Login or Register ಅತ್ಯುತ್ತಮ CarDekho experience ಗೆ
Login

ಈ 7 ರೋಮಾಂಚಕ ಜಿಮ್ನಿ ಬಣ್ಣಗಳಲ್ಲಿ ನೀವು ಯಾವುದನ್ನು ಆರಿಸುತ್ತೀರಿ?

ಜನವರಿ 17, 2023 11:23 am ರಂದು shreyash ಮೂಲಕ ಪ್ರಕಟಿಸಲಾಗಿದೆ
71 Views

ಐದು ಮೋನೋಟೋನ್ ಬಣ್ಣಗಳ ಹೊರತಾಗಿ, ಜಿಮ್ನಿ ಎರಡು ಡ್ಯುಯಲ್‌-ಟೋನ್‌ ಛಾಯೆಗಳಲ್ಲಿಯೂ ಸಹ ಹೊಂದಬಹುದು

  • 2023 ರ ಆಟೋ ಎಕ್ಸ್‌ಪೋ ರಲ್ಲಿ ಪ್ರದರ್ಶಿಸಲಾದ 5-ಡೋರ್ ಮಾರುತಿ ಜಿಮ್ನಿ.

  • ಸಿಂಗಲ್ ಟೋನ್ ಆಯ್ಕೆಗಳು ಸಿಝ್ಲಿಂಗ್ ರೆಡ್, ಬ್ಯೂಯಿಶ್ ಬ್ಲ್ಯಾಕ್, ಗ್ರಾನೈಟ್ ಗ್ರೇ, ನೆಕ್ಸಾ ಬ್ಲೂ ಮತ್ತು ಪರ್ಲ್ ಆರ್ಕ್‌ಟಿಕ್ ವೈಟ್ ಅನ್ನು ಒಳಗೊಂಡಿದೆ.

  • ಮಾರುತಿಯು 105PS ಮತ್ತು 134.2Nm ಗೆ ಉತ್ತಮವಾದ 1.5-ಲೀಟರ್ ಪೆಟ್ರೋಲ್ ಯೂನಿಟ್‌ ಅನ್ನು ಹೊಂದಿದೆ.

  • ಲೋ ರೇಂಜ್ ಟ್ರಾನ್ಸ್‌ಫರ್‌ ಕೇಸ್‌ನೊಂದಿಗೆ 4WD ಡ್ರೈವ್‌ಟ್ರೈನ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ

ಅನೇಕ ಬಾರಿ ಪರೀಕ್ಷೆಗೆ ಒಳಗಾದ ನಂತರ, ಫೈವ್-ಡೋರ್ ಮಾರುತಿ ಜಿಮ್ನಿ ಕೊನೆಗೆ ಆಟೋ ಎಕ್ಸ್‌ಪೋ 2023ರಲ್ಲಿ ಜಾಗತಿಕವಾಗಿ ಕಾಣಿಸಿಕೊಂಡಿತು. ಜಿಮ್ನಿಯನ್ನು ನೆಕ್ಸಾ ಶೋರೂಂಗಳ ಮೂಲಕ ಮಾರಾಟ ಮಾಡಲಾಗುತ್ತದೆ ಮತ್ತು ಮಾರುತಿ ರೂ. 11,000 ಕ್ಕೆ ಬುಕಿಂಗ್ ಸ್ವೀಕರಿಸಲು ಆರಂಭಿಸಿದೆ. ಎಸ್‌ಯುವಿ ಬಗ್ಗೆ ಪ್ರಕಟಗೊಳಿಸಲಾದ ಎಲ್ಲಾ ವಿವರಗಳ ನಡುವೆ, ಮಾರುತಿ ಆಫರ್‌ನಲ್ಲಿರುವ ಸಂಪೂರ್ಣ ಕಲರ್ ಪ್ಯಾಲೆಟ್ ಅನ್ನು ಹಂಚಿಕೊಂಡಿದೆ.

ಅಲ್ಲದೇ ಜಿಮ್ನಿ ಈ ಕೆಳಗಿನ ಎರಡು ಡ್ಯುಯಲ್-ಟೋನ್ ಮತ್ತು ಐದು ಮೋನೋಟೋನ್ ಎಕ್ಸ್‌ಟೀರಿಯರ್ ಕಲರ್‌ಗಳಲ್ಲಿಯೂ ಲಭ್ಯವಿರುತ್ತದೆ.

ಬ್ಲ್ಯೂಯಿಶ್ ಬ್ಲ್ಯಾಕ್ ರೂಫ್‌ನೊಂದಿಗೆ ಕೈನೆಟಿಕ್ ಯೆಲ್ಲೋ

ಬ್ಲ್ಯೂಯಿಶ್ ಬ್ಲ್ಯಾಕ್ ರೂಫ್‌ನೊಂದಿಗೆ ಸಿಝ್ಲಿಂಗ್ ರೆಡ್

ನೆಕ್ಸಾ ಬ್ಲೂ

ಸಿಝ್ಲಿಂಗ್ ರೆಡ್

ಗ್ರ್ಯಾನೈಟ್ ಗ್ರೇ

ಬ್ಲ್ಯೂಯಿಶ್ ಬ್ಲ್ಯಾಕ್

ಪರ್ಲ್ ಆರ್ಕ್‌ಟಿಕ್ ವೈಟ್

ಪ್ರಸ್ತುತವಿರುವ ನೆಕ್ಸಾ ಮಾಡೆಲ್‌ಗಳಲ್ಲಿ ಇರುವಂತೆ ನೆಕ್ಸಾ ಬ್ಲೂ ಶೇಡ್ ಅನ್ನು ಒಳಗೊಂಡು ಜಿಮ್ನಿ ಏಳು ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಮಾರುತಿ ಕೂಡಾ ತನ್ನ ಅರೆನಾ ಮಾಡೆಲ್‌, ಬ್ರೆಝಾದಲ್ಲಿರುವಂತೆ ‘ಸಿಝ್ಲಿಂಗ್ ರೆಡ್’ ಪೈಂಟ್ ಆಯ್ಕೆಯನ್ನು ನೀಡುತ್ತದೆ.

ಇದನ್ನೂ ಓದಿ: ಮಾರುತಿ ಗ್ರ್ಯಾಂಡ್ ವಿಟಾರಾ ಬ್ಲ್ಯಾಕ್ ಆವೃತ್ತಿ 5 ಇಮೇಜ್‌ಗಳಲ್ಲಿ

ಪ್ರೊಪಲ್ಶನ್ ಡ್ಯೂಟಿಗಳನ್ನು 1.5-ಲೀಟರ್ ಪೆಟ್ರೋಲ್ ಯೂನಿಟ್ (ಐಡಲ್ ಇಂಜಿನ್ ಸ್ಟಾರ್ಟ್/ ಸ್ಟಾಪ್) ನೊಂದಿಗೆ ನಿರ್ವಹಿಸಲಾಗುತ್ತದೆ, ಇದು 105PS ಮತ್ತು 134.2Nm ಅನ್ನು ಮಾಡುತ್ತದೆ ಮತ್ತು ಫೈವ್ ಸ್ಪೀಡ್ ಮ್ಯಾನುವಲ್ ಅಥವಾ ಫೋರ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನೊಂದಿಗೆ ಲಭ್ಯವಿದೆ. ಲೋ ರೇಂಜ್ ಟ್ರಾನ್ಸ್‌ಫರ್‌ ಕೇಸ್‌ನೊಂದಿಗೆ ಫೋರ್-ವ್ಹೀಲ್-ಡ್ರೈವ್ ಪವರ್‌ಟ್ರೈನ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ..

ಮಾರುತಿಯ ರಗ್ಡ್ ಎಸ್‌ಯುವಿ ಒಂಭತ್ತು ಇಂಚಿನ ಟಚ್‌ಸ್ಕ್ರೀನ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಅನ್ನು ಸಪೋರ್ಟ್ ಮಾಡುವ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಅಲ್ಲದೇ ಇದು ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲೈಟ್‌ಗಳು, ಒಂದು ಹೆಡ್‌ಲ್ಯಾಂಪ್ ವಾಶರ್, ಕ್ರ್ಯೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ.

ಇದನ್ನು ಓದಿ: ಮಾರುತಿ ಪ್ರದರ್ಶಿಸುತ್ತಿದೆ ಸಿಎನ್‌ಜಿ-ಯುಕ್ತ ಬ್ರೆಝಾ, ಭಾರತದಲ್ಲಿ ಮೊದಲ ಸಬ್‌ಕಾಂಪ್ಯಾಕ್ಟ್ ಸಿಎನ್‌ಜಿ ಎಸ್‌ಯುವಿ

ಸುರಕ್ಷತೆಯ ನಿಟ್ಟಿನಲ್ಲಿ, ಮಾರುತಿ ಜಿಮ್ನಿ ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ(ಇಎಸ್‌ಪಿ), ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್ ಮತ್ತು ಒಂದು ರಿಯರ್‌ವ್ಯೂ ಕ್ಯಾಮರಾದೊಂದಿಗೆ ಬರುತ್ತದೆ.

ಜಿಮ್ನಿಯ ಆರಂಭಿಕ ಬೆಲೆ ರೂ. 10 ಲಕ್ಷ (ಎಕ್ಸ್-ಶೋರೂಂ) ಎಂದು ನಾವು ನಿರೀಕ್ಷಿಸುತ್ತೇವೆ. ಬಿಡುಗಡೆಯಾದ ನಂತರ, ಇದು ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾದಂತೆ ಇತರೆ ಆಫ್-ರೋಡ್ ಎಸ್‌ಯುವಿಗಳಿಗೆ ಸ್ಫರ್ಧೆ ನೀಡುತ್ತದೆ.

Share via

Write your Comment on Maruti ಜಿಮ್ನಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.7.89 - 14.40 ಲಕ್ಷ*
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ