ಗುಡ್‌ನ್ಯೂಸ್: Mahindra XUV700 ಬೆಲೆಯಲ್ಲಿ 75,000 ರೂ. ವರೆಗೆ ಇಳಿಕೆ
ಮಹೀಂದ್ರ ಎಕ್ಸ್‌ಯುವಿ 700 ಗಾಗಿ dipan ಮೂಲಕ ಮಾರ್ಚ್ 24, 2025 04:31 pm ರಂದು ಪ್ರಕಟಿಸಲಾಗಿದೆ
- 25 Views
- ಕಾಮೆಂಟ್ ಅನ್ನು ಬರೆಯಿರಿ
ಕೆಲವು AX7 ವೇರಿಯೆಂಟ್‌ಗಳ ಬೆಲೆಯಲ್ಲಿ 45,000 ರೂ.ಗಳ ಇಳಿಕೆ ಕಂಡುಬಂದಿದ್ದು, ಟಾಪ್-ಸ್ಪೆಕ್ AX7 ಟ್ರಿಮ್ ಬೆಲೆಯಲ್ಲಿ 75,000 ರೂ.ಗಳ ಇಳಿಕೆ ಕಂಡುಬಂದಿದೆ
2025ರ ಏಪ್ರಿಲ್‌ನಿಂದ ಕಾರು ತಯಾರಕರು ಬೆಲೆಗಳನ್ನು ಹೆಚ್ಚಿಸುವ ಇತ್ತೀಚಿನ ಪ್ರವೃತ್ತಿಯ ಹೊರತಾಗಿಯೂ, ಮಹೀಂದ್ರಾ XUV700ನ ಬೆಲೆಗಳನ್ನು 75,000 ರೂ.ಗಳವರೆಗೆ ಇಳಿಸಲಾಗಿದೆ. ಈ ಬೆಲೆ ಕಡಿತವು ಟಾಪ್-ಸ್ಪೆಕ್ AX7 ಮತ್ತು AX7 L ಟ್ರಿಮ್‌ಗಳನ್ನು ಆಧರಿಸಿದ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್‌ಗಳೆರಡರ ಮೇಲೂ ಪರಿಣಾಮ ಬೀರಿದೆ, ಆದರೆ ಲೋವರ್-ಸ್ಪೆಕ್ ವೇರಿಯೆಂಟ್‌ಗಳ ಬೆಲೆಗಳು ಮೊದಲಿನಂತೆಯೇ ಇವೆ. ವಿವರಗಳು ಇಲ್ಲಿವೆ:
ಮಹೀಂದ್ರಾ XUV700 ಟರ್ಬೊ-ಪೆಟ್ರೋಲ್ ಬೆಲೆಗಳು
|
ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ.
ಮಹೀಂದ್ರಾ ಎಕ್ಸ್‌ಯುವಿ700 ಡೀಸೆಲ್ ಬೆಲೆಗಳು
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಎಮ್‌ಎಕ್ಸ್ 5-ಸೀಟರ್ |
14.59 ಲಕ್ಷ ರೂ. |
14.59 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಮ್‌ಎಕ್ಸ್ 7-ಸೀಟರ್ |
14.99 ಲಕ್ಷ ರೂ. |
14.99 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್3 ಮ್ಯಾನ್ಯುವಲ್ 5-ಸೀಟರ್ |
16.99 ಲಕ್ಷ ರೂ. |
16.99 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್3 ಆಟೋಮ್ಯಾಟಿಕ್ 5-ಸೀಟರ್ |
18.59 ಲಕ್ಷ ರೂ. |
18.59 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್5 ಮ್ಯಾನ್ಯುವಲ್ 5-ಸೀಟರ್ |
18.29 ಲಕ್ಷ ರೂ. |
18.29 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್5 ಆಟೋಮ್ಯಾಟಿಕ್ 5-ಸೀಟರ್ |
19.89 ಲಕ್ಷ ರೂ. |
19.89 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್5 ಮ್ಯಾನ್ಯುವಲ್ 7-ಸೀಟರ್ |
19.04 ಲಕ್ಷ ರೂ. |
19.04 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್5 ಆಟೋಮ್ಯಾಟಿಕ್ 7-ಸೀಟರ್ |
20.64 ಲಕ್ಷ ರೂ. |
20.64 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್5 S ಮ್ಯಾನ್ಯುವಲ್ 7-ಸೀಟರ್ |
17.74 ಲಕ್ಷ ರೂ. |
17.74 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್5 S ಆಟೋಮ್ಯಾಟಿಕ್ 7-ಸೀಟರ್ |
19.24 ಲಕ್ಷ ರೂ. |
19.24 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್7 ಮ್ಯಾನ್ಯುವಲ್ 6-ಸೀಟರ್ |
20.19 ಲಕ್ಷ ರೂ. |
20.19 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್7 ಆಟೋಮ್ಯಾಟಿಕ್ 6-ಸೀಟರ್ |
22.34 ಲಕ್ಷ ರೂ. |
21.89 ಲಕ್ಷ ರೂ. |
(-45,000 ರೂ.) |
ಎಎಕ್ಸ್7 ಮ್ಯಾನ್ಯುವಲ್ 7-ಸೀಟರ್ FWD |
19.99 ಲಕ್ಷ ರೂ. |
19.99 ಲಕ್ಷ ರೂ. |
ಯಾವುದೇ ವ್ಯತ್ಯಾಸವಿಲ್ಲ |
ಎಎಕ್ಸ್7 ಆಟೋಮ್ಯಾಟಿಕ್ 7-ಸೀಟರ್ FWD |
22.14 ಲಕ್ಷ ರೂ. |
21.69 ಲಕ್ಷ ರೂ. |
(-45,000 ರೂ.) |
ಎಎಕ್ಸ್7 ಆಟೋಮ್ಯಾಟಿಕ್ 7-ಸೀಟರ್ AWD |
23.34 ಲಕ್ಷ ರೂ. |
22.89 ಲಕ್ಷ ರೂ. |
(-45,000 ರೂ.) |
ಎಎಕ್ಸ್7 ಎಬೊನಿ ಮ್ಯಾನ್ಯುವಲ್ 7-ಸೀಟರ್ FWD |
– |
20.14 ಲಕ್ಷ ರೂ. |
ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ |
ಎಎಕ್ಸ್7 ಎಬೊನಿ ಆಟೋಮ್ಯಾಟಿಕ್ 7-ಸೀಟರ್ FWD |
– |
21.84 ಲಕ್ಷ ರೂ. |
ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ |
ಎಎಕ್ಸ್7 L ಮ್ಯಾನ್ಯುವಲ್ 6-ಸೀಟರ್ |
23.24 ಲಕ್ಷ ರೂ. |
22.49 ಲಕ್ಷ ರೂ. |
(-75,000 ರೂ.) |
ಎಎಕ್ಸ್7 L ಆಟೋಮ್ಯಾಟಿಕ್ 6-ಸೀಟರ್ |
24.94 ಲಕ್ಷ ರೂ. |
24.19 ಲಕ್ಷ ರೂ. |
(-75,000 ರೂ.) |
ಎಎಕ್ಸ್7 L ಮ್ಯಾನ್ಯುವಲ್ 7-ಸೀಟರ್ FWD |
22.99 ಲಕ್ಷ ರೂ. |
22.24 ಲಕ್ಷ ರೂ. |
(-75,000 ರೂ.) |
ಎಎಕ್ಸ್7 L ಆಟೋಮ್ಯಾಟಿಕ್ 7-ಸೀಟರ್ FWD |
24.74 ಲಕ್ಷ ರೂ. |
23.99 ಲಕ್ಷ ರೂ. |
(-75,000 ರೂ.) |
ಎಎಕ್ಸ್7 L ಆಟೋಮ್ಯಾಟಿಕ್ 7-ಸೀಟರ್ AWD |
25.74 ಲಕ್ಷ ರೂ. |
24.99 ಲಕ್ಷ ರೂ. |
(-75,000 ರೂ.) |
ಎಎಕ್ಸ್7 L ಎಬೊನಿ ಮ್ಯಾನ್ಯುವಲ್ 7-ಸೀಟರ್ FWD |
– |
22.39 ಲಕ್ಷ ರೂ. |
ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ |
ಎಎಕ್ಸ್7 L ಎಬೊನಿ ಆಟೋಮ್ಯಾಟಿಕ್ 7-ಸೀಟರ್ FWD |
– |
24.14 ಲಕ್ಷ ರೂ. |
ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ |
ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಮ್ ಆಗಿದೆ.
ಇದನ್ನೂ ಓದಿ: ಟಾಟಾ ಮೋಟಾರ್ಸ್‌ನ ನೂತನ ಬ್ರಾಂಡ್ ಅಂಬಾಸಿಡರ್ ಆಗಿ ವಿಕಿ ಕೌಶಲ್ ನೇಮಕ, ಈ ಐಪಿಎಲ್‌ನ ಅಧಿಕೃತ ಕಾರು ಆಗಿ Tata Curvv ಆಯ್ಕೆ
ಪವರ್‌ಟ್ರೈನ್ ಆಯ್ಕೆಗಳು
XUV700 ಪಡೆಯುವ ಎರಡು ಪವರ್‌ಟ್ರೇನ್ ಆಯ್ಕೆಗಳ ವಿವರವಾದ ವಿಶೇಷಣಗಳು ಇಲ್ಲಿವೆ:
ಎಂಜಿನ್ |
2-ಲೀಟರ್ ಟರ್ಬೋ ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
200 ಪಿಎಸ್ |
185 ಪಿಎಸ್‌ವೆರೆಗೆ |
ಟಾರ್ಕ್ |
380 ಎನ್‌ಎಮ್ |
450 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನ್ಯುವಲ್/ 6-ಸ್ಪೀಡ್ AT* |
6-ಸ್ಪೀಡ್ ಮ್ಯಾನ್ಯುವಲ್/ 6-ಸ್ಪೀಡ್ AT* |
ಡ್ರೈವ್‌ಟ್ರೈನ್^ |
FWD |
FWD/AWD |
*AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
^FWD = ಫ್ರಂಟ್ ವೀಲ್ ಡ್ರೈವ್; AWD = ಆಲ್ ವೀಲ್ ಡ್ರೈವ್
ಫೀಚರ್‌ಗಳು ಮತ್ತು ಸುರಕ್ಷತೆ
ಮಹೀಂದ್ರಾ XUV700 ಕಾರು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 10.25-ಇಂಚಿನ ಟಚ್‌ಸ್ಕ್ರೀನ್, 6-ವೇ ಪವರ್ಡ್ ಡ್ರೈವರ್ ಸೀಟ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ಫೀಚರ್‌ಗಳನ್ನು ಹೊಂದಿದೆ. ಇದು 12-ಸ್ಪೀಕರ್ ಸೋನಿ ಸೌಂಡ್ ಸಿಸ್ಟಮ್, ಡ್ಯುಯಲ್-ಜೋನ್ ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಮತ್ತು 6-ವೇ ವಿದ್ಯುತ್ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟನ್ನು ಸಹ ಪಡೆಯುತ್ತದೆ.
ಸುರಕ್ಷತಾ ವಿಚಾರದಲ್ಲಿ, ಇದು ಏಳು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಇದು ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತ ಫೀಚರ್‌ಗಳೊಂದಿಗೆ ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಸೂಟ್‌ನೊಂದಿಗೆ ಸಜ್ಜುಗೊಂಡಿದೆ.
ಪ್ರತಿಸ್ಪರ್ಧಿಗಳು
ಮಹೀಂದ್ರಾ ಎಕ್ಸ್‌ಯುವಿ700 ನ 6- ಮತ್ತು 7-ಸೀಟರ್ ಆವೃತ್ತಿಗಳು ಎಮ್‌ಜಿ ಹೆಕ್ಟರ್ ಪ್ಲಸ್, ಹುಂಡೈ ಅಲ್ಕಾಜರ್ ಮತ್ತು ಟಾಟಾ ಸಫಾರಿಗಳಿಗೆ ಪ್ರತಿಸ್ಪರ್ಧಿಯಾಗಿವೆ. ಮತ್ತೊಂದೆಡೆ, ಇದರ 5-ಆಸನಗಳ ವೇರಿಯೆಂಟ್‌ಗಳು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾದಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿವೆ, ಹಾಗೆಯೇ, ಟಾಟಾ ಹ್ಯಾರಿಯರ್ ಮತ್ತು MG ಹೆಕ್ಟರ್‌ಗೆ ಪ್ರತಿಸ್ಪರ್ಧಿಯಾಗಿವೆ.
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ