ಟಾಟಾ ನೆಕ್ಸನ್ EV ಗೂ ಮೀರಿ, 2024ರಲ್ಲಿ ಹೊರಬರಲಿರುವ 4 ಟಾಟಾ ಎಲೆಕ್ಟ್ರಿಕ್ ಕಾರುಗಳು!
ಟಾಟಾ EV ಪಟ್ಟಿಯಲ್ಲಿ ಎಲೆಕ್ಟ್ರಿಕ್ SUV ಗಳು ರಾರಾಜಿಸಲಿದ್ದು ಇದರಲ್ಲಿ ಪಂಚ್ EV ಯೂ ಸೇರಿದೆ
ಭಾರತದಲ್ಲಿ ತನ್ನ EV ಯೋಜನೆಗಳ ಕುರಿತು ಯಾವುದಾದರೂ ಕಾರು ತಯಾರಕ ಸಂಸ್ಥೆಯು ಅತ್ಯಂತ ಕ್ಷಿಪ್ರ ಕ್ರಮವನ್ನು ಕೈಗೊಂಡಿದ್ದರೆ ಆ ಶ್ರೇಯವು ಟಾಟಾ ಮೋಟರ್ಸ್ ಗೆ ಸಲ್ಲುತ್ತದೆ. ತಾನು 2025ರೊಳಗೆ 10 ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸುವುದಾಗಿ 2021ರಲ್ಲೇ ಈ ಸಂಸ್ಥೆಯು ಘೋಷಿಸಿತ್ತು. ಈಗಾಗಲೇ ನಾವು ಟಾಟಾ ನೆಕ್ಸನ್ EV, ಟಾಟಾ ಟಿಯಾಗೊ EV, ಮತ್ತು ಟಾಟಾ ಟಿಗೊರ್ EV ಮೂಲಕ ಮೂರು ಕಾರುಗಳನ್ನು ನೋಡಿದ್ದೇವೆ. ಈಗ ಈ ಕಾರು ತಯಾರಕ ಸಂಸ್ಥೆಯು ಮುಂದಿನ 12 ತಿಂಗಳುಗಳಲ್ಲಿ ಇನ್ನೂ ಅನೇಕ ಕಾರುಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ. ಈ ಕಾರುಗಳತ್ತ ಒಂದಷ್ಟು ಬೆಳಕು ಹರಿಸೋಣ:
ಟಾಟಾ ಪಂಚ್ EV
ನಿರೀಕ್ಷಿತ ಬಿಡುಗಡೆ- 2023-ಕೊನೆಗೆ/ 2024ರ ಆರಂಭದಲ್ಲಿ
ನಿರೀಕ್ಷಿತ ಬೆಲೆ- ರೂ. 12 ಲಕ್ಷ
ಟಾಟಾ ಪಂಚ್ EV ಕಾರು ಪರೀಕ್ಷಾರ್ಥ ಹಂತದಿಂದಲೇ ಸುದ್ದಿ ಮಾಡುತ್ತಿದ್ದು, ಕ್ಷಿಪ್ರಗತಿಯಲ್ಲಿ ಉತ್ಪಾದನಾ ಹಂತವನ್ನು ತಲುಪುತ್ತಿದೆ. ಪ್ರಮಾಣಿತ ಪಂಚ್ ವಾಹನಕ್ಕೆ ಹೋಲಿಸಿದರೆ ಒಳಗಡೆ ಮತ್ತು ಹೊರಗಡೆಯ ವಿನ್ಯಾಸದಲ್ಲಿ ಒಂದಷ್ಟು ಭಿನ್ನತೆಯನ್ನು ಪಡೆಯಲಿದ್ದು, ದೊಡ್ಡದಾದ ಟಚ್ ಸ್ಕ್ರೀನ್, ಮತ್ತು ಬ್ಯಾಕ್ ಲಿಟ್ ʻಟಾಟಾʼ ಲೋಗೊ ಜೊತೆಗೆ ಹೊಸ 2 ಸ್ಪೋಕ್ ಸ್ಟಿಯರಿಂಗ್ ಜೊತೆಗೆ ಹೊರಬರಲಿದೆ. ಸುರಕ್ಷತೆಯ ದೃಷ್ಟಿಯಿಂದ ನೋಡುವುದಾದರೆ ಇದು ಆರು ಏರ್ ಬ್ಯಾಗ್ ಗಳು, ISOFIX ಚೈಲ್ಡ್ ಸೀಟ್ ಆಂಕರೇಜ್ ಗಳು ಮತ್ತು 360 ಡಿಗ್ರಿ ಕ್ಯಾಮರಾವನ್ನು ಹೊಂದಿರುವ ಸಾಧ್ಯತೆ ಇದೆ.
ಇದರ ಪವರ್ ಟ್ರೇನ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿರಲಿದ್ದು, ಟಾಟಾದ ಇತ್ತೀಚಿನ ಹೇಳಿಕೆಗಳನ್ನು ನಂಬುವುದಾದರೆ ಇದು 500km ಗಿಂತಲೂ ಹೆಚ್ಚಿನ ಶ್ರೇಣಿಯನ್ನು ನೀಡಲಿದೆ. ಇದು ಟಾಟಾದ EV ಸಾಲಿನಲ್ಲಿ ನೆಕ್ಸನ್ EV ಯ ಕೆಳಗಿನ ಸಾಲಿನಲ್ಲಿ ಬರಲಿದೆ.
ಟಾಟಾ ಕರ್ವ್ EV
ನಿರೀಕ್ಷಿತ ಬಿಡುಗಡೆ- 2024ರ ಆರಂಭದಲ್ಲಿ
ನಿರೀಕ್ಷಿತ ಬೆಲೆ- ರೂ. 20 ಲಕ್ಷ
ಟಾಟಾ ಕರ್ವ್ Evಯು ಮುಂದಿನ ವರ್ಷದ ಆರಂಭದಲ್ಲೇ ರಸ್ತೆಗಿಳಿಯಲಿರುವ ಈ ಸಂಸ್ಥೆಯ ಮೊದಲ SUV-ಕೂಪೆ ಮಾದರಿ ಎನಿಸಲಿದೆ. ಇದು ನೆಕ್ಸನ್ EV ಮತ್ತು ಹ್ಯಾರಿಯರ್ EV ನಡುವಿನ ಅಂತರವನ್ನು ತುಂಬಲಿದ್ದು, ನಂತರದ ದಿನಗಳಲ್ಲಿ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಿ ಇಂಟರ್ನಲ್ ಕಂಬಷನ್ ಎಂಜಿನ್ (ICE) ಆವೃತ್ತಿಯನ್ನು ಸಹ ಹೊಂದಲಿದೆ. ಕರ್ವ್ ಅನ್ನು ಟಾಟಾದ ಜೆನ್2 ಪ್ಲಾಟ್ ಫಾರ್ಮ್ ಮೇಲೆ ರೂಪಿಸಲಾಗಿದ್ದು, ಝಿಪ್ ಟ್ರಾನ್ EV ಪವರ್ ಟ್ರೇನ್ ಮೂಲಕವೂ ಇದನ್ನು ಚಲಾಯಿಸಲಾಗುತ್ತದೆ. ಇದು 500km ತನಕದ ಶ್ರೇಣಿಯನ್ನು ನೀಡಲಿದೆ.
ಕರ್ವ್ ಕಾರು ನೆಕ್ಸನ್ EV ಯ ವೈಶಿಷ್ಟ್ಯತೆಗಳನ್ನು ಎರವಲು ಪಡೆಯಲಿದ್ದು, ಇದು 12.3 ಇಂಚಿನ ಟಚ್ ಸ್ಕ್ರೀನ್, ವೆಂಟಿಲೇಟೆಡ್ ಸೀಟುಗಳು, 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಆರರಷ್ಟು ಏರ್ ಬ್ಯಾಗ್ ಗಳು, ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅನ್ನು ಸಹ ಹೊಂದಿರಲಿದೆ.
ಇದನ್ನು ಸಹ ಓದಿರಿ: ಟಾಟಾ ಕರ್ವ್ SUV ಯ ಫ್ಲಶ್ ಟೈಪ್ ಡೋರ್ ಹ್ಯಾಂಡಲ್ ಗಳ ಸ್ಪಷ್ಟ ಚಿತ್ರಣ ಇಲ್ಲಿದೆ
ಟಾಟಾ ಹ್ಯಾರಿಯರ್ EV
ನಿರೀಕ್ಷಿತ ಬಿಡುಗಡೆ- 2024ರ ಆರಂಭದಲ್ಲಿ
ನಿರೀಕ್ಷಿತ ಬೆಲೆ- ರೂ. 30 ಲಕ್ಷ
ಟಾಟಾ ಹ್ಯಾರಿಯರ್ EV ಕಾರು ಉತ್ಪಾದನೆಗೆ ಸಿದ್ಧವಾಗಿದ್ದು, ಅಟೋ ಎಕ್ಸ್ಪೋ 2023ರಲ್ಲಿ ಕಾಣಿಸಿಕೊಂಡ ಕಾರುಗಳಲ್ಲಿ ಇದು ಸಹ ಒಂದಾಗಿದೆ. ಇತ್ತೀಚೆಗೆ ರಸ್ತೆಗಿಳಿದ ಹ್ಯಾರಿಯರ್ ಫೇಸ್ ಲಿಫ್ಟ್ ಅನ್ನು ಇದು ಅನುಕರಿಸುತ್ತಿದ್ದು, EV ವಾಹನಕ್ಕೆ ಅಗತ್ಯವಿರುವಂತೆ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಯನ್ನು ಮಾಡಲಾಗಿದೆ. ಎಲೆಕ್ಟ್ರಿಕ್ ಪವರ್ ಟ್ರೇನ್ ಕುರಿತ ವಿವರಗಳು ಇನ್ನೂ ಬಹಿರಂಗಗೊಳ್ಳದೆ ಇದ್ದರೂ, ಇದು ಲ್ಯಾಂಡ್ ರೋವರ್ ನಿಂದ ಪಡೆದ OMEGA- ARC ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ ಎಂಬುದು ನಮಗೆ ತಿಳಿದಿದೆ. ಹ್ಯಾರಿಯರ್ EV ಕಾರನ್ನು ಆಲ್ ವೀಲ್ ಡ್ರೈವ್ (AWD) ಜೊತೆಗೂ ಹೊರತರಲಿದ್ದು, ಇದು ಡ್ಯುವಲ್ ಮೋಟರ್ ಸೆಟಪ್ (ಪ್ರತಿ ಆಕ್ಸಿಲ್ ಮೇಲೆ ಒಂದು) ಅನ್ನು ಹೊಂದಿರಲಿದೆ. ಇದು 500km ತನಕದ ಶ್ರೇಣಿಯನ್ನು ಹೊಂದಿರಲಿದೆ ಎಂಬುದು ತಿಳಿದುಬಂದಿದೆ.
ಇದು ಹೆಚ್ಚಿನ ಸೌಲಭ್ಯಗಳನ್ನು ಪ್ರಮಾಣಿತ ಹ್ಯಾರಿಯರ್ ನಿಂದ ಎರವಲು ಪಡೆದಿದ್ದು, 12.3 ಇಂಚಿನ ಟಚ್ ಸ್ಕ್ರೀನ್ ಸಿಸ್ಟಂ, ಡ್ಯುವಲ್ ಝೋನ್ AC, ಸುಮಾರು ಏಳು ಏರ್ ಬ್ಯಾಗ್ ಗಳು, ಸುಸಂಗತವಾದ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳನ್ನು ಹೊಂದಿರಲಿದೆ.
ಇದನ್ನು ಸಹ ಓದಿರಿ: ಟಾಟಾ ನ್ಯಾನೋ ಕಾರಿಗಾಗಿ ಮೀಸಲಾಗಿದ್ದ ಸಿಂಗೂರ್ ಘಟಕದ ಪ್ರಕರಣದಲ್ಲಿ ಗೆಲುವು ಸಾಧಿಸಿದ ಟಾಟಾ ಮೋಟರ್ಸ್
ಟಾಟಾ ಸಫಾರಿ EV
ನಿರೀಕ್ಷಿತ ಬಿಡುಗಡೆ- 2024ರ ಆರಂಭದಲ್ಲಿ
ನಿರೀಕ್ಷಿತ ಬೆಲೆ- ರೂ. 35 ಲಕ್ಷ
ಅಟೋ ಎಕ್ಸ್ಪೊ 2023ರಲ್ಲಿ ಹ್ಯಾರಿಯರ್ EV ಯ ಪ್ರದರ್ಶನದ ವೇಳೆ ಟಾಟಾ ಸಫಾರಿ EV ಯ ಬಿಡುಗಡೆಯನ್ನು ಸಹ ದೃಢೀಕರಿಸಲಾಗಿದೆ. ಸಾಮಾನ್ಯ ICE ವಾಹನಗಳಲ್ಲಿ ಕಂಡಂತೆಯೇ, ಎರಡೂ EV ಗಳು ಒಳಗಡೆ ಮತ್ತು ಹೊರಗಡೆಗೆ ಸರಿಸುಮಾರು ಒಂದೇ ರೀತಿಯ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿರಲಿವೆ. ಇದು ಲ್ಯಾಂಡ್ ರೋವರ್ ನಿಂದ ಪಡೆದ OMEGA-ARC ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ್ದು, ಬ್ಯಾಟರಿ ಪ್ಯಾಕ್ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ. ಹ್ಯಾರಿಯರ್ EV ಕಾರಿನಂತೆಯೇ ಸಫಾರಿ EV ಯನ್ನು ಸಹ ಆಲ್ ವೀಲ್ ಡ್ರೈವ್ (AWD) ಜೊತೆಗೂ ಹೊರತರಲಿದ್ದು, ಇದು ಡ್ಯುವಲ್ ಮೋಟರ್ ಸೆಟಪ್ (ಪ್ರತಿ ಆಕ್ಸಿಲ್ ಮೇಲೆ ಒಂದು) ಅನ್ನು ಹೊಂದಿರಲಿದೆ. ಸಫಾರಿ EV ಯ ದೊಡ್ಡದಾದ ಗಾತ್ರ ಮತ್ತು ಹೆಚ್ಚಿನ ಭಾರದ ಕಾರಣ ಇದರಲ್ಲಿ ಹ್ಯಾರಿಯರ್ EV ಗಿಂತಲೂ ಕಡಿಮೆ ಶ್ರೇಣಿ ದೊರೆಯಲಿದೆ.
ಇದರಲ್ಲಿರುವ ಹೆಚ್ಚಿನ ಸೌಲಭ್ಯಗಳನ್ನು ಪ್ರಮಾಣಿತ ಸಫಾರಿಯಲ್ಲೂ ಕಾಣಬಹುದಾಗಿದ್ದು, 12.3 ಇಂಚಿನ ಟಚ್ ಸ್ಕ್ರೀನ್ ಸಿಸ್ಟಂ, ಡ್ಯುವಲ್ ಝೋನ್ AC, ಸುಮಾರು ಏಳು ಏರ್ ಬ್ಯಾಗ್ ಗಳು, ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಗಳನ್ನು ಹೊಂದಿರಲಿದೆ.
ಇದನ್ನು ಸಹ ಓದಿರಿ: ಪ್ರಮಾಣಿತ 6 ಏರ್ ಬ್ಯಾಗ್ ಗಳನ್ನು ಹೊಂದಿರುವ, ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ 8 ಕಾರುಗಳು
ಇವೆಲ್ಲವೂ 2024ರಲ್ಲಿ ನಿಮ್ಮ ಕದ ತಟ್ಟಲಿರುವ ಟಾಟಾ EV ಗಳು ಅಥವಾ SUV ಗಳಾಗಿವೆ. ಇವುಗಳಲ್ಲಿ ಯಾವ ವಾಹನದ ಕುರಿತು ನೀವು ಹೆಚ್ಚು ಉತ್ಸುಕರಾಗಿದ್ದೀರಿ ಮತ್ತು ಯಾಕೆ? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ನೆಕ್ಸನ್ AMT