Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಸಫಾರಿ ಫೇಸ್‌ ಲಿಫ್ಟ್‌ ಅಟೋಮ್ಯಾಟಿಕ್‌ ಮತ್ತು ಡಾರ್ಕ್‌ ಎಡಿಷನ್‌ ವೇರಿಯಂಟ್‌ ಗಳ ಬೆಲೆಯಲ್ಲಿ ಎಷ್ಟಿದೆ ವ್ಯತ್ಯಾಸ?

ಟಾಟಾ ಸಫಾರಿ ಗಾಗಿ shreyash ಮೂಲಕ ಅಕ್ಟೋಬರ್ 20, 2023 04:20 pm ರಂದು ಪ್ರಕಟಿಸಲಾಗಿದೆ

ಗ್ರಾಹಕರು ಟಾಟಾ ಸಫಾರಿ ವಾಹನದ ಅಟೋಮ್ಯಾಟಿಕ್‌ ವೇರಿಯಂಟ್‌ ಗೆ ರೂ. 1.4 ಲಕ್ಷದಷ್ಟು ಹೆಚ್ಚಿನ ಮೊತ್ತವನ್ನು ನೀಡಬೇಕು

  • 2023 ಟಾಟಾ ಸಫಾರಿ ಅಟೋಮ್ಯಾಟಿಕ್‌ ಕಾರು ರೂ. 20.69 ರಿಂದ ರೂ. 27.34 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-‌ಶೋರೂಂ ದೆಹಲಿ).
  • ಟಾಟಾ ಸಫಾರಿಯ ಈಗಿರುವ ಮ್ಯಾನುವಲ್‌ ವೇರಿಯಂಟ್‌ ಗಳಿಗೆ ಹೋಲಿಸಿದರೆ ಇದರ ಅಟೋಮ್ಯಾಟಿಕ್‌ ವೇರಿಯಂಟ್‌ ಗಳಿಗೆ ಗ್ರಾಹಕರು ರೂ. 1.4 ಲಕ್ಷದಷ್ಟು ಹೆಚ್ಚಿನ ಹಣವನ್ನು ನೀಡಬೇಕು.
  • ಬೇಸ್‌ ಸ್ಪೆಕ್‌ ಸ್ಮಾರ್ಟ್‌ ವೇರಿಯಂಟ್‌ ಹೊರತುಪಡಿಸಿ ಅಟೋಮ್ಯಾಟಿಕ್‌ ಮತ್ತು ಡಾರ್ಕ್‌ ಎಡಿಷನ್‌ ಮಾದರಿಗಳೆರಡೂ ಸಹ ಹೆಚ್ಚಿನ ವೇರಿಯಂಟ್‌ ಗಳಲ್ಲಿ ಲಭ್ಯ.
  • ಇದು 2 ಲೀಟರ್‌ ಡೀಸೆಲ್‌ ಎಂಜಿನ್‌ (170PS/350Nm) ಅನ್ನು ಪಡೆಯಲಿದ್ದು ಇದನ್ನು 6-ಸ್ಪೀಡ್‌ ಮ್ಯಾನುವಲ್‌ ಅಥವಾ 6-ಸ್ಪೀಡ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಹೊಂದಿಸಲಾಗುತ್ತದೆ.

2023 ಟಾಟಾ ಸಫಾರಿ ಫೇಸ್‌ ಲಿಫ್ಟ್ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದ್ದು, ಪರಿಷ್ಕೃತ ವಿನ್ಯಾಸ, ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಹೆಚ್ಚಿನ ಸುರಕ್ಷತೆಯೊಂದಿಗೆ ಇದು ರಸ್ತೆಗಿಳಿಯಲಿದೆ. ಟಾಟಾ ಸಂಸ್ಥೆಯು ತನ್ನ ಈ ಪ್ರಮುಖ SUV ಯನ್ನು ಆರಂಭಿಕ ಬೆಲೆ ರೂ. 16.19 ಲಕ್ಷದಿಂದ (ಎಕ್ಸ್-ಶೋರೂಂ ದೆಹಲಿ) ಮಾರಾಟ ಮಾಡಲಿದೆ. ಆದರೂ, ಆರಂಭಿಕ ಬಿಡುಗಡೆಯ ಕಾರ್ಯಕ್ರಮದಲ್ಲಿ, ಈ ಕಾರು ತಯಾರಕ ಸಂಸ್ಥೆಯು ಇದರ ಅಟೋಮ್ಯಾಟಿಕ್‌ ಮತ್ತು ಡಾರ್ಕ್‌ ಎಡಿಷನ್‌ ವೇರಿಯಂಟ್‌ ಗಳ ಸಂಪೂರ್ಣ ಬೆಲೆಯನ್ನು ಬಹಿರಂಗಪಡಿಸಿರಲಿಲ್ಲ. ಎರಡು ದಿನಗಳ ನಂತರ, 2023 ಟಾಟಾ ಸಫಾರಿಯ ಅಟೋಮ್ಯಾಟಿಕ್‌ ಮತ್ತು ಡಾರ್ಕ್‌ ಎಡಿಷನ್‌ ವೇರಿಯಂಟ್‌ ಗಳ ಸಂಪೂರ್ಣ ಬೆಲೆ ಪಟ್ಟಿ ನಮಗೆ ದೊರೆತಿದೆ.

ಅಟೋಮ್ಯಾಟಿಕ್‌ ವೇರಿಯಂಟ್‌ ಗಳು

ವೇರಿಯಂಟ್‌ ಗಳು

ಬೆಲೆಗಳು

ಪ್ಯೂರ್+ AT

ರೂ 20.69 ಲಕ್ಷ

ಪ್ಯೂರ್+ S AT

ರೂ 21.79 ಲಕ್ಷ

ಅಡ್ವೆಂಚರ್+ AT

ರೂ 23.89 ಲಕ್ಷ

ಅಡ್ವೆಂಚರ್+ A AT

ರೂ 24.89 ಲಕ್ಷ

ಅಕಂಪ್ಲಿಷ್ಡ್‌ ಡ್ಯುವಲ್-ಟೋನ್ AT

ರೂ 25.39 ಲಕ್ಷ

ಅಕಂಪ್ಲಿಷ್ಡ್‌+ ಡ್ಯುವಲ್-ಟೋನ್ AT

ರೂ 26.89 ಲಕ್ಷ

ಅಕಂಪ್ಲಿಷ್ಡ್‌+6S ಡ್ಯುವಲ್-ಟೋನ್ AT

ರೂ 26.99 ಲಕ್ಷ

ಪ್ಯೂರ್+ ಅಟೋಮ್ಯಾಟಿಕ್‌ ವೇರಿಯಂಟ್‌ ಹೊರತುಪಡಿಸಿ, ಟಾಟಾ ಸಫಾರಿ ಫೇಸ್‌ ಲಿಫ್ಟ್‌ ಕಾರಿನ ಎಲ್ಲಾ ಅಟೋಮ್ಯಾಟಿಕ್‌ ವೇರಿಯಂಟ್‌ ಗಳ ಬೆಲೆಯು ರೂ. 1.4 ಲಕ್ಷದಷ್ಟು ಹೆಚ್ಚಾಗಿದ್ದು, ಪ್ಯೂರ್+ ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ವೇರಿಯಂಟ್‌ ನಡುವೆ ರೂ 1.3 ಲಕ್ಷದಷ್ಟು ವ್ಯತ್ಯಾಸವಿದೆ. ಟಾಟಾವು ಈ SUV ಯ ಪ್ಯೂರ್+‌ ವೇರಿಯಂಟ್‌ ನ ಅಟೋಮ್ಯಾಟಿಕ್‌ ಆಯ್ಕೆಯನ್ನು ರೂ. 20.69 ಲಕ್ಷದ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡಲಿದೆ.

ಈ SUV ಯ ಮ್ಯಾನುವಲ್‌ ವೇರಿಯಂಟ್‌ ಗಳ ಬೆಲೆಯನ್ನು ನೋಡಬೇಕಾದರೆ, ಇಲ್ಲಿ ಕ್ಲಿಕ್‌ ಮಾಡಿರಿ.

ಡಾರ್ಕ್‌ ಎಡಿಷನ್

ವೇರಿಯಂಟ್‌ ಗಳು

ಬೆಲೆಗಳು (MT)

ಬೆಲೆಗಳು (AT)

ಪ್ಯೂರ್+ S ಡಾರ್ಕ್‌

ರೂ 20.69 ಲಕ್ಷ

ರೂ 22.09 ಲಕ್ಷ

ಅಡ್ವೆಂಚರ್+ ಡಾರ್ಕ್

ರೂ 23.04 ಲಕ್ಷ

ರೂ 24.44 ಲಕ್ಷ

ಅಕಂಪ್ಲಿಷ್ಡ್‌ ಡಾರ್ಕ್

ರೂ 24.34 ಲಕ್ಷ

ರೂ 25.74 ಲಕ್ಷ

ಅಕಂಪ್ಲಿಷ್ಡ್‌+ ಡಾರ್ಕ್

ರೂ 25.84 ಲಕ್ಷ

ರೂ 27.24 ಲಕ್ಷ

ಅಕಂಪ್ಲಿಷ್ಡ್‌+ ಡಾರ್ಕ್‌ 6S

ರೂ 25.94 ಲಕ್ಷ

ರೂ 27.34 ಲಕ್ಷ

ಇನ್ನೊಂದೆಡೆ 2023 ಸಫಾರಿಯ ಡಾರ್ಕ್‌ ಎಡಿಷನ್‌ ಅನ್ನು ಪ್ಯೂರ್+ ವೇರಿಯಂಟ್‌ ನಿಂದ ನೀಡಲಾಗುತ್ತದೆ. ತಮ್ಮ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ವೇರಿಯಂಟ್‌ ಗಳಿಗೆ ಹೋಲಿಸಿದರೆ, ಈ SUV ಯ ಎಲ್ಲಾ ಡಾರ್ಕ್‌ ಅಟೋಮ್ಯಾಟಿಕ್‌ ಮಾದರಿಗಳು ರೂ. 1.4 ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿವೆ.

ಇದನ್ನು ಸಹ ಓದಿರಿ: ಟಾಟಾ ಹ್ಯಾರಿಯರ್‌ ಅಥವಾ ಹ್ಯಾರಿಯರ್‌ ಪೆಟ್ರೋಲ್‌ - ಯಾವುದು ಮೊದಲಿಗೆ ಬಿಡುಗಡೆಯಾಗಲಿದೆ?

ಗುಣವೈಶಿಷ್ಟ್ಯಗಳು

ಪರಿಷ್ಕೃತ ಟಾಟಾ ಸಫಾರಿಯು ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇ ಜೊತೆಗೆ 12.3 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌, 10.25 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, ಮಲ್ಟಿ ಕಲರ್‌ ಆಂಬಿಯೆಂಟ್‌ ಲೈಟಿಂಗ್,‌ ಟಚ್‌ ಬೇಸ್ಡ್‌ ಕಂಟ್ರೋಲ್‌ ಪ್ಯಾನೆಲ್‌ ಜೊತೆಗೆ ಡ್ಯುವಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್, 10-ಸ್ಪೀಕರ್ JBL ಸೌಂಡ್‌ ಸಿಸ್ಟಂ, ಮತ್ತು ಪವರ್ಡ್‌ ಟೇಲ್‌ ಗೇಟ್‌ ಅನ್ನು ಹೊಂದಿದೆ. ಇದು ಪ್ಯಾನೊರಾಮಿಕ್‌ ಸನ್‌ ರೂಫ್‌ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳನ್ನು (6 ಸೀಟುಗಳ ವೇರಿಯಂಟ್‌ ಗಳಲ್ಲಿ 2ನೇ ಸಾಲಿನ ಸೀಟುಗಳು) ಸಹ ಹೊಂದಿದೆ.

ಏಳು ಏರ್‌ ಬ್ಯಾಗುಗಳ ಮೂಲಕ (ಪ್ರಮಾಣಿತ 6 ಏರ್‌ ಬ್ಯಾಗ್‌ ಗಳು) ಸುರಕ್ಷತೆಗೆ ಗಮನ ನೀಡಲಾಗಿದೆ. ಅಲ್ಲದೆ ಇದರ ADAS, ಅಡಾಪ್ಟಿವ್‌ ಕ್ರೂಸ್‌ ಕಂಟ್ರೋಲ್‌ ಅನ್ನು ಹೊಂದಿದೆ. EBD ಜೊತೆಗೆ ABS, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್ (ESC),‌ ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS), 360 ಡಿಗ್ರಿ ಕ್ಯಾಮರಾ, ಲೇನ್‌ ಡಿಪಾರ್ಚರ್‌ ವಾರ್ನಿಂಗ್,‌ ಬ್ಲೈಂಡ್‌ ಸ್ಪಾಟ್‌ ಡಿಟೆಕ್ಷನ್‌ ಮತ್ತು ಅಟೋ ಎಮರ್ಜೆನ್ಸಿ ಬ್ರೇಕಿಂಗ್‌ ಇತ್ಯಾದಿ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಇದು ಹೊಂದಿದೆ.

ಸಿಂಗಲ್‌ ಡೀಸೆಲ್‌ ಪವರ್‌ ಟ್ರೇನ್

ಟಾಟಾ ಸಂಸ್ಥೆಯು ಸಫಾರಿ ಫೇಸ್‌ ಲಿಫ್ಟ್‌ ಅನ್ನು 170PS ಮತ್ತು 350Nm ಉಂಟು ಮಾಡುವ ಹಾಗೂ 6-ಸ್ಪೀಡ್‌ ಮ್ಯಾನುವಲ್‌ ಅಥವಾ 6-ಸ್ಪೀಡ್‌ AMT ಜೊತೆಗೆ 2-ಲೀಟರ್‌ ಡೀಸೆಲ್ ಎಂಜಿನ್‌ ಅನ್ನೇ ಹೊರತರಲಿದೆ. ಸದ್ಯಕ್ಕೆ ಪೆಟ್ರೋಲ್‌ ಎಂಜಿನ್‌ ಲಭ್ಯವಿಲ್ಲ. ಆದರೆ ಇದು 2024ರಲ್ಲಿ ಹೊರಬರುವ ನಿರೀಕ್ಷೆ ಇದೆ.

ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು

2023 ಟಾಟಾ ಸಫಾರಿ ಕಾರು ರೂ. 16.19 ರಿಂದ ರೂ. 27.34 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-‌ಶೋರೂಂ ದೆಹಲಿ). ಇದು ಮಹೀಂದ್ರಾ XUV700, MG ಹೆಕ್ಟರ್‌ ಪ್ಲಸ್, ಮತ್ತು ಹ್ಯುಂಡೈ ಅಲ್ಕಜಾರ್‌ ಜೊತೆಗೆ ಸ್ಪರ್ಧಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸಫಾರಿ ಡೀಸೆಲ್

Share via

Write your Comment on Tata ಸಫಾರಿ

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ಫೇಸ್ ಲಿಫ್ಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ