2023 Tata Harrier ಬೇಸ್ ಮಾಡೆಲ್ ಸ್ಮಾರ್ಟ್ ವೇರಿಯಂಟ್ ವಿವರಗಳು ಚಿತ್ರಗಳಲ್ಲಿ ಕಂಡಂತೆ...
ಬೇಸ್ ಸ್ಪೆಕ್ ಹ್ಯರಿಯರ್ ಸ್ಮಾರ್ಟ್ ಕಾರು ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮತ್ತು ಅರು ಏರ್ ಬ್ಯಾಗ್ ಗಳನ್ನು ಹೊಂದಿದ್ದರೂ ಒಟ್ಟಾರೆಯಾಗಿ ಇನ್ಫೊಟೈನ್ ಮೆಂಟ್ ಯೂನಿಟ್ ಅನ್ನು ಹೊಂದಿಲ್ಲ.
ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಕಾರನ್ನು ಸಂಪೂರ್ಣವಾಗಿ ಅನಾವರಣಗೊಳಿಸಲಾಗಿದ್ದು, ಪರಿಷ್ಕೃತ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸಗಳು, ಹೊಸ ವೈಶಿಷ್ಟ್ಯಗಳು ಮತ್ತು ಹೆಚ್ಚಿನ ಸುರಕ್ಷತೆಯೊಂದಿಗೆ ಇದು ಹೊರಬಂದಿದೆ. ಟಾಟಾ ಸಂಸ್ಥೆಯು ಪರಿಷ್ಕೃತ ಹ್ಯರಿಯರ್ ಮಾದರಿಯ ಬುಕಿಂಗ್ ಅನ್ನು ರೂ. 25,000 ಮೊತ್ತಕ್ಕೆ ಪ್ರಾರಂಭಿಸಿದೆ. ಟಾಟಾ ಸಂಸ್ಥೆಯು 2023ರ ಹ್ಯರಿಯರ್ ನ ವೇರಿಯಂಟ್ ಗಳ ಹೆಸರನ್ನು ಬದಲಾಯಿಸಿದ್ದು, ಈ ಕೆಳಗಿನ ನಾಲ್ಕು ವೇರಿಯಂಟ್ ಗಳನ್ನು ಇದೀಗ ಹೊಂದಿದೆ: ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್ ಲೆಸ್. ಈ ಪರಿಷ್ಕೃತ SUV ಯ ಬೇಸ್ ಸ್ಪೆಕ್ ಸ್ಮಾರ್ಟ್ ವೇರಿಯಂಟ್ ನಲ್ಲಿ ಏನೆಲ್ಲಾ ಇದೆ ಎಂಬುದನ್ನು ನೋಡೋಣ.
ಮುಂಭಾಗದಲ್ಲಿ, 2023 ಹ್ಯರಿಯರ್ ನ ಬೇಸ್ ಸ್ಪೆಕ್ ವೇರಿಯಂಟ್ ನಲ್ಲಿ ಸಂಪರ್ಕಿತ LED DRL ಗಳೊಂದಿಗೆ ಕಪ್ಪಾಗಿಸಿದ ಗ್ರಿಲ್, ಮತ್ತು ಪ್ರೊಜೆಕ್ಟರ್ ಹೆಡ್ ಲೈಟ್ ಸೆಟಪ್ (ವೆಲ್ಕಂ ಮತ್ತು ಗುಡ್ ಬೈ ಅನಿಮೇಶನ್ ಇಲ್ಲದೆಯೇ) ಇತ್ಯಾದಿಗಳು ಇವೆ. ಈ ವೇರಿಯಂಟ್ ನಲ್ಲಿ ಫಾಗ್ ಲ್ಯಾಂಪ್ ಗಳನ್ನು ನೀಡಲಾಗಿಲ್ಲ. ಕೆಳಗಡೆಗೆ, ಬ್ಲ್ಯಾಕ್ ಇನ್ಸರ್ಟ್ ಗಳು ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಗಳನ್ನು ಹೊಂದಿರುವ ಬಂಪರ್ ನಲ್ಲಿ ದಪ್ಪನೆಯ ಏರ್ ಡ್ಯಾಮ್ ಇದೆ.
ಇದನ್ನು ಸಹ ನೋಡಿರಿ: 2023 ಟಾಟಾ ಸಫಾರಿ ಫೇಸ್ ಲಿಫ್ಟ್ ಕಾರಿನ ವೇರಿಯಂಟ್ ಗಳ ವೈಶಿಷ್ಟ್ಯ ಬಹಿರಂಗ
ಈ SUV ಯ ಪ್ರೊಫೈಲ್ ಇದರ ಹೈಯರ್ ಸ್ಪೆಕ್ ವೇರಿಯಂಟ್ ಗಳನ್ನು ಹೋಲುತ್ತಿದ್ದು, ಕಪ್ಪಗಿನ ORVM ಮತ್ತು ರೂಫ್ ರೇಲ್ ಗಳೊಂದಿಗೆ ಬಾಡಿ ಕಲರ್ಡ್ ಹ್ಯಾಂಡಲ್ ಗಳು ಇದರಲ್ಲಿವೆ. ಇದು, ಹ್ಯರಿಯರ್ ನ ಮಿಡ್ ಸ್ಪೆಕ್ ವೇರಿಯಂಟ್ ಗಳಲ್ಲಿ ಈಗಾಗಲೇ ದೊರೆಯುವ 17 ಇಂಚಿನ ಅಲೋಯ್ ವೀಲ್ ನೊಂದಿಗೆ ಬರಲಿದೆ. ಈ SUV ಯ ಆರಂಭಿಕ ಹಂತದ ಸ್ಮಾರ್ಟ್ ಟ್ರಿಮ್ ನ ಮುಂಭಾಗದ ಬಾಗಿಲುಗಳಲ್ಲಿಯೇ ಹ್ಯರಿಯರ್ ಲಾಂಛನವನ್ನು ಅಳವಡಿಸಲಾಗಿದೆ.
ಹ್ಯರಿಯರ್ ಸ್ಮಾರ್ಟ್ ಕಾರಿನ ಹಿಂಭಾಗದಲ್ಲಿ ಸಂಪರ್ಕಿತ LED ಟೇಲ್ ಲೈಟ್ ಗಳು ಮಾತ್ರವಲ್ಲದೆ ಹ್ಯರಿಯರ್ ಹೆಸರಿನ ಪರಿಷ್ಕೃತ ಫಾಂಟ್ ಗಳು ಸಹ ಇವೆ. ಇದು ಶಾರ್ಕ್ ಫಿನ್ ಆಂಟೆನಾವನ್ನು ಹೊಂದಿದ್ದರೂ, ಹಿಂಭಾಗದ ವೈಪರ್, ವಾಶರ್ ಮತ್ತು ಡಿಫಾಗರ್ ಗಳನ್ನು ಹೊಂದಿಲ್ಲ.
ಇದನ್ನು ಸಹ ಓದಿರಿ: 2023 ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಕಾರಿನ ಬಣ್ಣಗಳ ಆಯ್ಕೆಗಳ ವಿವರಗಳು
ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಮಾದರಿಯ ಬೇಸ್ ಸ್ಪೆಕ್ ಸ್ಮಾರ್ಟ್ ವೇರಿಯಂಟ್ ನಲ್ಲಿ ಬೂದು ಬಣ್ಣದ ಫ್ಯಾಬ್ರಿಕ್ ಉಪೋಲ್ಸ್ಟರಿಯ ಜೊತೆಗೆ, ಕಪ್ಪು ಮತ್ತು ಬೂದು ಬಣ್ಣದ ಕ್ಯಾಬಿನ್ ಥೀಮ್ ಅನ್ನು ಇದು ಪಡೆದಿದೆ. ಈ SUV ಯ ಹಿಂದಿನ ಆವೃತ್ತಿಯಲ್ಲಿ ಲಭ್ಯವಿದ್ದ, ಚಾಲಕನ 7 ಇಂಚಿನ ಡಿಜಿಟಲ್ ಡಿಸ್ಪ್ಲೇ, ಅಟೋಮ್ಯಾಟಿಕ್ AC, ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟೇಬಲ್ ORVM ಗಳನ್ನು ಇದರಲ್ಲಿ ನೀಡಲಾಗಿದೆ. ಆದರೆ ಹೊಸ ಹ್ಯರಿಯರ್ ನ ಬೇಸ್ ಸ್ಪೆಕ್ ಸ್ಮಾರ್ಟ್ ವೇರಿಯಂಟ್ ನಲ್ಲಿ ಯಾವುದೇ ರೀತಿಯ ಇನ್ಫೋಟೈನ್ ಮೆಂಟ್ ಲಭ್ಯವಿಲ್ಲ.
ಹ್ಯರಿಯರ್ ಸ್ಮಾರ್ಟ್ ಕಾರಿನ ಎರಡನೇ ಸಾಲಿನಲ್ಲಿ AC ವೆಂಟ್ ಗಳು, ಮೊದಲನೇ ಮತ್ತು ಎರಡನೇ ಸಾಲುಗಳಲ್ಲಿಟೈಪ್-A ಮತ್ತು ಟೈಪ್-C ಚಾರ್ಜಿಂಗ್ ಪಾಯಿಂಟುಗಳು, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆಗಳೊಂದಿಗೆ ಇಲ್ಯುಮಿನೇಟೆಡ್ ಟಾಟಾ ಲೋಗೋ ಜೊತೆಗೆ 4 ಸ್ಪೋಕ್ ಸ್ಟಿಯರಿಂಗ್ ವೀಲ್ ಇತ್ಯಾದಿಗಳನ್ನು ಕಾಣಬಹುದು. ಏರೋ ಥ್ರಾಟಲ್ ಶೈಲಿಯ ಹ್ಯಾಂಡ್ ಬ್ರೇಕ್ ಅನ್ನು ಇದು ಹೊಂದಿದ್ದು, ಈ SUV ಯ ಹಿಂದಿನ ಆವೃತ್ತಿಯಲ್ಲೂ ಇದನ್ನು ಕಾಣಬಹುದಾಗಿತ್ತು.
ಸುರಕ್ಷತೆಯ ದೃಷ್ಟಿಯಿಂದ ಹೇಳುವುದಾದರೆ, ಪರಿಷ್ಕೃತ ಹ್ಯರಿಯರ್ ಮಾದರಿಯ ಬೇಸ್ ಸ್ಪೆಕ್ ಆವೃತ್ತಿಯಲ್ಲಿ 6 ಏರ್ ಬ್ಯಾಗ್ ಗಳು, ಹಿಲ್ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ECS), ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಎಲ್ಲಾ ಪ್ರಯಾಣಿಕರನ್ನು ಜ್ಞಾಪಿಸುವ ವ್ಯವಸ್ಥೆಯೊಂದಿಗೆ 3 ಪಾಯಿಂಟ್ ಸೀಟ್ ಬೆಲ್ಟ್ ಗಳು, ಮತ್ತು ISOFIX ಚೈಲ್ಡ್ ಸೀಟ್ ಆಂಕರೇಜ್ ಇತ್ಯಾದಿಗಳನ್ನು ಕಾಣಬಹುದು.
ಏಳು ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳನ್ನು ಹೈಯರ್ ಸ್ಪೆಕ್ ವೇರಿಯಂಟ್ ಗಳಿಗೆ ಮೀಸಲಿಡಲಾಗಿದೆ.
ಪವರ್ ಟ್ರೇನ್ ಗಳ ಪರಿಶೀಲನೆ
2023ರ ಟಾಟಾ ಹ್ಯರಿಯರ್ ಕಾರು, 170PS ಮತ್ತು 350Nm ಉಂಟು ಮಾಡುವ ಹಾಗೂ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ AMT ಜೊತೆಗೆ 2-ಲೀಟರ್ ಡೀಸೆಲ್ ಎಂಜಿನ್ ಅನ್ನೇ ಉಳಿಸಿಕೊಳ್ಳಲಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
2023ರ ಟಾಟಾ ಹ್ಯರಿಯರ್ ಕಾರಿನ ಮಾರಾಟವು ಮುಂದಿನ ವಾರಗಳಲ್ಲಿ ಪ್ರಾರಂಭಗೊಳ್ಳುವ ಸಾಧ್ಯತೆ ಇದ್ದು, ರೂ. 15 ಲಕ್ಷಕ್ಕಿಂತ (ಎಕ್ಸ್ ಶೋರೂಂ) ಹೆಚ್ಚಿನ ಬೆಲೆಯನ್ನು ಇದು ಹೊಂದಿರಲಿದೆ. ಇದು ಮಹೀಂದ್ರಾ XUV700, ಮತ್ತು MG ಹೆಕ್ಟರ್ಗಳ 5 ಸೀಟರ್ ವೇರಿಯಂಟ್ ಗಳು, ಹಾಗೂ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಗಳ ಹೈಯರ್ ಸ್ಪೆಕ್ ವೇರಿಯಂಟ್ ಗಳೊಂದಿಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯರಿಯರ್ ಡೀಸೆಲ್