Login or Register ಅತ್ಯುತ್ತಮ CarDekho experience ಗೆ
Login

2025ರ ಫೆಬ್ರವರಿಯಲ್ಲಿ Mahindraದ ಪೆಟ್ರೋಲ್‌ಗಿಂತ ಡೀಸೆಲ್ ಚಾಲಿತ ಎಸ್‌ಯುವಿಗೆ ಫುಲ್‌ ಡಿಮ್ಯಾಂಡ್‌..!

ಮಹೀಂದ್ರಾ ಸ್ಕಾರ್ಪಿಯೋ ಎನ್ ಗಾಗಿ shreyash ಮೂಲಕ ಮಾರ್ಚ್‌ 17, 2025 07:50 pm ರಂದು ಪ್ರಕಟಿಸಲಾಗಿದೆ

ಆದರೂ, ಡೀಸೆಲ್‌ಗೆ ಹೋಲಿಸಿದರೆ XUV 3XO ಪೆಟ್ರೋಲ್‌ ವೇರಿಯೆಂಟ್‌ಗೆ ಹೆಚ್ಚಿನ ಬೇಡಿಕೆಯಿತ್ತು

ಮಹೀಂದ್ರಾವು 2025ರ ಫೆಬ್ರವರಿಯಲ್ಲಿಯ ಪವರ್‌ಟ್ರೇನ್‌-ವಾರು ಮಾರಾಟ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ, ಈ ಭಾರತೀಯ ವಾಹನ ತಯಾರಕ ಕಂಪನಿಯ XUV700 ಮತ್ತು ಸ್ಕಾರ್ಪಿಯೋ N ಸೇರಿದಂತೆ ಡೀಸೆಲ್ ಚಾಲಿತ ಎಸ್‌ಯುವಿಗಳಿಗೆ ಹೆಚ್ಚಿನ ಬೇಡಿಕೆಯನ್ನು ಕಂಡಿತು. ಮಾರಾಟವಾದ ಒಟ್ಟು 40,000 ಕ್ಕೂ ಹೆಚ್ಚು ಎಸ್‌ಯುವಿಗಳಲ್ಲಿ ಸುಮಾರು 30,000 ಡೀಸೆಲ್ ಆಗಿದ್ದವು. ಫೆಬ್ರವರಿಯಲ್ಲಿ ಈ ಇಂಧನ ಚಾಲಿತ ಎಂಜಿನ್ (ICE) ಮೊಡೆಲ್‌ಗಳ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ವಿವರಗಳು ಇಲ್ಲಿದೆ.

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ ಎನ್

ಪವರ್‌ಟ್ರೈನ್‌

ಫೆಬ್ರವರಿ 2024

ಶೇಕಡಾವಾರು

ಫೆಬ್ರವರಿ 2025

ಶೇಕಡಾವಾರು

ಪೆಟ್ರೋಲ್‌

1,360

9.9%

1,017

8.07%

ಡೀಸೆಲ್‌

13,691

90.1%

12,601

91.93%

ಸ್ಕಾರ್ಪಿಯೋ N ಅನ್ನು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಇವುಗಳಲ್ಲಿ 2.2-ಲೀಟರ್ ಡೀಸೆಲ್ ಘಟಕವು 132 ಪಿಎಸ್‌ ಮತ್ತು 300 ಎನ್‌ಎಮ್‌ ಅಥವಾ 175 ಪಿಎಸ್‌ ಮತ್ತು 400 ಎನ್‌ಎಮ್‌ವರೆಗೆ ಉತ್ಪಾದಿಸುತ್ತದೆ, ಎರಡೂ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ (MT) ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್ (AT) ನೊಂದಿಗೆ ಲಭ್ಯವಿದೆ. 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ 203 ಪಿಎಸ್‌ ಮತ್ತು 380 ಎನ್‌ಎಮ್‌ವರೆಗೆ ಉತ್ಪಾದಿಸುತ್ತದೆ, ಇದು ಆಟೋಮ್ಯಾಟಿಕ್‌ ಮತ್ತು ಮ್ಯಾನ್ಯುವಲ್‌ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ. ಸ್ಕಾರ್ಪಿಯೋ N ನ ಡೀಸೆಲ್ ಆವೃತ್ತಿಯು ಒಪ್ಶನಲ್‌ 4-ವೀಲ್-ಡ್ರೈವ್ (4WD) ಡ್ರೈವ್‌ಟ್ರೇನ್‌ನೊಂದಿಗೆ ಲಭ್ಯವಿದೆ.

ಮತ್ತೊಂದೆಡೆ, ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ, ಇದು 132 ಪಿಎಸ್‌ ಮತ್ತು 320 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ನೊಂದಿಗೆ ಜೋಡಿಸಲ್ಪಟ್ಟಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಸ್ಕಾರ್ಪಿಯೋದ ಒಟ್ಟು ಮಾರಾಟ ಕಡಿಮೆಯಾಗಿದೆ, ಆದಾಗ್ಯೂ ಡೀಸೆಲ್ ಚಾಲಿತ ವೇರಿಯೆಂಟ್‌ಗಳು ಒಟ್ಟಾರೆ ಮಾರಾಟದಲ್ಲಿ ಇನ್ನೂ ಶೇಕಡಾ 90 ಕ್ಕಿಂತ ಹೆಚ್ಚಿನದನ್ನು ಹೊಂದಿವೆ.

ಮಹೀಂದ್ರಾ ಥಾರ್ ಮತ್ತು ಥಾರ್ ರಾಕ್ಸ್

ಪವರ್‌ಟ್ರೈನ್‌

ಫೆಬ್ರವರಿ 2024

ಶೇಕಡಾವಾರು

ಫೆಬ್ರವರಿ 2025

ಶೇಕಡಾವಾರು

ಪೆಟ್ರೋಲ್‌

503

9.47%

1,615

21.15%

ಡೀಸೆಲ್‌

5,309

90.52%

7,633

78.85%

ಮಹೀಂದ್ರಾ ಥಾರ್ 3-ಡೋರ್ ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 152 ಪಿಎಸ್‌ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್, 132 ಪಿಎಸ್‌ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು 119 ಪಿಎಸ್‌ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ, ಇದು ರಿಯರ್‌-ವೀಲ್‌- ಡ್ರೈವ್ (RWD) ಸೆಟಪ್‌ನೊಂದಿಗೆ ಬರುತ್ತದೆ. ಥಾರ್‌ನ 5-ಡೋರ್‌ನ ಆವೃತ್ತಿಯಾದ ಥಾರ್ ರಾಕ್ಸ್ ಅದೇ ಎಂಜಿನ್ ಆಯ್ಕೆಗಳನ್ನು ಬಳಸುತ್ತದೆ ಆದರೆ ಹೆಚ್ಚಿನ ಮಟ್ಟದ ಔಟ್‌ಪುಟ್‌ನಲ್ಲಿ, ಅಂದರೆ, ಪೆಟ್ರೋಲ್‌ನಲ್ಲಿ 177ಪಿಎಸ್‌ ಮತ್ತು ಡೀಸೆಲ್‌ನಲ್ಲಿ 175 ಪಿಎಸ್‌ ವರೆಗೆ ನೀಡುತ್ತದೆ. ಥಾರ್ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುವುದಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು, ಮತ್ತು 4WD ಅದರ ಡೀಸೆಲ್ ಚಾಲಿತ ವೇರಿಯೆಂಟ್‌ಗಳೊಂದಿಗೆ ಮಾತ್ರ ಲಭ್ಯವಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಡೀಸೆಲ್ ಚಾಲಿತ ಥಾರ್‌ನ ಬೇಡಿಕೆ ಶೇ. 90 ರಿಂದ ಶೇ. 80 ಕ್ಕೆ ಇಳಿದಿದೆ.

ಮಹೀಂದ್ರಾ ಎಕ್ಸ್‌ಯುವಿ700

ಪವರ್‌ಟ್ರೈನ್‌

ಫೆಬ್ರವರಿ 2024

ಶೇಕಡಾವಾರು

ಫೆಬ್ರವರಿ 2025

ಶೇಕಡಾವಾರು

ಪೆಟ್ರೋಲ್‌

2,077

46.47%

1,908

34.31%

ಡೀಸೆಲ್‌

4,469

53.52%

5,560

65.68%

ಮಹೀಂದ್ರಾ ಎಕ್ಸ್‌ಯುವಿ700 ಡೀಸೆಲ್ ವೇರಿಯೆಂಟ್‌ಗಳಿಗೆ ಶೇಕಡಾ 65 ಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿದೆ. ಇದು 200 ಪಿಎಸ್‌ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 185 ಪಿಎಸ್‌ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಡೀಸೆಲ್ ವೇರಿಯೆಂಟ್‌ಗಳು ಒಪ್ಶನಲ್‌ ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ನೊಂದಿಗೆ ಲಭ್ಯವಿದೆ.

ಮಹೀಂದ್ರಾ ಎಕ್ಸ್‌ಯುವಿ 3XO ಮತ್ತು ಎಕ್ಸ್‌ಯುವಿ400 ಇವಿ

ಪವರ್‌ಟ್ರೈನ್‌

ಫೆಬ್ರವರಿ 2025

ಶೇಕಡಾವಾರು

ಪೆಟ್ರೋಲ್‌

6,120

57.46%

ಡೀಸೆಲ್ + ಎಲೆಕ್ಟ್ರಿಕ್

2,603

42.53%

ಮಹೀಂದ್ರಾ ಎಕ್ಸ್‌ಯುವಿ 3XO ಪೆಟ್ರೋಲ್‌ಗೆ ಸುಮಾರು ಶೇಕಡಾ 57 ರಷ್ಟು ಹೆಚ್ಚಿನ ಬೇಡಿಕೆಯನ್ನು ಕಂಡರೆ, ಅದರ ಡೀಸೆಲ್ ವೇರಿಯೆಂಟ್‌ಗಳು ಶೇಕಡಾ 30ರಷ್ಟು ಕಡಿಮೆ ಬೇಡಿಕೆಯನ್ನು ಹೊಂದಿದ್ದವು. ಡೀಸೆಲ್ ಸಂಖ್ಯೆಗಳು ಕಡಿಮೆಯಾಗಿವೆ, ಆದರೆ ಮಹೀಂದ್ರಾ ಎಕ್ಸ್‌ಯುವಿ 3XO ಡೀಸೆಲ್ ಮತ್ತು ಎಕ್ಸ್‌ಯುವಿ400 EVಗಾಗಿ ಪ್ರತ್ಯೇಕ ಮಾರಾಟ ಅಂಕಿಅಂಶಗಳನ್ನು ಒದಗಿಸಿಲ್ಲ.

ಮಹೀಂದ್ರಾ ಬೊಲೆರೊ, ಬೊಲೆರೊ ನಿಯೋ ಮತ್ತು ಬೊಲೆರೊ ನಿಯೋ ಪ್ಲಸ್

ಪವರ್‌ಟ್ರೈನ್‌

ಫೆಬ್ರವರಿ 2024

ಫೆಬ್ರವರಿ 2025

ಡೀಸೆಲ್‌

10,113

8,690

ಮಹೀಂದ್ರಾ ಬೊಲೆರೊವನ್ನು ಮೂರು ಆವೃತ್ತಿಗಳಲ್ಲಿ ನೀಡುತ್ತದೆ, ಅವುಗಳೆಂದರೆ, ಬೊಲೆರೊ, ಬೊಲೆರೊ ನಿಯೋ ಮತ್ತು ಬೊಲೆರೊ ನಿಯೋ ಪ್ಲಸ್. ಇವೆಲ್ಲವೂ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ. ಬೊಲೆರೊ ಮತ್ತು ಬೊಲೆರೊ ನಿಯೋ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸಿದರೆ, ಬೊಲೆರೊ ನಿಯೋ ಪ್ಲಸ್ ದೊಡ್ಡ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ.

ನಿಮ್ಮ ಆಯ್ಕೆಗಳು ಸಹ ಡೀಸೆಲ್‌ ಆಗಿರುತ್ತದೆಯೇ ಅಥವಾ ಈ ಯಾವುದೇ ಎಸ್‌ಯುವಿಗಳ ಪೆಟ್ರೋಲ್ ವೇರಿಯೆಂಟ್‌ಗಳನ್ನು ನೀವು ಆರಿಸುತ್ತೀರಾ? ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

Share via

Write your Comment on Mahindra ಸ್ಕಾರ್ಪಿಯೊ ಎನ್

explore similar ಕಾರುಗಳು

ಮಹೀಂದ್ರ ಎಕ್ಸ್‌ಯುವಿ 700

ಡೀಸಲ್17 ಕೆಎಂಪಿಎಲ್
ಪೆಟ್ರೋಲ್15 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಹೀಂದ್ರಾ ಸ್ಕಾರ್ಪಿಯೋ ಎನ್

ಡೀಸಲ್15.42 ಕೆಎಂಪಿಎಲ್
ಪೆಟ್ರೋಲ್12.17 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.2.84 - 3.12 ಸಿಆರ್*
ಹೊಸ ವೇರಿಯೆಂಟ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.50 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ