ಜಾಗತಿಕವಾಗಿ ಬಿಡುಗಡೆಯಾದ Citroen Basalt Vision, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ
ಸಿಟ್ರೊನ್ ಬಸಾಲ್ಟ್ ಗಾಗಿ shreyash ಮೂಲಕ ಮಾರ್ಚ್ 27, 2024 07:29 pm ರಂದು ಪ್ರಕಟಿಸಲಾಗಿದೆ
- 55 Views
- ಕಾಮೆಂಟ್ ಅನ್ನು ಬರೆಯಿರಿ
ಸಿಟ್ರೊಯೆನ್ ಬಸಾಲ್ಟ್ ವಿಷನ್ ಪರಿಕಲ್ಪನೆಯು ಅದರ ವಿನ್ಯಾಸವನ್ನು ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಾದ C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್ SUV ಗಳೊಂದಿಗೆ ಹಂಚಿಕೊಳ್ಳುತ್ತದೆ
- ಸಿಟ್ರೊಯೆನ್ ಬಸಾಲ್ಟ್ ವಿಷನ್ ಕೂಪ್ ಎಸ್‌ಯುವಿಯು C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್ SUV ಯಂತೆಯೇ ಅದೇ CMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
- ಇದು ಭಾರತದಲ್ಲಿ ಅಸ್ತಿತ್ವದಲ್ಲಿರುವ C3 ರೇಂಜ್‌ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ.
- ಭಾರತದಲ್ಲಿ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಕಾರುಗಳಲ್ಲಿ ಬಳಸಿದ ಅದೇ 110 PS 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ.
- ಭಾರತದಲ್ಲಿ 2024ರ ದ್ವಿತೀಯಾರ್ಧದಲ್ಲಿ ಬಸಾಲ್ಟ್ ವಿಷನ್ ಕೂಪೆ ಎಸ್‌ಯುವಿಯನ್ನು ಸಿಟ್ರೊಯೆನ್ ಬಿಡುಗಡೆ ಮಾಡಲಿದೆ.
- ಇದರ ಎಕ್ಸ್ ಶೋರೂಂ ಬೆಲೆಗಳು 8 ಲಕ್ಷ ರೂ.ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
Citroen Basalt Vision ಪರಿಕಲ್ಪನೆಯು ಫ್ರೆಂಚ್ ವಾಹನ ತಯಾರಕರಿಂದ ಎಲ್ಲಾ-ಹೊಸ ಕೂಪ್ ಎಸ್‌ಯುವಿಯಾಗಿದ್ದು, ಅದರ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿದೆ. ಈ ಹಿಂದೆ ಇದನ್ನು ಸಿಟ್ರೊಯೆನ್ C3X ಎಂದು ಕರೆಯಲಾಗುತ್ತಿತ್ತು, ಬಸಾಲ್ಟ್ ವಿಷನ್ ಅನ್ನು ಭಾರತೀಯ ಮತ್ತು ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಹೊಸ ಕೂಪ್ ಎಸ್‌ಯುವಿಯು ಸಿಟ್ರೊಯೆನ್ C3 ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ನಂತಹ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಂತೆಯೇ ಅದೇ CMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಹೇಗೆ ಕಾಣುತ್ತದೆ ಮತ್ತು ಇದು ಏನೆಲ್ಲಾ ಒಳಗೊಂಡಿದೆ ಎಂಬುದನ್ನು ನೋಡೋಣ.
ವಿನ್ಯಾಸ
ಫೆಸಿಯಾವು (ಬಂಪರ್‌ನ ಕವರ್) ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಾದ C3 ಮತ್ತು C3 ಏರ್‌ಕ್ರಾಸ್‌ನಿಂದ ಪ್ರೇರಿತವಾಗಿದೆ. ಇದು ಕ್ರೋಮ್‌ನಲ್ಲಿ ಫಿನಿಶ್ ಮಾಡಿದ ಅದೇ ಸ್ಪ್ಲಿಟ್ ಗ್ರಿಲ್ ಅನ್ನು ಮತ್ತು ಸ್ಪ್ಲಿಟ್ ಹೆಡ್‌ಲ್ಯಾಂಪ್ ಹೌಸಿಂಗ್ ಅನ್ನು ಪಡೆಯುತ್ತದೆ. ಸೈಡ್‌ನಿಂದ ಗಮನಿಸುವಾಗ ಇದು, ಅದರ ಇಳಿಜಾರಾದ ಕೂಪ್ ತರಹದ ಮೇಲ್ಛಾವಣಿಯಿಂದಾಗಿ ಇದು ಸ್ಪೋರ್ಟಿಯರ್ ನೋಟವನ್ನು ಹೊಂದಿದೆ. ಸ್ಕ್ವೇರ್ಡ್ ವೀಲ್ ಆರ್ಚ್‌ಗಳು, ಸೈಡ್ ಬಾಡಿ ಕ್ಲಾಡಿಂಗ್ ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಇದರ ಸ್ಪೋರ್ಟಿನೆಸ್‌ಗೆ ಮತ್ತಷ್ಟು ಮೆರುಗು ನೀಡುತ್ತದೆ.
ಈ ಎಸ್‌ಯುವಿ-ಕೂಪ್‌ನ ಹಿಂಭಾಗವು ಎತ್ತರವಾಗಿದೆ ಮತ್ತು ಅದರ ಬೂಟ್ ಡೋರ್ ಬಾನೆಟ್‌ಗಿಂತ ಎತ್ತರದ ಸ್ಥಾನದಲ್ಲಿದೆ. ಹಿಂಭಾಗದಲ್ಲಿರುವ ಇತರ ವಿನ್ಯಾಸದ ಬಿಟ್‌ಗಳು ಸುತ್ತಿದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ದಪ್ಪನಾದ ಸಿಲ್ವರ್ ಸ್ಕಿಡ್ ಪ್ಲೇಟ್‌ನೊಂದಿಗೆ ಎತ್ತರದ ಬಂಪರ್ ಅನ್ನು ಒಳಗೊಂಡಿವೆ.
ಇದನ್ನು ಸಹ ಓದಿ: ಭಾರತಕ್ಕಾಗಿ ಹೊಸ ರೆನಾಲ್ಟ್ ಮತ್ತು ನಿಸ್ಸಾನ್ ಎಸ್‌ಯುವಿಗಳ ಟೀಸರ್ ಮೊದಲ ಬಾರಿಗೆ ಔಟ್, 2025 ರಲ್ಲಿ ಬಿಡುಗಡೆ ಆಗುವ ಸಾಧ್ಯತೆ
ಇಂಟೀರಿಯರ್ ಮತ್ತು ವೈಶಿಷ್ಟ್ಯಗಳು
ಸಿಟ್ರೊಯೆನ್ ಬಸಾಲ್ಟ್ ವಿಷನ್ ಪರಿಕಲ್ಪನೆಯ ಇಂಟಿರೀಯರ್ ಅನ್ನು ಬಹಿರಂಗಪಡಿಸದಿದ್ದರೂ, ಇದು C3 ಏರ್‌ಕ್ರಾಸ್‌ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗಿಯೂ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಫೀಚರ್ ಮತ್ತು ಕೀಲೆಸ್ ಎಂಟ್ರಿಯಂತಹ ಹೆಚ್ಚುವರಿ ಸೌಕರ್ಯಗಳೊಂದಿಗೆ ಬಸಾಲ್ಟ್ ವಿಷನ್ ಪರಿಕಲ್ಪನೆಯು ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್‌ಗಳಿಗಿಂತ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿರಬಹುದೆಂದು ಎಂದು ನಿರೀಕ್ಷಿಸಲಾಗಿದೆ.
10.2-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ವೈಶಿಷ್ಟ್ಯಗಳನ್ನು ಸಿ3 ಏರ್‌ಕ್ರಾಸ್ ಎಸ್‌ಯುವಿಯಿಂದ ಎರವಲು ಪಡೆಯಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಬಸಾಲ್ಟ್ ವಿಷನ್ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಬದಿ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನೊಂದಿಗೆ ಬರುವ ನಿರೀಕ್ಷೆಯಿದೆ..
ನಿರೀಕ್ಷಿತ ಪವರ್‌ಟ್ರೇನ್
ಸಿಟ್ರೊಯೆನ್ ಇನ್ನೂ ಬಸಾಲ್ಟ್ ವಿಷನ್‌ಗಾಗಿ ಪವರ್‌ಟ್ರೇನ್ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇದು C3 ಹ್ಯಾಚ್‌ಬ್ಯಾಕ್ ಮತ್ತು C3 ಏರ್‌ಕ್ರಾಸ್ ಕಾಂಪ್ಯಾಕ್ಟ್ SUV ಯಂತೆಯೇ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS / 205 Nm ವರೆಗೆ) ಅನ್ನು ಬಳಸುವ ಸಾಧ್ಯತೆಯಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ನೊಂದಿಗೆ ನೀಡಲಾಗುವುದು.
ಭಾರತದಲ್ಲಿ ಬಿಡುಗಡೆ ಯಾವಾಗ?
ಸಿಟ್ರೊಯೆನ್ ಬಸಾಲ್ಟ್ ವಿಷನ್ ಅನ್ನು 2024 ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆಯು 8 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು. ಬಸಾಲ್ಟ್ ವಿಷನ್
ಮಾರುಕಟ್ಟೆಯಲ್ಲಿ ಟಾಟಾ ಕರ್ವ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವ್ಯಾಗನ್ ಟೈಗನ್, ಟೊಯೊಟಾ ಹೈರ್ಡರ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಪರ್ಯಾಯವಾಗಲಿದೆ.