ಪರಿಷ್ಕೃತ Tata Safari ಕಾರಿನ ಸಂಪರ್ಕಿತ LED ಟೇಲ್ ಲೈಟ್ ಗಳ ಮೊದಲ ನೋಟ ಹೀಗಿದೆ
ಟಾಟಾ ಸಫಾರಿ ಗಾಗಿ shreyash ಮೂಲಕ ಅಕ್ಟೋಬರ್ 06, 2023 04:27 pm ರಂದು ಪ್ರಕಟಿಸಲಾಗಿದೆ
- 129 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಟಾಟಾ ಸಫಾರಿ ಕಾರಿನ ಬುಕಿಂಗ್ ಅಕ್ಟೋಬರ್ 6ರಂದು ಪ್ರಾರಂಭಗೊಳ್ಳಲಿದೆ
- ಪರಿಷ್ಕೃತ ನೆಕ್ಸನ್ ಕಾರಿನಲ್ಲಿ ನೋಡಿದಂತೆಯೇ ಟಾಟಾ ಸಫಾರಿ ಫೇಸ್ ಲಿಫ್ಟ್ ಮಾದರಿ ಸಹ LED ಟೇಲ್ ಲೈಟ್ ಗಳೊಂದಿಗೆ ವೆಲ್ಕಂ ಅನಿಮೇಶನ್ ಅನ್ನು ಪಡೆಯಲಿದೆ.
- ಇದು ಹೆಚ್ಚು ಎದ್ದು ಕಾಣುವ ಸ್ಕಿಡ್ ಪ್ಲೇಟ್ ಜೊತೆಗೆ ಪರಿಷ್ಕರಣೆಗೆ ಒಳಗಾಗಿರುವ ಹಿಂಭಾಗದ ಬಂಪರ್ ಅನ್ನು ಹೊಂದಿರಲಿದೆ.
- ಒಳಗಡೆಯಲ್ಲಿ ಇದು ಹೊಸ ಇಲ್ಯುಮಿನೇಟೆಡ್ ಟಾಟಾ ಲೋಗೋ ಜೊತೆಗೆ 2 ಸ್ಪೋಕ್ ಸ್ಟಿಯರಿಂಗ್ ವೀಲ್ ಅನ್ನು ಪಡೆಯಲಿದೆ.
- ಅದೇ 2 ಲೀಟರ್ ಡೀಸೆಲ್ ಎಂಜಿನ್ ಅನ್ನು ಉಳಿಸಿಕೊಳ್ಳಲಿದ್ದು, 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆಯೂ ಬರುವ ಸಾಧ್ಯತೆ ಇದೆ.
- ಇದು 2023ರ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು, ಸುಮಾರು ರೂ. 16 ಲಕ್ಷಕ್ಕೆ (ಎಕ್ಸ್ - ಶೋರೂಂ) ದೊರೆಯುವ ಸಾಧ್ಯತೆ ಇದೆ.
ಪರಿಷ್ಕೃತ ಟಾಟಾ ನೆಕ್ಸನ್ ಮತ್ತು ನೆಕ್ಸನ್ EV ಕಾರುಗಳ ಇತ್ತೀಚಿನ ಬಿಡುಗಡೆಯ ನಂತರ, ಈ ಕಾರು ತಯಾರಕ ಸಂಸ್ಥೆಯು ಟಾಟಾ ಸಫಾರಿ ಫೇಸ್ ಲಿಫ್ಟ್ ಅನ್ನು 2023 ರಲ್ಲಿಯೇ ಬಿಡುಗಡೆ ಮಾಡುವುದಕ್ಕಾಗಿ ಸಜ್ಜುಗೊಂಡಿದೆ. ಟಾಟಾ ಸಂಸ್ಥೆಯು ಬಿಡುಗಡೆಯ ಮೊದಲೇ ಈ SUV ಯ ಹೊಸ ಟೀಸರ್ ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದು, ಹೊಸ ವಿನ್ಯಾಸದ ವಿವರಗಳನ್ನು ಅನಾವರಣಗೊಳಿಸಿದೆ. ಪರಿಷ್ಕೃತ ಟಾಟಾ ಸಫಾರಿ ವಾಹನದ ಬುಕಿಂಗ್ ಅಕ್ಟೋಬರ್ 6ರಂದು ಪ್ರಾರಂಭಗೊಳ್ಳಲಿದೆ.
ಟೀಸರ್ ನಲ್ಲಿ ನಮಗೆ ಏನೆಲ್ಲ ಕಾಣ ಸಿಕ್ಕಿದೆ?
ಈ ಕಾರಿನ ವೀಡಿಯೋ ಟೀಸರ್ ನಮಗೆ ಪರಿಷ್ಕೃತ ಸಫಾರಿಯ ಹಿಂಭಾಗದ ವಿನ್ಯಾಸವನ್ನು ತೋರಿಸುತ್ತದೆ. ಇದು ವೆಲ್ಕಂ ಅನಿಮೇಶನ್ ಜೊತೆಗೆ ಸಂಪರ್ಕಿತ LED ಟೇಲ್ ಲ್ಯಾಂಪ್ ಗಳನ್ನು ಹೊಂದಿದ್ದು, ಪರಿಷ್ಕೃತ ಟಾಟಾ ನೆಕ್ಸನ್ ಮತ್ತು ಟಾಟಾ ನೆಕ್ಸನ್ EV ಗಿಂತ ಇದು ಭಿನ್ನವಾಗಿಲ್ಲ. ಜೊತೆಗೆ, ಸಫಾರಿಗಾಗಿ ಬಳಸುವ ಫಾಂಟ್ ಅನ್ನು ಪರಿಷ್ಕರಿಸಲಾಗಿದೆ.
ಸಫಾರಿ ಫೇಸ್ ಲಿಫ್ಟ್ ಕಾರಿನ ಟೀಸರ್ ನಲ್ಲಿ ಹೆಚ್ಚು ಎದ್ದು ಕಾಣುವ ಸ್ಕಿಡ್ ಪ್ಲೇಟ್ ಜೊತೆಗೆ ಪರಿಷ್ಕೃತ ಬಂಪರ್ ವಿನ್ಯಾಸ ಮತ್ತು ಎರಡೂ ಕಡೆಗಳಲ್ಲಿ ಹೊಸ ತ್ರಾಪಿಜ್ಯಾಕಾರದ ಹೌಸಿಂಗ್ ಗಳು ಇರುವುದನ್ನು ಕಾಣಬಹುದು. ಈ ಬದಲಾವಣೆಗಳು ಮಾತ್ರವಲ್ಲದೆ, ಟೇಲ್ ಲ್ಯಾಂಪ್ ಹೌಸಿಂಗ್ ನ ಒಟ್ಟಾರೆ ಆಕಾರ ಮತ್ತು ವಿನ್ಯಾಸವು ಟಾಟಾ ಸಫಾರಿಯ ಈಗಿನ ಆವೃತ್ತಿಯಲ್ಲಿ ಇರುವ ಆಕಾರ ಮತ್ತು ವಿನ್ಯಾಸವನ್ನೇ ಹೋಲುತ್ತದೆ.
ಇದನ್ನು ಸಹ ಓದಿರಿ: 2023 ಟಾಟಾ ಹ್ಯರಿಯರ್ ಕಾರಿನ ಒಳಾಂಗಣದ ಅನಾವರಣ, ನೆಕ್ಸನ್ ಫೇಸ್ ಲಿಫ್ಟ್ ನಿಂದ ಚಾಲಕನ ಹೊಸ ಡಿಜಿಟಲ್ ಡಿಸ್ಪ್ಲೇ ಸೇರ್ಪಡೆ
ಏನೆಲ್ಲ ವೈಶಿಷ್ಟ್ಯವನ್ನು ನಿರೀಕ್ಷಿಸಬಹುದು?
ಒಳಗಡೆಗೆ, ಪರಿಷ್ಕೃತ ಟಾಟಾ ಸಫಾರಿ ಕಾರು, ಹೊಸ ನೆಕ್ಸನ್ ನಲ್ಲಿರುವಂತೆಯೇ, ಇಲ್ಯುಮಿನೇಟೆಡ್ ಟಾಟಾ ಲೋಗೋ ಜೊತೆಗೆ ಹೊಸ 2 ಸ್ಪೋಕ್ ಸ್ಟಿಯರಿಂಗ್ ಅನ್ನು ಹೊಂದಲಿದೆ. ಈ ಹೊಸ SUV ಯು ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ದೊಡ್ಡದಾದ ಡಿಜಿಟಲ್ ಇನ್ಸ್ ಟ್ರುಮೆಂಟಲ್ ಕ್ಲಸ್ಟರ್, ವೈರ್ ಲೆಸ್ ಫೋನ್ ಚಾರ್ಜಿಂಗ್, ಅಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ವೆಂಟಿಲೇಟೆಡ್ ಮುಂಭಾಗದ ಮತ್ತು ಹಿಂಭಾಗದ ಸೀಟುಗಳೊಂದಿಗೆ ರಸ್ತೆಗಿಳಿಯಲಿದೆ.
ಸುರಕ್ಷತೆಯ ದೃಷ್ಟಿಯಿಂದ, ಈ ಫೇಸ್ ಲಿಫ್ಟೆಡ್ SUV ಯು ಪ್ರಮಾಣಿತ ಆರು ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360 ಡಿಗ್ರಿ ಕ್ಯಾಮರಾ ಮತ್ತು ISOFIX ಆಂಕರ್ ಪಾಯಿಂಟುಗಳನ್ನು ಪಡೆಯಲಿದೆ. ಈಗ ಬಳಕೆಯಲ್ಲಿರುವ ಟಾಟಾ ಸಫಾರಿಯು ಈಗಾಗಲೇ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಗಳನ್ನು (ADAS) ಹೊಂದಿದ್ದರೂ, ಹೊಸ ಪರಿಷ್ಕರಣೆಯ ಮೂಲಕ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಸಹ ಅಳವಡಿಸಿಕೊಳ್ಳಲಿದೆ.
ಅದೇ ಡೀಸೆಲ್ ಎಂಜಿನ್
2023ರ ಟಾಟಾ ಸಫಾರಿ ಕಾರು, 170PS ಮತ್ತು 350Nm ಉಂಟು ಮಾಡುವ ಹಾಗೂ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ AMT ಯೊಂದಿಗೆ ಜೊತೆಗೂಡಿಸಲಾದ 2-ಲೀಟರ್ ಡೀಸೆಲ್ ಎಂಜಿನ್ ಅನ್ನೇ ಉಳಿಸಿಕೊಳ್ಳಲಿದೆ. ಆದರೆ ಹೊಸ ಪರಿಷ್ಕರಣೆಯೊಂದಿಗೆ ಸಫಾರಿಯು ಹೊಸ 1.5 ಲೀಟರ್ T-GDi (ಟರ್ಬೋ) ಪೆಟ್ರೋಲ್ ಎಂಜಿನ್ (170PS ಮತ್ತು 280Nm) ಆಯ್ಕೆಯನ್ನು ಸಹ ಪರಿಚಯಿಸುವ ಸಾಧ್ಯತೆ ಇದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಸಫಾರಿ ಫೇಸ್ ಲಿಫ್ಟ್ ಕಾರಿನ ಮಾರಾಟವು ನವೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಳ್ಳುವ ಸಾಧ್ಯತೆ ಇದ್ದು, ರೂ. 16 ಲಕ್ಷಕ್ಕಿಂತ (ಎಕ್ಸ್ ಶೋರೂಂ) ಹೆಚ್ಚಿನ ಬೆಲೆಯನ್ನು ಇದು ಹೊಂದಿರಲಿದೆ. ಇದು ಮಹೀಂದ್ರಾ XUV700, MG ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಜಾರ್ ಜೊತೆಗೆ ಸ್ಪರ್ಧಿಸಲಿದೆ.
0 out of 0 found this helpful