MG Hector ಮತ್ತು Hector Plus ಮೇಲಿನ ಹಬ್ಬದ ಡಿಸ್ಕೌಂಟ್ ಅಂತ್ಯ, ಆದರೂ ಈಗ ಅಗ್ಗ
ಎರಡೂ ಎಂಜಿ ಎಸ್‌ಯುವಿಗಳು ಹಬ್ಬದ ಋತುವಿಗಿಂತ ಮುನ್ನ ಭಾರೀ ಬೆಲೆ ಕಡಿತ ಕಂಡವು, ಆದರೆ ಈಗ ಲೈನ್‌ಅಪ್‌ನಾದ್ಯಂತ ರೂ. 30,000 ತನಕ ದುಬಾರಿಯಾಗಿವೆ
- ಎಂಜಿ ಹೆಕ್ಟರ್‌ನ ಪೆಟ್ರೋಲ್ ವೇರಿಯೆಂಟ್‌ನ ಬೆಲೆಗಳು ರೂ 19,000 ನಿಂದ ರೂ 30,000 ತನಕ ಏರಿಕೆಯಾಗಿವೆ.
- ಎಂಜಿಯು ಹೆಕ್ಟರ್ ಪ್ಲಸ್‌ನ ಬೆಲೆಗಳನ್ನು ರೂ 24,000 ರಿಂದ ರೂ 30,000 ತನಕ ಏರಿಸಿದೆ.
- ಹೆಕ್ಟರ್ ಎಸ್‌ಯುವಿಯ ಬೆಲೆ ಈಗ ರೂ 15 ಲಕ್ಷದಿಂದ ರೂ 22 ಲಕ್ಷ ತನಕ ಇದೆ.
- ಎಂಜಿಯು ಈಗ ಹೆಕ್ಟರ್ ಪ್ಲಸ್ ಅನ್ನು ರೂ 17.80 ಲಕ್ಷದಿಂದ ರೂ 22.51 ಲಕ್ಷ ತನಕ ನಿಗದಿಪಡಿಸಿದೆ.
ಎಂಜಿ ಹೆಕ್ಟರ್ ಮತ್ತು ಎಂಜಿ ಹೆಕ್ಟರ್ ಪ್ಲಸ್‌ನ ಬೆಲೆಗಳನ್ನು ಹಬ್ಬದ ಋತುವಿಗಿಂತ ಮುನ್ನ ಸೆಪ್ಟೆಂಬರ್ 2023ರ ಕೊನೆಯಲ್ಲಿ ಕಡಿತಗೊಳಿಸಿದ ಬಳಿಕ, ಈ ಕಾರುತಯಾರಕರು ಇದೀಗ ಬೆಲೆಗಳನ್ನು ಪರಿಷ್ಕರಿಸಿದ್ದಾರೆ. ಆದಾಗ್ಯೂ ಈ ಹೊಸ ಬೆಲೆಗಳಲ್ಲೂ ಈ ಎರಡು ಎಸ್‌ಯುವಿಗಳು ಸೆಪ್ಟೆಂಬರ್ ಬೆಲೆ ಕಡಿತಕ್ಕಿಂತ ಹಿಂದಿನ ಬೆಲೆಗಿಂತ ಅಗ್ಗವಾಗಿಯೇ ಇದೆ. ಈ ಎರಡು ಎಸ್‌ಯುವಿಯ ವೇರಿಯೆಂಟ್‌ವಾರು ಪರಿಷ್ಕೃತ ಬೆಲೆಗಳ ವಿವರ ಇಲ್ಲಿದೆ:
ಎಂಜಿ ಹೆಕ್ಟರ್ ಪೆಟ್ರೋಲ್
ವೇರಿಯೆಂಟ್ |
ಹಳೆಯ ಬೆಲೆ (ಹಬ್ಬದ ಅವಧಿ) |
ಹೊಸ ಬೆಲೆ |
ವ್ಯತ್ಯಾಸ |
ಸ್ಟೈಲ್ MT |
ರೂ 14.73 ಲಕ್ಷ |
ರೂ 15 ಲಕ್ಷ |
+ ರೂ 27,000 |
ಶೈನ್ MT |
ರೂ 15.99 ಲಕ್ಷ |
ರೂ 16.29 ಲಕ್ಷ |
+ ರೂ 30,000 |
ಶೈನ್ CVT |
ರೂ 17.19 ಲಕ್ಷ |
ರೂ 17.49 ಲಕ್ಷ |
+ ರೂ 30,000 |
ಸ್ಮಾರ್ಟ್ MT |
ರೂ 16.80 ಲಕ್ಷ |
ರೂ 17.10 ಲಕ್ಷ |
+ ರೂ 30,000 |
ಸ್ಮಾರ್ಟ್ CVT |
ರೂ 17.99 ಲಕ್ಷ |
ರೂ 18.29 ಲಕ್ಷ |
+ ರೂ 30,000 |
ಸ್ಮಾರ್ಟ್ Pro MT |
ರೂ 17.99 ಲಕ್ಷ |
ರೂ 18.29 ಲಕ್ಷ |
+ ರೂ 30,000 |
ಶಾರ್ಪ್ Pro MT |
ರೂ 19.45 ಲಕ್ಷ |
ರೂ 19.75 ಲಕ್ಷ |
+ ರೂ 30,000 |
ಶಾರ್ಪ್ Pro CVT |
ರೂ 20.78 ಲಕ್ಷ |
ರೂ 21.08 ಲಕ್ಷ |
+ ರೂ 30,000 |
ಸೇವಿ Pro CVT |
ರೂ 21.73 ಲಕ್ಷ |
ರೂ 22 ಲಕ್ಷ |
+ ರೂ 27,000 |
ಎಂಜಿ ಹೆಕ್ಟರ್ ಡೀಸೆಲ್
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಶೈನ್ MT |
ರೂ 17.99 ಲಕ್ಷ |
ರೂ 18.29 ಲಕ್ಷ |
+ ರೂ 30,000 |
ಸ್ಮಾರ್ಟ್ MT |
ರೂ 19 ಲಕ್ಷ |
ರೂ 19.30 ಲಕ್ಷ |
+ ರೂ 30,000 |
ಸ್ಮಾರ್ಟ್ Pro |
ರೂ 20 ಲಕ್ಷ |
ರೂ 20.20 ಲಕ್ಷ |
+ ರೂ 20,000 |
ಶಾರ್ಪ್ Pro |
ರೂ 21.51 ಲಕ್ಷ |
ರೂ 21.70 ಲಕ್ಷ |
+ ರೂ 19,000 |
-
ಎಂಜಿ ಹೆಕ್ಟರ್‌ನ ಪೆಟ್ರೋಲ್ ವೇರಿಯೆಂಟ್‌ಗಳು ರೂ 30,000 ತನಕ ದುಬಾರಿಯಾಗಿವೆ. ಇದರ ಬೇಸ್ ಸ್ಪೆಕ್ ಮತ್ತು ಟಾಪ್ ಸ್ಪೆಕ್ ವೇರಿಯೆಂಟ್‌ಗಳು ಈಗ ರೂ 27,000 ನಷ್ಟು ದುಬಾರಿಯಾಗಿವೆ.
-
ಎಸ್‌ಯುವಿಯ ಡೀಸೆಲ್ ವೇರಿಯೆಂಟ್‌ಗಳ ಬೆಲೆಗಳು ರೂ 19,000 ನಿಂದ ರೂ 30,000 ತನಕ ಹೆಚ್ಚಾಗಿವೆ.
ಇದನ್ನೂ ಓದಿ: ಅಕ್ಟೋಬರ್ 2023ರಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ 15 ಕಾರುಗಳು, ಇವು ಎಸ್‌ಯುವಿ ಅಲ್ಲ
ಎಂಜಿ ಹೆಕ್ಟರ್ ಪ್ಲಸ್ ಪೆಟ್ರೋಲ್
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಸ್ಮಾರ್ಟ್ MT 7-ಸೀಟರ್ |
ರೂ 17.50 ಲಕ್ಷ |
ರೂ 17.80 ಲಕ್ಷ |
+ ರೂ 30,000 |
ಶಾರ್ಪ್ Pro MT 6- ಸೀಟರ್ / 7 ಸೀಟರ್ |
ರೂ 20.15 ಲಕ್ಷ |
ರೂ 20.45 ಲಕ್ಷ |
+ ರೂ 30,000 |
ಶಾರ್ಪ್ Pro CVT 6- ಸೀಟರ್ / 7- ಸೀಟರ್ |
ರೂ 21.48 ಲಕ್ಷ |
ರೂ 21.78 ಲಕ್ಷ |
+ ರೂ 30,000 |
ಸೇವಿ Pro CVT 6- ಸೀಟರ್ / 7- ಸೀಟರ್ |
ರೂ 22.43 ಲಕ್ಷ |
ರೂ 22.73 ಲಕ್ಷ |
+ ರೂ 30,000 |
ಎಂಜಿ ಹೆಕ್ಟರ್ ಪ್ಲಸ್ ಡೀಸೆಲ್
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಸ್ಮಾರ್ಟ್ MT 7-ಸೀಟರ್ |
ರೂ 19.76 ಲಕ್ಷ |
ರೂ 20 ಲಕ್ಷ |
+ ರೂ 24,000 |
ಸ್ಮಾರ್ಟ್ Pro MT 6- ಸೀಟರ್ |
ರೂ 20.80 ಲಕ್ಷ |
ರೂ 21.10 ಲಕ್ಷ |
+ರೂ 30,000 |
ಶಾರ್ಪ್ Pro MT 6- ಸೀಟರ್ / 7- ಸೀಟರ್ |
ರೂ 22.21 ಲಕ್ಷ |
ರೂ 22.51 ಲಕ್ಷ |
+ ರೂ 30,000 |
-
ಎಂಜಿ ಹೆಕ್ಟರ್ ಪ್ಲಸ್‌ನ ಪೆಟ್ರೋಲ್ ವೇರಿಯೆಂಟ್‌ಗಳು ರೂ 30,000 ಯ ಏಕರೂಪ ಬೆಲೆ ಏರಿಕೆಯನ್ನು ಕಂಡಿವೆ.
-
ಈ ಕಾರು ತಯಾರಕರು ಎಸ್‌ಯುವಿಯ ಡೀಸೆಲ್ ವೇರಿಯೆಂಟ್‌ಗಳ ಬೆಲೆಗಳನ್ನು ರೂ 30,000 ತನಕ ಹೆಚ್ಚಿಸಿದ್ದಾರೆ.
ಇವೆರಡರ ಎಂಜಿನ್ ಯಾವುದು?
ಎಂಜಿಯ ಎರಡೂ ಎಸ್‌ಯುವಿಗಳು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿವೆ: 1.5-ಲೀಟರ್ ಟರ್ಬೊ-ಪೆಟ್ರೋಲ್ (143 PS/250 Nm) ಒಂದೋ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್ ಅಥವಾ CVT ಯೊಂದಿಗೆ ಬರುತ್ತದೆ ಮತ್ತು, 2-ಲೀಟರ್ ಡೀಸೆಲ್ ಎಂಜಿನ್ (170 PS/350 Nm) ಕೇವಲ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ಬರುತ್ತದೆ.
ಇದನ್ನೂ ಓದಿ: ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿದೆ, ಸಮರ್ಪಕ ಏರ್ ಪ್ಯೂರಿಫೈರ್ ಹೊಂದಿರುವ 10 ಕೈಗೆಟಕುವ ಕಾರುಗಳು
ಪ್ರತಿಸ್ಪರ್ಧಿಗಳು ಯಾರು
ಎಂಜಿ ಹೆಕ್ಟರ್ ತನ್ನ ಪ್ರತಿಸ್ಪರ್ಧಿಯಾಗಿ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಮತ್ತು ಮಹೀಂದ್ರಾ XUV700 ನ 5 ಸೀಟರ್ ವೇರಿಯೆಂಟ್‌ಗಳನ್ನು ಹೊಂದಿದೆ. ಇನ್ನೊಂದೆಡೆ ಎಂಜಿ ಹೆಕ್ಟರ್ ಪ್ಲಸ್‌ನ ಪ್ರತಿಸ್ಪರ್ಧಿಗಳಾಗಿ ಟಾಟಾ ಸಫಾರಿ, ಹ್ಯುಂಡೈ ಆಲ್ಕಝಾರ್ ಮತ್ತು ಮಹೀಂದ್ರಾ XUV700 ಅನ್ನು ಹೊಂದಿದೆ.
ಎಲ್ಲಾ ಬೆಲೆಗಳು ದೆಹಲಿ ಎಕ್ಸ್‌ಶೋರೂಂನದ್ದಾಗಿದೆ
ಇಲ್ಲಿ ಇನ್ನಷ್ಟು ಓದಿ : ಹೆಕ್ಟರ್ ಆನ್ ರೋಡ್ ಬೆಲೆ