2023 Tata Harrier Facelift ಕಾರಿನ ಒಳಾಂಗಣದ ಅನಾವರಣ, ನೆಕ್ಸನ್ ಫೇಸ್ ಲಿಫ್ಟ್ ನಿಂದ ಚಾಲಕನ ಹೊಸ ಡಿಜಿಟಲ್ ಡಿಸ್ಪ್ಲೇ ಸೇರ್ಪಡೆ
ಪರಿಷ್ಕೃತ ಟಾಟಾ ಹ್ಯರಿಯರ್ ವಾಹನವು ಆಂಬಿಯೆಂಟ್ ಲೈಟಿಂಗ್ ಸ್ಟ್ರಿಪ್, ಹೊಸ ಟು ಸ್ಪೋಕ್ ಸ್ಟಿಯರಿಂಗ್ ವೀಲ್ ಮತ್ತು ದೊಡ್ಡದಾ ಟಚ್ ಸ್ಕ್ರೀನ್ ಹೊಂದಿರುವುದನ್ನು ಈ ಟೀಸರ್ ತೋರಿಸುತ್ತದೆ
- ಟಾಟಾ ಹ್ಯರಿಯರ್ ವಾಹನವು 2019ರಲ್ಲಿ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪರಿಷ್ಕರಣೆಗೆ ಒಳಗಾಗಿದೆ.
- ಟಾಟಾ ಸಂಸ್ಥೆಯು ಹ್ಯರಿಯರ್ ಫೇಸ್ ಲಿಫ್ಟ್ ಕಾರಿಗೆ ಅಕ್ಟೋಬರ್ 6ರಂದು ಬುಕಿಂಗ್ ಪ್ರಾರಂಭಿಸಲಿದೆ.
- ಇದರಲ್ಲಿರುವ ಇತರ ವೈಶಿಷ್ಟ್ಯಗಳೆಂದರೆ ವೆಂಟಿಲೇಟೆಡ್ ಮುಂದಿನ ಸೀಟುಗಳು, ಪ್ಯಾನೊರಾಮಿಕ್ ಸನ್ ರೂಫ್ ಮತ್ತು ADAS̤
- ಮರುವಿನ್ಯಾಸಕ್ಕೆ ಒಳಪಟ್ಟ ಗ್ರಿಲ್, ಹೊಸ ಹೆಡ್ ಲೈಟ್ ಸೆಟಪ್ ಮತ್ತು ನವೀನ ಅಲೋಯ್ ವೀಲ್ ಗಳು ಹೊರಾಂಗಣದ ಪರಿಷ್ಕರಣೆಯಲ್ಲಿ ಸೇರಿವೆ.
- ಈಗ ಇರುವ ಡೀಸೆಲ್ ಎಂಜಿನ್ ನೊಂದಿಗೆ, ಮೊದಲ ಬಾರಿಗೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡುವ ಸಾಧ್ಯತೆ ಇದೆ.
- ಹೊಸ ಹ್ಯರಿಯರ್ ಕಾರಿನ ಮಾರಾಟವು ನವೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಳ್ಳುವ ಸಾಧ್ಯತೆ ಇದ್ದು, ರೂ. 15 ಲಕ್ಷಕ್ಕಿಂತ (ಎಕ್ಸ್ ಶೋರೂಂ) ಹೆಚ್ಚಿನ ಬೆಲೆಯನ್ನು ಇದು ಹೊಂದಿರಲಿದೆ.
ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಕಾರಿನ ಹೊರಾಂಗಣದ ನೋಟವನ್ನು ಒದಗಿಸುವ ಟೀಸರ್ ಅನ್ನು ಬಿಡುಗಡೆ ಮಾಡಿದ ನಂತರ, ಈ ಕಾರು ತಯಾರಕ ಸಂಸ್ಥೆಯು ಈ ಹೊಸ SUV ಯ ಒಳಾಂಗಣದ ನೋಟವನ್ನು ತೋರಿಸುವ ಇನ್ನೊಂದು ವೀಡಿಯೋವನ್ನು ಅನಾವರಣಗೊಳಿಸಿದೆ. ಟಾಟಾ ಸಂಸ್ಥೆಯ ಈ SUV ಯು 2019ರಲ್ಲಿ ಬಿಡುಗಡೆಯಾದ ನಂತರ ಇದೇ ಮೊದಲೇ ಬಾರಿಗೆ ಇದರ ಒಳಾಂಗಣವು ಇಷ್ಟೊಂದು ಪ್ರಮಾಣದಲ್ಲಿ ಬದಲಾವಣೆಗೆ ಒಳಪಟ್ಟಿದೆ. ಈ SUV ಯ ಬುಕಿಂಗ್ ಸದ್ಯವೇ ಪ್ರಾರಂಭಗೊಳ್ಳಲಿದೆ.
ಇದರಲ್ಲಿ ಹೊಸತೇನಿದೆ?
ಈ ಟೀಸರ್ ನ ಪ್ರಕಾರ, 2023 ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಕಾರು, ಟಾಟಾ ನೆಕ್ಸನ್ ಮತ್ತು ಟಾಟಾ ನೆಕ್ಸನ್ EV ಮಾದರಿಗಳಲ್ಲಿ ಇರುವಂತೆಯೇ ಡ್ಯಾಶ್ ಬೋರ್ಡ್ ನ ಉದ್ದಕ್ಕೂ ಇರುವ ಆಂಬಿಯೆಂಟ್ ಲೈಟಿಂಗ್ ಪಟ್ಟಿ, ಮತ್ತು ಬ್ಯಾಕ್ ಲಿಟ್ ಟಾಟಾ ಲೋಗೋ ಜೊತೆಗೆ 2 ಸ್ಪೋಕ್ ಸ್ಟಿಯರಿಂಗ್ ವೀಲ್ ಅನ್ನು ಹೊಂದಿರಲಿದೆ. ಚಾಲಕನ ಸಂಪೂರ್ಣ ಡಿಜಿಟಲ್ ಡಿಸ್ಪ್ಲೇ, ದೊಡ್ಡದಾದ ಟಚ್ ಸ್ಕ್ರೀನ್ ಸಿಸ್ಟಂ (ಹೊಸ ನೆಕ್ಸನ್ EV ಯಲ್ಲಿ ಇರುವಂತೆ ಕ್ರಮವಾಗಿ 10.25 ಮತ್ತು 12.3 ಇಂಚಿನ ಗಾತ್ರವನ್ನು ಹೊಂದಿರಬಹುದು) ಅನ್ನು ಸಹ ಈ ಚಿಕ್ಕದಾದ ಕ್ಲಿಪ್ ನಲ್ಲಿ ಕಾಣಬಹುದು.
ಇದನ್ನು ಸಹ ಓದಿರಿ: ಈ 10 ಕಾರುಗಳು 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಗರಿಷ್ಠ ಮಾರಾಟ ಸಾಧಿಸಿವೆ
ಹೊರಾಂಗಣದ ಬದಲಾವಣೆಯ ವಿವರಗಳು
ಹೊರಗಡೆಗೆ, ಉದ್ದನೆಯ ಇಂಡಿಕೇಟರ್ ಗಳಿಗೆ ಸಂಪರ್ಕಿಸಿದ ಉದ್ದನೆಯ LED DRL ಪಟ್ಟಿಯು ಇರುವುದನ್ನು ಈ SUV ಯ ಹಿಂದಿನ ಟೀಸರ್ ಮೂಲಕ ದೃಢಪಟ್ಟಿದೆ. ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಕಾರು, ನೆಕ್ಸನ್ ನಲ್ಲಿ ಇರುವಂತೆಯೇ ಲಂಬಾಂತರವಾಗಿ ಇರಿಸಿದ ಸ್ಪ್ಲಿಟ್ LED ಹೆಡ್ ಲೈಟುಗಳು ಮತ್ತು ಪರಿಷ್ಕೃತ ಗ್ರಿಲ್ ವಿನ್ಯಾಸವನ್ನು ಪಡೆಯಲಿದೆ.
ಮರುವಿನ್ಯಾಸಕ್ಕೆ ಒಳಪಟ್ಟ ಅಲೋಯ್ ವೀಲ್ ಗಳು ಇದರ ಪ್ರೊಫೈಲ್ ನಲ್ಲಿ ಮಾಡಲಾಗಿರುವ ಅತ್ಯಂತ ದೊಡ್ಡ ಬದಲಾವಣೆಯಾಗಿ ಹೊರಹೊಮ್ಮಿವೆ. ಟಾಟಾ ಸಂಸ್ಥೆಯು ಈ ಕಾರಿನಲ್ಲಿ ಡೈನಾಮಿಕ್ ಟರ್ನ್ ಇಂಡಿಕೇಟರ್ ಗಳು ಮತ್ತು ಸಂಪರ್ಕಿತ LED ಟೇಲ್ ಲೈಟ್ ಗಳನ್ನು ಒದಗಿಸಲಿದೆ.
ನಿರೀಕ್ಷಿಸಬಹುದಾದ ವೈಶಿಷ್ಟ್ಯಗಳು
ಉಲ್ಲೇಖಕ್ಕಾಗಿ ಈಗಿನ ಹ್ಯರಿಯರ್ ಕಾರಿನ ಚಿತ್ರವನ್ನು ಬಳಸಲಾಗಿದೆ
ಈ ಕಾರು ತಯಾರಕ ಸಂಸ್ಥೆಯು, ಹೊಸ ಡಿಸ್ಪ್ಲೇಗಳ ಜೊತೆಗೆ, ಈ SUV ಯಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಪ್ಯಾನೊರಾಮಿಕ್ ಸನ್ ರೂಫ್, ಕ್ರೂಸ್ ಕಂಟ್ರೋಲ್ ಮತ್ತು ವೈರ್ ಲೆಸ್ ಚಾರ್ಜಿಂಗ್ ಅನ್ನು ಒದಗಿಸಲಿದೆ.
ಇದರ ಸುರಕ್ಷತಾ ಪಟ್ಟಿಯಲ್ಲಿ ಆರು ಏರ್ ಬ್ಯಾಗ್ ಗಳು (ಪ್ರಮಾಣಿತ), 360 ಡಿಗ್ರಿ ಕ್ಯಾಮರಾ, ISOFIX ಆಂಕರ್ ಪಾಯಿಂಟುಗಳು, ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಇತ್ಯಾದಿಗಳು ಒಳಗೊಂಡಿವೆ.
ಎಂಜಿನ್ ಆಯ್ಕೆಗಳು
ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ವಾಹನವು 1.5 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ (170PS/280Nm) ಅನ್ನು ಹೊಂದಿರಲಿದೆ. ಇದು ಮ್ಯಾನುವಲ್ ಮತ್ತು DCT ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಎರಡನ್ನೂ ಹೊಂದಿರುವ ಸಾಧ್ಯತೆ ಇದೆ. ಇದರ ಈಗಿನ 2 ಲೀಟರ್ ಡೀಸೆಲ್ ಘಟಕವನ್ನು (170PS/350Nm) ಪರಿಷ್ಕರಣೆಯೊಂದಿಗೆ ಉಳಿಸಲಾಗುವುದು ಮತ್ತು 6 ಸ್ಪೀಡ್ ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ ಇದು ಲಭಿಸಲಿದೆ.
ಇದನ್ನು ಸಹ ಓದಿರಿ: ಹೆಚ್ಚು ಇಂಧನ ದಕ್ಷತೆ ಪಡೆಯುವುದಕ್ಕಾಗಿ AC ಇಲ್ಲದೆ ವಾಹನ ಚಾಲನೆ ಮಾಡುವುದು ಸಮರ್ಥನೀಯವೇ? ಇಲ್ಲಿ ಕಂಡುಹಿಡಿಯಿರಿ
ಬೆಲೆಯ ಘೋಷಣೆ ಮತ್ತು ಸ್ಪರ್ಧೆ
ಟಾಟಾ ಹ್ಯರಿಯರ್ ಫೇಸ್ ಲಿಫ್ಟ್ ಕಾರನ್ನು ನವೆಂಬರ್ ಸುಮಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಇದರ ಬೆಲೆಯು ರೂ. 15 ಲಕ್ಷದಿಂದ (ಎಕ್ಸ್ - ಶೋರೂಂ) ಪ್ರಾರಂಭಗೊಳ್ಳಲಿದೆ. ಈ SUV ಯು ಮಹೀಂದ್ರಾ XUV700, MG ಹೆಕ್ಟರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಮಾದರಿಗಳ ಉನ್ನತ ವೇರಿಯಂಟ್ ಗಳ ಜೊತೆಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯರಿಯರ್ ಡೀಸೆಲ್