• English
  • Login / Register

ಪರಿಷ್ಕೃತ ಟಾಟಾ ಹ್ಯರಿಯರ್‌ ಮತ್ತು ಟಾಟಾ ಸಫಾರಿ ಕಾರುಗಳಿಗೆ ಸದ್ಯದಲ್ಲೇ ಭಾರತ್‌ NCAP ಸುರಕ್ಷತಾ ಶ್ರೇಯಾಂಕ

ಟಾಟಾ ಹ್ಯಾರಿಯರ್ ಗಾಗಿ rohit ಮೂಲಕ ಅಕ್ಟೋಬರ್ 17, 2023 10:11 pm ರಂದು ಪ್ರಕಟಿಸಲಾಗಿದೆ

  • 25 Views
  • ಕಾಮೆಂಟ್‌ ಅನ್ನು ಬರೆಯಿರಿ

ಸುರಕ್ಷತಾ ಸುಧಾರಣೆಯ ಅಂಗವಾಗಿ ಎರಡು SUV ಗಳಲ್ಲಿ ರಾಚನಿಕ ಬಲವರ್ಧನೆಯನ್ನು ಏಕೀಕರಿಸಲಾಗಿದೆ ಎಂದು ಟಾಟಾ ಸಂಸ್ಥೆಯು ಹೇಳಿಕೊಂಡಿದೆ

Tata Harrier and Safari facelifts 

ಟಾಟಾ ಹ್ಯರಿಯರ್‌ ಫೇಸ್‌ ಲಿಫ್ಟ್ ಮತ್ತು ಟಾಟಾ ಸಫಾರಿ ಫೇಸ್‌ ಲಿಫ್ಟ್ ಕಾರುಗಳು ಸದ್ಯವೇ ರಸ್ತೆಗಿಳಿಯಲಿವೆ. ನಾವು ಇತ್ತೀಚೆಗೆ ಈ ಎರಡೂ SUV ಗಳನ್ನು ಚಲಾಯಿಸಿದ್ದು ಅವುಗಳಲ್ಲಿ ಮಾಡಲಾಗಿರುವ ಪರಿಷ್ಕರಣೆಯ ಕುರಿತು ನಮಗೆ ಸಾಕಷ್ಟು ತೃಪ್ತಿ ಇದೆ. ಹೊಸ ಹ್ಯರಿಯರ್‌ ಮತ್ತು ಸಫಾರಿ ಜೋಡಿಗಳನ್ನು, ಕ್ರ್ಯಾಶ್‌ ಟೆಸ್ಟ್‌ ಗಾಗಿ ಹೊಸದಾಗಿ ಪರಿಚಯಿಸಲಾದ ಭಾರತ್ NCAP (ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ಗೆ ಕಳುಹಿಸಿರುವುದಾಗಿ ಈ ಕಾರು ತಯಾರಕ ಸಂಸ್ಥೆಯು ಮಾಧ್ಯಮ ಪ್ರಚಾರದ ಅಂಗವಾಗಿ ಹೇಳಿಕೊಂಡಿದೆ.

ಯಾವೆಲ್ಲ ಪರಿಷ್ಕರಣೆಗಳನ್ನು ಮಾಡಲಾಗಿದೆ?

ಹೊಸ ಪರಿಷ್ಕರಣೆಯೊಂದಿಗೆ, ಟಾಟಾ ಸಂಸ್ಥೆಯು ಸೈಡ್‌ ಪೋಲ್‌ ಇಂಪ್ಯಾಕ್ಟ್‌ ಗಾಗಿ ರಾಚನಿಕ ಬಲವರ್ಧನೆಯನ್ನು ಏಕೀಕರಿಸಿದ್ದು ಮಾತ್ರವಲ್ಲದೆ, ಫ್ರಂಟಲ್‌ ಆಫ್‌ ಸೆಟ್‌ ಕ್ರ್ಯಾಶ್‌ ಟೆಸ್ಟ್‌ ಮಾತ್ರವಲ್ಲದೆ ಫುಲ್‌ ಫ್ರಂಟಲ್‌ ಇಂಪ್ಯಾಕ್ಟ್‌ ಕ್ರ್ಯಾಶ್‌ ಟೆಸ್ಟ್‌ ನಲ್ಲಿಯೂ ಉತ್ತಮ ರಕ್ಷಣೆ ಒದಗಿಸುವುದಕ್ಕಾಗಿ ಎರಡೂ SUV ಗಳು ಬಲವರ್ಧನೆಗೆ ಒಳಗಾಗಿವೆ.

Tata Harrier facelift airbags

 ಸುರಕ್ಷತೆಯ ದೃಷ್ಟಿಯಿಂದ ಎರಡೂ SUV ಗಳು ಈಗ ಪ್ರಮಾಣಿತವಾಗಿ 6 ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ESP), ISOFIX ಚೈಲ್ಡ್‌ ಸೀಟ್‌ ಮೌಂಟ್‌ ಗಳು ಮತ್ತು ರಿಯರ್‌ ಪಾರ್ಕಿಂಗ್‌ ಸೆನ್ಸಾರ್‌ ಗಳನ್ನು ಹೊಂದಿದೆ. ಅವುಗಳ ಉನ್ನತ ವೇರಿಯಂಟ್‌ ಗಳು ಒಂದು ಹೆಚ್ಚುವರಿ ಏರ್‌ ಬ್ಯಾಗ್‌ (ಚಾಲಕನ ಮೊಣಕಾಲಿನ ರಕ್ಷಣೆಗಾಗಿ), 360 ಡಿಗ್ರಿ ಕ್ಯಾಮರಾ, ಅಡ್ವಾನ್ಸ್ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಂ (ADAS) ಗಳನ್ನು ಹೊಂದಿದೆ.

 ಗಮನಿಸಬೇಕಾದ ಅಂಶವೆಂದರೆ ಮೊದಲ ಬಾರಿಗೆ ಹ್ಯರಿಯರ್‌ ಮತ್ತು ಸಫಾರಿ ಜೋಡಿಗಳು ಮೊದಲ ಬಾರಿಗೆ ಯಾವುದೇ ಕ್ರ್ಯಾಶ್‌ ಟೆಸ್ಟ್‌ ಗೆ ಒಳಗಾಗಲಿದ್ದು, ಪರಿಷ್ಕರಣೆಗೆ ಮೊದಲ ಆವೃತ್ತಿಗಳು ಗ್ಲೋಬಲ್‌ NCAP ಯ ಮೌಲ್ಯಮಾಪನಕ್ಕೆ ಒಳಗಾಗಿಲ್ಲ.

ನಡೆಸಲಾಗುವ ಪರೀಕ್ಷೆಗಳು

 ಭಾರತ್‌ NCAP ಯ ಸುರಕ್ಷತಾ ಕೇಂದ್ರದಲ್ಲಿ, ಸುರಕ್ಷಾ ನಿರ್ವಹಣೆ ಸಂಸ್ಥೆಯು SUV ಗಳನ್ನು ಫ್ರಂಟಲ್‌ ಆಫ್‌ ಸೆಟ್‌, ಸೈಡ್‌ ಇಂಪ್ಯಾಕ್ಟ್‌ ಮತ್ತು ಸೈಡ್‌ ಪೋಲ್‌ ಇಂಪ್ಯಾಕ್ಟ್‌ ಇತ್ಯಾದಿ ವಿವಿಧ ಹಂತಗಳ ಢಿಕ್ಕಿ ಪರೀಕ್ಷೆಗಳಿಗೆ ಒಳಪಡಿಸಲಿದೆ. ಫ್ರಂಟಲ್‌ ಆಫ್‌ ಸೆಟ್‌ ಪರೀಕ್ಷೆಯಲ್ಲಿ 64kmph ವೇಗದಲ್ಲಿ ನಡೆಸಿದರೆ, ಸೈಡ್‌ ಇಂಪ್ಯಾಕ್ಟ್‌ ಮತ್ತು ಸೈಡ್‌ ಪೋಲ್‌ ಪರೀಕ್ಷೆಗಳನ್ನು ಕ್ರಮವಾಗಿ 50kmph ಮತ್ತು 29kmph ವೇಗದಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಗಳಿಸಲಾಗುವ ಅಂಕವು ವಾಹನದ ರಾಚನಿಕ ಸಮಗ್ರತೆ ಮತ್ತು ಅದು ನೀಡುವ ಸುರಕ್ಷತಾ ನೆರವು ತಂತ್ರಜ್ಞಾನಗಳ ಮೇಲೆ ಪರಿಣಾಮ ಬೀರಲಿದೆ.

ಈ ಪರೀಕ್ಷೆಗಳನ್ನು ಆಧರಿಸಿ ಭಾರತ್‌ NCAP ಯು ಈ ಕಾರುಗಳಿಗೆ ಕ್ರ್ಯಾಶ್‌ ಟೆಸ್ಟ್‌ ರೇಟಿಂಗ್‌ ಅನ್ನು ನೀಡಲಿದ್ದು, ಅದನ್ನು ಅಡಲ್ಟ್‌ ಮತ್ತು ಚೈಲ್ಡ್‌ ಅಕುಪಂಟ್‌ ಪ್ರೊಟೆಕ್ಷನ್‌ ಎಂದು ವರ್ಗೀಕರಿಸಲಾಗುವುದು.  ಗ್ಲೋಬಲ್‌ NCAP ಯ ಪರೀಕ್ಷಾ ವಿಧಾನಗಳಿಗೆ ಅನುಸಾರವಾಗಿ ಈ ಎಲ್ಲಾ ಕ್ರಮಗಳನ್ನು ಅಳವಡಿಸಲಾಗಿದೆ.

Tata Punch at Global NCAP

 ಗ್ಲೋಬಲ್ NCAP‌ ಯಿಂದ ಪರೀಕ್ಷೆಗೆ ಒಳಗಾದ ಟಾಟಾ ಸಂಸ್ಥೆಯ ಕೊನೆಯ ಕಾರು ಎನಿಸಿದ ಪಂಚ್‌, 5-ಸ್ಟಾರ್‌ ಸುರಕ್ಷತಾ ರೇಟಿಂಗ್‌ ಅನ್ನು ಪಡೆದಿದ್ದು, ಪರಿಷ್ಕೃತ ಹ್ಯರಿಯರ್‌ ಮತ್ತು ಸಫಾರಿ ಮಾದರಿಗಳೆರಡೂ BNCAP ಪರೀಕ್ಷೆಗಳಿಂದ 5 ಸ್ಟಾರ್‌ ಗಳನ್ನು ಪಡೆಯುವ ನಿರೀಕ್ಷೆ ಇದೆ.

ಇದನ್ನು ಸಹ ಓದಿರಿ: ಭಾರತ್‌ NCAPಯಲ್ಲಿ ಪರೀಕ್ಷಿಸಬೇಕೆಂದು ನಾವು ಬಯಸುವ ಉನ್ನತ 7 ಕಾರುಗಳು

ಏಕೈಕ ಪರೀಕ್ಷಾ ಪ್ರಾಧಿಕಾರ

ಎರಡು ಸಾವಿರದ ಇಪ್ಪತ್ತಮೂರರ ಆಗಸ್ಟ್‌ ತಿಂಗಳಿನಲ್ಲಿ ಭಾರತ್ NCAP‌ ಯನ್ನು ಪರಿಚಯಿಸಿದ ತಕ್ಷಣವೇ, 2024ರಿಂದ ತಾನು ಭಾರತಕ್ಕೆ ಸೀಮಿತವಾದ ಕಾರುಗಳ ಪರೀಕ್ಷೆಯನ್ನು ನಿಲ್ಲಿಸಿ ಇದರ ಜವಾಬ್ದಾರಿಯನ್ನು ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸುವುದಾಗಿ ಗ್ಲೋಬಲ್‌ NCAP ಘೋಷಿಸಿದೆ. ಸದ್ಯಕ್ಕೆ, ಕಾರು ತಯಾರಕ ಸಂಸ್ಥೆಗಳ ಪಾಲಿಗೆ ಸ್ವಯಂಪ್ರೇರಿತ ಮೌಲ್ಯಮಾಪನವೆನಿಸಿರುವ ಭಾರತ್ NCAP‌ ಯು ಅಕ್ಟೋಬರ್‌ 1ರಂದು ಅಸ್ತಿತ್ವಕ್ಕೆ ಬಂದಿದ್ದು, ಅದು ಪರೀಕ್ಷಿಸಿದ ಫಲಿತಾಂಶಗಳನ್ನು ಇನ್ನಷ್ಟೇ ಬಹಿರಂಗಗೊಳಿಸಬೇಕಾಗಿದೆ. ಇದನ್ನು ಜಾರಿಗೆ ತರುವ ವೇಳೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವರಾದ ನಿತಿನ್‌ ಗಡ್ಕರಿ ಅವರು, 30ಕ್ಕಿಂತಲೂ ಹೆಚ್ಚಿನ ಕಾರುಗಳನ್ನು ಪರೀಕ್ಷೆಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನು ಸಹ ಓದಿರಿ: ಭಾರತ್ NCAP vs ಗ್ಲೋಬಲ್ NCAP: ಸಾಮ್ಯತೆಗಳು ಮತ್ತು ಭಿನ್ನತೆಗಳ ವಿವರಣೆ

ಟಾಟಾ ಮಾತ್ರವಲ್ಲದೆ ಮಾರುತಿ ಮತ್ತು ಹ್ಯುಂಡೈ ಸಂಸ್ಥೆಗಳು ತಮ್ಮ ಕೆಲವು SUV ಗಳನ್ನು ಕ್ರ್ಯಾಶ್‌ ಟೆಸ್ಟ್‌ ಗಾಗಿ ಭಾರತ್‌ NCAP ಗೆ ಕಳುಹಿಸಿದ್ದು, ಇವುಗಳ ಫಲಿತಾಂಶವು ಬೇಗನೇ ಬಹಿರಂಗಗೊಳ್ಳುವ ಸಾಧ್ಯತೆ ಇದೆ. ಭಾರತ್‌ NCAP ಯು, ಭಾರತಕ್ಕೆ ಸೀಮಿತವಾದ ಕಾರುಗಳು ಭವಿಷ್ಯದಲ್ಲಿ ನಮ್ಮ ಗ್ರಾಹಕರಿಗೆ ಇನ್ನಷ್ಟು ಸುರಕ್ಷತೆಯನ್ನು ಒದಗಿಸುವಂತೆ ಮಾಡಲೆಂದು ನಾವು ಆಶಿಸೋಣ.

ಸಂಬಂಧಿತ: ಭಾರತ್‌ NCAP ಯು ಉತ್ತಮ ಸುರಕ್ಷತೆಗಾಗಿ ಕ್ರ್ಯಾಶ್‌ ಟೆಸ್ಟ್‌ ಮಾನದಂಡಗಳನ್ನು ಪರಿಷ್ಕರಿಸುವ ಯೋಜನೆಗಳನ್ನು ಈಗಾಗಲೇ ಹೊಂದಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟಾಟಾ ಹ್ಯರಿಯರ್‌ ಡೀಸೆಲ್

was this article helpful ?

Write your Comment on Tata ಹ್ಯಾರಿಯರ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience