೇರಿದೆ. ಇದರ ತಿಂಗಳಿನಿಂದ ತಿಂಗಳ ಮಾರಟದ ಸಂಖ್ಯೆಯು ಸುಮಾರು 4,000 ಯೂನಿಟ್‌ಗಳಷ್ಟು ಹೆಚ್ಚಿದೆ.
ಇನ್ನಷ್ಟು ಓದಿ: ಬಲೆನೋ ಎಎಮ್‌ಟಿ