Login or Register ಅತ್ಯುತ್ತಮ CarDekho experience ಗೆ
Login

Tata Harrierನಿಂದ ಈ ವೈಶಿಷ್ಟ್ಯಗಳನ್ನು ಪಡೆಯಲಿರುವ Tata Curvv

published on ಫೆಬ್ರವಾರಿ 14, 2024 10:13 pm by ansh for ಟಾಟಾ ಕರ್ವ್‌

ಟಾಟಾದ ಮುಂಬರುವ ಈ ಕೂಪ್‌ ಎಸ್‌ಯುವಿಯು ಕೇವಲ ವಿನ್ಯಾಸದ ಅಂಶಗಳನ್ನು ಫೇಸ್‌ಲಿಫ್ಟೆಡ್ ಹ್ಯಾರಿಯರ್‌ನೊಂದಿಗೆ ಹಂಚಿಕೊಳ್ಳುತ್ತದೆ

ಟಾಟಾವು ಈ ವರ್ಷ ಕೆಲವು ಹೊಸ ಮೊಡೆಲ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಮತ್ತು ಹೆಚ್ಚು ನಿರೀಕ್ಷಿಸುತ್ತಿರುವ ಮೊಡೆಲ್‌ಗಳಲ್ಲಿ ಟಾಟಾ ಕರ್ವ್‌ ಒಂದಾಗಿದೆ. ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಸ್ಲಾಟ್ ಆಗುವ ಈ ಎಸ್‌ಯುವಿ ಅನ್ನು 2024 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ನಿರ್ಮಾಣ-ಸಿದ್ಧ ಅವತಾರದಲ್ಲಿ ಕೊನೆಯದಾಗಿ ನೋಡಲಾಯಿತು ಮತ್ತು ಇದು ಕೂಪ್ ಸ್ಟೈಲಿಂಗ್, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳು ಮತ್ತು ಹಲವಾರು ವೈಶಿಷ್ಟ್ಯಗಳೊಂದಿಗೆ ಬರಲಿದೆ. ಈ ಮಾದರಿಯು ಹೊಚ್ಚ ಹೊಸದಾಗಿದ್ದರೂ, ಇದು ಮೇಲಿನ ಸೆಗ್ಮೆಂಟ್‌ನಲ್ಲಿರುವ ಫೇಸ್‌ಲಿಫ್ಟೆಡ್ ಟಾಟಾ ಹ್ಯಾರಿಯರ್‌ನೊಂದಿಗೆ ಕೆಲವು ಹೋಲಿಕೆಗಳನ್ನು ತೋರಿಸುತ್ತದೆ ಮತ್ತು ಅವುಗಳೆಲ್ಲದರ ಪಟ್ಟಿ ಇಲ್ಲಿದೆ.

ಒಂದೇ ರೀತಿಯ ವಿನ್ಯಾಸ ಮತ್ತು ಲೈಟಿಂಗ್‌

ಟಾಟಾ ಕರ್ವ್‌ ಅದರ ಆಕಾರ ಮತ್ತು ಶೈಲಿಯಲ್ಲಿ ಹ್ಯಾರಿಯರ್‌ನಿಂದ ಭಿನ್ನವಾಗಿದ್ದರೂ, ಮುಂಭಾಗದ ಪ್ರೊಫೈಲ್ ನಲ್ಲಿ ಕೆಲವು ಹೋಲಿಕೆಗಳನ್ನು ಹೊಂದಿದೆ. ಉದಾಹರಣೆಗೆ ಕ್ರೋಮ್ ಇನ್ಸರ್ಟ್‌ನೊಂದಿಗೆ ಒಂದೇ ರೀತಿಯ ಗ್ರಿಲ್ ವಿನ್ಯಾಸ ಮತ್ತು ಪರಿಚಿತ ಬಂಪರ್ ಮತ್ತು ಸ್ಕಿಡ್ ಪ್ಲೇಟ್. ಎರಡೂ ಎಸ್‌ಯುವಿಗಳು 18-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳನ್ನು ಪಡೆಯುತ್ತವೆ, ಆದರೆ Curvv ನಲ್ಲಿರುವವುಗಳು ಹೂವಿನ ದಳದಂತಹ ವಿನ್ಯಾಸವನ್ನು ಪಡೆಯುತ್ತವೆ.

ಇನ್ನಷ್ಟು ಓದಿ: Tata Nexon EV ಮತ್ತು Tata Tiago EVಯ ಬೆಲೆಗಳಲ್ಲಿ ಈಗ 1.2 ಲಕ್ಷ ರೂ.ವರೆಗೆ ಕಡಿತ

ಅಲ್ಲದೆ, ಕರ್ವ್‌ನ ಫ್ಯಾಸಿಯಾವು ಲಂಬವಾಗಿ ಇರಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಫೇಸ್‌ಲಿಫ್ಟೆಡ್ ಟಾಟಾ ಹ್ಯಾರಿಯರ್‌ನಲ್ಲಿ ಕಂಡುಬರುವಂತೆ ಅಗಲ ವ್ಯಾಪಿಸಿರುವ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಬರುತ್ತದೆ. ಎಲ್ಲಾ ಹೊಸ ಯುಗದ ಟಾಟಾ ಕಾರುಗಳಲ್ಲಿ ಕಂಡುಬರುವಂತೆ ಇದು ವೆಲ್‌ಕಮ್‌ ಮತ್ತು ಗುಡ್‌ಬೈ ಫಂಕ್ಷನ್ ಟ್ರಿಕ್ ಅನ್ನು ಸಹ ಪಡೆಯಬೇಕು.

ಸ್ಕ್ರೀನ್ ಸೆಟಪ್

ಟಾಟಾ ಹ್ಯಾರಿಯರ್ ಕ್ಯಾಬಿನ್ ಅನ್ನು ಮಾಹಿತಿಗಾಗಿ ಬಳಸಲಾಗಿದೆ

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎರಡೂ ಪ್ರತ್ಯೇಕವಾಗಿರುವ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಪ್ಯಾಕ್ ಮಾಡುತ್ತದೆ. ಟಾಟಾ ಕರ್ವ್‌ನಲ್ಲಿ, ಅದೇ ಸ್ಕ್ರೀನ್ ಸೆಟಪ್ ಅನ್ನು ಕಾಣಬಹುದು. ಈ ಸ್ಕ್ರೀನ್‌ಗಳು ಒಂದೇ ಗಾತ್ರವನ್ನು ಹೊಂದಿರುವುದು ಮಾತ್ರವಲ್ಲದೆ, ಆದರೆ ಅದೇ ಯುಸರ್‌ ಇಂಟರ್ಫೇಸ್, ಗ್ರಾಫಿಕ್ಸ್ ಮತ್ತು ಕಾರ್ಯಗಳನ್ನು ಸಹ ಹಂಚಿಕೊಳ್ಳುತ್ತವೆ.

ಟಚ್‌ ಆಧಾರಿತ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌

ಟಾಟಾ ಹ್ಯಾರಿಯರ್ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಅನ್ನು ಮಾಹಿತಿಗಾಗಿ ಬಳಸಲಾಗಿದೆ

ಹೊಸ ಟಾಟಾ ಕಾರುಗಳಲ್ಲಿ ಕಂಡುಬರುವ ಇತ್ತೀಚಿನ ವೈಶಿಷ್ಟ್ಯವೆಂದರೆ ಟಚ್‌ ಆಧಾರಿತ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌. ಈ ಫಲಕವು ಬಟನ್‌ (ತಾಪಮಾನ ಮತ್ತು ಫ್ಯಾನ್ ವೇಗಕ್ಕಾಗಿ) ಮತ್ತು ಟಚ್‌ ಆಧಾರಿತ ನಿಯಂತ್ರಣಗಳನ್ನು ಹೊಂದಿದೆ ಮತ್ತು ಈ ಪ್ಯಾನೆಲ್‌ ಅನ್ನು ಹೊಸ ಟಾಟಾ ಹ್ಯಾರಿಯರ್‌ನಲ್ಲಿ ಅಳವಡಿಸಲಾಗಿದೆ. ಕರ್ವ್‌ ಈ ವೈಶಿಷ್ಟ್ಯವನ್ನು ಅದರ ICE ಮತ್ತು ಇವಿ ಎರಡೂ ಆವೃತ್ತಿಗಳಲ್ಲಿ ಪಡೆಯುತ್ತದೆ, ಜೊತೆಗೆ ಮುಂಭಾಗದ ಆಸನಗಳಿಗೆ ಸೀಟ್ ವೆಂಟಿಲೇಶನ್ ಕಾರ್ಯವನ್ನು ಹೊಂದಿರುತ್ತದೆ.

ಸನ್‌ರೂಫ್‌

ಟಾಟಾ ಹ್ಯಾರಿಯರ್ ಪನೋರಮಿಕ್ ಸನ್‌ರೂಫ್ ಅನ್ನು ಮಾಹಿತಿಗಾಗಿ ಬಳಸಲಾಗಿದೆ.

ಅನೇಕ ಗ್ರಾಹಕರಿಗೆ ಕಾರು ಖರೀದಿಯ ಅಂತಿಮ ನಿರ್ಧಾರದಲ್ಲಿ ಸನ್‌ರೂಫ್‌ಗಳು ದೊಡ್ಡ ಅಂಶಗಳಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ತಿಳಿದ ಕಾರು ತಯಾರಕರು ತಮ್ಮ ಕಾರುಗಳನ್ನು ಈ ವೈಶಿಷ್ಟ್ಯದೊಂದಿಗೆ ಸಜ್ಜುಗೊಳಿಸಲು ಪ್ರಾರಂಭಿಸಿದ್ದಾರೆ. ಫೇಸ್‌ಲಿಫ್ಟೆಡ್ ಹ್ಯಾರಿಯರ್ ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುತ್ತದೆ ಮತ್ತು ಇದು ಕರ್ವ್‌ನಲ್ಲಿಯೂ ನೀಡಲಾಗುವುದು.

ಎಡಿಎಎಸ್‌

ಟಾಟಾ ಹ್ಯಾರಿಯರ್ ADAS ಕ್ಯಾಮೆರಾವನ್ನು ಮಾಹಿತಿಗಾಗಿ ಬಳಸಲಾಗಿದೆ.

ಕರ್ವ್‌ ಹ್ಯಾರಿಯರ್‌ನಿಂದ ಎರವಲು ಪಡೆಯುವ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು). ಇದರಲ್ಲಿರುವ 2ನೇ ಹಂತದ ADAS ವೈಶಿಷ್ಟ್ಯಗಳ ಸೆಟ್, ಲೇನ್ ನಿರ್ಗಮನ ಎಚ್ಚರಿಕೆ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಆಟೋ ತುರ್ತು ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ ಅನ್ನು ಒಳಗೊಂಡಿರುತ್ತದೆ. ಅಲ್ಲದೆ, ಹ್ಯಾರಿಯರ್‌ನಂತೆಯೇ, ಟಾಟಾ Curvv ಸಹ ಕ್ಯಾಮೆರಾ ಮತ್ತು ರಾಡಾರ್ ಆಧಾರಿತ ADAS ಸೆಟಪ್ ಎರಡನ್ನೂ ಪಡೆಯುತ್ತದೆ.

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆ

ಟಾಟಾವು 2024-2025 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (2024ರ ಜುಲೈನಿಂದ ಸೆಪ್ಟೆಂಬರ್‌ನ ಮಧ್ಯದಲ್ಲಿ ) ಕರ್ವ್‌ ಇವಿ ಅನ್ನು ಬಿಡುಗಡೆ ಮಾಡಬಹುದು ಮತ್ತು ಇದರ ICE ಆವೃತ್ತಿಯು 3 ರಿಂದ 4 ತಿಂಗಳ ನಂತರ ಬರಲಿದೆ. ಟಾಟಾ ಕರ್ವ್‌ನ ಎಕ್ಸ್ ಶೋರೂಂ ಬೆಲೆಗಳು 10 ಲಕ್ಷ ರೂ.ಗಳಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ, ಮತ್ತು ಇದು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರಾಂಡ್ ವಿಟಾರಾ, ಟೊಯೋಟಾ ಹೈರೈಡರ್, ವೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಹೆಚ್ಚು ಓದಿ: ಹ್ಯಾರಿಯರ್ ಡೀಸೆಲ್

a
ಅವರಿಂದ ಪ್ರಕಟಿಸಲಾಗಿದೆ

ansh

  • 21 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಕರ್ವ್‌

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ