ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಬಿಡುಗಡೆ; ಬೆಲೆ ರೂ. 10.89 ಲಕ್ಷದಿಂದ ಪ್ರಾರಂಭ
ಕಿಯಾ ಸೆಲ್ಟೋಸ್ ಗಾಗಿ ansh ಮೂಲಕ ಜುಲೈ 21, 2023 10:24 pm ರಂದು ಮಾರ್ಪಡಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಮೂರು ವಿಶಾಲ ವೇರಿಯಂಟ್‌ಗಳಲ್ಲಿ ಲಭ್ಯವಿದೆ: ಟೆಕ್ ಲೈನ್, GT ಲೈನ್ ಮತ್ತು X-ಲೈನ್.
2023 ಕಿಯಾ ಸೆಲ್ಟೋಸ್ ಅನ್ನು ಇತ್ತೀಚೆಗೆ ಹೊಸದಾಗಿ ಮರುವಿನ್ಯಾಸಗೊಳಿಸಲಾದ ಅವತಾರದಲ್ಲಿ ಹೊಸ ಫೀಚರ್‌ಗಳೊಂದಿಗೆ ಅನಾವರಣಗೊಳಿಸಲಾಯಿತು. ಕಿಯಾ ಜುಲೈ 14 ರಂದು ಅಪ್‌ಡೇಟ್ ಮಾಡಲಾದ ಕಾಂಪ್ಯಾಕ್ಟ್ ಎಸ್‌ಯುವಿಗೆ ಆರ್ಡರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿತು ಮತ್ತು ಒಂದೇ ದಿನದಲ್ಲಿ 13,424 ಬುಕಿಂಗ್‌ಗಳನ್ನು ಸ್ವೀಕರಿಸಿತು. ಇದೀಗ, ಕಿಯಾ ತನ್ನ ಸಂಪೂರ್ಣ ವೇರಿಯಂಟ್‌ವಾರು ಬೆಲೆ ಪಟ್ಟಿಯನ್ನು ಬಹಿರಂಗಪಡಿಸಿದೆ. ನೀವು ತಿಳಿದುಕೊಳ್ಳಲು ಬಯಸುವ ಮಾಹಿತಿ ಇಲ್ಲಿದೆ:
ಬೆಲೆಗಳು
ವೇರಿಯಂಟ್‌ಗಳು |
1.5-ಲೀಟರ್ ಪೆಟ್ರೋಲ್ MT |
1.5- ಲೀಟರ್ ಪೆಟ್ರೋಲ್ CVT |
1.5- ಲೀಟರ್ ಡೀಸೆಲ್ iMT |
1.5- ಲೀಟರ್ ಡೀಸೆಲ್ AT |
1.5- ಲೀಟರ್ ಟರ್ಬೋ -ಪೆಟ್ರೋಲ್ iMT |
1.5- ಲೀಟರ್ ಟರ್ಬೋ -ಪೆಟ್ರೋಲ್ DCT |
HTE |
ರೂ. 10.89 ಲಕ್ಷ |
- |
ರೂ. 11.99 ಲಕ್ಷ |
- |
- |
- |
HTK |
ರೂ. 12.09 ಲಕ್ಷ |
ರೂ. 13.59 ಲಕ್ಷ |
- |
- |
- |
|
HTK+ |
ರೂ. 13.49 ಲಕ್ಷ |
- |
ರೂ. 14.99 ಲಕ್ಷ |
- |
ರೂ. 14.99 ಲಕ್ಷ |
- |
HTX |
ರೂ. 15.19 ಲಕ್ಷ |
ರೂ. 16.59 ಲಕ್ಷ |
ರೂ. 16.69 ಲಕ್ಷ |
ರೂ. 18.19 ಲಕ್ಷ |
- |
- |
HTX+ |
- |
- |
- |
- |
ರೂ. 18.29 ಲಕ್ಷ |
ರೂ. 19.19 ಲಕ್ಷ |
GTX+ |
- |
- |
- |
ರೂ. 19.79 ಲಕ್ಷ |
- |
ರೂ. 19.79 ಲಕ್ಷ |
X-ಲೈನ್ |
- |
- |
- |
ರೂ. 19.99 ಲಕ್ಷ |
- |
ರೂ. 19.99 ಲಕ್ಷ |
ಎಲ್ಲವೂ ಪ್ರಾಸ್ತಾವಿಕ ಎಕ್ಸ್ ಶೋರೂಂ ದೆಹಲಿಯ ಬೆಲೆಗಳಾಗಿವೆ
ಮಾರಾಟವಾಗುತ್ತಿರುವ ಮಾಡೆಲ್‌ನ ಆರಂಭಿಕ ಬೆಲೆಯು ಬದಲಾಗದೆ ಉಳಿದಿದ್ದರೂ, ಟಾಪ್-ಸ್ಪೆಕ್ ಸೆಲ್ಟೋಸ್ ಫೇಸ್‌ಲಿಫ್ಟ್‌ನ ಬೆಲೆ ಈಗ ರೂ. 20 ಲಕ್ಷವನ್ನು ತಲುಪಿದೆ. ಇದರಿಂದಾಗಿ ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಕಾಂಪ್ಯಾಕ್ಟ್ ಎಸ್‌ಯುವಿ ಆಗಲಿದೆ.
ಪವರ್‌ಟ್ರೇನ್
ಅಪ್‌ಡೇಟ್ ಮಾಡಲಾದ ಕಿಯಾ ಸೆಲ್ಟೋಸ್ 1.5-ಲೀಟರ್ ಪೆಟ್ರೋಲ್ (115PS/144Nm), 1.5-ಲೀಟರ್ ಡೀಸೆಲ್ (116PS/250Nm), ಮತ್ತು 1.5-ಲೀಟರ್ ಟರ್ಬೊ ಪೆಟ್ರೋಲ್ (160PS/253Nm) ಎಂಬ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು CVT ಗೇರ್‌ಬಾಕ್ಸ್‌ಗಳು, 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 6-ಸ್ಪೀಡ್ iMT ಅಥವಾ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ iMT ಅಥವಾ 7--ಸ್ಪೀಡ್ DCT ಗೇರ್‌ಬಾಕ್ಸ್‌ಗಳ ಆಯ್ಕೆಯನ್ನು ನೀಡಲಾಗಿದೆ.
ಫೀಚರ್‌ಗಳು ಮತ್ತು ಸುರಕ್ಷತೆ
ಹೊಸ ಸೆಲ್ಟೋಸ್ ಕಾರಿನಲ್ಲಿ ಹಲವು ಫೀಚರ್‌ಗಳನ್ನು ಅಪ್‌ಡೇಟ್ ಮಾಡಲಾಗಿದೆ. ಇದು 10.25-ಇಂಚಿನ ಡಿಸ್‌ಪ್ಲೇಗಳು (ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ), ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ವಿಹಂಗಮ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ. ಇದು ಹಿಂದಿನ ಮಾಡೆಲ್‌ನಲ್ಲಿ ಲಭ್ಯವಿದ್ದ ವೈರ್‌ಲೆಸ್ ಫೋನ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಕೂಡ ಪಡೆಯುತ್ತದೆ
ಇದನ್ನೂ ಓದಿ: ಬಹಿರಂಗಗೊಂಡ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ GT ಲೈನ್ ಮತ್ತು ಟೆಕ್ ಲೈನ್ ನಡುವಿನ ವ್ಯತ್ಯಾಸಗಳು
ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಇದಲ್ಲದೆ, ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾದಂತಹ ಫೀಚರ್‌ಗಳನ್ನು ಸಹ ಪಡೆಯುತ್ತದೆ. ಇವುಗಳೊಂದಿಗೆ ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್‌ಗಳ (ADAS) ಫೀಚರ್ ಕೂಡ ಲಭ್ಯವಿದ್ದು, ಅದರ ಅಡಿಯಲ್ಲಿ ಫ್ರಂಟ್ ಕೊಲಿಷನ್ ವಾರ್ನಿಂಗ್, ಲೇನ್-ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫಂಕ್ಷನ್‌ಗಳನ್ನು ಒದಗಿಸಲಾಗಿದೆ.
ಪ್ರತಿಸ್ಪರ್ಧಿಗಳು
ಅಪ್‌ಡೇಟ್ ಮಾಡಲಾದ ಸೆಲ್ಟೋಸ್ ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು MG ಆಸ್ಟರ್ ಗಳೊಂದಿಗೆ ತನ್ನ ಪೈಪೋಟಿಯನ್ನು ಮುಂದುವರಿಸಿದೆ. ಇದರೊಂದಿಗೆ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಸಿಟ್ರಾನ್ C3 ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ನೊಂದಿಗೆ ಕೂಡ ಸ್ಪರ್ಧಿಸಲಿದೆ.
ಇದನ್ನೂ ಓದಿ: ಕಿಯಾ ಸೆಲ್ಟೋಸ್ ಡೀಸೆಲ್
0 out of 0 found this helpful