• English
  • Login / Register

2024 Tata Harrier Facelift ನ ರಹಸ್ಯ ಫೋಟೋಗಳು ಬಹಿರಂಗ; ಈ ಬಾರಿ ನೆಕ್ಸನ್‌ ನಂತಹ ಮುಂಭಾಗದೊಂದಿದೆ...

ಟಾಟಾ ಹ್ಯಾರಿಯರ್ ಗಾಗಿ rohit ಮೂಲಕ ಸೆಪ್ಟೆಂಬರ್ 19, 2023 03:05 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ನೆಕ್ಸನ್ EV‌ ಯಲ್ಲಿ ನೋಡಿರುವಂತೆಯೇ, ಅದೇ ರೀತಿಯ ಸ್ಪ್ಲಿಟ್‌ - ಹೆಡ್‌ ಲೈಟ್‌ ಸೆಟಪ್‌ ಮತ್ತು ನುಣುಪಾದ LED DRL ಗಳನ್ನು ಹೊಂದಿದ್ದು, ಕನೆಕ್ಟಿಂಗ್‌ ಎಲಿಮೆಂಟ್‌ ಜೊತೆಗೆ ಬರುವ ಸಾಧ್ಯತೆ ಇದೆ

Tata Harrier facelift

  • ಟಾಟಾ ಸಂಸ್ಥೆಯು 2024ರ ಆರಂಭದಲ್ಲಿ ಹ್ಯರಿಯರ್‌ ಫೇಸ್‌ ಲಿಫ್ಟ್‌ ಅನ್ನು ಬಿಡುಗಡೆ ಮಾಡಲಿದೆ.
  • ಹಳೆಯ ಸ್ಪೈ ಶಾಟ್‌ ಗಳ ಪ್ರಕಾರ ಇದು ಹೊಸ ಅಲೋಯ್‌ ವೀಲುಗಳು, ಸಂಪರ್ಕಿತ LED ಟೇಲ್‌ ಲೈಟ್‌ ಗಳು ಮತ್ತು ಡೈನಾಮಿಕ್‌ ಟರ್ನ್‌ ಇಂಡಿಕೇಟರ್‌ ಗಳನ್ನು ಹೊಂದಿರಲಿದೆ.
  • ಇದರ ಕ್ಯಾಬಿನ್‌, ಮರುವಿನ್ಯಾಸಗೊಳಿಸಿದ ಡ್ಯಾಶ್‌ ಬೋರ್ಡ್‌, ಹೊಸ ಸ್ಟೀಯರಿಂಗ್‌ ವೀಲ್‌, ಮತ್ತು ದೊಡ್ಡದಾದ ಟಚ್‌ ಸ್ಕ್ರೀನ್‌ ಅನ್ನು ಹೊಂದಿರಲಿದೆ.
  • 360 ಡಿಗ್ರಿ ಕ್ಯಾಮರಾ, ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳು, ಮತ್ತು ADAS  ಇದರಲ್ಲಿರುವ ಇತರ ವೈಶಿಷ್ಟ್ಯಗಳೆನಿಸಿವೆ.
  • ಈಗ ಇರುವ ಮಾದರಿಯ ಡೀಸೆಲ್‌ ಎಂಜಿನ್‌ ಅನ್ನು ಉಳಿಸಿಕೊಳ್ಳಲಿದ್ದು, 1.5 ಲೀಟರಿನ ಹೊಸ ಟರ್ಬೊ ಪೆಟ್ರೋಲ್‌ ಯೂನಿಟ್‌ ಅನ್ನು ಸಹ ಹೊರತರಲಿದೆ.
  • ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು (ರೂ. 15.20 ಲಕ್ಷದಿಂದ 24.27 ಲಕ್ಷದ ತನಕ, ಎಕ್ಸ್‌ - ಶೋರೂಂ, ದೆಹಲಿ) ನಿಗದಿಪಡಿಸುವ ಸಾಧ್ಯತೆ ಇದೆ.

ಟಾಟಾ ಹ್ಯರಿಯರ್‌ ಫೇಸ್‌ ಲಿಫ್ಟ್ ಕಾರಿನ ಪರೀಕ್ಷಾರ್ಥ ಮಾದರಿಯನ್ನು ರಸ್ತೆ ಮೇಲೆ ನೋಡಿ ಸುಮಾರು ಒಂದು ವರ್ಷ ಕಳೆದು ಹೋಗಿದೆ. 2023ರಿಂದಲೇ ಈ ಪರಿಷ್ಕೃತ SUV ಯು ಅನೇಕ ಬಾರಿ ಪರೀಕ್ಷೆಯ ವೇಳೆ ಜನರ ಕಣ್ಣಿಗೆ ಬಿದ್ದಿದೆ. ಆದರೆ ಇತ್ತೀಚಿನ ಪರೀಕ್ಷಾರ್ಥ ವಾಹನವು ಆಸಕ್ತಿಕರ ವಿಚಾರಗಳನ್ನು ಹೊರಗೆಡಹಿದ್ದು, ಇದರ ವಿನ್ಯಾಸವು ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯನ್ನು ಹೋಲುತ್ತದೆ.

 

ಏನೆಲ್ಲ ಕಂಡುಬಂದಿದೆ?

ಹ್ಯರಿಯರ್‌ ಫೇಸ್‌ ಲಿಫ್ಟ್‌ ವಾಹನದ ಪರೀಕ್ಷಾರ್ಥ ಮಾದರಿಯನ್ನು ಸಾಕಷ್ಟು ಮರೆಮಾಚಲಾಗಿದ್ದರೂ ಇದರ ಪರಿಷ್ಕೃತ ಮುಂಭಾಗವು ನಮಗೆ ಕಾಣಸಿಕ್ಕಿದೆ. ನುಣುಪಾದ LED DRL ಗಳು (ಬಹುಶಃ ಈ ನಡುವೆ ಲೈಟಿಂಗ್‌ ಎಲಿಮೆಂಟ್‌ ನಿಂದ ಸಂಪರ್ಕಿಸಲಾಗಿದೆ) ಮತ್ತು ಸ್ಪ್ಲಿಟ್‌ ಹೆಡ್‌ ಲೈಟ್‌ ಸೆಟಪ್‌ ಸೇರಿದಂತೆ  ಹೊಸ ನೆಕ್ಸನ್ ಮತ್ತು ನೆಕ್ಸನ್ EV‌ ನಡುವೆ ಸಾಕಷ್ಟು ಸಾಮ್ಯತೆ ಕಂಡು ಬಂದಿದೆ. ಇತ್ತೀಚಿನ ಸ್ಪೈ ಶಾಟ್‌ ಮೂಲಕ ಪರಿಷ್ಕೃತ SUV ಯಲ್ಲಿ ಲಂಬವಾಗಿ ಜೋಡಿಸಲಾಗದ LED ಹೆಡ್‌ ಲೈಟುಗಳು ಕಾಣ ಸಿಕ್ಕಿವೆ.

ಈ SUV ಯ ಪಕ್ಕದ ಮತ್ತು ಹಿಂದಿನ ಭಾಗಗಳು ಕಾಣಲು ಸಿಗದೇ ಇದ್ದರೂ, ಹಿಂದಿನ ಚಿತ್ರಗಳ ಪ್ರಕಾರ ಹೊಸ ವಿನ್ಯಾಸದ ಅಲೋಯ್‌ ವೀಲುಗಳು, ಸಂಪರ್ಕಿತ LED ಟೇಲ್‌ ಲೈಟುಗಳು, ಮತ್ತು ಡೈನಾಮಿಕ್‌ ಟರ್ನ್‌ ಇಂಡಿಕೇಟರ್‌ ಗಳನ್ನು ಈ ವಾಹನವು ಹೊಂದಿದೆ.

 ಕ್ಯಾಬಿನ್‌ ನಲ್ಲಿ ಸಾಕಷ್ಟು ಮಾರ್ಪಾಡುಗಳು

Tata Harrier cabin

ಉಲ್ಲೇಖಕ್ಕಾಗಿ ಈಗಿನ ಹ್ಯರಿಯರ್‌ ಕಾರಿನ ಚಿತ್ರವನ್ನು ಬಳಸಲಾಗಿದೆ

ಟಾಟಾ ಸಂಸ್ಥೆಯು ಹ್ಯರಿಯರ್‌ ಕಾರಿನ ಕ್ಯಾಬಿನ್‌ ನಲ್ಲಿ ಹೊಸತನವನ್ನು ತಂದಿದ್ದು, ಮರುವಿನ್ಯಾಸಗೊಳಿಸಿದ ಡ್ಯಾಶ್‌ ಬೋರ್ಡ್‌ ಮತ್ತು‌ ಬ್ಯಾಕ್‌ ಲಿಟ್‌ ಟಾಟಾ ಲೋಗೊ ಜೊತೆಗೆ ಹೊಸ ಟು - ಸ್ಪೋಕ್‌ ಸ್ಟಿಯರಿಂಗ್‌ ವೀಲ್ ಅನ್ನು ಪರಿಚಯಿಸಲಿದೆ. ಇತ್ತೀಚೆಗೆ ಕಣ್ಣಿಗೆ ಬಿದ್ದ ಪರೀಕ್ಷಾರ್ಥ ವಾಹನದ ಪ್ರಕಾರ, ಲ್ಯಾಂಡ್‌ ರೋವರ್‌ SUV ಯಲ್ಲಿ ಇರುವಂತೆಯೇ 13.1 ಇಂಚಿನಷ್ಟು ದೊಡ್ಡದಾದ ಟಚ್‌ ಸ್ಕ್ರೀನ್‌ ಸಿಸ್ಟಂ ಅನ್ನು ಇದು ಹೊಂದಿರಲಿದೆ. ಆದರೆ ಟಾಪ್‌ ಸ್ಪೆಕ್ ಟಾಟಾ ನೆಕ್ಸನ್‌ EV ಯಲ್ಲಿಯೂ 12.3 ಇಂಚಿನ ಯೂನಿಟ್‌ ಕಾಣಿಸಿಕೊಳ್ಳಲಿದೆ.  ಸಂಪೂರ್ಣ ಡಿಜಿಟಲ್‌ ಅಗಿರುವ ಚಾಲಕನ ಡಿಸ್ಪ್ಲೇ, ವೈರ್‌ ಲೆಸ್‌ ಫೋನ್‌ ಚಾರ್ಜಿಂಗ್‌, ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು, ಮತ್ತು ಪುಶ್‌ ಬಟನ್‌ ಸ್ಟಾರ್ಟ್‌ / ಸ್ಟಾಪ್‌ ಇತ್ಯಾದಿ ಇತರ ವೈಶಿಷ್ಟ್ಯಗಳನ್ನು ಸಹ ಇದು ಹೊಂದಿರಲಿದೆ.

 ಆರು ಏರ್‌ ಬ್ಯಾಗುಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ESP), 360-ಡಿಗ್ರಿ ಕ್ಯಾಮರಾ, ಮತ್ತು ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಇತ್ಯಾದಿಗಳ ಮೂಲಕ ಸುರಕ್ಷತೆಗೆ ಸಾಕಷ್ಟು ಒತ್ತು ನೀಡಲಾಗಿದೆ.

 ಇದನ್ನು ಸಹ ಓದಿರಿ: ̆ಟಾಟಾ ನೆಕ್ಸನ್ EV ಫೇಸ್‌ ಲಿಫ್ಟ್‌ ಕ್ರಿಯೇಟಿವ್‌ ಬೇಸ್‌ ವೇರಿಯಂಟ್ ವಿವರಿಸುವ 5 ಚಿತ್ರಗಳು

 

 ಪೆಟ್ರೋಲ್‌ ಎಂಜಿನ್‌ ಸಹ ಲಭ್ಯ

New 1.5-litre turbo-petrol engine

 ಹ್ಯರಿಯರ್‌ ಫೇಸ್‌ ಲಿಫ್ಟ್‌ ವಾಹನವು 1.5 ಲೀಟರಿನ ಟರ್ಬೊ ಪೆಟ್ರೋಲ್‌ ಎಂಜಿನ್ (170PS/280Nm)‌ ಅನ್ನು ಸಹ ಹೊಂದಿರಲಿದೆ. ಇದು ಮ್ಯಾನುವಲ್‌ ಮತ್ತು DCT ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಬರಲಿದೆ.

 ಇನ್ನೊಂದೆಡೆ ಈ SUV ಯ ಈಗಿನ 2 ಲೀಟರ್‌ ಡೀಸೆಲ್‌ ಯೂನಿಟ್‌ (170PS/350Nm) ಅನ್ನು ಸಹ ಉಳಿಸಲಾಗುತ್ತದೆ. ಇದು 6 ಸ್ಪೀಡ್‌ ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಆಯ್ಕೆಯೊಂದಿಗೆ ಬರಲಿದೆ.

ಬಿಡುಗಡೆ ಮತ್ತು ಬೆಲೆ

ಟಾಟಾ ಸಂಸ್ಥೆಯು ಪರಿಷ್ಕೃತ ಹ್ಯರಿಯರ್‌ ಅನ್ನು ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸದ್ಯಕ್ಕೆ ರೂ. 15.20 ಲಕ್ಷದಿಂದ ರೂ. 24.27 ಲಕ್ಷದ ತನಕ (ಎಕ್ಸ್-ಶೋರೂಂ ದೆಹಲಿ) ಬೆಲೆಯನ್ನು ಹೊಂದಿರುವ ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು ಇದು ಹೊಂದಿರಲಿದೆ. ಟಾಟಾ ಹ್ಯರಿಯರ್‌ ಫೇಸ್‌ ಲಿಫ್ಟ್‌ ಕಾರು ಮಹೀಂದ್ರಾ XUV700, MG ಹೆಕ್ಟರ್, ಜೀಪ್‌ ಕಂಪಾಸ್, ಹ್ಯುಂಡೈ ಕ್ರೆಟಾ ಮಾದರಿಯ ಉನ್ನತ ವೇರಿಯಂಟ್‌ ಗಳು ಹಾಗೂ ಕಿಯಾ ಸೆಲ್ಟೊಸ್‌ ಜೊತೆಗೆ ಸ್ಪರ್ಧಿಸಲಿದೆ.

 ಇದನ್ನು ಸಹ ನೋಡಿರಿ: ಟಾಟಾ ನೆಕ್ಸನ್‌ ಫೇಸ್‌ ಲಿಫ್ಟ್‌ ನ ಹೊರಾಂಗಣವನ್ನು ಪ್ರಸ್ತುತಪಡಿಸುವ 10 ಚಿತ್ರಗಳು ಇಲ್ಲಿವೆ

 ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ಹ್ಯರಿಯರ್‌ ಡೀಸೆಲ್

was this article helpful ?

Write your Comment on Tata ಹ್ಯಾರಿಯರ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience