• English
  • Login / Register

2023 Tata Harrier Faceliftನ ಮೊದಲ ಟೀಸರ್ ಬಿಡುಗಡೆ, ಅ.6 ರಿಂದ ಬುಕಿಂಗ್ ಪ್ರಾರಂಭ

ಟಾಟಾ ಹ್ಯಾರಿಯರ್ ಗಾಗಿ rohit ಮೂಲಕ ಅಕ್ಟೋಬರ್ 04, 2023 12:50 pm ರಂದು ಮಾರ್ಪಡಿಸಲಾಗಿದೆ

  • 127 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಟೀಸರ್ ಹೊಸ ಟಾಟಾ ಹ್ಯಾರಿಯರ್‌ನ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಮತ್ತು ಎಸ್‌ಯುವಿಯ ಮುಂಭಾಗದುದ್ದಕ್ಕೂ ಚಾಚಿಕೊಂಡಿರುವ ಉದ್ದವಾದ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್‌ನ ಒಂದು ನೋಟವನ್ನು ನೀಡುತ್ತದೆ.

2023 Tata Harrier Facelift First Teaser Out, Bookings Open On October 6

  •  2019 ರಲ್ಲಿ ಬಿಡುಗಡೆಯಾದ ನಂತರ ಹ್ಯಾರಿಯರ್ ತನ್ನ ಮೊದಲ ಪ್ರಮುಖ ನವೀಕರಣವನ್ನು ಪಡೆಯುತ್ತಿದೆ.
  •  ಟಾಟಾ ಅಕ್ಟೋಬರ್ 6 ರಂದು ನವೀಕೃತ ಹ್ಯಾರಿಯರ್‌ಗಾಗಿ ಬುಕಿಂಗ್ ಅನ್ನು ಪ್ರಾರಂಭಿಸಲಿದೆ.
  •  ತಾಜಾ ಅಲಾಯ್ ವ್ಹೀಲ್‌ಗಳು, ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳು ಮತ್ತು ಸಂಪರ್ಕಿತ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತಿದೆ.
  •  ಕ್ಯಾಬಿನ್ ನವೀಕರಣಗಳು ದೊಡ್ಡ ಟಚ್‌ಸ್ಕ್ರೀನ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿರಬಹುದು.
  • ಇದರಲ್ಲಿರುವ ಫೀಚರ್‌ಗಳೆಂದರೆ ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ADAS ಅನ್ನು ಒಳಗೊಂಡಿರಬಹುದು.
  •  ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆಗಳನ್ನು ಇದರಲ್ಲಿ ನೀಡಲಾಗುವುದು.
  •  ಟಾಟಾ ನವೆಂಬರ್‌ನಲ್ಲಿ ನವೀಕೃತ ಹ್ಯಾರಿಯರ್ ಅನ್ನು ಪ್ರಾರಂಭಿಸಬಹುದು ಮತ್ತು ಇದರ ಬೆಲೆಗಳು ರೂ.15 ಲಕ್ಷದಿಂದ (ಎಕ್ಸ್‌-ಶೋರೂಮ್) ಪ್ರಾರಂಭವಾಗುವ ನಿರೀಕ್ಷೆಯಿದೆ.

ಟಾಟಾ ನವೀಕೃತ ಹ್ಯಾರಿಯರ್  ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಾರು ತಯಾರಕರು ನವೀಕೃತ ಎಸ್‌ಯುವಿಯ ಮೊದಲ ಟೀಸರ್ ಅನ್ನು ಹಂಚಿಕೊಂಡಿರುವುದರಿಂದ ಅದನ್ನು ದೃಢಪಡಿಸಲಾಗಿದೆ, ಅದರ ಬುಕಿಂಗ್ ಅಕ್ಟೋಬರ್ 6 ರಿಂದ ಪ್ರಾರಂಭವಾಗುತ್ತದೆ ಎಂದು ಬಹಿರಂಗಪಡಿಸಿದೆ.

A post shared by Tata Harrier Official (@tataharrier)

ಟೀಸರ್‌ನಲ್ಲಿ ಕಂಡುಬಂದ ವಿವರಗಳು

ಇದು ಟೀಸರ್ ಆಗಿರುವುದರಿಂದ, ನವೀಕೃತ ಎಸ್‌ಯುವಿಯ ಮುಂಭಾಗದ ಫ್ಲೀಟಿಂಗ್ ನೋಟವನ್ನಷ್ಟೇ ನೀಡುತ್ತದೆ. ಪರಿಷ್ಕೃತ ಮತ್ತು ಲಂಬವಾಗಿ ಜೋಡಿಸಲಾದ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲೈಟ್ ಸೆಟಪ್, ಸ್ಲೀಕರ್ ಗ್ರಿಲ್ ಮತ್ತು ಇಂಡಿಕೇಟರ್‌ಗಳು ಮತ್ತು ಬಾನೆಟ್ ಅಗಲಕ್ಕೂ ಚಾಚಿಕೊಂಡಿರುವ ಹೊಸ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಅನ್ನು ನಾವು ಗಮನಿಸಬಹುದು. ಈ ಎಲ್ಲಾ ನವೀಕರಣಗಳು ಹೊಸ  ಟಾಟಾ ನೆಕ್ಸಾನ್ ಮತ್ತು ಟಾಟಾ ನೆಕ್ಸಾನ್ ಇವಿಗೆ ಮಾಡಿದ ಬದಲಾವಣೆಗಳಿಗೆ ಅನುಗುಣವಾಗಿದೆ.

ಅದರ ಪ್ರೊಫೈಲ್ ಮತ್ತು ಹಿಂಭಾಗವನ್ನು ಟೀಸರ್‌ನಲ್ಲಿ ತೋರಿಸದಿದ್ದರೂ, ಹಿಂದಿನ ಪರೀಕ್ಷಾರ್ಥ ವಾಹನಗಳು ತಾಜಾ ಅಲಾಯ್ ವ್ಹೀಲ್‌ಗಳು, ಡೈನಾಮಿಕ್ ಟರ್ನಿಂಗ್ ಇಂಡಿಕೇಟರ್‌ಗಳು, ಸಂಪರ್ಕಿತ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಹೊಂದಿರುವುದನ್ನು ದೃಢಪಡಿಸಿವೆ.

ಅಧಿಕ ಕ್ಯಾಬಿನ್ ನವೀಕರಣ

Tata Harrier cabin

 ಟಾಟಾ ಇನ್ನೂ ಹೊಸ ಹ್ಯಾರಿಯರ್‌ನ ಕ್ಯಾಬಿನ್‌ನ ಯಾವ ನೋಟವನ್ನು ನೀಡಿಲ್ಲವಾದರೂ ಕ್ಯಾಬಿನ್ ಪರಿಷ್ಕರಿಸಲಾಗಿದೆ ಎಂಬುದನ್ನು ನಾವು ನಿರೀಕ್ಷಿಸಿದ್ದೇವೆ. ಸಂಭವನೀಯ ಟ್ವೀಕ್‌ಗಳು ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಬ್ಯಾಕ್‌ಲಿಟ್ ಟಾಟಾ ಲೋಗೋದೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಹೊಂದಿರಬಹುದು.

 ಆಫರ್‌ನಲ್ಲಿರುವ ಹೊಸ ಫೀಚರ್‌ಗಳು ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್. ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಕ್ಲೈಮೆಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಆಗಿರಬಹುದು.

 ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), 360-ಡಿಗ್ರಿ ಕ್ಯಾಮರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಇದರಲ್ಲಿರುವ ಸುರಕ್ಷತಾ ಫೀಚರ್‌ಗಳಾಗಿವೆ. 

 ಇದನ್ನೂ ಪರಿಶೀಲಿಸಿ: ಟಾಟಾ ಪಂಚ್ ಇವಿ ಮತ್ತೆ ಪತ್ತೆ, ಹೊಸ ವಿವರಗಳು ಬಹಿರಂಗ

 ಪೆಟ್ರೋಲ್ ಪವರ್‌ಟ್ರೇನ್ ಅನ್ನು ಪಡೆಯಬಹುದು

2023 Tata Harrier Facelift First Teaser Out, Bookings Open On October 6

ನವೀಕೃತ ಟಾಟಾ ಹ್ಯಾರಿಯರ್ ಹೊಸ 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (170PS/280Nm) ಎಂಜಿನ್‌ನೊಂದಿಗೆ ಬರಲಿದೆ. ಇದನ್ನು ಮ್ಯಾನ್ಯುವಲ್ ಮತ್ತು ಡಿಸಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ನೀಡಲಾಗುವುದು ಎಂದು ನಾವು ನಿರೀಕ್ಷಿಸಿದ್ದೇವೆ.

 ಅಸ್ತಿತ್ವದಲ್ಲಿರುವ ಅದರ 2-ಲೀಟರ್ ಡೀಸೆಲ್ ಯುನಿಟ್ (170PS/350Nm) ಸಹ ನವೀಕರಣವನ್ನು ಪಡೆಯುವ ಸಾಧ್ಯತೆಯಿದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಮುಂದುವರೆಯಲಿದೆ.

 ಯಾವಾಗ ಬಿಡುಗಡೆಯಾಗಬಹುದು?

 ಕಾರು ತಯಾರಕರು ನವೆಂಬರ್ 2023 ರಲ್ಲಿ ನವೀಕೃತ ಹ್ಯಾರಿಯರ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ರೂ. 15.20 ಲಕ್ಷದಿಂದ ರೂ. 24.27 ಲಕ್ಷದವರೆಗೆ (ಎಕ್ಸ್-ಶೋರೂಮ್ ದೆಹಲಿ) ಬೆಲೆಯನ್ನು ಹೊಂದಿರುವ ಇದು ಅಸ್ತಿತ್ವದಲ್ಲಿರುವ ಮಾದರಿಗಿಂತ ತುಸು ದುಬಾರಿಯಾಗಿರಲಿದೆ. ಈ ನವೀಕೃತ ಟಾಟಾ ಹ್ಯಾರಿಯರ್ ಮಹೀಂದ್ರಾ XUV700, ಎಂಜಿ ಹೆಕ್ಟರ್, ಜೀಪ್ ಕಂಪಾಸ್‌ನೊಂದಿಗೆ ಸ್ಪರ್ಧೆಯನ್ನು ಹೊಂದಿರಲಿದೆ ಮಾತ್ರವಲ್ಲದೇ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಹೈಯರ್ ವೇರಿಯೆಂಟ್‌ಗಳಿಗೆ ಸಹ ಪೈಪೋಟಿಯನ್ನು ನೀಡಲಿದೆ.

 ಇನ್ನಷ್ಟು ಇಲ್ಲಿ ಓದಿ : ಟಾಟಾ ಹ್ಯಾರಿಯರ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಹ್ಯಾರಿಯರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience