Tata Safari Facelift: ಇಲ್ಲಿದೆ ಸೈಡ್ ಪ್ರೊಫೈಲ್‌ನ ಮೊದಲ ನೋಟ

published on ಅಕ್ಟೋಬರ್ 09, 2023 11:36 am by shreyash for ಟಾಟಾ ಸಫಾರಿ

  • 84 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಲ್ಲಾ ಟೀಸರ್‌ಗಳನ್ನು ಜೋಡಿಸಿದಾಗ, 2023 ಟಾಟಾ ಸಫಾರಿಯ ಒಟ್ಟಾರೆ ನೋಟದ ಕಲ್ಪನೆಯನ್ನು ನಾವೀಗ ಪಡೆದಿದ್ದೇವೆ

2023 Tata Safari

  •  2023 ಟಾಟಾ ಸಫಾರಿಯ ಬುಕಿಂಗ್‌ಗಳು ಇಂದಿನಿಂದ ತೆರೆದುಕೊಳ್ಳಲಿವೆ.
  •  ಇದು ಹೊಸತಾಗಿ ಡಿಸೈನ್ ಮಾಡಲಾದ ಅಲಾಯ್‌ ವ್ಹೀಲ್‌ಗಳು ಮತ್ತು ಪರಿಷ್ಕೃತ ಹೆಡ್‌ಲೈಟ್ ಹೌಸಿಂಗ್ ಅನ್ನು ಪಡೆದಿರುತ್ತದೆ.
  •  ಇಂಟೀರಿಯರ್ ಅಪ್‌ಡೇಟ್‌ಗಳು ಹೊಸ ಬ್ಯಾಕ್‌ಲಿಟ್ ಸ್ಟೀರಿಂಗ್ ವ್ಹೀಲ್, ದೊಡ್ಡದಾದ ಟಚ್‌ಸ್ಕ್ರೀನ್ ಮತ್ತು ಡ್ರೈವರ್ ಡಿಸ್‌ಪ್ಲೇ ಅನ್ನು ಒಳಗೊಂಡಿರುವ ಸಂಭವ ಇದೆ.
  •  ಅದೇ 2-ಲೀಟರ್ ಡೀಸೆಲ್ ಇಂಜಿನ್ ಅನ್ನು ಉಳಿಸಿಕೊಳ್ಳಲಿದ್ದು, ಇದರೊಂದಿಗೆ ಹೊಸ 1.5 ಲೀಟರ್ (T-GDi) ಟರ್ಬೋ ಪೆಟ್ರೋಲ್ ಇಂಜಿನ್ ಆಯ್ಕೆಯನ್ನೂ ಪಡೆದಿರಬಹುದು.
  •  ಬೆಲೆಗಳು ರೂ 16 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.

ಟಾಟಾ ಸಫಾರಿ ಫೇಸ್‌ಲಿಫ್ಟ್‌ನ ಬಿಡುಗಡೆ ಸನಿಹವಾಗುತ್ತಿದ್ದಂತೆ, ಈ ಕಾರುತಯಾರಕ ಸಂಸ್ಥೆಯು ಪ್ರತಿದಿನ ನಿರಂತರವಾಗಿ ಹೊಸ ಟೀಸರ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಈ 3-ಸಾಲಿನ SUVಯ ಹೊಸ ಡಿಸೈನ್ ವಿವರಗಳನ್ನು ಅನಾವರಣಗೊಳಿಸುತ್ತಿದೆ. ಇದರ ಇತ್ತೀಚಿನ ಟೀಸರ್‌ನಲ್ಲಿ, 2023ರ ಸಫಾರಿಯ ಸೈಡ್ ಪ್ರೊಫೈಲ್ ಮತ್ತು ಹೊಸ ಅಲಾಯ್‌ ವ್ಹೀಲ್‌ಗಳನ್ನು ಪ್ರದರ್ಶಿಸಲಾಗಿದೆ. ಟಾಟಾ ಈ ನವೀಕೃತ SUVಗೆ ಇಂದಿನಿಂದ ಆರ್ಡರ್‌ಗಳನ್ನೂ ಸ್ವೀಕರಿಸಲು ಪ್ರಾರಂಭಿಸಿದೆ.

 

ಹೊಸ ಟೀಸರ್‌ನಲ್ಲಿನ ವಿವರಗಳು

2023 ಸಫಾರಿಯ ಹೊಸತಾಗಿ ಡಿಸೈನ್ ಮಾಡಲಾದ ಅಲಾಯ್ ವ್ಹೀಲ್‌ಗಳು ಈ ಟೀಸರ್‌ನ ಪ್ರಮುಖಾಂಶವಾಗಿದ್ದು, ಪ್ರಸ್ತುತ ಇರುವ ಟಾಟಾ ಸಫಾರಿ 18-ಇಂಚು ಅಲಾಯ್‌ವ್ಹೀಲ್‌ಗಳನ್ನು ಹೊಂದಿದ್ದರೆ, ನವೀಕೃತ ಸಫಾರಿ 19 ಇಂಚುಗಳನ್ನು ಪಡೆದಿದೆ. ಇದರೊಂದಿಗೆ SUVಯ ಪ್ರೊಫೈಲ್ ಪ್ರಸ್ತುತ ಆವೃತ್ತಿಯನ್ನೇ ಹೋಲುವುದನ್ನು ಟೀಸರ್‌ನಲ್ಲಿ ಕಾಣಬಹುದು.

Here's Your First Glimpse At The Tata Safari Facelift's Side Profile, Sporting New Alloys

ವೀಡಿಯೋದಲ್ಲಿ ಕಾಣುವಂತೆ, ನವೀಕೃತ ಟಾಟಾ ಸಫಾರಿ ಈಗ ಲಂಬವಾಗಿರುವ ಹೆಡ್‌ಲೈಟ್ ಹೌಸಿಂಗ್ ಅನ್ನು ಪಡೆದಿದ್ದು, ಇದು ನಾವು 2023 ಟಾಟಾ ನೆಕ್ಸಾನ್ ಮತ್ತು ಟಾಟಾ ನೆಕ್ಸಾನ್ EVಯಲ್ಲಿ ನೋಡಿರುವಂತೆಯೇ ಇದೆ. ಅಲ್ಲದೇ ನಾವು ಈಗಾಗಲೇ ನವೀನ ಡೈನಾಮಿಕ್ ಲೈಟಿಂಗ್‌ನೊಂದಿಗೆ ಹೊಸ ಸಂಪರ್ಕಿತ LED DRLಗಳು ಮತ್ತು LED ಟೇಲ್‌ಲ್ಯಾಂಪ್‌ ಅನ್ನು ನೋಡಿದ್ದೇವೆ.

ಇದನ್ನೂ ಓದಿ: 2023 ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಇಂಟೀರಿಯರ್ ಟೀಸರ್ ಬಂದಿದೆ, ನೆಕ್ಸಾನ್ ಫೇಸ್‌ಲಿಫ್ಟ್‌ನಿಂದ ಪಡೆದಿದೆ ಹೊಸ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ 

 

ಇಂಟೀರಿಯರ್ ಅಪ್‌ಡೇಟ್‌ಗಳು

Tata Safari cabin

 2023 ಟಾಟಾ ಸಫಾರಿಯ ಇಂಟೀರಿಯರ್ ನೋಟಗಳು ಇನ್ನೂ ಲಭ್ಯವಾಗಿಲ್ಲವಾದರೂ, ಇದು 2023 ಟಾಟಾ ಹ್ಯಾರಿಯರ್‌ನ ಟೀಸರ್‌ನಲ್ಲಿದ್ದ ಅಪ್‌ಡೇಟ್‌ಗಳನ್ನೇ ಹೊಂದಿರುವ ಸಾಧ್ಯತೆ ಇದೆ. ಇದು ಬೆಳಗುವ ಟಾಟಾ ಲೋಗೋ ಹೊಂದಿರುವ ಹೊಸ ಸ್ಟೀರಿಂಗ್ ವ್ಹೀಲ್, ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯಾಶ್‌ಬೋರ್ಡ್‌ನಲ್ಲಿ ಆ್ಯಂಬಿಯೆಂಟ್ ಲೈಟಿಂಗ್, ವೈರ್‌ಲೆಸ್‌ ಫೋನ್ ಚಾರ್ಜಿಂಗ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ವೆಂಟಿಲೇಟಡ್ ಹಿಂಭಾಗದ ಹಾಗೂ ಮುಂಭಾಗದ ಸೀಟುಗಳನ್ನು ಒಳಗೊಂಡಿದೆ.

 ಸುರಕ್ಷತೆಯ ವಿಚಾರಕ್ಕೆ ಬಂದಾಗ, ಈ ನವೀಕೃತ ಟಾಟಾ ಸಫಾರಿಯಲ್ಲಿ ಆರು ಏರ್‌ಬ್ಯಾಗ್‌ಗಳು ಸ್ಟಾಂಡರ್ಡ್ ಆಗಿ ಇರಲಿದ್ದು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮರಾ ಮತ್ತು ISOFIX ಆ್ಯಂಕರ್‌ ಪಾಯಿಂಟ್‌ಗಳನ್ನು ಉಳಿಸಿಕೊಳ್ಳಲಾಗುತ್ತದೆ. ಸಫಾರಿಯ ಪ್ರಸ್ತುತ ಆವೃತ್ತಿಯು ಈಗಾಗಲೇ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ (ADAS) ಅನ್ನು ಪಡೆದಿದೆ, ಆದರೆ ಇದರ ಡ್ರೈವರ್ ಅಸಿಸ್ಟೆನ್ಸ್ ಕಿಟ್ ಕೂಡಾ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಪಡೆದಿರುವ ಸಾಧ್ಯತೆ ಇದೆ.

ಇದನ್ನೂ ಪರಿಶೀಲಿಸಿ:  ಸೆಪ್ಟೆಂಬರ್ 2023ರ ಅತ್ಯುತ್ತಮ ಮಾರಾಟವಾದ ಟಾಪ್ 15 ಕಾರುಗಳ ನೋಟ

 

ಇಂಜಿನ್ ವಿವರಗಳು

Tata Safari facelift teased

ಈ ಟಾಟಾ ಸಫಾರಿ ಫೇಸ್‌ಲಿಫ್ಟ್ ಈಗಿರುವ 2-ಲೀಟರ್ ಡೀಸೆಲ್ ಇಂಜಿನ್ ಅನ್ನೇ ಉಳಿಸಿಕೊಂಡಿದೆ, ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಜೋಡಿಸಲಾಗಿದ್ದು 170PS ಹಾಗೂ 350Nm ಅನ್ನು ಉತ್ಪಾದಿಸುತ್ತದೆ. ಅಲ್ಲದೇ ಹೊಸ 1.5-ಲೀಟರ್ T-GDi (ಟರ್ಬೋ) ಪೆಟ್ರೋಲ್ ಇಂಜಿನ್ ಅನ್ನೂ ಟಾಟಾ ಹೊರತಂದಿದ್ದು, ಇದು 170PS ಮತ್ತು 280Nm ಅನ್ನು ಉತ್ಪಾದಿಸುತ್ತದೆ. ಈ ಇಂಜಿನ್ ಅನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೆರಡರೊಂದಿಗೂ ಜೋಡಿಸಬಹುದು.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

2023 ಟಾಟಾ ಸಫಾರಿ ರೂ 16 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ನವೆಂಬರ್ 2023ರ ವೇಳೆಗೆ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ. ಬಿಡುಗಡೆಯ ನಂತರ ಇದು ಮಹೀಂದ್ರಾ XUV700, MG ಹೆಕ್ಟರ್ ಪ್ಲಸ್, ಮತ್ತು ಹ್ಯುಂಡೈ ಅಲ್ಕಾಝಾರ್‌ನೊಂದಿಗೆ ತನ್ನ ಪೈಪೋಟಿಯನ್ನು ಮುಂದುವರಿಸುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಸಫಾರಿ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience