ಆಫ್‌ರೋಡರ್ ಸ್ಥಾನ ಗಿಟ್ಟಿಸುತ್ತಾ ಸಿಟ್ರಾನ್ C3 ಏರ್‌ಕ್ರಾಸ್ SUV?: ಈ ರೀಲ್ ನೋಡಿ
ಸಿಟ್ರೊನ್ aircross ಗಾಗಿ tarun ಮೂಲಕ ಆಗಸ್ಟ್ 09, 2023 02:22 pm ರಂದು ಮಾರ್ಪಡಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಇದು ಖಂಡಿತವಾಗಿಯೂ ಥಾರ್ ಮತ್ತು ಸ್ಕಾರ್ಪಿಯೊ N ಥರಾ ಹಾರ್ಡ್‌ಕೋರ್ ಅಲ್ಲ, ಆದರೆ ಸಿಟ್ರಾನ್ C3 ಏರ್‌ಕ್ರಾಸ್ ಕೆಲವು ಹಾದಿಗಳನ್ನು ಆರಾಮವಾಗಿ ಕ್ರಮಿಸಬಲ್ಲುದು.
ಈ ಸಿಟ್ರಾನ್ C3 ಏರ್‌ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿ ಸ್ಥಾನವನ್ನು ಸೇರುವ ಒಂಬತ್ತನೇ ಮಾದರಿಯಾಗಿದೆ. ಇದರ ಬುಕ್ಕಿಂಗ್ ಮತ್ತು ಡೆಲಿವರಿ ಸೆಪ್ಟೆಂಬರ್‌ನಿಂದ ಪ್ರಾರಂಭವಾಗಲಿದ್ದು, ಅದೇ ತಿಂಗಳಿನಲ್ಲಿ ನಾವು ಅದರ ಬೆಲೆಗಳ ಕುರಿತು ಸಹ ತಿಳಿದುಕೊಳ್ಳಬಹುದು.
ಈ C3 ಏರ್‌ಕ್ರಾಸ್ ‘ಎಸ್‌ಯುವಿ’ ಟೈಟಲ್ ಹೊಂದಿದೆ, ಆದರೆ ಎಲ್ಲಾ ಎಸ್‌ಯುವಿಗಳು ನಗರ ಮತ್ತು ಹೆದ್ದಾರಿ ಬಳಕೆಗಷ್ಟೇ ಸೀಮೀತವಾಗಿರುತ್ತವೆ. ಆದ್ದರಿಂದ, ನಾವು ಸಿಟ್ರಾನ್‌ನ ಆಫ್-ರೋಡ್ ಸಾಮರ್ಥ್ಯವನ್ನು ಪರಿಶೀಲಿಸಲು ನಿರ್ಧರಿಸಿದೆವು. ಇದು ತನ್ನನ್ನು ತಾನು ಹೇಗೆ ಸಾಬೀತುಪಡಿಸಿಕೊಂಡಿತು ಎಂಬುದನ್ನು ನೋಡಲು ಈ ರೀಲ್ ವೀಕ್ಷಿಸಿ:
ಹೇಗಿತ್ತು ಕಾರ್ಯಾಚರಣೆ?
ಮೊದಲು, ನಾವು C3 ಏರ್‌ಕ್ರಾಸ್ ಸುಲಭವಾಗಿ ಚಲಿಸುವ 200mm ಜಾಗವಿರುವ ನೆಲದ ಕ್ಲಿಯರೆನ್ಸ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತೇವೆ. ಇದರ ಮೂಲಕ, ಅದರ ಹಿಲ್ ಸ್ಟಾರ್ಟ್ ಅಸಿಸ್ಟ್ ಫೀಚರ್ ಅನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ. ಈ ಎಸ್‌ಯುವಿ ಅದರ ಸಾಮರ್ಥ್ಯವನ್ನು ತೋರಿಸಲು ಪಾರ್ಶ್ವ ಟಿಲ್ಟ್ ಮತ್ತು ನೀರಿನ ವೇಡಿಂಗ್ ಪರೀಕ್ಷೆಗಳನ್ನು ಸಹ ಮಾಡೋಣೇ.
ವ್ಹೀಲ್ ಆರ್ಟಿಕ್ಯುಲೇಷನ್ ಪ್ರಮುಖ ಆಫ್-ರೋಡಿಂಗ್ ಪರೀಕ್ಷೆಗಳಲ್ಲಿ ಒಂದಾಗಿದ್ದು, ಇದು C3 ಏರ್‌ಕ್ರಾಸ್ ಸಲೀಸಾಗಿ ಉತ್ತೀರ್ಣವಾಗಿದಂತೆ ತೋರುತ್ತದೆ. ಕೊನೆಯದಾಗಿ, ಇದು ಸಮತಟ್ಟಾದ ಅಂಡರ್‌ಫ್ಲೋರ್ ಹೊಂದಿದ್ದು ಎಸ್‌ಯುವಿಯನ್ನು ಬಂಡೆಗಳಿಂದ ತುಂಬಿದ ಪರೀಕ್ಷೆಗಳಲ್ಲೂ ಉತ್ತೀರ್ಣವಾಗಿಸಿದೆ. ಆದಾಗ್ಯೂ, ಈ ಎಲ್ಲಾ ಪರೀಕ್ಷೆಗಳಿಂದ C3 ಆಫ್-ರೋಡರ್ ಆಗಿ ಅರ್ಹತೆ ಹೊಂದಿಲ್ಲ. ಆದರೆ ಮಳೆಗಾಲದಲ್ಲಿನ ನಗರ ಪ್ರದೇಶದ ಹಾಳಾದ ರಸ್ತೆಗಳು ಮತ್ತು ಚಿಕ್ಕ ಮಟ್ಟದ ಸಾಹಸಗಳಿಗೆ ಇದು ಸಾಫ್ಟ್-ರೋಡರ್ ಆಗಿದೆ ಎನ್ನಬಹುದು.
ಇದನ್ನೂ ಓದಿ: ಸಿಟ್ರಾನ್ C3 ಏರ್‌ಕ್ರಾಸ್‌ನೊಂದಿಗೆ ನೀವು ಪಡೆಯುವ ಎಲ್ಲಾ ವೈಶಿಷ್ಟ್ಯಗಳು ಇಲ್ಲಿವೆ
C3 ಏರ್‌ಕ್ರಾಸ್: ಪವರ್‌ಟ್ರೇನ್
ಈ C3 ಏರ್‌ಕ್ರಾಸ್, 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೊತೆಯಾದ 110PS 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಸಿಟ್ರಾನ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಇನ್ನೂ ಅಂತಿಮಗೊಳಿಸುವ ಹಾದಿಯಲ್ಲಿದ್ದು, ಇದನ್ನು 2024 ರ ವೇಳೆಗೆ ಕಾಣಬಹುದು.
ಫೀಚರ್‌ಗಳು ಮತ್ತು ಪ್ರತಿಸ್ಪರ್ಧಿಗಳು
ಇದು 10.2-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮರಾ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಹೊಂದಿದೆ. C3 ಏರ್‌ಕ್ರಾಸ್ ರೂ.9 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಬಹುದು ಮತ್ತು ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸಿಯರ್ ಹೈರೈಡರ್, ಮತ್ತು ಹ್ಯುಂಡೈ ಎಲಿವೇಟ್‌ಗೆ ಪೈಪೋಟಿಯನ್ನು ಒಡ್ಡುತ್ತದೆ.
ಇದನ್ನೂ ಓದಿ : ಸಿಟ್ರಾನ್ C3 ಆನ್ ರೋಡ್ ಬೆಲೆ