7.99 ಲಕ್ಷ ರೂ. ಬೆಲೆಗೆ Citroen Basalt ಬಿಡುಗಡೆ
ಸಿಟ್ರೊನ್ ಬಸಾಲ್ಟ್ ಗಾಗಿ samarth ಮೂಲಕ ಆಗಸ್ಟ್ 09, 2024 01:08 pm ರಂದು ಪ್ರಕಟಿಸಲಾಗಿದೆ
- 64 Views
- ಕಾಮೆಂಟ್ ಅನ್ನು ಬರೆಯಿರಿ
ಗ್ರಾಹಕರು ಇಂದಿನಿಂದ 11,001 ರೂ.ಗೆ ಎಸ್‌ಯುವಿ-ಕೂಪ್ ಅನ್ನು ಬುಕ್ ಮಾಡಬಹುದು
- ಅಕ್ಟೋಬರ್ 31 ರವರೆಗಿನ ಎಲ್ಲಾ ಬುಕಿಂಗ್ ಮತ್ತು ಡೆಲಿವರಿಗಳಿಗೆ ಮಾತ್ರ ಪರಿಚಯಾತ್ಮಕ ಬೆಲೆಗಳು ಮಾನ್ಯವಾಗಿರುತ್ತವೆ.
- ಹೊರಭಾಗದ ಅಂಶಗಳು ಎಲ್ಇಡಿ ಲೈಟಿಂಗ್, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು ಇಳಿಜಾರಾದ ರೂಫ್‌ಲೈನ್ ಸೇರಿವೆ.
- 10.2-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ.
- ಬಸಾಲ್ಟ್ 1.2-ಲೀಟರ್ N/A ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಬ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.
ಅನಾವರಣಗೊಂಡ ಕೆಲವೇ ದಿನಗಳಲ್ಲಿ, ಸಿಟ್ರೊಯೆನ್ ಬಸಾಲ್ಟ್ ಅನ್ನು ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಇಂಧನದಿಂದ ಚಾಲಿತ ಎಂಜಿನ್ (ICE) ಜೊತೆಗೆ ಸಿಟ್ರೊಯೆನ್‌ನ ಮೊದಲ ಮಾಸ್-ಮಾರ್ಕೆಟ್ ಎಸ್‌ಯುವಿ-ಕೂಪ್ ಆಗಿದೆ, ಇದರ ಭಾರತದಾದ್ಯಂತ ಇದರ ಪರಿಚಯಾತ್ಮಕ, ಎಕ್ಸ್-ಶೋರೂಮ್ ಬೆಲೆಯು ರೂ 7.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಸಿಟ್ರೊಯೆನ್ ಅಧಿಕೃತವಾಗಿ ಟಾಪ್-ಸ್ಪೆಕ್ ಆವೃತ್ತಿಯ ಬೆಲೆಗಳನ್ನು ತಿಳಿಸದಿದ್ದರೂ, ನಾವು ಅದನ್ನು ಕಾನ್ಫಿಗರೇಟರ್‌ನಲ್ಲಿ ಹಿಡಿದಿದ್ದೇವೆ, ಇದರ ಬೆಲೆ 13.57 ಲಕ್ಷ ರೂ. ಎಂದು ಹೇಳಲಾಗಿದೆ.
ಫ್ರೆಂಚ್ ಮೂಲದ ಈ ಕಾರು ತಯಾರಕ ಕಂಪೆನಿಯು ಈಗ ಎಸ್‌ಯುವಿ-ಕೂಪ್‌ಗಾಗಿ 11,001 ರೂ.ಗೆ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಅಕ್ಟೋಬರ್ 31 ರವರೆಗೆ ಮಾಡಲಾದ ಎಲ್ಲಾ ಬುಕಿಂಗ್ ಮತ್ತು ಡೆಲಿವರಿಗಳಿಗೆ ಪರಿಚಯಾತ್ಮಕ ಬೆಲೆಗಳು ಮಾನ್ಯವಾಗಿರುತ್ತವೆ. ಇದರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:
ಹೊರಭಾಗದ ಕುರಿತು
ಬಸಾಲ್ಟ್ ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಅನ್ನು ಹೋಲುತ್ತದೆ, ಎಲ್‌ಇಡಿ ಡಿಆರ್‌ಎಲ್‌ಗಳಿಗೆ ಒಂದೇ ರೀತಿಯ ವಿ-ಆಕಾರದ ಪ್ಯಾಟರ್ನ್ ಅನ್ನು ಮತ್ತು ಸ್ಪ್ಲಿಟ್ ಗ್ರಿಲ್ ಅನ್ನು ಸಹ ಹೊಂದಿದೆ. ಇದು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ, ಇದನ್ನು ಶೀಘ್ರದಲ್ಲೇ ಸಿ3 ಏರ್‌ಕ್ರಾಸ್‌ನಲ್ಲಿಯೂ ಒದಗಿಸಲಾಗುವುದು. ಮುಂಭಾಗದ ಬಂಪರ್ ಕೆಂಪು ಎಕ್ಸೆಂಟ್‌ನೊಂದಿಗೆ ಸಿಲ್ವರ್ ಫಿನಿಶ್ ಅನ್ನು, ಸ್ಪೋರ್ಟಿ ಅಂಶವನ್ನು ಸೇರಿಸುತ್ತದೆ.
ಬದಿಯಿಂದ ಗಮನಿಸುವಾಗ, ಇದು ಕೂಪ್ ರೂಫ್‌ಲೈನ್ ಅನ್ನು ಪಡೆಯುತ್ತದೆ ಮತ್ತು 16-ಇಂಚಿನ ಡ್ಯುಯಲ್-ಟೋನ್‌ನಲ್ಲಿ ಫಿನಿಶ್ ಮಾಡಲಾದ ಅಲಾಯ್ ವೀಲ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ, ಇದು ಸಂಪೂರ್ಣ ಕಪ್ಪು ಬಣ್ಣದ ಬಂಪರ್‌ಗಳೊಂದಿಗೆ ಸುತ್ತುವರಿದ ಹ್ಯಾಲೊಜೆನ್ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ.
ಬಸಾಲ್ಟ್‌ನ ಗಾತ್ರಗಳು ಈ ಕೆಳಗಿನಂತಿವೆ:
ಗಾತ್ರಗಳು |
|
ಉದ್ದ |
4352 ಮಿ.ಮೀ |
ಅಗಲ (ORVM ಸೇರಿಸದೆ) |
1765 ಮಿ.ಮೀ |
ಎತ್ತರ (ಪ್ರಯಾಣಿಕರಿಲ್ಲದಿದ್ದಾಗ) |
1593 ಮಿ.ಮೀ |
ವ್ಹೀಲ್‌ಬೇಸ್ |
2651 ಮಿ.ಮೀ |
ಬೂಟ್ ಸ್ಪೇಸ್ |
470 ಲೀಟರ್‌ಗಳು |
ಸಿಟ್ರೊಯೆನ್ ಬಸಾಲ್ಟ್ ಅನ್ನು ಪೋಲಾರ್ ವೈಟ್, ಸ್ಟೀಲ್ ಗ್ರೇ, ಪ್ಲಾಟಿನಂ ಗ್ರೇ, ಕಾಸ್ಮೊ ಬ್ಲೂ ಮತ್ತು ಗಾರ್ನೆಟ್ ರೆಡ್ ಎಂಬ ಐದು ಮೊನೊಟೋನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಹಾಗೆಯೇ, ಇದು ಪೋಲಾರ್ ವೈಟ್ ಜೊತೆಗೆ ಪ್ಲಾಟಿನಂ ಗ್ರೇ ರೂಫ್ ಮತ್ತು ಗಾರ್ನೆಟ್ ರೆಡ್ ಜೊತೆಗೆ ಪೆರ್ಲಾ ನೇರಾ ಬ್ಲ್ಯಾಕ್ ರೂಫ್ ಎಂಬ ಎರಡು ಡ್ಯುಯಲ್-ಟೋನ್ ಆಯ್ಕೆಗಳಲ್ಲಿಯೂ ಲಭ್ಯವಿದೆ.
ಕ್ಯಾಬಿನ್, ಫೀಚರ್‌ಗಳು ಮತ್ತು ಸುರಕ್ಷತೆ
ಬಸಾಲ್ಟ್‌ನ ಕ್ಯಾಬಿನ್ ತನ್ನ ಎಸ್‌ಯುವಿ ಸಹೋದರ ಸಿ3 ಏರ್‌ಕ್ರಾಸ್‌ನಿಂದ ಒಂದೇ ರೀತಿಯ ಡ್ಯಾಶ್‌ಬೋರ್ಡ್, ಡ್ಯುಯಲ್ ಡಿಜಿಟಲ್ ಡಿಸ್‌ಪ್ಲೇಗಳು (10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ) ಮತ್ತು AC ಎಂಟ್‌ಗಳ ವಿನ್ಯಾಸವನ್ನು ಒಳಗೊಂಡಂತೆ ಕೆಲವು ಫೀಚರ್‌ಗಳನ್ನು ಎರವಲು ಪಡೆಯುತ್ತದೆ. ಇತರ ಫೀಚರ್‌ಗಳು ಆಟೋಮ್ಯಾಟಿಕ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಮತ್ತು ಹಿಂಭಾಗದ ಸೀಟ್‌ಗಳಿಗೆ (87 ಮಿ.ಮೀ ವರೆಗೆ) ಹೊಂದಾಣಿಕೆ ಮಾಡಬಹುದಾದ ಅಂಡರ್-ತೈ ಸಪೋರ್ಟ್ ಅನ್ನು ಒಳಗೊಂಡಿವೆ.
ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.
ಪವರ್‌ಟ್ರೈನ್
ಬಸಾಲ್ಟ್ ಅನ್ನು ಈ ಪವರ್‌ಟ್ರೈನ್ ವಿಶೇಷಣಗಳೊಂದಿಗೆ ನೀಡಲಾಗುತ್ತದೆ:
ವಿಶೇಷಣಗಳು |
1.2-ಲೀಟರ್ N/A ಪೆಟ್ರೋಲ್ |
1.2-ಲೀಟರ್ ಟರ್ಬೋ ಪೆಟ್ರೋಲ್ |
ಪವರ್ |
82 ಪಿಎಸ್ |
110 ಪಿಎಸ್ |
ಟಾರ್ಕ್ |
115 ಎನ್‌ಎಮ್ |
205 ಎನ್‌ಎಮ್‌ವರೆಗೆ |
ಗೇರ್‌ಬಾಕ್ಸ್ |
5-ಸ್ಪೀಡ್ ಮ್ಯಾನುಯಲ್ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ ಆಟೋಮ್ಯಾಟಿಕ್ |
ಕ್ಲೈಮ್ ಮಾಡಲಾದ ಮೈಲೇಜ್ |
ಪ್ರತಿ ಲೀ.ಗೆ 18 ಕಿ.ಮೀ |
ಪ್ರತಿ ಲೀ.ಗೆ 19.5 ಕಿ.ಮೀ, ಪ್ರತಿ ಲೀ.ಗೆ 18.7 ಕಿ.ಮೀ |
ಪ್ರತಿಸ್ಪರ್ಧಿಗಳು
ಇದು ಟಾಟಾ ಕರ್ವ್‌ಗೆ ನೇರಪ್ರತಿಸ್ಪರ್ಧಿಯಾಗಿದ್ದು, ಹಾಗೆಯೇ ಇದರೊಂದಿಗೆ ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಹ್ಯುಂಡೈ ಕ್ರೆಟಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಕಿಯಾ ಸೆಲ್ಟೋಸ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್‌ಗಳಿಗೆ ಸೊಗಸಾದ ಪರ್ಯಾಯವಾಗಿದೆ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡುವುದನ್ನು ಮಿಸ್ ಮಾಡ್ಬೇಡಿ.