Login or Register ಅತ್ಯುತ್ತಮ CarDekho experience ಗೆ
Login

2024 ರ ಅಪ್ಡೇಟ್ ನ ಭಾಗವಾಗಿ ಕೆಲವು ಫೀಚರ್ ಗಳನ್ನು ಕಳೆದುಕೊಂಡ Mahindra Scorpio N Z6

published on ಜನವರಿ 29, 2024 03:57 pm by sonny for ಮಹೀಂದ್ರಾ ಸ್ಕಾರ್ಪಿಯೋ ಎನ್

ಸ್ಕಾರ್ಪಿಯೋ N ಮಿಡ್-ಸ್ಪೆಕ್ ವೇರಿಯಂಟ್ ಗೆ ಈಗ ಚಿಕ್ಕ ಟಚ್‌ಸ್ಕ್ರೀನ್ ಅನ್ನು ನೀಡಲಾಗಿದೆ ಮತ್ತು ಅಡ್ರಿನೊಎಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನವು ಲಭ್ಯವಿಲ್ಲ

  • ಮಹೀಂದ್ರಾ ಸ್ಕಾರ್ಪಿಯೊ N ಫೀಚರ್ ಗಳನ್ನು 2024 ಕ್ಕೆ ರೀಶಫಲ್ ಮಾಡಲಾಗಿದೆ.
  • ಹೆಚ್ಚಿನ ಬದಲಾವಣೆಗಳನ್ನು ಮಿಡ್-ಸ್ಪೆಕ್ Z6 ವೇರಿಯಂಟ್ ಗೆ ಮಾಡಲಾಗಿದೆ, ಮತ್ತು ಕೇವಲ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುತ್ತಿದೆ.
  • ಇದು ಈಗ ಕಡಿಮೆ ತಂತ್ರಜ್ಞಾನದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಪಡೆಯುತ್ತಿದೆ.
  • ಕೂಲ್ಡ್ ಗ್ಲೋವ್ ಬಾಕ್ಸ್ ಮತ್ತು 7-ಇಂಚಿನ TFT ಮಲ್ಟಿ-ಇನ್ಫರ್ಮೇಷನ್ ಡಿಸ್ಪ್ಲೇ ಅನ್ನು ಕೂಡ ಕಳೆದುಕೊಳ್ಳುತ್ತಿದೆ.
  • 2024 ರಲ್ಲಿ ಬೆಲೆಗಳನ್ನು ಏರಿಸಲಾಗಿದೆ ಮತ್ತು Z6 ಬೆಲೆಯು ರೂ 31,000 ವರೆಗೆ ಹೆಚ್ಚಾಗಿದೆ.

ಮಹೀಂದ್ರಾದ 2024 ರ ಬೆಲೆ ಏರಿಕೆಗೆ ಒಳಗಾಗಿರುವ ಪ್ರಮುಖ ಮಾಡೆಲ್ ಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ N ಒಂದಾಗಿದೆ. ಆದರೆ, IMCR (ಇಂಟಿಗ್ರೇಟೆಡ್ ಮೆಟೀರಿಯಲ್ ಕಾಸ್ಟ್ ರಿಡಕ್ಷನ್) ಬದಲಾವಣೆಗಳ ಭಾಗವಾಗಿ, ಸ್ಕಾರ್ಪಿಯೋ N ನ ಕೆಳಮಟ್ಟದ ವೇರಿಯಂಟ್ ಗಳು ಕೆಲವು ಫೀಚರ್ ಗಳನ್ನು ಕಳೆದುಕೊಂಡಿವೆ. ಇದರಲ್ಲಿ ವಿಶೇಷವಾಗಿ ಮಿಡ್-ಸ್ಪೆಕ್ Z6 ವೇರಿಯಂಟ್ ಹೆಚ್ಚಿನ ಫೀಚರ್ ಗಳನ್ನು ಕಳೆದುಕೊಂಡಿದೆ. 2024 ರಿಂದ ಪ್ರಾರಂಭವಾಗುವ SUV ಯ ಎಲ್ಲಾ ಆರ್ಡರ್‌ಗಳಿಗೆ ಇದು ಅನ್ವಯಿಸುತ್ತದೆ.

ಸ್ಕಾರ್ಪಿಯೊ N Z6 ನಲ್ಲಿ ಏನೇನು ಬದಲಾಗಿದೆ?

2024 ರ ಅಪ್‌ಡೇಟ್‌ಗೆ ಮೊದಲು, Z6 ವೇರಿಯಂಟ್ ಮಹೀಂದ್ರಾದ ಅಡ್ರಿನೊಎಕ್ಸ್ ಇಂಟರ್ಫೇಸ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಒಳಗೊಂಡಿದ್ದ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್‌ ಅನ್ನು ನೀಡಲಾಗುತ್ತಿದ್ದ ಎಂಟ್ರಿ ಲೆವೆಲ್ ಮಾಡೆಲ್ ಆಗಿತ್ತು. ಇದು ಕನೆಕ್ಟೆಡ್ ಕಾರ್ ಫೀಚರ್ ಗಳು ಮತ್ತು ವಾಯ್ಸ್-ಎನಬಲ್ ಮಾಡಬಹುದಾದ ರಿಕ್ವೆಸ್ಟ್ ಗಳಿಗಾಗಿ ಬಿಲ್ಟ್-ಇನ್ ಅಲೆಕ್ಸಾವನ್ನು ಒಳಗೊಂಡಿತ್ತು. ಮಿಡ್-ಸ್ಪೆಕ್ ಸ್ಕಾರ್ಪಿಯೊ N ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ 7-ಇಂಚಿನ TFT ಮಲ್ಟಿ-ಇನ್ಫರ್ಮೇಷನ್ ಡಿಸ್ಪ್ಲೇ ಅನ್ನು ಕೂಡ ನೀಡಲಾಗಿತ್ತು.

ಈಗ, Z6 ವೇರಿಯಂಟ್ ಗಳು ರೂ 31,000 ವರೆಗೆ ದುಬಾರಿಯಾಗಿದೆ ಮತ್ತು ಇನ್ನು ಮುಂದೆ ಮೇಲೆ ತಿಳಿಸಿದ ಫೀಚರ್ ಗಳನ್ನು ನೀಡಲಾಗುವುದಿಲ್ಲ. ಬದಲಾಗಿ, ಇದು ಈಗ ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಮಾತ್ರ ಸಪೋರ್ಟ್ ಮಾಡುವ 7-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್‌ನೊಂದಿಗೆ ಬರುತ್ತದೆ ಮತ್ತು ಯಾವುದೇ ಕನೆಕ್ಟೆಡ್ ಕಾರ್ ಟೆಕ್ ಅನ್ನು ಹೊಂದಿಲ್ಲ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಈಗ 4.2-ಇಂಚಿನ ಮೊನೊಕ್ರೋಮ್ ಡಿಸ್ಪ್ಲೇಯನ್ನು ಪಡೆಯುತ್ತದೆ.

ಮಹೀಂದ್ರಾ ಸ್ಕಾರ್ಪಿಯೊ N ಕೂಲ್ಡ್ ಗ್ಲೋವ್ ಬಾಕ್ಸ್‌ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿತ್ತು ಆದರೆ ಈಗ ಅದನ್ನು ಟಾಪ್-ಸ್ಪೆಕ್ Z8 ಮತ್ತು Z8L ವೇರಿಯಂಟ್ ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಸ್ಕಾರ್ಪಿಯೋ N ಪವರ್‌ಟ್ರೇನ್ ಗಳು

ಮಹೀಂದ್ರಾ ಸ್ಕಾರ್ಪಿಯೊ N 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (203 PS/ 380 Nm) ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ (132 PS/ 300 Nm ನಿಂದ 175 PS/ 400 Nm) ಆಯ್ಕೆಯನ್ನು ಪಡೆಯುತ್ತದೆ. ಇವೆರಡನ್ನೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆಯೊಂದಿಗೆ ನೀಡಲಾಗುತ್ತದೆ. ಕೆಲವು ವೇರಿಯಂಟ್ ಗಳಲ್ಲಿ ಹೆಚ್ಚು ಶಕ್ತಿಶಾಲಿಯಾದ ಡೀಸೆಲ್ ಎಂಜಿನ್‌ನೊಂದಿಗೆ 4WD ಪವರ್‌ಟ್ರೇನ್‌ನ ಆಯ್ಕೆಯೂ ಇದೆ.

ಸ್ಕಾರ್ಪಿಯೊ N Z6 ಡೀಸೆಲ್-ಮಾತ್ರ ಇರುವ ವೇರಿಯಂಟ್ ಆಗಿದೆ.

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಮಹೀಂದ್ರ ಸ್ಕಾರ್ಪಿಯೊ N ಬೆಲೆಗಳು ಪ್ರಸ್ತುತ ರೂ 13.26 ಲಕ್ಷದಿಂದ ಶುರುವಾಗಿ ರೂ 24.54 ಲಕ್ಷದವರೆಗೆ (ಎಕ್ಸ್ ಶೋರೂಂ, ದೆಹಲಿ) ಇವೆ. ಇದು ಮಹೀಂದ್ರಾ XUV700, ಟಾಟಾ ಹ್ಯಾರಿಯರ್/ ಸಫಾರಿ ಮತ್ತು MG ಹೆಕ್ಟರ್/ ಹೆಕ್ಟರ್ ಪ್ಲಸ್‌ಗೆ ಪರ್ಯಾಯ ಆಯ್ಕೆಯಾಗಿದೆ.

ಸಂಬಂಧಿತ ಲೇಖನ: ಮಹೀಂದ್ರಾ ಸ್ಕಾರ್ಪಿಯೋ N ವರ್ಸಸ್ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್

ಇನ್ನಷ್ಟು ಓದಿ: ಮಹೀಂದ್ರಾ ಸ್ಕಾರ್ಪಿಯೋ N ಆಟೋಮ್ಯಾಟಿಕ್

s
ಅವರಿಂದ ಪ್ರಕಟಿಸಲಾಗಿದೆ

sonny

  • 62 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ ಸ್ಕಾರ್ಪಿಯೋ n

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ