Kia Sonet Facelift ಕಾರಿನ ಹೊಸ ವೈಶಿಷ್ಟ್ಯಗಳನ್ನು ದೃಢೀಕರಿಸಿದ ಹೊಸ ಟೀಸರ್
ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 08, 2023 01:36 pm ರಂದು ಪ್ರಕಟಿಸಲಾಗಿದೆ
- 37 Views
- ಕಾಮೆಂಟ್ ಅನ್ನು ಬರೆಯಿರಿ
ಇತ್ತೀಚಿನ ಟೀಸರ್ ಪ್ರಕಾರ, ಹೊಸ ಸೋನೆಟ್ ಕಾರು, ಈ ವಿಭಾಗದಲ್ಲಿ ಹ್ಯುಂಡೈ ವೆನ್ಯು N ಲೈನ್ ನಂತರ ADAS ಪಡೆದ ಎರಡನೇ ಮಾದರಿ ಎನಿಸಲಿದೆ
- ಈ ಟೀಸರ್ ಪ್ರಕಾರ, ಸೋನೆಟ್ ಫೇಸ್ ಲಿಫ್ಟ್ ಗೆ ಸೆಲ್ಟೋಸ್ ನಲ್ಲಿರುವಂತೆಯೇ ಚಾಲಕನ ಡಿಜಿಟಲ್ ಡಿಸ್ಪ್ಲೇ ದೊರೆಯಲಿದೆ.
- ಹೊರಾಂಗಣದ ಮಾರ್ಪಾಡಿನಲ್ಲಿ LED ಫಾಗ್ ಲ್ಯಾಂಪ್ ಗಳು, ಸಂಪರ್ಕಿತ ಮತ್ತು ಮರುವಿನ್ಯಾಸಕ್ಕೆ ಒಳಪಡಿಸಿದ LED ಟೇಲ್ ಲೈಟ್ ಗಳು ಮತ್ತು ಹೊಸ ಅಲೋಯ್ ವೀಲ್ ಗಳು ಸೇರಿವೆ.
- ಕ್ಯಾಬಿನ್ ನಲ್ಲಿ ಹೊಸ ಅಫೋಲ್ಸ್ಟರಿ ಮತ್ತು ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಕಾಣಬಹುದು.
- 10.25 ಇಂಚಿನ ಅದೇ ಟಚ್ ಸ್ಕ್ರೀನ್, ಸನ್ ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳ ಜೊತೆಗೆ ಬರಲಿದೆ.
- ಪವರ್ ಟ್ರೇನ್ ಆಯ್ಕೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳೆರಡೂ ಸೇರಿವೆ.
- ಇದು 2024ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭಗೊಳ್ಳಲಿದೆ.
ಪರಿಷ್ಕೃತ ಕಿಯಾ ಸೋನೆಟ್ ವಾಹನವು ರಸ್ತೆಯಲ್ಲಿ ಓಡಾಡಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ನಡುವೆ ಕಾರು ತಯಾರಕ ಸಂಸ್ಥೆಯು ಪರಿಷ್ಕೃತ SUV ಯ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಮಾಡಲಾಗಿರುವ ಬದಲಾವಣೆಗಳ ಕುರಿತು ಒಂದಷ್ಟು ಮಾಹಿತಿಯನ್ನು ನೀಡುತ್ತದೆ. ಇತ್ತೀಚಿನ ಟೀಸರ್, ಹೊಸ ಸೋನೆಟ್ ಕುರಿತು ಅನೇಕ ಮಾಹಿತಿಗಳನ್ನು ನೀಡುತ್ತದೆ.
ಗಮನಿಸಲಾದ ಹೊಸ ವಿವರಗಳು
ಪರಿಷ್ಕೃತ ಸೋನೆಟ್ ಕಾರಿನಲ್ಲಿ ಕಂಡುಬಂದ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಅದರಲ್ಲಿ ಕಂಡುಬಂದಿರುವ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS). ಇನ್ಸ್ ಟ್ರುಮೆಂಟ್ ಕ್ಲಸ್ಟರ್ ನಲ್ಲಿರುವ ʻಕೊಲೀಶನ್ ವಾರ್ನಿಂಗ್ʼ ಸಂಕೇತ ಮತ್ತು ಅಟೋ ಎಮರ್ಜೆನ್ಸಿ ಬ್ರೇಕಿಂಗ್ (AEB) ಇದನ್ನು ದೃಢೀಕರಿಸಿವೆ. ಅಲ್ಲದೆ, ಈ ವಿಭಾಗದಲ್ಲಿ, ಹ್ಯುಂಡೈ ವೆನ್ಯು N ಲೈನ್ ನಂತರ ADAS ಸೌಲಭ್ಯವನ್ನು ಒದಗಿಸಿದ ಎರಡನೇ ವಾಹನ ಇದಾಗಿದೆ.
ಹಿಂದಿನ ಟೀಸರ್ ಗಳಲ್ಲಿ ಭಾಗಶಃವಾಗಿ ಮಾತ್ರವೇ ಕಂಡುಬಂದಿದ್ದರೂ, ಇತ್ತೀಚಿನ ವೀಡಿಯೋ ಕ್ಲಿಪ್ ಪ್ರಕಾರ ಇದರಲ್ಲಿ ಸೆಲ್ಟೋಸ್ ನಲ್ಲಿರುವಂತಹ ಚಾಲಕನ ಡಿಜಿಟಲ್ ಡಿಸ್ಪ್ಲೇ ಇರುವುದು ಖಚಿತವಾಗಿದೆ. ಹಿಂಭಾಗದಲ್ಲಿ ಪರಿಷ್ಕೃತ ಸೋನೆಟ್ ಕಾರು ಸಂಪರ್ಕಿತ LED ಟೇಲ್ ಲ್ಯಾಂಪ್ ಅನ್ನು ಹೊಂದಿದೆ.
ಹಿಂದಿನ ಟೀಸರ್ ಮೂಲಕ, 2024 ಸೋನೆಟ್ ಕಾರು ಮರುವಿನ್ಯಾಸಕ್ಕೆ ಒಳಪಟ್ಟ ಗ್ರಿಲ್, ಕೋರೆ ಹಲ್ಲಿನ ಆಕಾರದ ಉದ್ದನೆಯ LED DRL ಗಳು, ಸ್ಥಾನಾಂತರಗೊಂಡ ಮತ್ತು ನುಣುಪಾದ LED ಫಾಗ್ ಲ್ಯಾಂಪ್ ಗಳು ಮತ್ತು ಹೊಸ ಅಲೋಯ್ ವೀಲ್ ಗಳನ್ನು ಹೊಂದಿರುವುದನ್ನು ಕಿಯಾ ಸಂಸ್ಥೆಯು ಬಹಿರಂಗಪಡಿಸಿತ್ತು.
ಕ್ಯಾಬಿನ್ ನಲ್ಲಿ ನಿರೀಕ್ಷಿತ ಪರಿಷ್ಕರಣೆಗಳು
ಒಳಗಡೆಯಲ್ಲಿ ಪರಿಷ್ಕೃತ ಸೋನೆಟ್ ಕಾರು ಹಳೆಯ ಮಾದರಿಯಲ್ಲಿ ಇರುವ 10.25 ಇಂಚಿನ ಟಚ್ ಸ್ಕ್ರೀನ್ ಅನ್ನೇ ಹೊಂದಿರಲಿದ್ದು, ಇದರೊಂದಿಗೆ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ಸೀಟ್ ಅಫೋಲ್ಸ್ಟರಿಯನ್ನು ಪಡೆಯುವ ಸಾಧ್ಯತೆ ಇದೆ.
ಚಾಲಕನ ಡಿಜಿಟಲ್ ಡಿಸ್ಪ್ಲೇ ಜೊತೆಗೆ ಸೇರ್ಪಡೆಗೊಂಡಿರುವ ಇನ್ನೊಂದು ವೈಶಿಷ್ಟ್ಯ ಎಂದರೆ ಅದು 360 ಡಿಗ್ರಿ ಕ್ಯಾಮರಾ. ಕಿಯಾ ಸಂಸ್ಥೆಯು ಈ ಸಬ್-4m SUV ಯಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ವೈರ್ ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಸನ್ ರೂಫ್ ಮತ್ತು ಅಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಒದಗಿಸುವುದನ್ನು ಮುಂದುವರಿಸಲಿದೆ.
ADAS ಸೇರ್ಪಡೆಯ ಜೊತೆಗೆ, ಇದರ ಸುರಕ್ಷತಾ ಪಟ್ಟಿಯು ಆರು ಏರ್ ಬ್ಯಾಗ್ ಗಳು (ಈಗ ಇದು ಪ್ರಮಾಣಿತ), ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು, ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಹೊಂದಿರಲಿದೆ.
ಇದನ್ನು ಸಹ ಓದಿರಿ: ಭಾರತದಲ್ಲಿ 2024ರಲ್ಲಿ ಹೊರಬರಲಿರುವ ಕಾರುಗಳು: ಮುಂದಿನ ವರ್ಷ ನೀವು ರಸ್ತೆಯಲ್ಲಿ ಕಾಣಲಿರುವ ಕಾರುಗಳ ಎಲ್ಲಾ ಮಾಹಿತಿ ಇಲ್ಲಿದೆ
ಅದೇ ಪವರ್ ಟ್ರೇನ್ ಆಯ್ಕೆಗಳು
ಕಿಯಾ ಸಂಸ್ಥೆಯು ಸೋನೆಟ್ ಕಾರಿನ ಹುಡ್ ಅಡಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ SUVಯು ಕೆಳಗಿನ ಆಯ್ಕೆಗಳನ್ನು ಹೊಂದಿದೆ:
ವಿವರಗಳು |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೊ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 PS |
120 PS |
116 PS |
ಟಾರ್ಕ್ |
115 Nm |
172 Nm |
250 Nm |
ಟ್ರಾನ್ಸ್ ಮಿಶನ್ |
5-ಸ್ಪೀಡ್ MT |
6-ಸ್ಪೀಡ್ iMT/ 7-ಸ್ಪೀಡ್ DCT |
6-ಸ್ಪೀಡ್ iMT/ 6-ಸ್ಪೀಡ್ AT |
ಕಿಯಾ ಸಂಸ್ಥೆಯು iMT (ಕ್ಲಚ್ ಪೆಡಲ್ ಇಲ್ಲದೆಯೇ ಮ್ಯಾನುವಲ್ ಟ್ರಾನ್ಸ್ ಮಿಶನ್) ಬದಲಿಗೆ ಡೀಸೆಲ್ ಎಂಜಿನ್ ಜೊತೆಗೆ ಮಾಮೂಲಿ 6 ಸ್ಪೀಡ್ MT ಯನ್ನು ಹೊರಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ನಿಜವಾಗಲಿದೆಯೇ ಎಂಬುದನ್ನು ನೋಡಬೇಕಾದರೆ ನೀವು ಇನ್ನಷ್ಟ ಕಾಲ ಕಾಯಬೇಕು.
ಇದರ ಬೆಲೆ ಎಷ್ಟಿರಬಹುದು?
ಕಿಯಾ ಸಂಸ್ಥೆಯು 2024ರ ಆರಂಭದಲ್ಲಿ ಈ ಪರಿಷ್ಕೃತ ವಾಹನದ ಮಾರಾಟವನ್ನು ಪ್ರಾರಂಭಿಸಿದಾಗ ಇದರ ಬೆಲೆಯು ರೂ. 8 ಲಕ್ಷದಿಂದ (ಎಕ್ಸ್ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಟಾಟಾ ನೆಕ್ಸನ್, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ನಿಸಾನ್ ಮ್ಯಾಗ್ನೈಟ್, ಮಹೀಂದ್ರಾ XUV300, ರೆನೋ ಕೈಗರ್, ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ ಜೊತೆಗಿನ ಸ್ಪರ್ಧೆಗೆ ಮರುಜೀವ ದೊರೆಯಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್ ಡೀಸೆಲ್
0 out of 0 found this helpful