• English
  • Login / Register

ಪೆಟ್ರೋಲ್ ಆಟೋ ಸಂಯೋಜನೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾದ ಮಹೀಂದ್ರಾ XUV700

ಮಹೀಂದ್ರ ಎಕ್ಸ್‌ಯುವಿ 700 ಗಾಗಿ rohit ಮೂಲಕ ಜೂನ್ 16, 2023 02:00 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಆಸ್ಟ್ರೇಲಿಯನ್-ಸ್ಪೆಕ್ XUV700 ಅನ್ನು ಕೇವಲ AX7 ಮತ್ತು AX7L ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ

Mahindra XUV700

  • 7-ಸೀಟ್ ಆವೃತ್ತಿಯಲ್ಲಿ 2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ (200PS/380Nm) ಜೊತೆಗೆ ಮಾತ್ರ ಲಭ್ಯವಿದೆ.

  • ಆಸ್ಟ್ರೇಲಿಯನ್ ಮೌಲ್ಯದಲ್ಲಿ ಇದರ ಬೆಲೆಗಳು ರೂ. 20.72 ಲಕ್ಷ ಮತ್ತು ರೂ. 22.41 ಲಕ್ಷ.

  • ಇದರಲ್ಲಿರುವ ಫೀಚರ್‌ಗಳು 10.25-ಇಂಚಿನ ಡಿಸ್‌ಪ್ಲೇಗಳು, ವಿಹಂಗಮ ಸನ್‌ರೂಫ್ ಮತ್ತು ADAS ಅನ್ನು ಒಳಗೊಂಡಿದೆ.

  • 7-ವರ್ಷ/1.5 ಲಕ್ಷ ಕಿಮೀ ವಾರಂಟಿಯನ್ನು ಒದಗಿಸಲಾಗಿದೆ.

ಬಿಡುಗಡೆಯಾದ ಸುಮಾರು ಎರಡು ವರ್ಷಗಳ ನಂತರ, ಈ ಮಹೀಂದ್ರಾ XUV700 ಈಗ ಆಸ್ಟ್ರೇಲಿಯಾದಲ್ಲಿ ಪಾದಾರ್ಪಣೆ ಮಾಡಿದೆ. ಭಾರತೀಯ ಕಾರು ತಯಾರಕರು ಈ ಎಸ್‌ಯುವಿಯನ್ನು AX7 ಮತ್ತು AX7L ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡುತ್ತಿದ್ದಾರೆ –– ಭಾರತದಲ್ಲಿ ಇದರ ಸಮನಾದ ಬೆಲೆ ರೂ 20.72 ಲಕ್ಷ ಮತ್ತು ರೂ. 22.41 ಲಕ್ಷಗಳಾಗಿದ್ದು ಇದು ವಾಸ್ತವವಾಗಿ ಇಲ್ಲಿನ ಬೆಲೆಗಳಿಗಿಂತ ಕಡಿಮೆಯಾಗಿದೆ. ಇದು 7-ವರ್ಷ/1.5 ಲಕ್ಷ ಕಿಮೀ (ಯಾವುದೇ ಮೊದಲು ಸಂಭವಿಸುವುದೋ ಅದಕ್ಕೆ) ವಾರಂಟಿ ಪ್ಯಾಕೇಜ್ ಅನ್ನು ಹೊಂದಿದೆ.

ಪವರ್‌ಟ್ರೇನ್ ಆಯ್ಕೆಗಳಲ್ಲಿ ಯಾವುದೇ ವ್ಯತ್ಯಾಸವಿದೆಯೇ?

Mahindra XUV700 turbo-petrol engine

 ಈ ಆಸ್ಟ್ರೇಲಿಯನ್ ಸ್ಪೆಕ್ XUV700 2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದ್ದು ಅದೇ ಟ್ಯೂನ್‌ನಲ್ಲಿ ಭಾರತದಲ್ಲಿಯೂ ನೀಡಲಾಗುತ್ತದೆ ಹಾಗೂ ಇದು 200PS ಮತ್ತು 380Nm ಬಿಡುಗಡೆ ಮಾಡುತ್ತದೆ. ಇದಲ್ಲದೇ, ಇದು 6-ಸ್ಪೀಡ್ ಆಟೋಮ್ಯಾಟಿಕ್‌ನಲ್ಲಿ ಸಹ ಲಭ್ಯವಿದೆ.

ಅದೇ ಎಂಜಿನ್ 6-ಸ್ಪೀಡ್ ಮ್ಯಾನ್ಯುವಲ್ ಆಯ್ಕೆಯನ್ನು ಸಹ ಪಡೆಯುತ್ತದೆ. ಇದಲ್ಲದೇ, ಈ XUV700 ಅದೇ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 2.2-ಲೀಟರ್ ಡಿಸೇಲ್ ಯೂನಿಟ್ (185PS/450Nm ವರೆಗೆ) ಆಯ್ಕೆಯನ್ನು ಪಡೆಯುತ್ತದೆ. ಈ ಎಂಜಿನ್ ಅನ್ನು ಐಚ್ಛಿಕ ಆಲ್-ವ್ಹೀಲ್-ಡ್ರೈವ್ (AWD) ಸಿಸ್ಟಮ್‌ನೊಂದಿಗೆ ಹೊಂದಬಹುದು, ಆದಾಗ್ಯೂ ಟಾಪ್-ಸ್ಪೆಕ್ AX7 ಮತ್ತು ಆಟೋಮ್ಯಾಟಿಕ್ ವೇರಿಯೆಂಟ್‌ಗಳೊಂದಿಗೆ ಮಾತ್ರ ಇದು ಲಭ್ಯವಿದೆ.

 ಇದನ್ನೂ ಓದಿ: ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಮಹೀಂದ್ರಾ XUV300, ಎರಡು ಹೊಸ ವಿವರಗಳು ಬಹಿರಂಗ 

ನೀಡಲಾಗುವ ಫೀಚರ್‌ಗಳು

Mahindra XUV700 dual displays

Mahindra XUV700 panoramic sunroof

 ಟಾಪ್-ಸ್ಪೆಕ್ AX7 ರೇಂಜ್‌ನಲ್ಲಿ ಮಾತ್ರ ನೀಡಲಾಗುತ್ತಿದ್ದು, ಈ ಆಸ್ಟ್ರೇಲಿಯನ್-ಸ್ಪೆಕ್ XUV700 ಅನ್ನು ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು (ಒಂದು ಇನ್‌ಫೋಟೇನ್‌ಮೆಂಟ್‌ಗಾಗಿ ಇನ್ನೊಂದು ಇನ್‌ಸ್ಟ್ರುಮೆಂಟ್‌ಗಾಗಿ), ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್, ವಿಹಂಗಮ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಮತ್ತು ಸೋನಿಯ 12-ಸ್ಪೀಕರ್ 3D ಸೌಂಡ್ ಸಿಸ್ಟಮ್ ಅನ್ನು ಇದರಲ್ಲಿ ನೀಡಲಾಗಿದೆ.

 ಸುರಕ್ಷತೆಯ ದೃಷ್ಟಿಯಿಂದ ಇದು ಏಳು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮರಾ, ರಿವರ್ಸಿಂಗ್ ಕ್ಯಾಮರಾ, ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಅನ್ನು ಹೊಂದಿದೆ. ಈ ADAS ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಸೈನ್ ರೆಕಗ್ನಿಶನ್ ಮತ್ತು ಹೈ-ಬೀಮ್ ಅಸಿಸ್ಟ್ ಅನ್ನು ಒಳಗೊಂಡಿದೆ.

ಇದು AX7 ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುವುದರಿಂದ, ಈ ಆಸ್ಟ್ರೇಲಿಯನ್ ಸ್ಪೆಕ್ XUV700 ಅನ್ನು 7-ಸೀಟ್ ಲೇಔಟ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಈ ಕೆಳಗಿನ ಐದು ಬಣ್ಣಗಳಲ್ಲಿ ಅದನ್ನು ನೀಡಲಾಗುತ್ತದೆ: ಡಾಝ್ಲಿಂಗ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಎಲರೆಸ್ಟ್ ವೈಟ್, ಮಿಡ್‌ನೈಟ್ ಬ್ಲ್ಯಾಕ್, ಮತ್ತು ರೆಡ್ ರೇಜ್.

ಇದನ್ನೂ ಓದಿ:  ಎ.ಐ ಪ್ರಕಾರ ರೂ. 20 ಲಕ್ಷದೊಳಗಿನ ಟಾಪ್ 3 ಫ್ಯಾಮಿಲಿ ಎಸ್‌ಯುವಿಗಳ್ಯಾವುವು?

 ಪ್ರತಿಸ್ಪರ್ಧಿಗಳು

Mahindra XUV700 rear

 ಈ XUV700 ಭಾರತದಲ್ಲಿ ಟಾಟಾ ಸಫಾರಿಯೊಂದಿಗೆ, ಎಂಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಝರ್‌ ಜೊತೆಗೆ ಸ್ಪರ್ಧೆಯನ್ನು ಹೊಂದಿದೆ. ಇಲ್ಲಿ, ಮಹೀಂದ್ರಾ ಎರಡು ವಿಶಾಲ್ ಟ್ರಿಮ್ ಹಂತಗಳಲ್ಲಿ ಮಾರಾಟವಾಗಲಿದೆ: MX ಮತ್ತು AX. ಈ AX ಟ್ರಿಮ್ ಪುನಃ ಮೂರು ವಿಶಾಲ ವೇರಿಯೆಂಟ್‌ಗಳಲ್ಲಿ ವಿಭಾಗಿಸಲಾಗಿದ್ದು ಅವುಗಳೆಂದರೆ: AX3, AX5 ಮತ್ತು AX7. ಈ ಇಂಡಿಯಾ-ಸ್ಪೇಕ್ XUV700 5-ಸೀಟರ್ ಕಾನ್ಫಿಗರೇಶನ್ ಅಲ್ಲಿ ಸಹ ನೀಡಬಹುದು. ಇದು 14.01 ಲಕ್ಷದಿಂದ ರೂ. 26.18 ಲಕ್ಷದವರೆಗೆ (ಎಕ್ಸ್-ಶೋರೂಮ್, ಹೊಸ ದೆಹಲಿ) ಬೆಲೆಯ ರೇಂಜ್ ಅನ್ನು ಹೊಂದಿದೆ.

ಇನ್ನಷ್ಟು ಇಲ್ಲಿ ಓದಿ : ಮಹೀಂದ್ರಾ XUV700 ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Mahindra ಎಕ್ಸ್‌ಯುವಿ 700

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience