Kia Syros ನಿರೀಕ್ಷಿತ ಬೆಲೆಗಳು: ಸಬ್-4m ಎಸ್‌ಯುವಿಯಾದ ಸೋನೆಟ್‌ಗಿಂತ ಎಷ್ಟು ದುಬಾರಿಯಾಗಿದೆ ?
ಕಿಯಾ ಸೈರೋಸ್ ಫೆಬ್ರವರಿ 1 ರಂದು ಬಿಡುಗಡೆಯಾಗಲಿದ್ದು, ಇದು HTK, HTK (O), HTK ಪ್ಲಸ್, HTX, HTX ಪ್ಲಸ್, ಮತ್ತು HTX ಪ್ಲಸ್ (O) ಎಂಬ ಆರು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ
ಕಿಯಾ ಸಿರೋಸ್ ಭಾರತದಲ್ಲಿ ಕಿಯಾದ ಎರಡನೇ ಸಬ್-4 ಮೀ ಎಸ್‌ಯುವಿಯಾಗಿದ್ದು, ಇದನ್ನು ಕಿಯಾ ಸೋನೆಟ್ ಜೊತೆಗೆ ಮಾರಾಟ ಮಾಡಲಾಗುವುದು, ಆದರೆ ಇದು ಹೆಚ್ಚು ಪ್ರೀಮಿಯಂ ಎಸ್‌ಯುವಿಯಾಗಿರಲಿದೆ. ಕೊರಿಯಾದ ಕಾರು ತಯಾರಕ ಕಂಪನಿಯು ಫೆಬ್ರವರಿ 1 ರಂದು ಸಿರೋಸ್ ಅನ್ನು ಬಿಡುಗಡೆ ಮಾಡಲಿದ್ದರೂ, ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಕಿಯಾ ಅವರ ಭಾರತೀಯ ಎಸ್‌ಯುವಿ ರೇಂಜ್‌ನಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಸ್ಥಾನ ಪಡೆಯಲಿದೆ ಎಂದು ಈಗಾಗಲೇ ತಿಳಿದಿದೆ. ಆದ್ದರಿಂದ, ಹೊಸ ಸಬ್ -4ಮೀ ಎಸ್‌ಯುವಿ ಶೀಘ್ರದಲ್ಲೇ ಮಾರಾಟಕ್ಕೆ ಬರುವಾಗ ನಾವು ನಿರೀಕ್ಷಿಸುವ ವೇರಿಯೆಂಟ್-ವಾರು ಬೆಲೆಗಳು ಇಲ್ಲಿವೆ:
ವೇರಿಯೆಂಟ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
||
6-ಸ್ಪೀಡ್ ಮ್ಯಾನ್ಯುವಲ್ |
7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯಾನ್ಯುವಲ್ |
6-ಸ್ಪೀಡ್ ಆಟೋಮ್ಯಾಟಿಕ್ |
|
ಹೆಚ್‌ಟಿಕೆ |
9.70 ಲಕ್ಷ ರೂ. |
– |
– |
– |
ಹೆಚ್‌ಟಿಕೆ (ಒ) |
10.50 ಲಕ್ಷ ರೂ. |
– |
11.50 ಲಕ್ಷ ರೂ. |
– |
ಹೆಚ್‌ಟಿಕೆ ಪ್ಲಸ್ |
11.50 ಲಕ್ಷ ರೂ. |
12.50 ಲಕ್ಷ ರೂ. |
12.50 ಲಕ್ಷ ರೂ. |
– |
ಹೆಚ್‌ಟಿಎಕ್ಸ್ |
12.50 ಲಕ್ಷ ರೂ. |
13.50 ಲಕ್ಷ ರೂ. |
13.50 ಲಕ್ಷ ರೂ. |
– |
ಹೆಚ್‌ಟಿಎಕ್ಸ್ ಪ್ಲಸ್ |
– |
14.50 ಲಕ್ಷ ರೂ. |
– |
15.50 ಲಕ್ಷ ರೂ. |
ಹೆಚ್‌ಟಿಎಕ್ಸ್ ಪ್ಲಸ್ (ಒ) |
– |
15.50 ಲಕ್ಷ ರೂ. |
– |
16.50 ಲಕ್ಷ ರೂ. |
ಗಮನಿಸಿ: ಈ ಬೆಲೆಗಳು ನಮ್ಮ ಅಂದಾಜುಗಳಾಗಿವೆ. ಅಧಿಕೃತ ಬೆಲೆಗಳನ್ನು ಫೆಬ್ರವರಿ 1, 2025 ರಂದು ಬಹಿರಂಗಪಡಿಸಲಾಗುತ್ತದೆ.
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ
ಇದನ್ನೂ ಓದಿ: ಎಕ್ಸ್‌ಕ್ಲೂಸಿವ್: ಒಟ್ಟಿಗೆ ಬಿಡುಗಡೆಯಾಗಲಿರುವ Kia Carens ಫೇಸ್‌ಲಿಫ್ಟ್ ಮತ್ತು ಕಿಯಾ ಕ್ಯಾರೆನ್ಸ್ ಇವಿ, ಯಾವ ಸಮಯದಲ್ಲಿ ?
ಕಿಯಾ ಸೈರೋಸ್: ಒಂದು ಅವಲೋಕನ
ಕಿಯಾ ಸೈರೋಸ್ ತನ್ನ ವಿನ್ಯಾಸ ಸ್ಫೂರ್ತಿಯನ್ನು ದೊಡ್ಡದಾದ ಕಿಯಾ ಇವಿ9 ಎಸ್‌ಯುವಿಯಿಂದ ಪಡೆದುಕೊಂಡಿದ್ದು, 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು, L-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳು, ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿರುವ ಬಾಕ್ಸೀ ವಿನ್ಯಾಸವನ್ನು ಹೊಂದಿದೆ. ಇದು ಮುಂಭಾಗ, ಹಿಂಭಾಗ ಮತ್ತು ಸೈಡ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.
ಒಳಭಾಗದಲ್ಲಿ, ಇದು ಹೊಂದಾಣಿಕೆ ಮಾಡಬಹುದಾದ ಮತ್ತು ವೆಂಟಿಲೇಟೆಡ್ ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಡ್ಯುಯಲ್-ಟೋನ್ ಥೀಮ್ ಅನ್ನು ನೀಡುತ್ತದೆ. ಇತರ ಫೀಚರ್‌ಗಳಲ್ಲಿ 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, AC ಕಂಟ್ರೋಲ್‌ಗಳಿಗಾಗಿ 5-ಇಂಚಿನ ಟಚ್-ಸಕ್ರಿಯಗೊಳಿಸಿದ ಪರದೆ, ಆಟೋ AC, ಪನೋರಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿವೆ.
ಇದರ ಸುರಕ್ಷತಾ ಜಾಲವು 6 ಏರ್‌ಬ್ಯಾಗ್‌ಗಳು (ಪ್ರಮಾಣಿತವಾಗಿ), 360-ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್-2 ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಸೂಟ್ ಅನ್ನು ಸಹ ಹೊಂದಿದೆ.
ಕಿಯಾ ಸಿರೋಸ್: ಪವರ್‌ಟ್ರೇನ್ ಆಯ್ಕೆಗಳು
ಕಿಯಾ ಸಿರೋಸ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಇವೆರಡನ್ನೂ ಕಿಯಾ ಸೋನೆಟ್‌ನಿಂದ ಎರವಲು ಪಡೆಯಲಾಗಿದೆ. ಇದರ ವಿವರವಾದ ವಿಶೇಷಣಗಳು ಇಲ್ಲಿವೆ:
ಎಂಜಿನ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
120 ಪಿಎಸ್ |
116 ಪಿಎಸ್ |
ಟಾರ್ಕ್ |
172 ಎನ್‌ಎಮ್ |
250 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನ್ಯುವಲ್ / 7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯನ್ಯುವಲ್ / 6-ಸ್ಪೀಡ್ ಆಟೋಮ್ಯಾಟಿಕ್ |
ಕ್ಲೈಮ್ ಮಾಡಲಾದ ಇಂಧನ ದಕ್ಷತೆ |
ಮ್ಯಾನ್ಯುವಲ್: ಪ್ರತಿ ಲೀ.ಗೆ 18.20 ಕಿ.ಮೀ. / ಡಿಸಿಟಿ: ಪ್ರತಿ ಲೀ.ಗೆ 17.68 ಕಿ.ಮೀ. |
ಮ್ಯಾನ್ಯುವಲ್: ಪ್ರತಿ ಲೀ.ಗೆ 20.75 ಕಿ.ಮೀ. / ಆಟೋಮ್ಯಾಟಿಕ್: ಪ್ರತಿ ಲೀ.ಗೆ 17.65 ಕಿ.ಮೀ. |
ಕಿಯಾ ಸಿರೋಸ್: ಪ್ರತಿಸ್ಪರ್ಧಿಗಳು
ಕಿಯಾ ಸಿರೋಸ್ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾದಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಲಿದ್ದು, ಹಾಗೆಯೇ, ಟಾಟಾ ನೆಕ್ಸಾನ್, ಸ್ಕೋಡಾ ಕೈಲಾಕ್, ಕಿಯಾ ಸೋನೆಟ್ ಮತ್ತು ಮಾರುತಿ ಬ್ರೆಝಾದಂತಹ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳೊಂದಿಗೆ ಸ್ಪರ್ಧಿಸಲಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ