5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್‌ನ ವಿವರ
2024 ಕಿಯಾ ಸೋನೆಟ್ ನ HTK+ ವೇರಿಯಂಟ್ LED ಫಾಗ್ ಲ್ಯಾಂಪ್‌ಗಳು, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ AC ಯಂತಹ ಫೀಚರ್ ಗಳನ್ನು ನೀಡುತ್ತದೆ.
ಕಿಯಾ ಸೋನೆಟ್ ಫೇಸ್‌ಲಿಫ್ಟ್ ಇತ್ತೀಚೆಗೆ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS) ಸೇರಿದಂತೆ ಹೊಚ್ಚ ಹೊಸ ಲುಕ್ ಮತ್ತು ಹೆಚ್ಚಿನ ತಂತ್ರಜ್ಞಾನವನ್ನು ಒಳಗೊಂಡ ಮಿಡ್‌ಲೈಫ್ ಅಪ್ಡೇಟ್ ಅನ್ನು ಪಡೆದುಕೊಂಡಿದೆ. 2024 ರ ಸೋನೆಟ್ ಅನ್ನು ಏಳು ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ: HTE, HTK, HTK+, HTX, HTX+, GTX+ ಮತ್ತು X-ಲೈನ್. ಈ ಲೇಖನದಲ್ಲಿ, 2024 ರ ಸೋನೆಟ್‌ನ ಮಿಡ್-ಸ್ಪೆಕ್ HTK+ ವೇರಿಯಂಟ್ ಹೇಗೆ ಕಾಣುತ್ತದೆ ಮತ್ತು ಅದರಲ್ಲಿ ಏನೇನಿದೆ ಎಂಬುದನ್ನು ನಾವು 5 ಚಿತ್ರಗಳಲ್ಲಿ ನೋಡೋಣ.
ಮುಂಭಾಗದಲ್ಲಿ, 2023 ಕಿಯಾ ಸೋನೆಟ್ ನ HTK+ ವೇರಿಯಂಟ್ ಮ್ಯಾಟ್ ಕ್ರೋಮ್ ನೊಂದಿಗೆ ಸುತ್ತುವರಿದಿರುವ ರಿವೈಸ್ ಆಗಿರುವ ಗ್ರಿಲ್ ಮತ್ತು ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಪಡೆದುಕೊಂಡಿದೆ. ಇದು LED ಹೆಡ್‌ಲೈಟ್‌ಗಳನ್ನು ಪಡೆಯದಿದ್ದರೂ ಕೂಡ, ಇದನ್ನು ಕೆಳಮಟ್ಟದ-ಸ್ಪೆಕ್ ವೇರಿಯಂಟ್ ಗಳಿಂದ ಪ್ರತ್ಯೇಕಿಸಲು LED DRL ಗಳು ಮತ್ತು LED ಫಾಗ್ ಲ್ಯಾಂಪ್ ಗಳನ್ನು ನೀಡಲಾಗಿದೆ.
ಪ್ರೊಫೈಲ್ ಕುರಿತು ಹೇಳುವುದಾದರೆ, ಸೋನೆಟ್ HTK+ 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಅನ್ನು ಹೊಂದಿದೆ, ಇದು HTX+ ವೇರಿಯಂಟ್ ನೊಂದಿಗೆ ನೀಡಲಾಗುವ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಗಿಂತ ಸ್ವಲ್ಪ ಭಿನ್ನವಾಗಿದೆ. HTK+ ನೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಆಯ್ಕೆ ಮಾಡಿಕೊಂಡರೆ, ನೀವು ಸನ್‌ರೂಫ್ ಅನ್ನು ಕೂಡ ಪಡೆಯುತ್ತೀರಿ.
ಇದನ್ನು ಕೂಡ ಓದಿ: 5 ಚಿತ್ರಗಳಲ್ಲಿ ಹೊಸ ಕಿಯಾ ಸೋನೆಟ್ ಬೇಸ್-ಸ್ಪೆಕ್ HTE ವೇರಿಯಂಟ್ ಅನ್ನು ನೋಡಿ
ಕನೆಕ್ಟೆಡ್ LED ಟೈಲ್‌ಲ್ಯಾಂಪ್‌ಗಳನ್ನು ಪಡೆದುಕೊಂಡಿರುವ ಎಂಟ್ರಿ ಲೆವೆಲ್ ವೇರಿಯಂಟ್ ಆಗಿ 2024 ಕಿಯಾ ಸೋನೆಟ್ HTK+ ಹೊರಹೊಮ್ಮಿದೆ. ಇದು ಕಪ್ಪು ಬಣ್ಣದ ಹಿಂಭಾಗದ ಬಂಪರ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಕೂಡ ಪಡೆದಿದೆ, ಇದು ಸೋನೆಟ್‌ಗೆ ಒರಟಾದ ಲುಕ್ ಅನ್ನು ನೀಡುತ್ತದೆ.
ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ HTK+ ವೇರಿಯಂಟ್, ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಆಲ್-ಬ್ಲಾಕ್ ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಸಣ್ಣ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ AC, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಟೈಪ್-C ಚಾರ್ಜಿಂಗ್ ಪೋರ್ಟ್‌ಗಳು, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು ಆಟೋ ಅಪ್/ಡೌನ್ ಡ್ರೈವರ್ ಸೈಡ್ ವಿಂಡೋ ಮತ್ತು ಸ್ಮಾರ್ಟ್ ಕೀಯೊಂದಿಗೆ ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಅನ್ನು ಕೂಡ ಪಡೆಯುತ್ತದೆ.
ಸೋನೆಟ್‌ನ ಈ ವೇರಿಯಂಟ್ ಸಂಪೂರ್ಣ ಡಿಜಿಟಲ್ 10.25-ಇಂಚಿನ ಡ್ರೈವರ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿಲ್ಲ. ಅದರ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಸಪೋರ್ಟ್ ಮಾಡುತ್ತದೆ, ಹಾಗೆ ನೋಡಿದರೆ ಸಬ್‌ಕಾಂಪ್ಯಾಕ್ಟ್ SUVಯ ಮೇಲ್ಮಟ್ಟದ-ಸ್ಪೆಕ್ಡ್ ವೇರಿಯಂಟ್ ನೊಂದಿಗೆ ನೀಡಲಾಗಿರುವ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್ ಮಾತ್ರ ನೀಡುತ್ತದೆ.
ಇದನ್ನು ಕೂಡ ಓದಿ: 2024 ಹ್ಯುಂಡೈ ಕ್ರೆಟಾ EX ವೇರಿಯಂಟ್ ಅನ್ನು 5 ಚಿತ್ರಗಳಲ್ಲಿ ವಿವರಿಸಲಾಗಿದೆ
ಹಿಂಭಾಗದ ಸೀಟಿನಲ್ಲಿ ಕುಳಿತವರಿಗೆ, ಸೋನೆಟ್ ಫೇಸ್‌ಲಿಫ್ಟ್ ರಿಯರ್ AC ವೆಂಟ್‌ಗಳು, ರಿಯರ್ ಸನ್‌ಶೇಡ್‌ಗಳು ಮತ್ತು USB ಟೈಪ್-C ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡುತ್ತದೆ. ಆದರೆ ಹಿಂಬದಿಯ ಸೀಟ್‌ಗಳಿಗೆ ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ನೀಡಲಾಗಿಲ್ಲ.
ಸೋನೆಟ್‌ನ ಈ ವೇರಿಯಂಟ್ ನಲ್ಲಿರುವ ಸುರಕ್ಷತಾ ಫೀಚರ್ ಗಳ ಕುರಿತು ಹೇಳುವುದಾದರೆ, ಇದು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್-ಸ್ಟಾರ್ಟ್ ಅಸಿಸ್ಟ್, ಸೆನ್ಸರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲ್ಲಾ ಪ್ಯಾಸೆಂಜರ್ ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ನೀಡಲಾಗಿದೆ.
ಪವರ್‌ಟ್ರೇನ್ ಆಯ್ಕೆ
ಕಿಯಾ ತನ್ನ ಸೋನೆಟ್‌ನ HTK+ ವೇರಿಯಂಟ್ ಅನ್ನು ಎಲ್ಲಾ ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ ಆದರೆ ಆಟೋಮ್ಯಾಟಿಕ್ ಆಯ್ಕೆ ಮಾತ್ರ ಲಭ್ಯವಿಲ್ಲ. ಆಯ್ಕೆಗಳಲ್ಲಿ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು(120 PS / 172 Nm) 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದೆ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಗೆ ಜೋಡಿಸಲಾಗಿದೆ, 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು (83 PS / 115 Nm) 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ, ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು(116 PS / 250 Nm) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ HTK+ ವೇರಿಯಂಟ್ ಬೆಲೆಗಳು ರೂ 9.89 ಲಕ್ಷದಿಂದ ಶುರುವಾಗಿ ರೂ 11.39 ಲಕ್ಷದವರೆಗೆ ಇದೆ, ಹಾಗೂ ಅದರ ಟಾಪ್-ಸ್ಪೆಕ್ ವೇರಿಯಂಟ್ ಬೆಲೆಯು ರೂ 15.69 ಲಕ್ಷವಾಗಿದೆ (ಪರಿಚಯಾತ್ಮಕ, ಎಕ್ಸ್-ಶೋರೂಮ್ ಪ್ಯಾನ್ ಇಂಡಿಯಾ). ಇದು ಟಾಟಾ ನೆಕ್ಸಾನ್, ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ಮಾರುತಿ ಸುಜುಕಿ ಬ್ರೆಝಾ ಮತ್ತು ರೆನಾಲ್ಟ್ ಕಿಗರ್ ಮುಂತಾದವುಗಳ ಜೊತೆಗೆ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಸೋನೆಟ್ ಆನ್ ರೋಡ್ ಬೆಲೆ
Write your Comment on Kia ಸೊನೆಟ್
I want kia sonet htk plus variant but this variant doesn't have sunroof now I want to buy venue sx with sunroof If kia gives sunroof on htk plus variant then I buy.