ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು
ಈ ಲಿಮಿಟೆಡ್ ಎಡಿಷನ್ ನಲ್ಲಿ, ಸಿಟ್ರೊಯೆನ್ ತನ್ನ C3 ಏರ್‌ಕ್ರಾಸ್‌ಗೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಕೆಲವು ಆಕ್ಸೆಸರಿಗಳನ್ನು ನೀಡಿದೆ. ಇದು ಹೊರಭಾಗದಲ್ಲಿ ಧೋನಿಯ ಜರ್ಸಿ ಸಂಖ್ಯೆ "7" ಡಿಕಾಲ್‌ಗಳನ್ನು ಕೂಡ ಒಳಗೊಂಡಿದೆ
ಎಂ.ಎಸ್. ಧೋನಿಯನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಿದ ಕೆಲವೇ ದಿನಗಳಲ್ಲಿ, ಸಿಟ್ರೊಯೆನ್ ಈಗ C3 ಏರ್‌ಕ್ರಾಸ್ ಧೋನಿ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಸಿಟ್ರೊಯೆನ್ ಇತ್ತೀಚೆಗೆ C3 ಮತ್ತು C3 ಏರ್‌ಕ್ರಾಸ್ ಎರಡಕ್ಕೂ ಈ ವಿಶೇಷ ಎಡಿಷನ್ ಅನ್ನು ಘೋಷಿಸಿತು. ನಾವು ಈಗ SUV ಯ ಲಿಮಿಟೆಡ್ ಎಡಿಷನ್ ನ ವಿವರಗಳನ್ನು ನೀಡುವ ಚಿತ್ರಗಳನ್ನು ಪಡೆದುಕೊಂಡಿದ್ದೇವೆ. ಇದು ಈ ಎಡಿಷನ್ ನಲ್ಲಿ ಕೆಲವು ಹೆಚ್ಚುವರಿ ಆಕ್ಸೆಸರಿಗಳ ಜೊತೆಗೆ ಒಳಗೆ ಮತ್ತು ಹೊರಭಾಗದಲ್ಲಿ ಕೆಲವು ಕಾಸ್ಮೆಟಿಕ್ ಅಪ್ಡೇಟ್ ಗಳನ್ನು ಕೂಡ ಪಡೆಯುತ್ತದೆ. ಧೋನಿ ಎಡಿಷನ್ ಇದೀಗ ಡೀಲರ್‌ಶಿಪ್‌ಗಳಿಗೆ ಆಗಮಿಸಿದೆ; ಬನ್ನಿ, ಈ ಎಡಿಷನ್ ಶೋರೂಮ್ ನಲ್ಲಿ ಹೇಗೆ ಕಾಣುತ್ತದೆ ಎಂಬುದನ್ನು ನೋಡೋಣ:
ಹೊರಭಾಗದಲ್ಲಿ, ಧೋನಿ ಎಡಿಷನ್ ಡ್ಯುಯಲ್-ಟೋನ್ ಕಾಸ್ಮೊ ಬ್ಲೂ ಕಲರ್ ನಲ್ಲಿ ವೈಟ್ ರೂಫ್ ನೊಂದಿಗೆ ನೋಡಲಾಗಿದೆ, ಮತ್ತು ಹುಡ್, ಹಿಂಭಾಗದ ಡೋರ್ ಗಳು ಮತ್ತು ಬೂಟ್‌ನಲ್ಲಿ ಎದ್ದು ಕಾಣುವ "7" ಡೆಕಾಲ್ ಅನ್ನು ಒಳಗೊಂಡಿದೆ.
ಸೈಡ್ ಮತ್ತು ಹಿಂಭಾಗದ ಪ್ರೊಫೈಲ್‌ನಲ್ಲಿ ಮತ್ತೊಂದು ಗಮನಾರ್ಹ ಬದಲಾವಣೆಯೆಂದರೆ "ಧೋನಿ ಎಡಿಷನ್" ಸ್ಟಿಕ್ಕರ್, ಇದು ಈ ಎಡಿಷನ್ ಅನ್ನು ಸಾಮಾನ್ಯ ಮಾಡೆಲ್ ಗಿಂತ ಭಿನ್ನವಾಗಿಸುತ್ತದೆ.
ಈ ಎಡಿಷನ್ ನಲ್ಲಿ ಯಾವುದೇ ಹೊಸ ಫೀಚರ್ ಗಳನ್ನು ಸೇರಿಸಿಲ್ಲ, ಆದರೆ ಕೆಲವು ಅಕ್ಸಸೇರಿಗಳನ್ನು ನೀಡಲಾಗಿದೆ.
ಹೊಸ ಅಕ್ಸಸೇರಿಗಳಲ್ಲಿ ಇಲ್ಯೂಮಿನೇಟ್ ಆಗುವ ಡೋರ್ ಸಿಲ್‌ಗಳು, ಡ್ರೈವರ್ ಸೀಟಿನ ಮೇಲೆ "7" ಎಂಬಾಸಿಂಗ್ ಹೊಂದಿರುವ ಸೀಟ್ ಕವರ್‌ಗಳು ಮತ್ತು ಪ್ರಯಾಣಿಕರ ಸೀಟಿನಲ್ಲಿ ಧೋನಿಯ ಸಿಗ್ನೇಚರ್ ಎಂಬಾಸಿಂಗ್ ಸೇರಿವೆ.
ಇತರ ಆಕ್ಸೆಸರಿಗಳಲ್ಲಿ "ಧೋನಿ ಎಡಿಷನ್" ಬ್ರ್ಯಾಂಡಿಂಗ್ ಇರುವ ಡ್ಯುಯಲ್-ಕಲರ್ ಕುಶನ್‌ಗಳು ಮತ್ತು ಸೀಟ್ ಬೆಲ್ಟ್ ಕುಶನ್‌ಗಳು ಮತ್ತು ಸಿಟ್ರೊಯೆನ್ ಲೋಗೋ ಒಳಗೊಂಡಿವೆ. ಈ ವಿಶೇಷ ಎಡಿಷನ್ ನೊಂದಿಗೆ ನೀಡಲಾಗುವ ಏಕೈಕ ಹೊಸ ಫೀಚರ್ ಎಂದರೆ ಮುಂಭಾಗದ ಡ್ಯಾಶ್ ಕ್ಯಾಮೆರಾ.
ಧೋನಿ ಎಡಿಷನ್ ನಲ್ಲಿ ಲಭ್ಯವಿರುವ ಎಲ್ಲಾ ಅಕ್ಸಸೇರಿಗಳ ಪಟ್ಟಿ ಇಲ್ಲಿದೆ:
ಧೋನಿ ಡೆಕಾಲ್ |
ಸೀಟ್ ಕವರ್ |
ಕುಶನ್ ಪಿಲ್ಲೋ |
ಸೀಟ್ ಬೆಲ್ಟ್ ಕುಶನ್ |
ಇಲ್ಯೂಮಿನೇಟ್ ಆಗುವ ಸಿಲ್ ಪ್ಲೇಟ್ ಗಳು |
ಮುಂಭಾಗದ ಡ್ಯಾಶ್ ಕ್ಯಾಮೆರಾ |
ಪವರ್‌ಟ್ರೇನ್
ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳಿಲ್ಲ, ಹಾಗಾಗಿ ಈ ಲಿಮಿಟೆಡ್ ಎಡಿಷನ್ ಕೂಡ ಸ್ಟ್ಯಾಂಡರ್ಡ್ ಮಾಡೆಲ್ ನಲ್ಲಿರುವ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (110 PS/205 Nm) ಅನ್ನು ಬಳಸುತ್ತದೆ, ಮತ್ತು ಇದನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಜೋಡಿಸಲಾಗಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸಿಟ್ರೊಯೆನ್ C3 ಏರ್‌ಕ್ರಾಸ್ ಧೋನಿ ಎಡಿಷನ್ ಬೆಲೆಗಳು ಇನ್ನೂ ನಮಗೆ ತಿಳಿದುಬಂದಿಲ್ಲ, ಆದರೆ ರೆಗ್ಯುಲರ್ ಮಾಡೆಲ್ ಗಿಂತ ಇದರ ಬೆಲೆ ಜಾಸ್ತಿಯಿರಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಪ್ರಸ್ತುತ, ಸಿಟ್ರೊಯೆನ್ C3 ಏರ್‌ಕ್ರಾಸ್ ಬೆಲೆಯು ರೂ 8.99 ಲಕ್ಷದಿಂದ ರೂ 14.11 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ ಮತ್ತು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್, MG ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈಡರ್ ಮತ್ತು ಹೋಂಡಾ ಎಲಿವೇಟ್ ಗೆ ಇದು ಪ್ರತಿಸ್ಪರ್ಧಿಯಾಗಿದೆ. ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ ಕೂಡ ಇದರೊಂದಿಗೆ ಸ್ಪರ್ಧಿಸುತ್ತದೆ.
ಇನ್ನಷ್ಟು ಓದಿ: ಸಿಟ್ರೊಯೆನ್ C3 ಏರ್‌ಕ್ರಾಸ್ ಆಟೋಮ್ಯಾಟಿಕ್