Tata Punch ನ ಎಲ್ಲಾ ವೇರಿಯೆಂಟ್ ಗಳಲ್ಲೂ ಈಗ ಸನ್ ರೂಫ್ ಲಭ್ಯ
ಟಾಟಾ ಪಂಚ್ ಗಾಗಿ shreyash ಮೂಲಕ ಆಗಸ್ಟ್ 11, 2023 08:53 pm ರಂದು ಪ್ರಕಟಿಸಲಾಗಿದೆ
- 39 Views
- ಕಾಮೆಂಟ್ ಅನ್ನು ಬರೆಯಿರಿ
ಸನ್ ರೂಫ್ ನ ಸೇರ್ಪಡೆಯಿಂದಾಗಿ ಈ ಕಾರಿನ ಬೆಲೆಯಲ್ಲಿ ಸುಮಾರು 50,000 ರೂ.ವರೆಗೆ ಹೆಚ್ಚಳ ಉಂಟಾಗಬಹುದು.
ಸನ್ ರೂಫ್ ಜೊತೆಗೆ ಪಂಚ್ ಸಿ.ಎನ್.ಜಿ ಯನ್ನು ಬಿಡುಗಡೆ ಮಾಡಿದ ಮೂರು ದಿನಗಳಲ್ಲಿಯೇ ಟಾಟಾ ಕಂಪೆನಿಯು ಮೈಕ್ರೋ ಎಸ್.ಯು.ವಿ ಯ ಎಂದಿನ ಪೆಟ್ರೋಲ್ ವೇರಿಯಂಟ್ ಗಳಿಗೆ ಈ ವೈಶಿಷ್ಟ್ಯವನ್ನು ವಿಸ್ತರಿಸಿದೆ. ಸನ್ ರೂಫ್ ಹೊಂದಿರುವ ವೇರಿಯಂಟ್ ಗಳ ಬೆಲೆಗಳನ್ನು ಈ ಕೆಳಗೆ ನೀಡಲಾಗಿದೆ:
ಸನ್ ರೂಫ್ ವೇರಿಯಂಟ್ ಗಳು |
ಬೆಲೆ |
ವೇರಿಯಂಟ್ ಗಳ ಮೇಲಿನ ವ್ಯತ್ಯಾಸ |
ಅಕಂಪ್ಲಿಷ್ಡ್ S |
ರೂ 8.25 ಲಕ್ಷ |
+ ರೂ 50,000 |
ಅಕಂಪ್ಲಿಷ್ಡ್ ಡ್ಯಾಝಲ್ S |
ರೂ 8.65 ಲಕ್ಷ |
+ ರೂ 50,000 |
ಅಕಂಪ್ಲಿಷ್ಡ್ S AMT |
ರೂ 8.85 ಲಕ್ಷ |
+ ರೂ 50,000 |
ಕ್ರಿಯೇಟಿವ್ DT S |
ರೂ 9.20 ಲಕ್ಷ |
+ ರೂ 45,000 |
ಅಕಂಪ್ಲಿಷ್ಡ್ ಡ್ಯಾಝಲ್ S AMT |
ರೂ 9.25 ಲಕ್ಷ |
+ ರೂ 50,000 |
ಕ್ರಿಯೇಟಿವ್ ಫ್ಲ್ಯಾಗ್ ಶಿಪ್ DT |
ರೂ 9.50 ಲಕ್ಷ |
ಅನ್ವಯವಾಗುವುದಿಲ್ಲ |
ಅಕಂಪ್ಲಿಷ್ಡ್ ಡ್ಯಾಝಲ್ S CNG |
ರೂ 9.68 ಲಕ್ಷ |
ಅನ್ವಯವಾಗುವುದಿಲ್ಲ |
ಕ್ರಿಯೇಟಿವ್ DT S AMT |
ರೂ 9.80 ಲಕ್ಷ |
+ ರೂ 45,000 |
ಕ್ರಿಯೇಟಿವ್ ಫ್ಲ್ಯಾಗ್ ಶಿಪ್ DT AMT |
ರೂ 10.10 ಲಕ್ಷ |
ಅನ್ವಯವಾಗುವುದಿಲ್ಲ |
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ನೀವು ಕೋಷ್ಠಕದಲ್ಲಿ ನೋಡಿದಂತೆ, ಟಾಟಾ ಪಂಚ್, ರೂ. 8.25 ಲಕ್ಷಕ್ಕಿಂತ ಮೇಲಿನ ಅಕಂಪ್ಲಿಷ್ಡ್ S ವೇರಿಯಂಟ್ ನಿಂದ ಸನ್ ರೂಫ್ ಅನ್ನು ಒದಗಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಕ್ರಿಯೇಟಿವ್ ಫ್ಲ್ಯಾಗ್ ಶಿಪ್ ಎನ್ನುವುದು ಕ್ರಿಯೇಟಿವ್ iRA ಯ ವೇರಿಯಂಟ್ ನ ಮರುನಾಮಕರಣ ಮಾಡಲಾದ ಆವೃತ್ತಿಯಾಗಿದ್ದು, ಸನ್ ರೂಫ್ ಹೊಂದಿದೆ ಮಾತ್ರವಲ್ಲದೆ ಟಾಟಾದ iRA ಸಂಪರ್ಕಿತ ಕಾರ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ.
ಹೋಲಿಕೆಯ ದೃಷ್ಟಿಯಿಂದ ಹೇಳುವುದಾದರೆ, ಅಲ್ಟ್ರೋಜ್ ನ ಸನ್ ರೂಫ್ ವೇರಿಯಂಟ್, ರೂ. 7.35 ಲಕ್ಷ ಬೆಲೆಯ XM (S) ವೇರಿಯಂಟ್ (ಆದರೆ ವಾಯ್ಸ್ ಅಸಿಸ್ಟಂಟ್ ಇಲ್ಲದೆಯೇ) ಪ್ರಾರಂಭಗೊಳ್ಳುತ್ತದೆ. ಈ ಮೂಲಕ ಇದು ಟಾಟಾ ಪಂಚ್ ನ ಆರಂಭಿಕ ಸನ್ ರೂಫ್ ವೇರಿಯಂಟ್ ಗಿಂತ ರೂ. 90,000 ದಷ್ಟು ಹೆಚ್ಚು ಅಗ್ಗಕ್ಕೆ ಲಭ್ಯ. ಇದಕ್ಕೆ ಪ್ರತಿಯಾಗಿ, ಟಾಟಾ ಪಂಚ್ ನ ನೇರ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಎಕ್ಸ್ಟರ್ ನಲ್ಲಿ ರೂ. 8 ಲಕ್ಷ ಬೆಲೆಯ ತನ್ನ SX ವೇರಿಯಂಟ್ ನಲ್ಲಿ ಲಭ್ಯ. ಇದು ಟಾಟಾ ಪಂಚ್ ನ ಅಕಂಪ್ಲಿಷ್ಡ್ ವೇರಿಯಂಟ್ ನಿಂದ ರೂ. 25,000 ದಷ್ಟು ಕಡಿಮೆ ಬೆಲೆಗೆ ಲಭ್ಯ.
ಇದನ್ನು ಸಹ ಓದಿರಿ: ಟಾಟಾ ಪಂಚ್ CNG ಮತ್ತು ಹ್ಯುಂಡೈ ಎಕ್ಸ್ಟರ್ CNG – ವಿವರಗಳು ಮತ್ತು ಬೆಲೆಗಳ ಹೋಲಿಕೆ
ಪವರ್ ಟ್ರೇನ್ ಗಳ ಪರಿಶೀಲನೆ
ಸದ್ಯಕ್ಕೆ ಪಂಚ್ ವಾಹನವು 88PS ಮತ್ತು 115Nm ಉಂಟು ಮಾಡುವ ಹಾಗೂ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ 5-ಸ್ಪೀಡ್ AMT ಯೊಂದಿಗೆ ಜೊತೆಗೂಡಿಸಲಾದ 1.2-ಲೀಟರ್ ಪೆಟ್ರೊಲ್ ಎಂಜಿನ್ ನೊಂದಿಗೆ ಲಭ್ಯ. ಇದೇ ಎಂಜಿನ್, CNG ಮೋಡ್ ನಲ್ಲಿ 74PS ಮತ್ತು 103Nm ಉಂಟು ಮಾಡುವ ಹಾಗೂ ಕೇವಲ 5-ಸ್ಪೀಡ್ ಮ್ಯಾನುವಲ್ ಜೊತೆಗೆ ಲಭ್ಯವಿರುವ CNG ವೇರಿಯಂಟ್ ನಲ್ಲಿಯೂ ಲಭ್ಯ.
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಪಂಚ್ ರೂ. 6 ರಿಂದ ರೂ. 10.10 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ). ಇದು ಹ್ಯುಂಡೈ ಎಕ್ಸ್ಟರ್ ಕಾರಿನ ನೇರ ಪ್ರತಿಸ್ಪರ್ಧಿಯಾಗಿದ್ದು, ಇದರ ಬೆಲೆಯನ್ನು ಪರಿಗಣಿಸಿದರೆ, ಸಿಟ್ರನ್ C3, ಮಾರುತಿ ಇಗ್ನಿಸ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್ ಕಾರುಗಳಿಗೆ ಪೂರಕ ಆಯ್ಕೆ ಎನಿಸಿದೆ.
ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ : ಟಾಟಾ ಪಂಚ್ AMT