• English
  • Login / Register

ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯಲ್ಲಿ Citroen Basalt ನ ಅನಾವರಣ, ಆಗಸ್ಟ್‌ನಲ್ಲಿ ಬಿಡುಗಡೆ ಸಾಧ್ಯತೆ

ಸಿಟ್ರೊನ್ ಬಸಾಲ್ಟ್‌ ಗಾಗಿ shreyash ಮೂಲಕ ಜುಲೈ 26, 2024 06:32 pm ರಂದು ಪ್ರಕಟಿಸಲಾಗಿದೆ

  • 35 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಿಟ್ರೊಯೆನ್ ಬಸಾಲ್ಟ್‌ನ ಉತ್ಪಾದನಾ ಆವೃತ್ತಿಯು ಅದರ ಪರಿಕಲ್ಪನೆಯ ಆವೃತ್ತಿಯಂತೆಯೇ ಕಾಣುತ್ತದೆ, ಅದರ ಕೂಪ್ ರೂಫ್‌ಲೈನ್ ಮತ್ತು ಸ್ಪ್ಲಿಟ್ ಗ್ರಿಲ್‌ ಇದರ ಪ್ರಮುಖ ಹೈಲೈಟ್‌ ಆಗಿದೆ

Citroen Basalt Breaks Cover In Production-ready Guise, Launch Expected In August 2024

  • ಸಿಟ್ರೊಯೆನ್ ಭಾರತದಲ್ಲಿ ಐದನೇ ಕೊಡುಗೆಯಾಗಿ ಬಸಾಲ್ಟ್ ಅನ್ನು ನೀಡುತ್ತಿದೆ.
  • ಹೊರಭಾಗದ ಹೈಲೈಟ್‌ಗಳು ಎಕ್ಸ್-ಆಕಾರದ ಸ್ಪ್ಲಿಟ್ ಎಲ್‌ಇಡಿ ಡಿಆರ್‌ಎಲ್‌ಗಳು, ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು ಮತ್ತು ಕೂಪ್ ರೂಫ್‌ಲೈನ್ ಅನ್ನು ಒಳಗೊಂಡಿವೆ.
  • ಡ್ಯುಯಲ್ ಡಿಸ್‌ಪ್ಲೇಗಳನ್ನು ಒಳಗೊಂಡಂತೆ C3 ಏರ್‌ಕ್ರಾಸ್ ತರಹದ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿದೆ.
  • ಕ್ರೂಸ್ ಕಂಟ್ರೋಲ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.
  • ಸಿ3 ಏರ್‌ಕ್ರಾಸ್‌ನಂತೆ ಅದೇ 110 ಪಿಎಸ್‌ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. 
  • 10 ಲಕ್ಷದಿಂದ (ಎಕ್ಸ್ ಶೋರೂಂ) ಬೆಲೆಗಳು ಇರಬಹುದೆಂದು ನಿರೀಕ್ಷಿಸಲಾಗಿದೆ.

 ಕೂಪ್‌-ಎಸ್‌ಯುವಿಯಾಗಿರುವ ಟಾಟಾ ಕರ್ವ್‌ಗೆ ಫ್ರೆಂಚ್ ವಾಹನ ತಯಾರಕ ಕಂಪೆನಿಯಾದ ಸಿಟ್ರೊಯೆನ್‌ನಿಂದ  ಬಸಾಲ್ಟ್ ನೇರ ಪ್ರತಿಸ್ಪರ್ಧಿಯಾಗಿದೆ. ಹಾಗೆಯೇ, ಇದು ಈ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಸಾಲ್ಟ್ ಎಂಬುದು ಸಿ3 ಏರ್‌ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿ ಆಧಾರಿತ ಕೂಪ್-ಎಸ್‌ಯುವಿಯಾಗಿದೆ. ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನವೇ, ಸಿಟ್ರೊಯೆನ್ ಉತ್ಪಾದನೆಗೆ ಸಿದ್ಧವಾಗಿರುವ ಬಸಾಲ್ಟ್‌ನ ಹೊರಭಾಗದ ಫೋಟೋಗಳನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದೆ.

C3 ಏರ್‌ಕ್ರಾಸ್‌ನ ಕೂಪ್ ಆವೃತ್ತಿ

Citroen Basalt Breaks Cover In Production-ready Guise, Launch Expected In August 2024

ಸಿಟ್ರೊಯೆನ್ ಬಸಾಲ್ಟ್ ಒಂದು ಎಸ್‌ಯುವಿ-ಕೂಪ್ ಆಗಿದ್ದು ಅದು ಅಸ್ತಿತ್ವದಲ್ಲಿರುವ C3 ಏರ್‌ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ವಿನ್ಯಾಸದ ಸೂಚನೆಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಇದು ಎಕ್ಸ್‌-ಆಕಾರದ ಸ್ಪ್ಲಿಟ್ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಮತ್ತು ಸ್ಪ್ಲಿಟ್ ಗ್ರಿಲ್ ಅನ್ನು ಹೊಂದಿದೆ, ಇದನ್ನು ನಾವು ಸಿ3 ಏರ್‌ಕ್ರಾಸ್‌ನಲ್ಲಿಯೂ ಗಮನಿಸಬಹುದು. ಬದಿಯಿಂದ ಗಮನಿಸುವಾಗ, ಇದು ಕೂಪ್ ರೂಫ್‌ಲೈನ್ ಮತ್ತು ಡ್ಯುಯಲ್-ಟೋನ್ ಫಿನಿಶ್ ಮಾಡಲಾದ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ, ಇದು ಸಂಪೂರ್ಣ ಕಪ್ಪು ಬಣ್ಣದ ಚಕ್ರಗಳನ್ನು ಹೊಂದಿರುವ ಪರಿಕಲ್ಪನೆ ಆವೃತ್ತಿಗಿಂತ ಭಿನ್ನವಾಗಿದೆ.

ಸಿ3 ಹ್ಯಾಚ್‌ಬ್ಯಾಕ್ ಮತ್ತು ಸಿ3 ಏರ್‌ಕ್ರಾಸ್ ಎಸ್‌ಯುವಿಯಂತಹ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಲ್ಲಿ ನೀಡಲಾದ ಹಳೆಯ-ಶೈಲಿಯ ಫ್ಲಾಪ್-ಮಾದರಿಯ ಡೋರ್ ಹ್ಯಾಂಡಲ್‌ಗಳನ್ನು ನೀಡುವುದನ್ನು ಇದರಲ್ಲಿಯು ಮುಂದುವರೆಸಿದೆ. ಹಿಂಭಾಗದಲ್ಲಿ, ಇದು ಸಮತಲವಾದ ಎಲ್ಇಡಿ ಟೈಲ್ ಲೈಟ್‌ಗಳನ್ನು ಮತ್ತು ಸಂಪೂರ್ಣ ಕಪ್ಪು ಬಣ್ಣದ ಬಂಪರ್ ಅನ್ನು ಪಡೆಯುತ್ತದೆ, ಇದು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಸಹ ಒಳಗೊಂಡಿದೆ.

ಕ್ಯಾಬಿನ್‌ & ಫೀಚರ್‌ಗಳು

ಸಿಟ್ರೊಯೆನ್ ಬಸಾಲ್ಟ್‌ನ ಒಳಭಾಗವನ್ನು ಸಂಪೂರ್ಣವಾಗಿ ಅನಾವರಣಗೊಳಿಸದಿದ್ದರೂ, ಇತ್ತೀಚಿನ ಟೀಸರ್‌ಗಳಲ್ಲಿ ಗಮನಿಸುವಾಗ ಇದು ಸಿ3 ಏರ್‌ಕ್ರಾಸ್‌ನಂತೆಯೇ ಇರುತ್ತದೆ. ಬಸಾಲ್ಟ್ ಬಿಳಿ ಲೆಥೆರೆಟ್ ಕುಶನ್‌ಗಳನ್ನು ಪಡೆಯಲಿದೆ ಎಂದು ವೀಡಿಯೊ ಟೀಸರ್ ದೃಢಪಡಿಸಿದೆ.

ಬಸಾಲ್ಟ್ ಸಿ3 ಏರ್‌ಕ್ರಾಸ್‌ನಿಂದ 10.2-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಎರವಲು ಪಡೆಯುತ್ತದೆ. ಹಾಗೆಯೇ C3 ಏರ್‌ಕ್ರಾಸ್‌ನಲ್ಲಿ ಲಭ್ಯವಿಲ್ಲದ ಆಟೋಮ್ಯಾಟಿಕ್‌ ಎಸಿ ಅನ್ನು ಸಹ ಬಸಾಲ್ಟ್ ಪಡೆಯುತ್ತದೆ ಮತ್ತು ಇದು ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯಂತಹ ಫೀಚರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿವೆ.

C3 ಏರ್‌ಕ್ರಾಸ್‌ನಂತೆ ಅದೇ ಎಂಜಿನ್ ಬಳಕೆ

ಬಸಾಲ್ಟ್ ಸಿ3 ಏರ್‌ಕ್ರಾಸ್‌ನಂತೆಯೇ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದೆ. ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

ಎಂಜಿನ್‌

1.2-ಲೀಟರ್‌ ಟರ್ಬೋ ಪೆಟ್ರೋಲ್‌

ಪವರ್‌

110 ಪಿಎಸ್‌

ಟಾರ್ಕ್‌

205 ಎನ್‌ಎಮ್‌ ವರೆಗೆ

ಗೇರ್‌ಬಾಕ್ಸ್‌

6-ಸ್ಪೀಡ್‌ ಮ್ಯಾನುಯಲ್‌, 6-ಸ್ಪೀಡ್‌ ಎಟಿ

ಎಟಿ: ಟಾರ್ಕ್‌ ಕನ್ವರ್ಟರ್‌ ಆಟೋಮ್ಯಾಟಿಕ್‌

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಸಿಟ್ರೊಯೆನ್ ಬಸಾಲ್ಟ್‌ನ ಎಕ್ಸ್ ಶೋರೂಂ ಬೆಲೆಗಳು 10 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಇದು ಟಾಟಾ ಕರ್ವ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಇದರೊಂದಿಗೆ ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್ ಮತ್ತು ಸ್ಕೋಡಾ ಕುಶಾಕ್‌ಗಳಿಗೆ ಸ್ಟೈಲಿಶ್ ಪರ್ಯಾಯವಾಗಲಿದೆ.

ಹೆಚ್ಚಿನ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್‌ ಚಾನೆಲ್‌ ಅನ್ನು ಫಾಲೋ ಮಾಡಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Citroen ಬಸಾಲ್ಟ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience