Login or Register ಅತ್ಯುತ್ತಮ CarDekho experience ಗೆ
Login

ಈ ಜುಲೈನಲ್ಲಿ ಕೆಲವು Hyundai ಕಾರುಗಳ ಮೇಲೆ ಭರ್ಜರಿ 2 ಲಕ್ಷ ರೂ.ವರೆಗೆ ಡಿಸ್ಕೌಂಟ್‌ಗಳನ್ನು ಪಡೆಯಿರಿ

ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ yashika ಮೂಲಕ ಜುಲೈ 09, 2024 11:23 am ರಂದು ಮಾರ್ಪಡಿಸಲಾಗಿದೆ

ಹ್ಯುಂಡೈಯು ತನ್ನ ಗ್ರಾಂಡ್ ಐ10 ನಿಯೋಸ್ ಮತ್ತು ಔರಾದಲ್ಲಿ ಮಾತ್ರ ಕಾರ್ಪೊರೇಟ್ ಬೋನಸ್ ಅನ್ನು ನೀಡುತ್ತಿದೆ

  • MY23 ಹ್ಯುಂಡೈ ಟಕ್ಸನ್ ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನೊಂದಿಗೆ ಗರಿಷ್ಠ 2 ಲಕ್ಷ ರೂ.ಗಳಷ್ಟು ರಿಯಾಯಿತಿಗಳನ್ನು ನೀಡಲಾಗುತ್ತಿದೆ.
  • ಅಲ್ಕಾಜರ್ ಒಟ್ಟು 85,000 ರೂ.ವರೆಗಿನ ಉಳಿತಾಯದೊಂದಿಗೆ ಲಭ್ಯವಿದೆ.
  • ಹ್ಯುಂಡೈ ವೆನ್ಯೂವಿನಲ್ಲಿ 55,000 ರೂ.ವರೆಗಿನ ರಿಯಾಯಿತಿಯೊಂದಿಗೆ ಖರೀದಿಸಬಹುದು.
  • ಎಲ್ಲಾ ಆಫರ್‌ಗಳು 2024ರ ಜುಲೈ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ಹ್ಯುಂಡೈ ತನ್ನ ಜುಲೈ ತಿಂಗಳಿಗೆ ಕ್ಯಾಶ್‌ ಡಿಸ್ಕೌಂಟ್‌ಗಳು, ಎಕ್ಸ್‌ಚೇಂಜ್‌ ಬೋನಸ್‌ಗಳು ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳು ಸೇರಿದಂತೆ ತನ್ನ ಆಫರ್‌ಗಳ ಸೆಟ್ ಅನ್ನು ಪರಿಚಯಿಸಿದೆ. ಈ ಆಫರ್‌ಗಳು ಹುಂಡೈ ಐ20 ಎನ್‌ ಲೈನ್, ಕ್ರೆಟಾ ಮತ್ತು ಐಯೋನಿಕ್ 5 ಹೊರತುಪಡಿಸಿ, ಬಹುತೇಕ ಎಲ್ಲಾ ಹ್ಯುಂಡೈ ಮೊಡೆಲ್‌ಗಳಲ್ಲಿ ಮಾನ್ಯವಾಗಿರುತ್ತವೆ. ಮೊಡೆಲ್‌-ವಾರು ಆಫರ್ ವಿವರಗಳನ್ನು ನೋಡೋಣ.

ಹ್ಯೂಂಡೈ ಗ್ರ್ಯಾಂಡ್‌ ನಿಯೋಸ್‌

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌ಗಳು

35,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

10,000 ರೂ.

ಕಾರ್ಪೋರೇಟ್‌ ಬೋನಸ್‌

3,000 ರೂ.

ಒಟ್ಟು ರಿಯಾಯಿತಿಗಳು

48,000 ರೂ.ವರೆಗೆ

  • ಮೇಲೆ ತಿಳಿಸಿದ ಕ್ಯಾಶ್‌ ಡಿಸ್ಕೌಂಟ್‌ಗಳು ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ನ ಸಿಎನ್‌ಜಿ ಆವೃತ್ತಿಗಳಲ್ಲಿ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದೆ.

  • ಮ್ಯಾನುವಲ್ ಮತ್ತು ಎಎಮ್‌ಟಿ ಆವೃತ್ತಿಗಳು ಅನುಕ್ರಮವಾಗಿ 25,000 ಮತ್ತು 15,000 ರೂಪಾಯಿಗಳ ಕಡಿಮೆ ಕ್ಯಾಶ್‌ ಡಿಸ್ಕೌಂಟ್‌ಗಳನ್ನು ಪಡೆಯುತ್ತವೆ.

  • ಹ್ಯುಂಡೈಯು ಇದರ ಎಲ್ಲಾ ಆವೃತ್ತಿಗಳಲ್ಲಿ ಒಂದೇ ರೀತಿಯ ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.

  • ಇದರ ಬೆಲೆಗಳು 5.92 ಲಕ್ಷ ರೂ.ನಿಂದ 8.56 ಲಕ್ಷ ರೂ.ವರೆಗೆ ಇರಲಿದೆ.

ಹ್ಯುಂಡೈ ಐ20

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌ಗಳು

35,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

10,000 ರೂ.

ಒಟ್ಟು ರಿಯಾಯಿತಿಗಳು

45,000 ರೂ.ವರೆಗೆ

  • ಹ್ಯುಂಡೈ i20ನ ಮ್ಯಾನುವಲ್ ಆವೃತ್ತಿಗಳು ಹೆಚ್ಚಿನ ನಗದು ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ಬರುತ್ತವೆ ಆದರೆ ಸಿವಿಟಿ (ಆಟೋಮ್ಯಾಟಿಕ್‌) ಆವೃತ್ತಿಗಳು 20,000 ರೂ.ನಷ್ಟು ನಗದು ರಿಯಾಯಿತಿಯನ್ನು ಪಡೆಯುತ್ತವೆ.

  • ಹ್ಯುಂಡೈಯು ಇದರಲ್ಲಿ 10,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅನ್ನು ಸಹ ನೀಡುತ್ತಿದೆ, ಇದು ಎಲ್ಲಾ ಆವೃತ್ತಿಗಳಿಗೆ ಅನ್ವಯಿಸುತ್ತದೆ.

  • ದುರದೃಷ್ಟವಶಾತ್, ಹುಂಡೈನ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಯಾವುದೇ ಕಾರ್ಪೊರೇಟ್ ಡಿಸ್ಕೌಂಟ್‌ ಇಲ್ಲ.

  • ಹ್ಯುಂಡೈ ಐ20ಯ ಬೆಲೆಗಳು 7.04 ಲಕ್ಷ ರೂ.ನಿಂದ 11.21 ಲಕ್ಷ ರೂ.ವರೆಗೆ ಇರಲಿದೆ.

ಹ್ಯುಂಡೈ ಓರಾ

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌ಗಳು

30,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

10,000 ರೂ.

ಕಾರ್ಪೋರೇಟ್‌ ಬೋನಸ್‌

3,000 ರೂ.

ಒಟ್ಟು ರಿಯಾಯಿತಿಗಳು

43,000 ರೂ.ವರೆಗೆ

ಕೋಷ್ಟಕದಲ್ಲಿ ಉಲ್ಲೇಖಿಸಲಾದ ಎಲ್ಲಾ ರಿಯಾಯಿತಿಗಳು ಹ್ಯುಂಡೈ ಔರಾದ ಸಿಎನ್‌ಜಿ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ.

  • ಮ್ಯಾನುಯಲ್ ಮತ್ತು ಎಎಮ್‌ಟಿ ಆಟೋಮ್ಯಾಟಿಕ್ ಎರಡರಲ್ಲೂ ಎಲ್ಲಾ ಪೆಟ್ರೋಲ್ ಆವೃತ್ತಿಗಳಿಗೆ ಕ್ಯಾಶ್‌ ಡಿಸ್ಕೌಂಟ್‌ ಅನ್ನು 10,000 ರೂ.ಗೆ ಇಳಿಸಲಾಗಿದೆ. ಆದರೆ, ಎಲ್ಲಾ ಆವೃತ್ತಿಗಳಿಗೆ ಎಕ್ಸ್‌ಚೇಂಜ್‌ ಬೋನಸ್‌ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳು ಒಂದೇ ಆಗಿರುತ್ತವೆ.

  • ಹ್ಯುಂಡೈಯು ತನ್ನ ಸಬ್-4ಎಮ್‌ ಸೆಡಾನ್ ಔರಾವನ್ನು 6.49 ಲಕ್ಷ ರೂ.ನಿಂದ 9.05 ಲಕ್ಷದವರೆಗೆ ಮಾರಾಟ ಮಾಡುತ್ತದೆ.

ಹ್ಯುಂಡೈ ಎಕ್ಸ್‌ಟರ್‌

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌ಗಳು

10,000 ರೂ.

  • ಹ್ಯುಂಡೈ ಎಕ್ಸ್‌ಟರ್‌ನ ಲೋವರ್‌-ಸ್ಪೆಕ್‌ಗಳಾದ EX ಮತ್ತು EX (O) ವನ್ನು ಹೊರತು ಪಡಿಸಿ, ಉಳಿದ ಎಲ್ಲಾ ಆವೃತ್ತಿಗಳಲ್ಲಿ 10,000 ರೂ.ವರೆಗಿನ ನಗದು ರಿಯಾಯಿತಿಯೊಂದಿಗೆ ಬರುತ್ತವೆ.

  • ಆದರೆ ಈ ಮೈಕ್ರೋ ಎಸ್‌ಯುವಿಯು ಯಾವುದೇ ರೀತಿಯ ಎಕ್ಸ್‌ಚೇಂಜ್‌ ಮತ್ತು ಕಾರ್ಪೊರೇಟ್ ಬೋನಸ್ ಅನ್ನು ಹೊಂದಿಲ್ಲ.

  • ಹ್ಯುಂಡೈ ಎಕ್ಸ್‌ಟರ್‌ನ ಬೆಲೆಯು 6.13 ಲಕ್ಷ ರೂ.ನಿಂದ 10.28 ಲಕ್ಷ ರೂ.ಗಳ ನಡುವೆ ಇರಲಿದೆ.

ಇದನ್ನೂ ಸಹ ಓದಿ: ಜಾಗತಿಕವಾಗಿ Hyundai Inster ನ ಅನಾವರಣ, ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ

ಹ್ಯುಂಡೈ ವೆನ್ಯೂ

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌ಗಳು

45,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

10,000 ರೂ.

ಒಟ್ಟು ರಿಯಾಯಿತಿಗಳು

55,000 ರೂ.ವರೆಗೆ

  • ಮೇಲೆ ತಿಳಿಸಿದ ಆಫರ್‌ಗಳು ಹ್ಯುಂಡೈ ವೆನ್ಯೂನ ಟರ್ಬೊ-ಪೆಟ್ರೋಲ್ ಮ್ಯಾನುವಲ್ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತವೆ.

  • ಟರ್ಬೊ-ಪೆಟ್ರೋಲ್ ಡಿಸಿಟಿ (ಆಟೋಮ್ಯಾಟಿಕ್‌) ಆವೃತ್ತಿಗಳು ಮತ್ತು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ಗಳಿಗೆ ಕ್ಯಾಶ್‌ ಡಿಸ್ಕೌಂಟ್‌ ಕ್ರಮವಾಗಿ 40,000 ರೂ. ಮತ್ತು 35,000 ರೂ.ಗೆ ಇಳಿಯುತ್ತದೆ. ಎಲ್ಲಾ ಆವೃತ್ತಿಗಳಿಗೆ ಎಕ್ಸ್‌ಚೇಂಜ್‌ ಬೋನಸ್ ಒಂದೇ ಆಗಿರುತ್ತದೆ.

  • ಹಾಗೆಯೇ, ಹುಂಡೈಯು ವೆನ್ಯೂವಿನಲ್ಲಿ ಯಾವುದೇ ಕಾರ್ಪೊರೇಟ್ ಬೋನಸ್ ಅನ್ನು ನೀಡುವುದಿಲ್ಲ.

  • ವೆನ್ಯೂ ಸಬ್-4ಎಮ್‌ ಎಸ್‌ಯುವಿಯ ಡೀಸೆಲ್ ಆವೃತ್ತಿಗಳೊಂದಿಗೆ ಯಾವುದೇ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿಲ್ಲ.

  • ಹ್ಯುಂಡೈ ತನ್ನ ವೆನ್ಯೂನ ಬೆಲೆಯನ್ನು 7.94 ಲಕ್ಷ ರೂ.ನಿಂದ 13.48 ಲಕ್ಷ ರೂ.ಗೆ ನಿಗದಿಪಡಿಸಿದೆ.

ಹುಂಡೈ ವೆನ್ಯೂ ಎನ್ ಲೈನ್

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌ಗಳು

40,000 ರೂ.

ಎಕ್ಸ್‌ಚೇಂಜ್‌ ಬೋನಸ್‌

10,000 ರೂ.

ಒಟ್ಟು ರಿಯಾಯಿತಿಗಳು

50,000 ರೂ.

  • ಹ್ಯುಂಡೈ ವೆನ್ಯೂ ಎನ್ ಲೈನ್‌ನ ಎಲ್ಲಾ ಆವೃತ್ತಿಗಳು ಮೇಲೆ ತಿಳಿಸಿದಂತೆ ಒಂದೇ ರೀತಿಯ ರಿಯಾಯಿತಿಗಳನ್ನು ಪಡೆಯುತ್ತವೆ.

  • ಇವುಗಳಲ್ಲಿ 40,000 ರೂ. ಕ್ಯಾಶ್‌ ಡಿಸ್ಕೌಂಟ್‌ ಮತ್ತು 10,000 ರೂ. ಎಕ್ಸ್‌ಚೇಂಜ್‌ ಬೋನಸ್ ಸೇರಿವೆ.

  • ಆಫರ್‌ನಲ್ಲಿ ಯಾವುದೇ ಕಾರ್ಪೊರೇಟ್ ಬೋನಸ್‌ ಇರುವುದಿಲ್ಲ.

  • ಸ್ಪೋರ್ಟಿಯರ್ ಆಗಿ ಕಾಣುವ ಈ ವೆನ್ಯೂನ ಬೆಲೆಯು 12.08 ಲಕ್ಷ ರೂ.ನಿಂದ 13.90 ಲಕ್ಷ ರೂ.ವರೆಗೆ ಇದೆ.

ಹ್ಯುಂಡೈ ವೆರ್ನಾ

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌ಗಳು

15,000 ರೂ.

ಎಕ್ಸ್‌ಚೇಂಜ್‌ ಬೋನಸ್‌

20,000 ರೂ.

ಒಟ್ಟು ರಿಯಾಯಿತಿಗಳು

35,000 ರೂ.

  • ಹ್ಯುಂಡೈ ವೆರ್ನಾದ ಎಲ್ಲಾ ಆವೃತ್ತಿಗಳು 35,000 ರೂ.ವರೆಗಿನ ಒಟ್ಟು ರಿಯಾಯಿತಿಗಳನ್ನು ಹೊಂದಿವೆ.

  • ಈ ಆಫರ್‌ಗಳು 15,000 ರೂಪಾಯಿಗಳ ಕ್ಯಾಶ್‌ ಡಿಸ್ಕೌಂಟ್‌ ಮತ್ತು 20,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅನ್ನು ಒಳಗೊಂಡಿದೆ.

  • ಆದಾಗ್ಯೂ, ಹ್ಯುಂಡೈಯು ತನ್ನ ಕಾಂಪ್ಯಾಕ್ಟ್ ಸೆಡಾನ್‌ನಲ್ಲಿ ಯಾವುದೇ ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ನೀಡುತ್ತಿಲ್ಲ.

  • ವೆರ್ನಾದ ಬೆಲೆಗಳು 11 ಲಕ್ಷ ರೂ.ನಿಂದ ಪ್ರಾರಂಭವಾಗಿ 17.42 ಲಕ್ಷ ರೂ.ವರೆಗೆ ಇದೆ.

ಹ್ಯುಂಡೈ ಅಲ್ಕಾಜರ್‌

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌ಗಳು

55,000 ರೂ.

ಎಕ್ಸ್‌ಚೇಂಜ್‌ ಬೋನಸ್‌

30,000 ರೂ.

ಒಟ್ಟು ರಿಯಾಯಿತಿಗಳು

85,000 ರೂ.

ಹ್ಯುಂಡೈ ಟಕ್ಸನ್

ಆಫರ್‌

ಮೊತ್ತ

MY23 ಟಕ್ಸನ್‌

MY24 ಟಕ್ಸನ್‌

ಕ್ಯಾಶ್‌ ಡಿಸ್ಕೌಂಟ್‌

2 ಲಕ್ಷ ರೂ.ವರೆಗೆ

50,000 ರೂ.ವರೆಗೆ

  • MY23 ಹ್ಯುಂಡೈ ಟಕ್ಸನ್‌ನ ಡೀಸೆಲ್ ಆವೃತ್ತಿಗಳು ಈ ಜುಲೈನಲ್ಲಿ ಅತ್ಯಧಿಕ ಡಿಸ್ಕೌಂಟ್‌ಗಳನ್ನು ಪಡೆಯುತ್ತವೆ, ಒಟ್ಟು ರೂ 2 ಲಕ್ಷದವರೆಗೆ ರಿಯಾಯಿತಿಯನ್ನು ಹೊಂದಿದೆ. ಇದರ ಪೆಟ್ರೋಲ್ ಆವೃತ್ತಿಯು 50,000 ರೂ.ವರೆಗೆ ಗರಿಷ್ಠ ರಿಯಾಯಿತಿಯನ್ನು ಪಡೆಯುತ್ತದೆ. ಹುಂಡೈ MY24 ಡೀಸೆಲ್ ಮೊಡೆಲ್‌ಗಳನ್ನು 50,000 ರೂ.ವರೆಗೆ ಕ್ಯಾಶ್‌ ಡಿಸ್ಕೌಂಟ್‌ನೊಂದಿಗೆ ನೀಡುತ್ತಿದೆ, ಆದರೆ ಪೆಟ್ರೋಲ್ ಆವೃತ್ತಿಯು 25,000 ರೂ.ವರೆಗೆ ನಗದು ರಿಯಾಯಿತಿಯೊಂದಿಗೆ ಲಭ್ಯವಿದೆ.

  • 2023ರ ಮೊಡೆಲ್‌ ಮತ್ತು 2024ರ ಪೆಟ್ರೋಲ್ ಆವೃತ್ತಿಗಳನ್ನು ಕ್ರಮವಾಗಿ 50,000 ಮತ್ತು 25,000 ರೂಪಾಯಿಗಳ ನಗದು ರಿಯಾಯಿತಿಯೊಂದಿಗೆ ನೀಡಲಾಗುತ್ತದೆ.

  • ಹ್ಯುಂಡೈ ಟಕ್ಸನ್‌ನ ಬೆಲೆಗಳು 29.02 ಲಕ್ಷ ರೂ.ನಿಂದ 35.94 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇರುತ್ತದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

2 ಲಕ್ಷ ರೂ.

ಒಟ್ಟು ರಿಯಾಯಿತಿಗಳು

2 ಲಕ್ಷ ರೂ.

  • MY23 ಟಕ್ಸನ್‌ನಲ್ಲಿ ನೋಡಿದಂತೆ, ‌ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನ ಎಲ್ಲಾ ಆವೃತ್ತಿಗಳ ಮೇಲೆ 2 ಲಕ್ಷ ರೂಪಾಯಿಗಳ ಕ್ಯಾಶ್‌ ಡಿಸ್ಕೌಂಟ್‌ ಅನ್ನು ನೀಡುತ್ತದೆ.

  • ಅದರ ಇತ್ತೀಚಿನ ಸ್ಥಗಿತದ ನಂತರ, ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನ ಬಾಕಿ ಉಳಿದಿರುವ ಸ್ಟಾಕ್‌ನಲ್ಲಿ ಈ ಪ್ರಯೋಜನಗಳನ್ನು ನೀಡುತ್ತಿದೆ.

  • ಇದರ ಬೆಲೆಗಳು 23.84 ಲಕ್ಷ ರೂ.ನಿಂದ 24.03 ಲಕ್ಷ ರೂಪಾಯಿಗಳಷ್ಟಿದೆ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಆಗಿದೆ

ಗಮನಿಸಿ: ನಿಮ್ಮ ಸ್ಥಳ ಮತ್ತು ಆಯ್ಕೆ ಮಾಡಿದ ಆವೃತ್ತಿಗಳ ಆಧಾರದ ಮೇಲೆ ಈ ಆಫರ್‌ಗಳು ಭಿನ್ನವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ಹುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸಲು ನಾವು ಸಲಹೆ ನೀಡುತ್ತೇವೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ..

ಇನ್ನಷ್ಟು ಓದಿ: ಗ್ರ್ಯಾಂಡ್ ಐ10 ನಿಯೋಸ್ ಎಎಮ್‌ಟಿ

Share via

Write your Comment on Hyundai Grand ಐ10 Nios

explore similar ಕಾರುಗಳು

ಹುಂಡೈ ಔರಾ

ಪೆಟ್ರೋಲ್17 ಕೆಎಂಪಿಎಲ್
ಸಿಎನ್‌ಜಿ22 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಹುಂಡೈ ಎಕ್ಸ್‌ಟರ್

ಪೆಟ್ರೋಲ್19.4 ಕೆಎಂಪಿಎಲ್
ಸಿಎನ್‌ಜಿ27.1 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಹುಂಡೈ ಅಲ್ಕಝರ್

ಡೀಸಲ್18.1 ಕೆಎಂಪಿಎಲ್
ಪೆಟ್ರೋಲ್18 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ