ಕಿಯಾ ಸೋನೆಟ್ ಫೇಸ್ಲಿಫ್ಟ್ ನಾಳೆ ಬಿಡುಗಡೆಯಾಗುತ್ತಿದೆ
ಕಿಯಾ ಸೊನೆಟ್ ಗಾಗಿ sonny ಮೂಲಕ ಜನವರಿ 11, 2024 06:49 pm ರಂದು ಪ್ರಕಟಿಸಲಾಗಿದೆ
- 222 Views
- ಕಾಮೆಂಟ್ ಅನ್ನು ಬರೆಯಿರಿ
ಎಂಟ್ರಿ ಲೆವೆಲ್ ಕಿಯಾ ಸಬ್ಕಾಂಪ್ಯಾಕ್ಟ್ SUVಯು ಸಣ್ಣ ಡಿಸೈನ್ ಟ್ವೀಕ್ಗಳನ್ನು ಮತ್ತು ಅನೇಕ ಹೊಸ ಫೀಚರ್ ಗಳನ್ನು ಪಡೆದಿದೆ.
-
ಕಿಯಾ ಸೋನೆಟ್ ಅನ್ನು ಡಿಸೆಂಬರ್ 2023 ರ ಮಧ್ಯದಲ್ಲಿ ಅನಾವರಣಗೊಳಿಸಲಾಯಿತು ಮತ್ತು ಅದರ ನಂತರ ಬುಕಿಂಗ್ ಅನ್ನು ತೆರೆಯಲಾಯಿತು.
-
ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಶಾರ್ಪ್ ಆಗಿರುವ ಎಕ್ಸ್ಟೀರಿಯರ್ ಸ್ಟೈಲ್ ಅನ್ನು ಪಡೆದಿದೆ ಆದರೆ ಕ್ಯಾಬಿನ್ಗೆ ಹೆಚ್ಚು ಬದಲಾವಣೆಗಳಾಗಿಲ್ಲ.
-
ಹೊಸದಾಗಿ ಸೇರಿಸಲಾದ ಫೀಚರ್ ಗಳಲ್ಲಿ ADAS, ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಮತ್ತು ಇನ್ನಷ್ಟು ಹೆಚ್ಚಿನ ಸೌಕರ್ಯಗಳನ್ನು ಒಳಗೊಂಡಿವೆ.
-
ಇದು ಎಲ್ಲಾ ಮೂರು ಎಂಜಿನ್ ಆಯ್ಕೆಗಳಾದ ಪೆಟ್ರೋಲ್, ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮುಂದುವರಿಸುತ್ತಿದೆ.
-
ಕಾರಿನ ಬೆಲೆಯು 8 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ).
ಕಿಯಾ ಸೋನೆಟ್ ಫೇಸ್ಲಿಫ್ಟ್ ನಾಳೆ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ಕಳೆದ ವರ್ಷ ಡಿಸೆಂಬರ್ ಮಧ್ಯದಲ್ಲಿ ತನ್ನ ಅಧಿಕೃತ ಮಾರುಕಟ್ಟೆ ಪ್ರವೇಶವನ್ನು ಮಾಡಿತು ಮತ್ತು ಬೆಲೆಗಳನ್ನು ಹೊರತುಪಡಿಸಿ ಮಿಕ್ಕಿದ ಎಲ್ಲಾ ವಿವರಗಳು ಈಗಾಗಲೇ ತಿಳಿದಿವೆ. ಅಪ್ಡೇಟ್ ಆಗಿರುವ ಸೋನೆಟ್ಗಾಗಿ ಬುಕಿಂಗ್ಗಳು ಸುಮಾರು ಮೂರು ವಾರಗಳಿಂದ ನಡೆಯುತ್ತಿವೆ. ಬಿಡುಗಡೆಗೆ ಮುಂಚಿತವಾಗಿ ಅಪ್ಡೇಟ್ ಆಗಿರುವ ಕಿಯಾ ಸಬ್ -4m SUV ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳ ರೀಕ್ಯಾಪ್ ಇಲ್ಲಿದೆ.
ಡಿಸೈನ್ ನಲ್ಲಿ ಬದಲಾವಣೆಗಳು
ಕಿಯಾ ತನ್ನ ಸೋನೆಟ್ ಗೆ ಸ್ಟೈಲಿಂಗ್ ಆಗಿರುವ ಮುಂಭಾಗ ಮತ್ತು ಹಿಂಭಾಗವನ್ನು ನೀಡಿದೆ, ವಿಶೇಷವಾಗಿ LED DRL ಗಳು ಮತ್ತು ಕನೆಕ್ಟೆಡ್ ಟೈಲ್ಲ್ಯಾಂಪ್ಗಳಂತಹ ಹೊಸ ಲೈಟಿಂಗ್ ಎಲಿಮೆಂಟ್ ಗಳ ಅಳವಡಿಕೆಯನ್ನು ಮಾಡಿದೆ. ಡ್ಯಾಶ್ಬೋರ್ಡ್ ಡಿಸೈನ್ ಅನ್ನು ಹೊರತುಪಡಿಸಿ ಕ್ಯಾಬಿನ್ಗೆ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿಲ್ಲ, ಆದರೆ ರಿವೈಸ್ ಆಗಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ನೀಡಲಾಗಿದೆ.
ಫೀಚರ್ ಅಪ್ಡೇಟ್ ಗಳು
ಸೋನೆಟ್ ಅನ್ನು ಅದರ ವಿಭಾಗದಲ್ಲಿನ ಅತ್ಯುತ್ತಮ ಸುಸಜ್ಜಿತ SUV ಗಳಲ್ಲಿ ಒಂದನ್ನಾಗಿ ಮಾಡಲು ಹಲವಾರು ಫೀಚರ್ ಅಪ್ಗ್ರೇಡ್ ಗಳನ್ನು ಮಾಡಲಾಗಿದೆ. ಇದು ಈಗ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ, ಆರು ಏರ್ಬ್ಯಾಗ್ಗಳು (ಸ್ಟ್ಯಾಂಡರ್ಡ್ ಆಗಿ ಇರುವಂತೆ) ಮತ್ತು 4-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ನೊಂದಿಗೆ ಬರುತ್ತದೆ. ಕಿಯಾ ಸಬ್ಕಾಂಪ್ಯಾಕ್ಟ್ SUV ಗಾಗಿ ಮಾಡಲಾಗಿರುವ ಒಂದು ದೊಡ್ಡ ಫೀಚರ್ ಸೇರ್ಪಡೆಯೆಂದರೆ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS).
ಕಿಯಾ ಮೂರು ಟ್ರಿಮ್ಗಳಲ್ಲಿ ಸೋನೆಟ್ ಅನ್ನು ನೀಡುತ್ತಿದೆ - ಟೆಕ್ ಲೈನ್, ಜಿಟಿ ಲೈನ್ ಮತ್ತು ಎಕ್ಸ್-ಲೈನ್ ಮತ್ತು ಒಟ್ಟು 7 ವೇರಿಯಂಟ್ ಗಳು.
ಸಂಬಂಧಿಸಿದ ಲೇಖನ: ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್‌ನ ಪ್ರತಿಯೊಂದು ವೇರಿಯಂಟ್ ನಲ್ಲಿ ಏನೇನಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ
ಪವರ್‌ಟ್ರೇನ್ ಗಳು
ಸ್ಥಗಿತಗೊಳಿಸುತ್ತಿರುವ ಹಳೆ ಸೋನೆಟ್‌ನ ಮೂರು ಎಂಜಿನ್ ಆಯ್ಕೆಗಳನ್ನು ಕಿಯಾ ಉಳಿಸಿಕೊಂಡಿದೆ - 1.2-ಲೀಟರ್ ಪೆಟ್ರೋಲ್, 1-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್. ಒಂದೇ ಒಂದು ಬದಲಾವಣೆಯೆಂದರೆ, iMT (ಕ್ಲಚ್ ಪೆಡಲ್ ಇಲ್ಲದೆ ಮಾನ್ಯುಯಲ್) ಆಯ್ಕೆಯನ್ನು ಉಳಿಸಿಕೊಂಡಿದೆ, ಮತ್ತು ಡೀಸೆಲ್ ಎಂಜಿನ್ ಈಗ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅನ್ನು ಪಡೆಯುತ್ತಿದೆ. ಸ್ಪೆಸಿಫಿಕೇಷನ್ ಗಳನ್ನು ಕೆಳಗೆ ವಿವರಿಸಲಾಗಿದೆ:
1.2-litre N.A.* Petrol |
1-litre Turbo-petrol |
1.5-litre Diesel |
|
1.2-ಲೀಟರ್ N.A.* ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
|
ಪವರ್ |
83 PS |
120 PS |
116 PS |
ಟಾರ್ಕ್ |
115 Nm |
172 Nm |
250 Nm |
ಟ್ರಾನ್ಸ್ಮಿಷನ್ |
5- ಸ್ಪೀಡ್ MT |
6- ಸ್ಪೀಡ್ iMT, 7- ಸ್ಪೀಡ್ DCT |
6- ಸ್ಪೀಡ್ iMT, 6- ಸ್ಪೀಡ್ MT,6- ಸ್ಪೀಡ್ AT |
ಇದನ್ನು ಕೂಡ ಓದಿ: 2024 ಕಿಯಾ ಸೋನೆಟ್ ನ ವೇರಿಯಂಟ್-ವಾರು ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳ ವಿವರ ಇಲ್ಲಿದೆ
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸೋನೆಟ್ ಫೇಸ್ಲಿಫ್ಟ್ ಬೆಲೆಯು 8 ಲಕ್ಷದಿಂದ ಶುರುವಾಗಿ 15 ಲಕ್ಷದವರೆಗೆ (ಎಕ್ಸ್ ಶೋರೂಂ) ಇರಲಿದೆ. ಇದು ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಮುಂತಾದವುಗಳೊಂದಿಗೆ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಕಿಯಾ ಸೋನೆಟ್ ಆಟೋಮ್ಯಾಟಿಕ್
0 out of 0 found this helpful