• English
  • Login / Register

MG Astorನ 100- ಇಯರ್ ಲಿಮಿಟೆಡ್ ಎಡಿಷನ್ ವಿವರಗಳು ಇಲ್ಲಿವೆ

published on ಮೇ 22, 2024 07:08 pm by ansh for ಎಂಜಿ ಅಸ್ಟೋರ್

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೆಚ್ಚಿನ ಬದಲಾವಣೆಗಳು ಕಾಸ್ಮೆಟಿಕ್ ಆಗಿದ್ದರೂ ಕೂಡ, ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ನೀಡಿರುವ ಹಸಿರು ಥೀಮ್ ಇಲ್ಲಿ ವಿಶೇಷ ಫೀಚರ್ ಆಗಿದೆ.

MG Astor 100-Year Limited Edition

MG ಆಸ್ಟರ್ ಈಗ ಹೆಕ್ಟರ್, ಕಾಮೆಟ್ EV ಮತ್ತು ZS EV ಜೊತೆಗೆ 100-ವರ್ಷಗಳ ಲಿಮಿಟೆಡ್ ಎಡಿಷನ್ ಅನ್ನು ಪಡೆದಿದೆ. ಈ ವಿಶೇಷ ಎಡಿಷನ್ ಮಾಡೆಲ್ ಗಳು ಈಗ ದೇಶಾದ್ಯಂತ ಡೀಲರ್‌ಶಿಪ್‌ಗಳಿಗೆ ಆಗಮಿಸುತ್ತಿವೆ. ನೀವು ಆಸ್ಟರ್ ವಿಶೇಷ ಎಡಿಷನ್ ಅನ್ನು ಖರೀದಿಸಲು ನೋಡುತ್ತಿದ್ದರೆ, ಹೆಚ್ಚಿನ ವಿವರಗಳಿಗಾಗಿ ಈ ಗ್ಯಾಲರಿಯನ್ನು ಪರಿಶೀಲಿಸಬಹುದು.

 ಹೊರಭಾಗ

MG Astor 100-Year Limited Edition Front

 ಈ ವಿಶೇಷ ಎಡಿಷನ್ "ಎವರ್‌ಗ್ರೀನ್" ಶೇಡ್ ನೊಂದಿಗೆ ಬರುತ್ತದೆ, ಮತ್ತು ಇದು ಬ್ರಿಟಿಷ್ ರೇಸಿಂಗ್ ಗ್ರೀನ್ ಬಣ್ಣದಿಂದ ಪ್ರೇರಿತವಾಗಿದೆ. ಇದು ಬ್ಲಾಕ್ ರೂಫ್ ಅನ್ನು ಹೊಂದಿದೆ ಮತ್ತು ಗ್ರಿಲ್ ಮತ್ತು ಬಂಪರ್‌ನಂತಹ ಇತರ ಭಾಗಗಳನ್ನು ಸಾಮಾನ್ಯ ಕ್ರೋಮ್ ಬದಲಿಗೆ ಡಾರ್ಕ್ ಕ್ರೋಮ್‌ನಲ್ಲಿ ನೀಡಲಾಗಿದೆ.

MG Astor 100-Year Limited Edition Side

 ಸೈಡ್ ನಲ್ಲಿ ಹೆಚ್ಚು ಬದಲಾವಣೆ ಮಾಡಲಾಗಿಲ್ಲ, ಆದರೆ ಇದು ಆಲ್-ಬ್ಲಾಕ್ ಅಲೊಯ್ ವೀಲ್ಸ್, ORVM ಸೆಟ್ ಅಪ್ ಮತ್ತು ರೂಫ್ ರೈಲ್ಸ್ ಅನ್ನು ಪಡೆಯುತ್ತದೆ.

MG Astor 100-Year Limited Edition Rear

 ಹಿಂಭಾಗದಲ್ಲಿ, ಟೈಲ್‌ಗೇಟ್‌ನಲ್ಲಿ '100-ಇಯರ್' ಬ್ಯಾಡ್ಜ್ ಹೊರತುಪಡಿಸಿ ಯಾವುದೇ ಪ್ರಮುಖ ವಿನ್ಯಾಸ ಬದಲಾವಣೆಗಳಿಲ್ಲ.

 ಒಳಭಾಗ

MG Astor 100-Year Limited Edition Dashboard

 ಕ್ಯಾಬಿನ್ ಬ್ಲಾಕ್ ಮತ್ತು ಗ್ರೇ ಬಣ್ಣವನ್ನು ಹೊಂದಿದೆ, ಮತ್ತು ಡ್ಯಾಶ್‌ಬೋರ್ಡ್ ಗೆ ಆಲ್-ಬ್ಲಾಕ್ ಲುಕ್ ನೀಡಲಾಗಿದೆ.

MG Astor 100-Year Limited Edition Front Seats
MG Astor 100-Year Limited Edition Rear Seats

 ಮುಂಭಾಗ ಮತ್ತು ಹಿಂಭಾಗದ ಸೀಟ್ ಗಳು ಕಪ್ಪು ಮತ್ತು ಹಸಿರು ಕವರ್‌ಗಳನ್ನು ಹೊಂದಿದ್ದು, ಮುಂಭಾಗದ ಸೀಟ್ ಗಳ ಹೆಡ್‌ರೆಸ್ಟ್‌ಗಳಲ್ಲಿ 100-ಇಯರ್ ಬ್ಯಾಡ್ಜ್ ಅನ್ನು ನೀಡಲಾಗಿದೆ.

MG Astor 100-Year Limited Edition Touchscreen

 ಇಲ್ಲಿ ಪ್ರಮುಖ ಬದಲಾವಣೆಯನ್ನು ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ಮಾಡಲಾಗಿದೆ, ಇದು ಈಗ ಕಾರಿನ ಥೀಮ್‌ಗೆ ಮ್ಯಾಚ್ ಆಗುವ ಹಸಿರು-ಬಣ್ಣದ ಸ್ಕ್ರೀನ್ ಮತ್ತು ಬಟನ್‌ಗಳನ್ನು ಹೊಂದಿದೆ.

 ಪವರ್‌ಟ್ರೇನ್

MG Astor 100-Year Limited Edition

 MG ಆಸ್ಟರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಯ್ಕೆಯೊಂದಿಗೆ ಬರುವ 1.5-ಲೀಟರ್ ಪೆಟ್ರೋಲ್ ಯೂನಿಟ್ (110 PS ಮತ್ತು 144 Nm) ಮತ್ತು ಕೇವಲ 6-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಬರುವ 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (140 PS ಮತ್ತು 220 Nm). ಆದರೆ, 100-ವರ್ಷದ ಎಡಿಷನ್ ಅನ್ನು ನೀವು 1.5-ಲೀಟರ್ ಪೆಟ್ರೋಲ್ ಯೂನಿಟ್ ಆಯ್ಕೆಯೊಂದಿಗೆ ಮಾತ್ರ ಪಡೆಯಬಹುದು.

 ಫೀಚರ್ ಗಳು

MG Astor 100-Year Limited Edition

 ಇದು SUV ಯ ಶಾರ್ಪ್ ಪ್ರೊ ವೇರಿಯಂಟ್ ಅನ್ನು ಆಧರಿಸಿರುವ ಕಾರಣ, ವಿಶೇಷ ಎಡಿಷನ್ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, 6-ವೇ ಪವರ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಮುಂತಾದ ಫೀಚರ್ ಗಳನ್ನು ಪಡೆಯುತ್ತದೆ.

 ಇದನ್ನು ಕೂಡ ಓದಿ: ಟಾಟಾ ಕರ್ವ್ವ್ ಪ್ರೊಡಕ್ಷನ್-ಸ್ಪೆಕ್ ಇಂಟೀರಿಯರ್ ಅನ್ನು ಮೊದಲ ಬಾರಿಗೆ ಕ್ಯಾಮರಾದಲ್ಲಿ ನೋಡಲಾಗಿದೆ

 ಸುರಕ್ಷತೆಯ ವಿಷಯದಲ್ಲಿ, ಇದು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು 360 ಡಿಗ್ರಿ ಕ್ಯಾಮೆರಾಗಳನ್ನು ಪಡೆಯುತ್ತದೆ.

 ಬೆಲೆ

MG Astor 100-Year Limited Edition

 ಈ ವಿಶೇಷ ಎಡಿಷನ್ ಆಸ್ಟರ್‌ನ ಮಿಡ್-ಸ್ಪೆಕ್ ಶಾರ್ಪ್ ಪ್ರೊ ವೇರಿಯಂಟ್ ಅನ್ನು ಆಧರಿಸಿದೆ ಮತ್ತು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವೇರಿಯಂಟ್ ಈ ಎರಡರಲ್ಲೂ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ. ಈ ವಿಶೇಷ ಎಡಿಷನ್ ಬೆಲೆಯು ರೂ 14.81 ಲಕ್ಷದಿಂದ ರೂ 16.08 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ. ಎಂಜಿ ಆಸ್ಟರ್ ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಟೊಯೊಟಾ ಹೈರ್ಡರ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ ಇವುಗಳಿಗೆ ಪ್ರತಿಸ್ಪರ್ಧಿಯಾಗಿದೆ.

 ಇನ್ನಷ್ಟು ಓದಿ: ಆಸ್ಟರ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ಅಸ್ಟೋರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience