ವೈರಲ್ ಆದ ಸ್ಕಾರ್ಪಿಯೋ N ನಲ್ಲಿ ನೀರು ಸೋರಿಕೆ ವೀಡಿಯೋಗೆ ವೀಡಿಯೋ ಮೂಲಕವೇ ಪ್ರತಿಕ್ರಿಯಿಸಿದ ಮಹೀಂದ್ರಾ
ಮಹೀಂದ್ರಾ ಸ್ಕಾರ್ಪಿಯೋ ಎನ್ ಗಾಗಿ rohit ಮೂಲಕ ಮಾರ್ಚ್ 07, 2023 07:51 pm ರಂದು ಮಾರ್ಪಡಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಈ ಕಾರುತಯಾರಕರು ಮೂಲ ವೀಡಿಯೋದಲ್ಲಿ ಹೇಳಿರುವಂತೆ SUV ಯಲ್ಲಿ ಯಾವುದೇ ನೀರು ಸೋರಿಕೆಯ ಸಮಸ್ಯೆ ಇಲ್ಲ ಎಂಬುದನ್ನು ತೋರಿಸಲು ಅದೇ ಘಟನೆಯನ್ನು ಮರುಸೃಷ್ಟಿಸಿದ್ದಾರೆ.
- ಇತ್ತೀಚಿನ ವೈರಲ್ ಆದ ವೀಡಿಯೋ, ಜಲಪಾತದ ಅಡಿಯಲ್ಲಿ ನಿಲ್ಲಿಸಿದ್ದ SUVಯ ಕ್ಯಾಬಿನ್ ಒಳಗೆ ನೀರು ಸೋರಿಕೆಯಾಗುತ್ತಿರುವುದನ್ನು ತೋರಿಸಿತ್ತು.
- ಸಂಭಾವ್ಯ ಕಾರಣಗಳೆಂದರೆ ಸನ್‌ರೂಫ್ ತೆರೆದುಕೊಂಡಿರುವುದು ಅಥವಾ ಅದರ ಸುತ್ತಲೂ ಕೊಳೆ ಶೇಖರಣೆಯಾಗಿರುವುದು.
- ಮಹೀಂದ್ರಾದ ವೀಡಿಯೋದಲ್ಲಿ, SUVಯಲ್ಲಿ ಸೋರಿಕೆ ಸಮಸ್ಯೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ವೈರಲ್ ಆದ ಜಲಪಾತದ ಅಡಿಯಲ್ಲಿ ನಿಲ್ಲಿಸಿದ್ದ ಮಹೀಂದ್ರಾ ಸ್ಕಾರ್ಪಿಯೋ N ನ ಕ್ಯಾಬಿನ್ ಒಳಗೆ ನೀರು ಸೋರಿಕೆಯಾದ ವೀಡಿಯೋವನ್ನು ನೀವು ಈಗಾಗಲೇ ನೋಡಿರುತ್ತೀರಿ. ಇದು SUVಯ ನಿರ್ಮಾಣ ಗುಣಮಟ್ಟದ ಬಗೆಗಿನ ಚರ್ಚೆಯನ್ನು ಹುಟ್ಟುಹಾಕಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಈ ಕಾರುತಯಾರಕರು ಅಂಥದ್ದೇ ಸನ್ನಿವೇಶವನ್ನು ಸೃಷ್ಟಿಸಿ ಅದೇ ರೀತಿಯಾದ ಬಿಳಿ ಸ್ಕಾರ್ಪಿಯೋ N ನ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಾಕಿದ್ದಾರೆ.
ಆ ವೀಡಿಯೋದಲ್ಲಿ ಏನಿದೆ?
Just another day in the life of the All-New Scorpio-N. pic.twitter.com/MMDq4tqVSS
— Mahindra Scorpio (@MahindraScorpio) March 4, 2023
ಈ SUV ಫೀಚರ್‌ಗಳನ್ನೇ ಹೊಂದಿದ ಮಹೀಂದ್ರಾವನ್ನು ಮೂಲ ಕ್ಲಿಪ್‌ನಲ್ಲಿರುವಂತೆ ಜಲಪಾತದಡಿಯಲ್ಲಿ ನಿಲ್ಲಿಸಲಾಗುತ್ತದೆ. ಜಲಪಾತದ ನೀರು SUV ಮೇಲೆ ಬೀಳುವಾಗ ಅದರ ಸನ್‌ರೂಫ್ ಮುಚ್ಚಿರುವುದರ ಸರಿಯಾದ ನೋಟವನ್ನು ಒಳಗಿನಿಂದ ನಾವಿಲ್ಲಿ ಕಾಣಬಹುದು. ಅಲ್ಲದೇ ಮೂಲ ವೀಡಿಯೋದಲ್ಲಿ ಹೇಳಿದಂತೆ ರೂಫ್-ಮೌಂಟಡ್ ಸ್ಪೀಕರ್‌ಗಳಿಂದ ನೀರು ಇಲ್ಲಿ ಸೋರಿಕೆಯಾಗುವುದಿಲ್ಲ ಎಂಬುದನ್ನೂ ತೋರಿಸಲಾಗಿದೆ.
ಮೂಲ ವೀಡಿಯೋ ನಕಲಿಯೇ?
ಸಾಮಾಜಿಕ ಮಾಧ್ಯಮದಲ್ಲಿನ ಮೂಲ ವೀಡಿಯೋದ ನೈಜತೆಯನ್ನು ಪೂರ್ತಿಯಾಗಿ ಪರಿಶೀಲಿಸಲು ಸಾಧ್ಯವಿಲ್ಲವಾದರೂ, ನೀರು ಸೋರಿಕೆಯಾಗಿರುವುದು ಅದರಲ್ಲಿ ಕಂಡುಬಂದಿದೆ. ಸನ್‌ರೂಫ್ ಸಮರ್ಪಕವಾಗಿ ಮುಚ್ಚದಿರುವುದು, ಅಸಮರ್ಪಕ ಬಳಕೆಯಿಂದ ಸೀಲ್‌ಗೆ ಉಂಟಾದ ಹಾನಿ ಅಥವಾ ಸಂಗ್ರಹವಾದ ನೀರು ಸರಾಗವಾಗಿ ಹರಿದು ಹೋಗದಂತೆ ಸೇಫ್ ಎಕ್ಸಿಟ್ ಪಾಸೇಜ್‌ನಲ್ಲಿ ಕಸ ಕಡ್ಡಿ ಎಲೆಗಳ ಶೇಖರಣೆ ಮುಂತಾದ ವಿವಿಧ ಕಾರಣಗಳಲ್ಲಿ ಯಾವುದಾದರೊಂದು ಇರಬಹುದು.
ಸಂಬಂಧಿತ: ಭಾರೀ ಮರೆಮಾಚುವಿಕೆಯೊಂದಿಗೆ ಜಪಾನ್‌ನಲ್ಲಿ ಕಂಡುಬಂದಿದೆ ಮಹೀಂದ್ರಾ ಸ್ಕಾರ್ಪಿಯೋ ಎನ್
ಘಟನೆಯ ಬಗ್ಗೆ ನಮ್ಮ ನಿಲುವು
ಮೂಲ ವೀಡಿಯೋದಲ್ಲಿ ನೀರು ಸೋರಿಕೆ ನೈಜ ಸಮಸ್ಯೆಯಾಗಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುವ ಎಲ್ಲಾ ವಿಷಯಗಳು ಸಂಪೂರ್ಣವಾಗಿ ನೈಜವಾಗಿರುವುದಿಲ್ಲ. ಜನರ ಗಮನಸೆಳೆಯುವುದಕ್ಕಾಗಿ ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಆಕರ್ಷಕ ನಿರೂಪಣೆಯನ್ನು ನೀಡುವವರು ಅನೇಕರಿದ್ದಾರೆ.
ಆದ್ದರಿಂದ, ಗ್ರಾಹಕರಾದ ನಾವು ನಾವು ಅಂತರ್ಜಾಲದಲ್ಲಿ ಹಾಕಲಾದ ಎಲ್ಲಾ ಮಾಹಿತಿಯನ್ನು ಪರಾಮರ್ಶಿಸದೇ ನಂಬಬಾರದು. ಅದರ ಬದಲಾಗಿ ಇಂತಹ ಘಟನೆಗಳ ಹಿಂದಿರುವ ತಾರ್ಕಿಕ ಕಾರಣವನ್ನು ಅನ್ವಯಿಸಿ ವಿಮರ್ಶಿಸುವುದು ಬಹಳ ಮುಖ್ಯವಾಗಿದೆ. ಮಹೀಂದ್ರಾದ ವೀಡಿಯೋ ಇದನ್ನು ನೆನಪಿಸುವುದಕ್ಕಾಗಿ ನೀಡಿದ ಪ್ರತಿಕ್ರಿಯೆಯಾಗಿದೆ.
ಇದನ್ನೂ ಓದಿ: ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಹೊಸ ವೇರಿಯೆಂಟ್ ಮತ್ತು ಹೆಚ್ಚು ಸೀಟಿಂಗ್ ಆಯ್ಕೆಯನ್ನು ಪಡೆಯುವ ಸಾಧ್ಯತೆ ಇದೆ
ಇನ್ನಷ್ಟು ಓದಿ : ಸ್ಕಾರ್ಪಿಯೋ- N ನ ಆನ್‌ರೋಡ್ ಬೆಲೆ
0 out of 0 found this helpful