Login or Register ಅತ್ಯುತ್ತಮ CarDekho experience ಗೆ
Login

2024ರ ಮೇ ತಿಂಗಳ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ Maruti Swift ಮತ್ತು Wagon R ನದ್ದೇ ಪ್ರಾಬಲ್ಯ

published on ಜೂನ್ 17, 2024 07:13 am by dipan for ಮಾರುತಿ ಸ್ವಿಫ್ಟ್

ಈ ಸೆಗ್ಮೆಂಟ್‌ನ ಹ್ಯಾಚ್‌ಬ್ಯಾಕ್‌ಗಳ ಒಟ್ಟು ಮಾರಾಟದಲ್ಲಿ ಸುಮಾರು 78 ಪ್ರತಿಶತದಷ್ಟು ಪಾಲನ್ನು ಮಾರುತಿಯೇ ಹೊಂದಿದೆ

2024ರ ಮೇ ತಿಂಗಳ ಕಾರು ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಮಾರುತಿ ಮತ್ತೊಮ್ಮೆ ಹ್ಯಾಚ್‌ಬ್ಯಾಕ್‌ಗಳ ಸೆಗ್ಮೆಂಟ್‌ನ ನಾಯಕನಾಗಿ ಹೊರಹೊಮ್ಮಿದೆ. ಗಮನಾರ್ಹವಾಗಿ, ಇತ್ತೀಚೆಗೆ ಪರಿಚಯಿಸಲಾದ ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರು ಆಗಿದೆ. ಹಿಂದಿನ ತಿಂಗಳಿನಲ್ಲಿ ಪ್ರತಿ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್ ಮಾರಾಟದ ವಿಷಯದಲ್ಲಿ ಹೇಗೆ ಸಾಧನೆ ತೋರಿದೆ ಎಂಬುದನ್ನು ನಾವು ವಿವರವಾಗಿ ಗಮನಿಸೋಣ.

ಮೊಡೆಲ್‌ಗಳು

2024 ಮೇ

2023 ಮೇ

2024 ಏಪ್ರಿಲ್‌

ಮಾರುತಿ ಸ್ವಿಫ್ಟ್‌

19,393

17,346

4,094

ಮಾರುತಿ ವ್ಯಾಗನ್‌ ಆರ್‌

14,492

16,258

17,850

ಟಾಟಾ ಟಿಯಾಗೋ

5,927

8,133

6,796

ಹ್ಯುಂಡೈ ಗ್ರ್ಯಾಂಡ್‌ ಐ10 ನಿಯೋಸ್‌

5,328

6,385

5,117

ಮಾರುತಿ ಸೆಲೆರಿಯೋ

3,314

3,216

3,220

ಮಾರುತಿ ಇಗ್ನಿಸ್‌

2,104

4,551

1,915

ಇದನ್ನೂ ಓದಿ: WWDC 2024 ರಲ್ಲಿ ಮುಂದಿನ ಜನರೇಶನ್‌ನ ಆಪಲ್ ಕಾರ್‌ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್‌ಪ್ಲೇ

ಗಮನಿಸಿದ ಪ್ರಮುಖ ಅಂಶಗಳು

  • ಮಾರುತಿ ಸ್ವಿಫ್ಟ್‌ನ ಮಾಸಿಕ ಮಾರಾಟದಲ್ಲಿನ ತಿಂಗಳಿನಿಂದ ತಿಂಗಳ (MoM) ಬೆಳವಣಿಗೆಯು 350 ಪ್ರತಿಶತದಷ್ಟು ರಾಕೆಟ್‌ನಂತೆ ಏರಿಕೆ ಕಂಡಿದ್ದು, ವರ್ಷದಿಂದ ವರ್ಷದ ಮಾರಾಟದಲ್ಲೂ (YoY) ಸುಮಾರು 12 ಪ್ರತಿಶತದಷ್ಟು ಬೆಳವಣಿಗೆಯು ಹ್ಯಾಚ್‌ಬ್ಯಾಕ್‌ನ ಬೇಡಿಕೆಯ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡುತ್ತದೆ.

  • 2024ರ ಮೇ ತಿಂಗಳಿನಲ್ಲಿ ಮಾರುತಿ ವ್ಯಾಗನ್ ಆರ್‌ನ MoM ಮಾರಾಟದಲ್ಲಿ ಸರಿಸುಮಾರು 18.8 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ ಮತ್ತು ಮೇ 2023 ಕ್ಕೆ ಹೋಲಿಸಿದರೆ ಸರಿಸುಮಾರು 10.9 ಪ್ರತಿಶತದಷ್ಟು ಕಡಿಮೆಯಾಗಿದೆ. ಹೊಸ ಸ್ವಿಫ್ಟ್ ಆಗಮನವು ಇದರ ಬೇಡಿಕೆಯ ಕುಸಿತಕ್ಕೆ ಕಾರಣವೆಂದು ಹೇಳಬಹುದು.

  • 2024ರ ಮೇ ತಿಂಗಳಿನಲ್ಲಿ ಟಾಟಾ ಟಿಯಾಗೊದ ಮಾಸಿಕ ಮಾರಾಟವು ಸುಮಾರು 12.8 ಪ್ರತಿಶತದಷ್ಟು ಕುಸಿದಿದೆ ಆದರೆ ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಸರಿಸುಮಾರು 27 ಪ್ರತಿಶತದಷ್ಟು ಕುಸಿತ ಕಂಡಿದ್ದು, ಇದು ಇದರ ಬೇಡಿಕೆಯಲ್ಲಿ ಹೆಚ್ಚು ಮಹತ್ವದ್ದಾಗಿದೆ. ಟಾಟಾದ ಎಂಟ್ರಿ-ಲೆವೆಲ್‌ನ ಕಾರು ಆಗಿರುವ ಇದು ಇತ್ತೀಚೆಗೆ CNG ಪವರ್‌ಟ್ರೇನ್‌ನೊಂದಿಗೆ AMT ಆಯ್ಕೆಯನ್ನು ಪರಿಚಯಿಸಿದೆ, ಹಾಗೆಯೇ ಇದು ಈ ಸೆಗ್ಮೆಂಟ್‌ನ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಾತ್ಮಕವಾಗಿರಲು ಹೆಚ್ಚು ಪರಿಪೂರ್ಣವಾದ ಆಪ್‌ಡೇಟ್‌ ಆಗಿ ಸಹ ಬಳಸಬಹುದು. ದಯವಿಟ್ಟು ಗಮನಿಸಿ, ಈ ಅಂಕಿಅಂಶವು ಟಾಟಾ ಟಿಯಾಗೊ ಇವಿಯ ಮಾರಾಟವನ್ನು ಸಹ ಒಳಗೊಂಡಿದೆ.

  • ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ಗೆ ಇದು ನಿಧಾನವಾದ ಆದರೆ ಸಕಾರಾತ್ಮಕ ತಿಂಗಳಾಗಿದ್ದು, ಕಳೆದ ತಿಂಗಳಲ್ಲಿ ಮಾರಾಟವು ಸುಮಾರು 4 ಪ್ರತಿಶತದಷ್ಟು (MoM) ಹೆಚ್ಚಾಗಿದೆ. ಆದಾಗಿಯೂ, 2023ರ ಮೇ ತಿಂಗಳಿಗೆ ಹೋಲಿಸಿದರೆ 2024ರ ಮೇ ತಿಂಗಳ ಬೇಡಿಕೆಯಲ್ಲಿ ಸುಮಾರು 16.6 ಪ್ರತಿಶತದಷ್ಟು ಗಮನಾರ್ಹವಾದ ಕುಸಿತ ಕಂಡುಬಂದಿದೆ.

  • 2024ರ ಮೇ ತಿಂಗಳಿನಲ್ಲಿ ಮಾರುತಿ ಸೆಲೆರಿಯೊ ಮಾರಾಟವು ತುಲನಾತ್ಮಕವಾಗಿ ಸ್ಥಿರವಾಗಿದೆ, 2024ರ ಏಪ್ರಿಲ್ ಗಿಂತ ಕಳೆದ ತಿಂಗಳ ಮಾರಾಟದಲ್ಲಿ ಸುಮಾರು 2.9 ಶೇಕಡಾದಷ್ಟು ಹೆಚ್ಚಳವಾಗಿದೆ. ಆದಾಗಿಯೂ, 2023 ಮೇಗೆ ಹೋಲಿಸಿದರೆ ಸುಮಾರು 3.0 ಪ್ರತಿಶತದಷ್ಟು ಮಾತ್ರ ವಾರ್ಷಿಕ ಹೆಚ್ಚಳ ಕಂಡುಬಂದಿದೆ.

ಇದನ್ನೂ ಓದಿ : 2024ರ ಮೇ ತಿಂಗಳ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ Tata Nexonನ ಹಿಂದಿಕ್ಕಿದ Maruti Brezza

  • ಮಾರುತಿ ಇಗ್ನಿಸ್ 2024ರ ಮೇ ತಿಂಗಳಿನ ಮಾರಾಟದಲ್ಲಿ ಹೆಚ್ಚಳವನ್ನು ಅನುಭವಿಸಿತು, ಈ ಏಪ್ರಿಲ್‌ಗಿಂತ ಸುಮಾರು 10 ಪ್ರತಿಶತದಷ್ಟು ಹೆಚ್ಚಳವಾಗಿದೆ. ಆದಾಗಿಯೂ, 2023ರ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಿನಲ್ಲಿ ಸುಮಾರು 53.7 ಪ್ರತಿಶತದಷ್ಟು ಗಮನಾರ್ಹ ಇಳಿಕೆ ಕಂಡುಬಂದಿದೆ. ಸಿಯಾಜ್ ಜೊತೆಗೆ ಮಾರುತಿ ಪಟ್ಟಿಯಲ್ಲಿರುವ ಅತ್ಯಂತ ಹಳೆಯ ಶೈಲಿಯ ಕೊಡುಗೆಗಳಲ್ಲಿ ಇಗ್ನಿಸ್ ಕೂಡ ಒಂದಾಗಿದೆ ಮತ್ತು ಸರಿಯಾದ ರಿಫ್ರೆಶ್‌ನಿಂದ ಇದು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: ಈ ಜೂನ್‌ನಲ್ಲಿ ಎಂಟ್ರಿ-ಲೆವೆಲ್‌ ಇವಿಯನ್ನು ಮನೆಗೆ ತರಲು 4 ತಿಂಗಳವರೆಗೆ ಕಾಯಲು ಸಿದ್ಧರಾಗಿ..!

ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಎಎಂಟಿ

d
ಅವರಿಂದ ಪ್ರಕಟಿಸಲಾಗಿದೆ

dipan

  • 24 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಸ್ವಿಫ್ಟ್

Read Full News

explore similar ಕಾರುಗಳು

ಮಾರುತಿ ವ್ಯಾಗನ್ ಆರ್‌

ಪೆಟ್ರೋಲ್24.35 ಕೆಎಂಪಿಎಲ್
ಸಿಎನ್‌ಜಿ34.05 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಮಾರುತಿ ಸೆಲೆರಿಯೊ

ಪೆಟ್ರೋಲ್25.24 ಕೆಎಂಪಿಎಲ್
ಸಿಎನ್‌ಜಿ34.43 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

ಟಾಟಾ ಟಿಯಾಗೋ

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.49 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ