Login or Register ಅತ್ಯುತ್ತಮ CarDekho experience ಗೆ
Login

Mahindraದಿಂದ ಭರ್ಜರಿ ಗುಡ್‌ನ್ಯೂಸ್‌: XUV700ನ AX7 ಮತ್ತು AX7 L ಬೆಲೆಗಳಲ್ಲಿ ರೂ 2.20 ಲಕ್ಷದವರೆಗೆ ಕಡಿತ!

ಮಹೀಂದ್ರ ಎಕ್ಸ್‌ಯುವಿ 700 ಗಾಗಿ dipan ಮೂಲಕ ಜುಲೈ 11, 2024 08:53 pm ರಂದು ಪ್ರಕಟಿಸಲಾಗಿದೆ

XUV700 ನ ಮೂರನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ ನೀಡಲಾಗಿರುವ ಬೆಲೆ ಕಡಿತವು 2024ರ ನವೆಂಬರ್ 10ರವರೆಗೆ ಲಭ್ಯವಿರುತ್ತದೆ

  • ಟಾಪ್-ಸ್ಪೆಕ್ AX7 ಮತ್ತು AX7 L ವೇರಿಯಂಟ್ ಗಳ ಬೆಲೆಗಳನ್ನು ರೂ 2.20 ಲಕ್ಷದವರೆಗೆ ಕಡಿತಗೊಳಿಸಲಾಗಿದೆ.

  • ಪೆಟ್ರೋಲ್ ವರ್ಷನ್ AX7 ಬೆಲೆಯು ರೂ 19.49 ಲಕ್ಷದಿಂದ ರೂ 21.19 ಲಕ್ಷದವರೆಗೆ ಇದೆ, ಹಾಗೆಯೇ AX7 L ಬೆಲೆಯು ರೂ 23.49 ಲಕ್ಷದಿಂದ ರೂ 23.69 ಲಕ್ಷದ ನಡುವೆ ಇದೆ.

  • ಡೀಸೆಲ್ ವರ್ಷನ್ AX7 ಬೆಲೆಯು ರೂ.19.99 ರಿಂದ 22.80 ಲಕ್ಷಗಳ ನಡುವೆ ಇದೆ, ಮತ್ತು AX7 L ಬೆಲೆಯು ರೂ.22.49 ರಿಂದ 24.99 ಲಕ್ಷಗಳ ನಡುವೆ ಇದೆ

  • ಮಹೀಂದ್ರಾ XUV 700 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ.

ಮಹೀಂದ್ರಾ XUV700 ನ ಟಾಪ್-ಸ್ಪೆಕ್ AX7 ಮತ್ತು AX7 L ಎಡಿಷನ್ ಗಳ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಿಗೆ ಬೆಲೆ ಕಡಿತವನ್ನು ನೀಡಲಾಗಿದೆ. XUV700 ನ ಮೂರನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ ಬೆಲೆ ಕಡಿತವನ್ನು ನೀಡಲಾಗಿದೆ ಎಂದು ಮಹೀಂದ್ರ ತಿಳಿಸಿದೆ. ಈ ಬದಲಾವಣೆಯನ್ನು SUV ಯ ಎರಡು ಹೊಸ ಕಲರ್ ಗಳ ಸೇರ್ಪಡೆ ಮತ್ತು ಹೊಸ ಮಿಡ್ ಸ್ಪೆಕ್ AX5 ಎಡಿಷನ್ ನ ಪರಿಚಯದ ನಂತರ ಮಾಡಲಾಗಿದೆ. ಆದರೆ, ಈ ಬೆಲೆ ಕಡಿತವು ನವೆಂಬರ್ 10, 2024 ರವರೆಗೆ ಮಾತ್ರ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಈ ಎರಡೂ ಟಾಪ್-ಸ್ಪೆಕ್ ವೇರಿಯಂಟ್ ಗಳ ಬದಲಾದ ಬೆಲೆಯನ್ನು ನೋಡೋಣ:

2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್:

ವೇರಿಯಂಟ್

ಸೀಟಿಂಗ್ ಕಾನ್ಫಿಗರೇಷನ್

6-ಸ್ಪೀಡ್ MT

6-ಸ್ಪೀಡ್ AT

ಹಿಂದಿನ ಬೆಲೆಗಳು

ಪರಿಷ್ಕೃತ ಬೆಲೆಗಳು

ಬೆಲೆ ವ್ಯತ್ಯಾಸ

ಹಿಂದಿನ ಬೆಲೆಗಳು

ಪರಿಷ್ಕೃತ ಬೆಲೆಗಳು s

ಬೆಲೆ ವ್ಯತ್ಯಾಸ

AX7

6-ಸೀಟರ್ FWD*

ರೂ. 21.54 ಲಕ್ಷ

ರೂ. 19.69 ಲಕ್ಷ

ರೂ. 1.85 ಲಕ್ಷ

ರೂ. 23.24 ಲಕ್ಷ

ರೂ. 21.19 ಲಕ್ಷ

ರೂ. 2.05 ಲಕ್ಷ

7-ಸೀಟರ್ FWD

ರೂ. 21.39 ಲಕ್ಷ

ರೂ. 19.49 ಲಕ್ಷ

ರೂ. 1.90 ಲಕ್ಷ

ರೂ. 22.99 ಲಕ್ಷ

ರೂ. 21.54 ಲಕ್ಷ

ರೂ. 2 ಲಕ್ಷ

AX7 L

6-ಸೀಟರ್ FWD

-

ರೂ. 25.54 ಲಕ್ಷ

ರೂ. 23.69 ಲಕ್ಷ

ರೂ. 1.85 ಲಕ್ಷ

7-ಸೀಟರ್ FWD

-

ರೂ. 25.39 ಲಕ್ಷ

ರೂ. 23.49 ಲಕ್ಷ

ರೂ. 1.90 ಲಕ್ಷ

*FWD = ಫ್ರಂಟ್-ವೀಲ್-ಡ್ರೈವ್

  • 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 PS ಮತ್ತು 380 Nm ಅನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

  • ಪೆಟ್ರೋಲ್ AX7 ಮತ್ತು AX7 L ವೇರಿಯಂಟ್ ಗಳು ಫ್ರಂಟ್-ವೀಲ್-ಡ್ರೈವ್ ಸೆಟಪ್ ನಲ್ಲಿ ಮಾತ್ರ ಲಭ್ಯವಿದೆ.

  • AX7 ಪೆಟ್ರೋಲ್‌ನ ಬದಲಾದ ಬೆಲೆಯು 19.49 ಲಕ್ಷದಿಂದ 21.19 ಲಕ್ಷದ ನಡುವೆ ಇದೆ.

  • AX7 L ಪೆಟ್ರೋಲ್‌ನ ಹೊಸ ಬೆಲೆಯು 23.49 ಲಕ್ಷದಿಂದ 23.69 ಲಕ್ಷದವರೆಗೆ ಇದೆ.

2.2-ಲೀಟರ್ ಡೀಸೆಲ್ ಎಂಜಿನ್:

ವೇರಿಯಂಟ್

ಸೀಟಿಂಗ್ ಕಾನ್ಫಿಗರೇಷನ್

6-ಸ್ಪೀಡ್ MT

6-ಸ್ಪೀಡ್ AT

ಹಿಂದಿನ ಬೆಲೆಗಳು

ಪರಿಷ್ಕೃತ ಬೆಲೆಗಳು

ಬೆಲೆ ವ್ಯತ್ಯಾಸ

ಹಿಂದಿನ ಬೆಲೆಗಳು

ಪರಿಷ್ಕೃತ ಬೆಲೆಗಳು s

ಬೆಲೆ ವ್ಯತ್ಯಾಸ

AX7

6-ಸೀಟರ್ FWD

ರೂ. 22.14 ಲಕ್ಷ

ರೂ. 20.19 ಲಕ್ಷ

ರೂ. 1.94 ಲಕ್ಷ

ರೂ. 23.94 ಲಕ್ಷ h

ರೂ. 21.79 ಲಕ್ಷ h

ರೂ. 2.15 ಲಕ್ಷ

7-ಸೀಟರ್ FWD

ರೂ. 21.99 ಲಕ್ಷ h

ರೂ. 19.99 ಲಕ್ಷ

ರೂ. 2 ಲಕ್ಷ

ರೂ. 23.79 ಲಕ್ಷ

ರೂ. 21.59 ಲಕ್ಷ

ರೂ. 2.20 ಲಕ್ಷ

7-ಸೀಟರ್ AWD

ರೂ. 24.99 ಲಕ್ಷ

ರೂ. 22.80 ಲಕ್ಷ h

ರೂ. 2.19 ಲಕ್ಷ

AX7 L

6-ಸೀಟರ್ FWD

Rs 24.24 lakh ರೂ. 24.24 ಲಕ್ಷ

ರೂ. 22.69 ಲಕ್ಷ

ರೂ. 1.55 ಲಕ್ಷ

ರೂ. 25.99 ಲಕ್ಷ

ರೂ. 24.19 ಲಕ್ಷ

ರೂ. 1.80 ಲಕ್ಷ

7-ಸೀಟರ್ FWD

ರೂ. 23.99 ಲಕ್ಷ

ರೂ. 22.49 ಲಕ್ಷ

ರೂ. 1.50 ಲಕ್ಷ

ರೂ. 25.89 ಲಕ್ಷ

ರೂ. 23.99 ಲಕ್ಷ

ರೂ. 1.90 ಲಕ್ಷ

7-ಸೀಟರ್ AWD^

ರೂ. 26.99 ಲಕ್ಷ

ರೂ. 24.99 ಲಕ್ಷ

ರೂ. 2 ಲಕ್ಷ

^AWD = ಆಲ್-ವೀಲ್-ಡ್ರೈವ್

  • 2.2-ಲೀಟರ್ ಡೀಸೆಲ್ ಎಂಜಿನ್ 185 PS ಮತ್ತು 450 Nm ಅನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
  • ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುವ ಡೀಸೆಲ್ AX7 ಮತ್ತು AX7 L ವೇರಿಯಂಟ್ ಗಳು ಫ್ರಂಟ್-ವೀಲ್-ಡ್ರೈವ್ ಸೆಟಪ್ ಅನ್ನು ಮಾತ್ರ ಪಡೆಯುತ್ತವೆ, ಹಾಗೆಯೇ ಆಟೋಮ್ಯಾಟಿಕ್ ವೇರಿಯಂಟ್ ಗಳು ಆಪ್ಷನಲ್ ಆಲ್-ವೀಲ್-ಡ್ರೈವ್ ಸೆಟಪ್ ಅನ್ನು ಪಡೆಯುತ್ತವೆ.
  • AX7 ಡೀಸೆಲ್‌ನ ಬದಲಾದ ಬೆಲೆಯು ಈಗ 19.99 ಲಕ್ಷದಿಂದ 22.80 ಲಕ್ಷದ ನಡುವೆ ಇದೆ.
  • AX7 L ಡೀಸೆಲ್‌ನ ಪರಿಷ್ಕೃತ ಬೆಲೆಯು ರೂ 22.49 ಲಕ್ಷದಿಂದ ರೂ 24.99 ಲಕ್ಷದವರೆಗೆ ಇದೆ.

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ ಬೆಲೆಯಾಗಿದೆ

XUV700 AX7 ಮತ್ತು AX7 L ಫೀಚರ್ ಗಳು

ಮಹೀಂದ್ರಾ XUV700 ನ ಟಾಪ್-ಸ್ಪೆಕ್ AX7 ಮತ್ತು AX7 L ವೇರಿಯಂಟ್ ಗಳಲ್ಲಿ ನೀಡಲಾಗಿರುವ ಎಲ್ಲಾ ಫೀಚರ್ ಗಳ ಪಟ್ಟಿ ಇಲ್ಲಿದೆ:

ವೇರಿಯಂಟ್

ಫೀಚರ್ ಗಳು

AX7

LED DRLಗಳೊಂದಿಗೆ LED ಹೆಡ್ ಲೈಟ್ ಗಳು

ಕಾರ್ನರಿಂಗ್ ಫಂಕ್ಷನ್ ನೊಂದಿಗೆ LED ಫಾಗ್ ಲ್ಯಾಂಪ್ ಗಳು

18-ಇಂಚಿನ ಡೈಮಂಡ್-ಕಟ್ ಅಲೊಯ್ ವೀಲ್ಸ್

ಲೆಥೆರೆಟ್ ಅಪ್ಹೋಲಿಸ್ಟ್ರಿ

ಲೆದರ್ ನಿಂದ ಸುತ್ತಿರುವ ಸ್ಟೀರಿಂಗ್ ವೀಲ್ ಮತ್ತು ಗೇರ್ ಲಿವರ್

ಮೆಮೊರಿ ಫಂಕ್ಷನ್ ನೊಂದಿಗೆ 6-ವೇ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟ್ ಗಳು

10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ

10.25-ಇಂಚಿನ ಡ್ರೈವರ್ ಡಿಸ್ಪ್ಲೇ

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

ಪನರೋಮಿಕ್ ಸನ್‌ರೂಫ್

6 ಸ್ಪೀಕರ್‌ಗಳು

ಕನೆಕ್ಟೆಡ್ ಕಾರು ತಂತ್ರಜ್ಞಾನ

ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಮತ್ತು ಫೋಲ್ಡ್ ಮಾಡಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಗಳು (ORVMs)

ಡ್ಯುಯಲ್-ಝೋನ್ AC

ಪುಶ್ ಬಟನ್ ಸ್ಟಾರ್ಟ್

ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS)

6 ಏರ್ ಬ್ಯಾಗ್ ಗಳು

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

ರೈನ್ ಸೆನ್ಸಿಂಗ್ ವೈಪರ್

AX7 L (AX7 ಟ್ರಿಮ್‌ಗೆ ಹೋಲಿಸಿದರೆ ಪಡೆಯುವ ಫೀಚರ್ ಗಳು)

12-ಸ್ಪೀಕರ್ ಸೋನಿ ಸೌಂಡ್ ಸಿಸ್ಟಮ್

ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಗಳು

ವೈರ್‌ಲೆಸ್ ಫೋನ್ ಚಾರ್ಜಿಂಗ್

ORVM ಗಳಲ್ಲಿ ಮೆಮೊರಿ ಫಂಕ್ಷನ್

ಎತ್ತರ-ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್

ಕೀಲೆಸ್ ಎಂಟ್ರಿ

ಬ್ಲೈಂಡ್ ಸ್ಪಾಟ್ ಮಾನಿಟರ್ ಜೊತೆಗೆ 360 ಡಿಗ್ರಿ ಕ್ಯಾಮೆರಾ

ನೀ ಏರ್ ಬ್ಯಾಗ್ ಗಳು

ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

ಮಹೀಂದ್ರಾ XUV700 ಪ್ರತಿಸ್ಪರ್ಧಿಗಳು

ಮಹೀಂದ್ರಾ XUV700 ಹ್ಯುಂಡೈ ಅಲ್ಕಾಜರ್, MG ಹೆಕ್ಟರ್ ಪ್ಲಸ್ ಮತ್ತು ಟಾಟಾ ಸಫಾರಿಗೆ ಪ್ರತಿಸ್ಪರ್ಧಿಯಾಗಿದೆ. ಅದರ 5-ಸೀಟರ್ ಕಾನ್ಫಿಗರೇಶನ್‌, MG ಹೆಕ್ಟರ್, ಟಾಟಾ ಹ್ಯಾರಿಯರ್ ಮತ್ತು ಹ್ಯುಂಡೈ ಕ್ರೆಟಾದಂತಹ SUV ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಆಟೋಮೋಟಿವ್ ಪ್ರಪಂಚದಿಂದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಬಯಸುತ್ತೀರಾ? ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

ಇನ್ನಷ್ಟು ಓದಿ: ಮಹೀಂದ್ರ XUV700 ಡೀಸೆಲ್

d
ಅವರಿಂದ ಪ್ರಕಟಿಸಲಾಗಿದೆ

dipan

  • 33 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Mahindra ಎಕ್ಸ್‌ಯುವಿ 700

Read Full News

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ