ಇಲ್ಲಿದೆ ನವೀಕೃತ ಕಿಯಾ ಸೆಲ್ಟೋಸ್ ಇಂಟೀರಿಯರ್‌ನ ಒಂದು ನೋಟ
ಕಿಯಾ ಸೆಲ್ಟೋಸ್ ಗಾಗಿ tarun ಮೂಲಕ ಜೂನ್ 23, 2023 02:33 pm ರಂದು ಪ್ರಕಟಿಸಲಾಗಿದೆ
- 11 Views
- ಕಾಮೆಂಟ್ ಅನ್ನು ಬರೆಯಿರಿ
ಬಿಡುಗಡೆಯಾದ ನಾಲ್ಕು ವರ್ಷಗಳ ನಂತರ ಕಾಂಪ್ಯಾಕ್ಟ್ ಎಸ್‌ಯುವಿ ತನ್ನ ಮೊದಲ ಪ್ರಮುಖ ನವೀಕರಣವನ್ನು ಪಡೆಯುತ್ತದೆ
-
ಹೊಸ ಸೆಲ್ಟೋಸ್ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಮತ್ತು ಡ್ಯುಯಲ್-ಝೋನ್ ಎಸಿಯನ್ನು ಪಡೆಯುತ್ತದೆ.
-
ಟಚ್‌ಸ್ಕ್ರೀನ್ ಮತ್ತು ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ಗೆ ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳನ್ನು ಸಹ ಪಡೆಯುತ್ತದೆ.
-
ರಾಡಾರ್-ಆಧಾರಿತ ADAS ತಂತ್ರಜ್ಞಾನವನ್ನು ಪಡೆಯುವ ಎರಡನೇ ಕಾಂಪ್ಯಾಕ್ಟ್ ಎಸ್‌ಯುವಿ ಇದಾಗಿದೆ.
-
ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನೊಂದಿಗೆ ಹೊಸ ಹೆಚ್ಚು ಶಕ್ತಿಶಾಲಿ 160PS 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.
-
ಬೆಲೆಗಳು ಸುಮಾರು ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ಆರಂಭವಾಗುವ ನಿರೀಕ್ಷೆಯಿದೆ.
ಈ ನವೀಕೃತ ಕಿಯಾ ಸೆಲ್ಟೋಸ್ ಅನ್ನು ಮತ್ತೊಮ್ಮೆ ಸ್ಪೈ ಮಾಡಲಾಗಿದ್ದು ಈ ಬಾರಿ ಅದರ ಇಂಟೀರಿಯರ್ ನೋಟವನ್ನು ನಾವು ನೋಡಬಹುದು. ಸಂಪೂರ್ಣವಾದ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ನೋಡಲಾಗದಿದ್ದರೂ ಅದರ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಸ್ಪಷ್ಟವಾಗಿ ಗೋಚರಿಸುತ್ತದೆ, ಇದು ಹೊಸ ಮತ್ತು ಪ್ರಮುಖ ಸೌಕರ್ಯ ಫೀಚರ್ ಅನ್ನು ಪಡೆದಿದೆ.
ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಹೊಸ ಸ್ವಿಚ್‌ಗಳನ್ನು ಪಡೆದಿರುವುದನ್ನು ನಾವು ಸ್ಪೈ ಶಾಟ್‌ನಲ್ಲಿ ನೋಡಬಹುದು. ಪ್ಯಾನಲ್‌ನ ಎರಡೂ ಬದಿಯಲ್ಲಿರುವ SYNC ಬಟನ್ ಮತ್ತು ತಾಪಮಾನ ನಿಯಂತ್ರಣ ಬಟನ್‌ಗಳು ನವೀಕೃತ ಸೆಲ್ಟೋಸ್ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಪಡೆಯುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ. ಈ ಸ್ಪೈ ಮಾಡಲಾದ ವೇರಿಯೆಂಟ್‌ನ ಡ್ರೈವ್ ಸೆಲೆಕ್ಟರ್‌ನ ಸುತ್ತಲಿನ ಬಟನ್‌ಗಳಲ್ಲಿ ಆಡಿಯೊ ನಿಯಂತ್ರಣಗಳು, ವೈರ್‌ಲೆಸ್ ಚಾರ್ಜಿಂಗ್ ಮತ್ತು 360-ಡಿಗ್ರಿ ಕ್ಯಾಮರಾ ಸ್ವಿಚ್ ಅನ್ನು ನಾವು ಗುರುತಿಸಬಹುದು.
ಈ ಹೊಸ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್ ನಿರ್ಗಮಿತ ಸೆಲ್ಟೋಸ್‌ಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತಿದೆಯಾದರೂ ಜಾಗತಿಕ ನವೀಕರಣದಲ್ಲಿರುವಂತೆ ಇಲ್ಲ. ಜಾಗತಿಕವಾಗಿ ನೀಡಲಾದ ಸೆಲ್ಟೋಸ್‌ನಂತೆಯೇ ಸೆಂಟ್ರಲ್ ಎಸಿ ವೆಂಟ್‌ಗಳನ್ನು ಮರುವಿನ್ಯಾಸಗೊಳಿಸಲಾಗಿದೆ, ಇನ್‌ಫೊಟೈನ್‌ಮೆಂಟ್ ಯೂನಿಟ್ ಮತ್ತು ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ 10.25-ಇಂಚಿನ ಡಿಸ್‌ಪ್ಲೇಯೊಂದಿಗೆ ಸಂಯೋಜಿತ ಡ್ಯುಯಲ್ ಸ್ಕ್ರೀನ್ ಸೆಟಪ್‌ನ ಫೀಚರ್ ನೀಡಲು ಡ್ಯಾಶ್‌ಬೋರ್ಡ್ ಅನ್ನು ನವೀಕರಿಸಲಾಗಿದೆ.
ನಿರ್ಗಮಿತ ಆವೃತ್ತಿಯಂತೆಯೇ, ನವೀಕೃತ ಕಿಯಾ ಸೆಲ್ಟೋಸ್ ಅನ್ನು ಡ್ಯುಯಲ್-ಟೋನ್ ಕಪ್ಪು ಮತ್ತು ಬೀಚ್ ಬಣ್ಣದಿಂದ ಕವರ್ ಮಾಡಲಾಗಿದೆ. ಇದು ಸಾಮಾನ್ಯ ವೇರಿಯೆಂಟ್‌ಗಳಲ್ಲಿ ಒಂದಾಗಿದ್ದರೆ, ಟಾಪ್-ಸ್ಪೆಕ್ GT ಲೈನ್ ಟ್ರಿಮ್ ಸಂಪೂರ್ಣ-ಕಪ್ಪು ಥೀಮ್ ಅನ್ನು ಉಳಿಸಿಕೊಳ್ಳಬಹುದು. ರಾಡಾರ್-ಆಧಾರಿತ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ತಂತ್ರಜ್ಞಾನವು ಇದರಲ್ಲಿನ ಸುರಕ್ಷತಾ ಮಟ್ಟವನ್ನು ಹೆಚ್ಚಿಸುತ್ತದೆ.
ಇಂಟೀರಿಯರ್ ಅನ್ನು ವಿನ್ಯಾಸಗೊಳಿಸಿದಂತೆಯೇ ಎಕ್ಸ್‌ಟೀರಿಯರ್ ಕೂಡ ಮರುವಿನ್ಯಾಸಗೊಂಡಿದೆ. ಇತ್ತೀಚಿಗೆ ಕಂಡುಬಂದ ಕೆಲವು ಸ್ಪೈ ಶಾಟ್‌ಗಳನ್ನು ಗಮನಿಸಿದರೆ, ಎಸ್‌ಯುವಿಯ ಮುಂಭಾಗ ಮತ್ತು ಹಿಂಭಾಗದ ಪ್ರೊಫೈಲ್‌ಗಳು ಹೆಚ್ಚು ಉತ್ತಮವಾಗಿ ಕಾಣುತ್ತವೆ. ಒಟ್ಟಾರೆಯಾಗಿ ಈ ಎಸ್‌ಯುವಿ ಮೊದಲಿನಂತೆಯೇ ಇರುತ್ತದೆ, ಆದರೆ ನಾವು ಹೊಸ ಸಿಂಗಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ಇದರಲ್ಲಿ ಗುರುತಿಸಬಹುದು.
ಇದನ್ನೂ ಓದಿ: ಕಿಯಾ ಕಾರ್ನಿವಲ್ ಇನ್ನು ಮುಂದೆ ಭಾರತದಲ್ಲಿ ಮಾರಾಟವಾಗುವುದಿಲ್ಲ
ಪವರ್‌ಟ್ರೇನ್ ಆಯ್ಕೆಗಳು ಯಾವುದೇ ರೀತಿಯ ಬದಲಾವಣೆಯನ್ನು ಪಡೆಯುವುದಿಲ್ಲ, 1.5-ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ. 1.4-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಸ್ವಲ್ಪ ಸಮಯದ ಹಿಂದೆ ನಿಲ್ಲಿಸಲಾಯಿತು ಮತ್ತು ಇದರ ಬದಲಾಗಿ ಕಾರೆನ್ಸ್‌ನಲ್ಲಿ ನೀಡಿದಂತೆ ಹೆಚ್ಚು ಶಕ್ತಿಶಾಲಿ 160PS 1.5-ಲೀಟರ್ ಯೂನಿಟ್ ಅನ್ನು ಇದು ಪಡೆಯುತ್ತದೆ. ಎಲ್ಲಾ ಮೂರು ಎಂಜಿನ್‌ಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಯನ್ನು ಪಡೆಯುತ್ತದೆ.
ಈ ನವೀಕೃತ ಕಿಯಾ ಸೆಲ್ಟೋಸ್ ರೂ 11 ಲಕ್ಷದಿಂದ (ಎಕ್ಸ್-ಶೋರೂಮ್) ಮಾರಾಟವಾಗುವ ನಿರೀಕ್ಷೆಯಿದೆ. ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಟೊಯೋಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್‌ಗಳಿಗೆ ಹಾಗೂ ಮುಂಬರುವ ಹೋಂಡಾ ಎಲಿವೇಟ್ ಮತ್ತು ಸಿಟ್ರಾನ್ C3 ಏರ್‌ಕ್ರಾಸ್‌ಗಳಿಗೆ ಸ್ಪರ್ಧೆಯನ್ನು ನೀಡಲಿದೆ.
ಚಿತ್ರ ಕೃಪೆ
0 out of 0 found this helpful