ಬಿಡುಗಡೆಯಾದಾಗಿನಿಂದ ಒಟ್ಟು 2.5 ಲಕ್ಷ ಮಾರಾಟದ ದಾಖಲೆಯನ್ನು ಬರೆದ Mahindra XUV700
ಈ ಮಾರಾಟದ ಮೈಲಿಗಲ್ಲು ಸಾಧಿಸಲು ಮಹೀಂದ್ರಾ ಎಸ್‌ಯುವಿಯು 4 ವರ್ಷಗಳಿಗಿಂತ ಸ್ವಲ್ಪ ಕಡಿಮೆ ಸಮಯ ತೆಗೆದುಕೊಂಡಿದೆ
2021ರಲ್ಲಿ ಬಿಡುಗಡೆಯಾದ ಮಹೀಂದ್ರಾ XUV700, ಮಾರುಕಟ್ಟೆಯಲ್ಲಿ ಪರಿಚಯಿಸಿದಾಗಿನಿಂದಲೂ ಕಾರು ಪ್ರೇಮಿಗಳ ಫೆವರಿಟ್ ಆಗಿದೆ. ಈಗ, ಈ 3-ಸಾಲಿನ ಮಿಡ್ ಸೈಜ್‌ನ ಎಸ್‌ಯುವಿಯು ಒಟ್ಟು 2.5 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ, 2 ಲಕ್ಷದಿಂದ 2.5 ಲಕ್ಷ ಮಾರಾಟಕ್ಕೆ ಏರಲು ಕೇವಲ 7 ತಿಂಗಳುಗಳಿಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿದೆ. ಗಮನಾರ್ಹವಾಗಿ, ಈ ಎಸ್‌ಯುವಿಯು 2023ರ ಜುಲೈನಲ್ಲಿ 1 ಲಕ್ಷಕ್ಕೂ ಹೆಚ್ಚು ಮಾರಾಟವನ್ನು ಮತ್ತು 2024ರ ಜೂನ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಮಾರಾಟವನ್ನು ಸಾಧಿಸಿದೆ.
ಹಾಗೆಯೇ, ಎಕ್ಸ್‌ಯುವಿ700 ಗ್ರಾಹಕರು ಟರ್ಬೊ-ಪೆಟ್ರೋಲ್ ಎಂಜಿನ್‌ಗಿಂತ ಡೀಸೆಲ್ ವೇರಿಯೆಂಟ್‌ಗಳನ್ನು ಖರೀದಿಸಲು ಹೆಚ್ಚು ಉತ್ಸುಕರಾಗಿರುವಂತೆ ತೋರುತ್ತಿದೆ. 2025ರ ಜನವರಿಯಲ್ಲಿ, ಮಾರಾಟವಾದ ಒಟ್ಟು 8,399 ಯುನಿಟ್‌ಗಳಲ್ಲಿ, ಶೇಕಡಾ 74 ಕ್ಕಿಂತ ಹೆಚ್ಚು ಗ್ರಾಹಕರು ಡೀಸೆಲ್ ಎಂಜಿನ್ ಅನ್ನು ಆರಿಸಿಕೊಂಡರು. 2025ರ ಫೆಬ್ರವರಿಯಲ್ಲೂ ಈ ಪ್ರವೃತ್ತಿ ಮುಂದುವರೆಯಿತು, ಒಟ್ಟು 5,560 ಯುನಿಟ್‌ಗಳಲ್ಲಿ ಡೀಸೆಲ್ ಶೇಕಡಾ 65 ಕ್ಕಿಂತ ಹೆಚ್ಚು ಮಾರಾಟವಾಯಿತು. ಇದಲ್ಲದೆ, ಈ 2024-25ನೇ ಹಣಕಾಸು ವರ್ಷದಲ್ಲಿ, ಸುಮಾರು 75 ಪ್ರತಿಶತ ಗ್ರಾಹಕರು ಡೀಸೆಲ್ ಎಂಜಿನ್ ಕಡೆಗೆ ಒಲವು ತೋರಿದರೆ, ಉಳಿದವರು ಪೆಟ್ರೋಲ್ ಆಯ್ಕೆಯನ್ನು ಆರಿಸಿಕೊಂಡರು. ಈ ಎಸ್‌ಯುವಿ 2021ರಲ್ಲಿ ಬಿಡುಗಡೆಯಾದಾಗಿನಿಂದ ಇದೇ ರೀತಿಯ ಪ್ರವೃತ್ತಿಯನ್ನು ಕಂಡಿದೆ.
ಮಹೀಂದ್ರಾ ಎಕ್ಸ್‌ಯುವಿ700 ಕಾರಿನಲ್ಲಿ ಲಭ್ಯವಿರುವ ಎಂಜಿನ್ ಆಯ್ಕೆಗಳನ್ನು ನೋಡೋಣ:
ಮಹೀಂದ್ರಾ ಎಕ್ಸ್‌ಯುವಿ700: ಪವರ್‌ಟ್ರೇನ್ ಆಯ್ಕೆಗಳು
ಮಹೀಂದ್ರಾ XUV700 ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಅವುಗಳೆಂದರೆ, 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
2-ಲೀಟರ್ ಟರ್ಬೋ ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
200 ಪಿಎಸ್ |
185 ಪಿಎಸ್‌ವರೆಗೆ |
ಟಾರ್ಕ್ |
380 ಎನ್‌ಎಮ್ |
450 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನ್ಯುವಲ್/ 6-ಸ್ಪೀಡ್ AT* |
6-ಸ್ಪೀಡ್ ಮ್ಯಾನ್ಯುವಲ್/ 6-ಸ್ಪೀಡ್ AT* |
ಡ್ರೈವ್‌ಟ್ರೈನ್^ |
FWD |
FWD/AWD |
*AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
^FWD = ಫ್ರಂಟ್ ವೀಲ್ ಡ್ರೈವ್; AWD = ಆಲ್ ವೀಲ್ ಡ್ರೈವ್
ಇದನ್ನೂ ಓದಿ: Mahindra XUV700ನ ಎಬೊನಿ ಎಡಿಷನ್ ಬಿಡುಗಡೆ, ಸಂಪೂರ್ಣ ಕಪ್ಪಾದ ಬಣ್ಣದಲ್ಲಿ ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್
ಮಹೀಂದ್ರಾ XUV700: ಫೀಚರ್‌ಗಳು ಮತ್ತು ಸುರಕ್ಷತೆ
ಮಹೀಂದ್ರಾ ಎಕ್ಸ್‌ಯುವಿ700 ಕಾರು 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6-ವೇ ಪವರ್ ಡ್ರೈವರ್ ಸೀಟ್ ಮತ್ತು 12-ಸ್ಪೀಕರ್ ಸೋನಿ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ. ಇತರ ಫೀಚರ್‌ಗಳಲ್ಲಿ ಪನೋರಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿವೆ.
ಇದರ ಸುರಕ್ಷತಾ ಜಾಲವು ಏಳು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಟಾಪ್-ಎಂಡ್ ವೇರಿಯೆಂಟ್ ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳನ್ನು (ADAS) ಹೊಂದಿದೆ.
ಮಹೀಂದ್ರಾ XUV700: ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಎಕ್ಸ್‌ಯುವಿ700 ಕಾರಿನ ಬೆಲೆ 13.99 ಲಕ್ಷ ರೂ.ಗಳಿಂದ 25.74 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ಭಾರತಾದ್ಯಂತ) ಇದೆ. ಇದರ 6 ಮತ್ತು 7 ಆಸನಗಳ ಆವೃತ್ತಿಗಳು ಟಾಟಾ ಸಫಾರಿ, ಹುಂಡೈ ಅಲ್ಕಾಜರ್ ಮತ್ತು ಎಂಜಿ ಹೆಕ್ಟರ್ ಪ್ಲಸ್‌ಗಳಿಗೆ ಪ್ರತಿಸ್ಪರ್ಧಿಯಾಗಿದ್ದರೆ, 5 ಆಸನಗಳ ಆವೃತ್ತಿಯು ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಹುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾದಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳೊಂದಿಗೆ ಪೈಪೋಟಿ ನಡೆಸುತ್ತದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ