Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಟಿಯಾಗೋ EV Vs ಸಿಟ್ರಾನ್ eC3- ಎಸಿ ಬಳಕೆಯಿಂದ ಬ್ಯಾಟರಿ ಡ್ರೈನ್ ಪರೀಕ್ಷೆ

ಟಾಟಾ ಟಿಯಾಗೋ ಇವಿ ಗಾಗಿ ansh ಮೂಲಕ ಜೂನ್ 22, 2023 02:33 pm ರಂದು ಪ್ರಕಟಿಸಲಾಗಿದೆ

ಎರಡೂ EVಗಳು ಒಂದೇ ಗಾತ್ರದ ಬ್ಯಾಟರಿ ಪ್ಯಾಕ್‌ಗಳನ್ನು ನೀಡುತ್ತವೆ, ಆದರೆ ಒಂದು ಇನ್ನೊಂದಕ್ಕಿಂತ ಬೇಗನೆ ಡ್ರೈನ್ ಆಗುತ್ತದೆ.

ನಾವು ಭಾರತದ ಎರಡು ಆರಂಭಿಕ ಹಂತದ ಇಲೆಕ್ಟ್ರಿಕ್ ಕಾರುಗಳಾದ ಟಾಟಾ ಟಿಯಾಗೋ EV ಮತ್ತು ಸಿಟ್ರಾನ್ eC3 ಅನ್ನು ತೆಗೆದುಕೊಂಡು ನಿರ್ಣಾಯಕ ಪರೀಕ್ಷೆಗೆ ಒಳಪಡಿಸಿದೆವು. ಎರಡರಲ್ಲಿಯೂ ಪ್ರತ್ಯೇಕವಾಗಿ ಕುಳಿತುಕೊಂಡು ಒಂದೇ ಹವಾಮಾನ ಪರಿಸ್ಥಿತಿಯಲ್ಲಿ ಏರ್ ಕಂಡೀಷನಿಂಗ್ ಅನ್ನು ಆನ್ ಮಾಡಿ, ಬ್ಲೋವರ್ ಸ್ಪೀಡ್ ಅನ್ನು ಗರಿಷ್ಠಗೊಳಿಸಿ 30 ನಿಮಿಷಗಳು ಕಳೆದಾಗ ಯಾವುದು ಹೆಚ್ಚು ಚಾರ್ಜ್ ಅನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ನೋಡಲು ಕಾಯುತ್ತಿದ್ದೆವು. ನಮ್ಮ ಫಲಿತಾಂಶಗಳು ಇಲ್ಲಿವೆ:

ಟಾಟಾ ಟಿಯಾಗೋ EV

ಟಾಟಾ ಟಿಯಾಗೋ EV

ಆರಂಭಿಕ

ಅಂತಿಮ

ಬ್ಯಾಟರಿ ಶೇಕಾಡಾವಾರು

64 %

57 %

ಶ್ರೇಣಿ

140 km

128 km

ನಾವು Tiago EV ನಲ್ಲಿ AC ಪರೀಕ್ಷೆಯನ್ನು 64 ಪ್ರತಿಶತ ಬ್ಯಾಟರಿಯಲ್ಲಿ ಕಾರಿನೊಂದಿಗೆ ಪ್ರಾರಂಭಿಸಿದ್ದೇವೆ, ಇದು 140 ಕಿಮೀ ವ್ಯಾಪ್ತಿಯನ್ನು ಸೂಚಿಸುತ್ತದೆ. ಪರೀಕ್ಷೆಯ ಸಮಯದಲ್ಲಿ, ಅದರ ಬ್ಯಾಟರಿಯನ್ನು ವ್ಯಹಿಸುವ ಯಾವುದೇ ವೈಶಿಷ್ಟ್ಯವನ್ನು ನಾವು ಬಳಸಲಿಲ್ಲ. 30 ನಿಮಿಷಗಳ ನಂತರ, ಚಾರ್ಜ್ ಶೇಕಡಾ 7 ರಷ್ಟು ಮತ್ತು ರೇಂಜ್ 12 ಕಿಮೀ ಕಡಿಮೆಯಾಯಿತು.

View this post on Instagram ಈ ಪೋಸ್ಟ್ ಅನ್ನು Instagram ನಲ್ಲಿ ವೀಕ್ಷಿಸಿ

ಟಾಟಾ ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ: 19.2kWh ಮತ್ತು 24kWh. ಈ ಎರಡೂ ಬ್ಯಾಟರಿಗಳನ್ನು ಸಣ್ಣದಕ್ಕೆ 61PS/110Nm ಉತ್ಪಾದಿಸುವ ಮತ್ತು ದೊಡ್ಡದಕ್ಕೆ 75PS/114Nm ಉತ್ಪಾದಿಸುವ ಇಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾಗಿದ್ದು, ಅನುಕ್ರಮವಾಗಿ 250km ಮತ್ತು 315km ಕ್ಲೈಮ್ ಮಾಡಲಾದ ರೇಂಜ್ ಅನ್ನು ಪಡೆಯುತ್ತವೆ. ಪರೀಕ್ಷೆಗೆ ಒಳಪಡಿಸಲು ನಾವು ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಟಿಯಾಗೋ EVಯನ್ನು ಆಯ್ಕೆ ಮಾಡಿದೆವು.

ಸಿಟ್ರಾನ್ eC3

ಸಿಟ್ರಾನ್ eC3

ಆರಂಭಿಕ

ಅಂತಿಮ

ಬ್ಯಾಟರಿ ಶೇಕಡಾವಾರು

56.6 %

54 %

ಇದೇ ಪರೀಕ್ಷೆಯನ್ನು ನಾವು ಸಿಟ್ರಾನ್ eC3 ಮೇಲೆ ನಡೆಸಿ ವಿಭಿನ್ನ ಫಲಿತಾಂಶವನ್ನು ಪಡೆದೆವು. ಅಷ್ಟೇ ಸಮಯಾವಧಿಯಲ್ಲಿ, eC3 ಕೇವಲ 2.6 ಪ್ರತಿಶತ ಚಾರ್ಜ್ ಅನ್ನು ಕಳೆದುಕೊಂಡು 56.6 ರಿಂದ 54 ಪ್ರತಿಶತಕ್ಕೆ ಇಳಿಯಿತು. ಟಿಯಾಗೋಗೆ ಹೋಲಿಸಿದರೆ eC3ಯ ತುಸು ದೊಡ್ಡದಾದ ಬ್ಯಾಟರಿ ಪ್ಯಾಕ್ ಇದಕ್ಕೆ ಕಾರಣವಾಗಿರಬಹುದು. ಅಲ್ಲದೇ, eC3ಯ ಏರ್ ಕಂಡೀಷನಿಂಗ್ ಕಂಪ್ರೆಸರ್ ಕಾಲಕಾಲಕ್ಕೆ ಕಡಿತಗೊಳ್ಳುವುದು ನಮ್ಮ ಅನುಭವಕ್ಕೆ ಬಂದಿದ್ದು, ಪರೀಕ್ಷೆಯ ಸಮಯದಲ್ಲಿ ಅದನ್ನು ಮತ್ತೆ ಕಾರ್ಯರೂಪಕ್ಕೆ ತರುವ ಅಗತ್ಯ ಉಂಟಾಯಿತು.

View this post on Instagram ಈ ಪೋಸ್ಟ್ ಅನ್ನು ಇನ್ಸ್ಟಾಗ್ರಾಂನಲ್ಲಿ ವೀಕ್ಷಿಸಿ

ಇದು 57PS and 143Nm ಉತ್ಪಾದಿಸುವ ಇಲೆಕ್ಟ್ರಿಕ್ ಮೋಟರ್‌ನೊಂದಿಗೆ 29.2kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಈ ಸೆಟಪ್‌ನೊಂದಿಗೆ eC3 320km ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ ಮಾತ್ರವಲ್ಲದೇ ಟಿಯಗೋ EVಗಿಂತ ಇದು ತುಸು ಹೆಚ್ಚು.

ಇದನ್ನೂ ಓದಿ: 0-100 KMPH ಸ್ಪ್ರಿಂಟ್‌ನಲ್ಲಿ ಟಾಟಾ ಟಿಯಾಗೋ EV 10 ಕಾರುಗಳಿಗಿಂತ ಚುರುಕಾಗಿದೆ

ಟಾಟಾ ಟಿಯಾಗೋ EV ಸಿಟ್ರಾನ್ eC3ಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ತೋರಿಸಲು ನಾವು ನಿಮಗೆ ನೈಜ ರೇಂಜ್ ಅನ್ನು ಶೀಘ್ರದಲ್ಲೇ ನೀಡುತ್ತೇವೆ.

ಬೆಲೆ

ಟಿಯಾಗೋ EV ಬೆಲೆಯನ್ನು ರೂ 8.69 ಲಕ್ಷ ಮತ್ತು ರೂ 12.04 ಲಕ್ಷದ (ಎಕ್ಸ್-ಶೋರೂಂ) ನಡುವೆ ನಿಗದಿಪಡಿಸಲಾಗಿದ್ದು, eC3ಯ ಬೆಲೆ ರೂ 11.50 ಲಕ್ಷದಿಂದ ರೂ 12.76 ಲಕ್ಷದ (ಎಕ್ಸ್-ಶೋರೂಂ) ತನಕ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಮತ್ತು ಈ ಎರಡು EVಗಳ ನಡುವೆ ಹೆಚ್ಚಿನ ಹೋಲಿಕೆಗಳಿಗಾಗಿ ಕಾರ್‌ದೇಖೋ ನೋಡುತ್ತಿರಿ.

ಇನ್ನಷ್ಟು ಓದಿ : ಟಿಯಾಗೋ EV ಆಟೋಮ್ಯಾಟಿಕ್

Share via

Write your Comment on Tata Tia ಗೋ EV

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ