ಸೆಪ್ಟೆಂಬರ್ 2023ರ ಮಾರಾಟದಲ್ಲಿ ಮಾರುತಿ ಬ್ರೆಜ್ಜಾವನ್ನು ಹಿಂದಿಕ್ಕಿ ಮುಂಚೂಣಿಗೆ ಏರಿದ ಹೊಸ ಟಾಟಾ ನೆಕ್ಸನ್
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ಬಿಡುಗಡೆಯಾದ ನಂತರ ಇದರ ಸೆಪ್ಟೆಂಬರ್ ತಿಂಗಳ ಮಾರಾಟವು ಹಿಂದಿನ ತಿಂಗಳಿಗಿಂತ ಸರಿಸುಮಾರು ದುಪ್ಪಟ್ಟು ಆಗಿದೆ
ಆಗಸ್ಟ್ 2023ಕ್ಕೆ ಹೋಲಿಸಿದರೆ ಈ ಸಬ್-4m SUVಯ ಸೆಪ್ಟೆಂಬರ್ ತಿಂಗಳ ಮಂತ್ ಆನ್ ಮಂತ್ (MoM) ಬೇಡಿಕೆಯಲ್ಲಿ ಹೆಚ್ಚಳ ಉಂಟಾಗಿದೆ. ಒಟ್ಟು ಮಾರಾಟವು 56,000 ಘಟಕಗಳಿಗೆ ತಲುಪಿದ್ದು, ಟಾಟಾ, ಮಾರುತಿ, ಮತ್ತು ಹ್ಯುಂಡೈ ಸಮಸ್ಥೆಯು ಈ ವಿಭಾಗದಲ್ಲಿ ತಮ್ಮ ಮಾದರಿಯ 10,000 ಕ್ಕಿಂತಲೂ ಹೆಚ್ಚಿನ ಘಟಕಗಳನ್ನು ಮಾರಾಟ ಮಾಡಿವೆ. ಪ್ರತಿ SUV ಯು ಯಾವ ರೀತಿಯಲ್ಲಿ ಸಾಧನೆ ಮಾಡಿದೆ ಎಂಬುದನ್ನು ನೋಡೋಣ:
ಸಬ್ ಕಾಂಪ್ಯಾಕ್ಟ್ SUV ಗಳು ಕ್ರಾಸ್ ಓವರ್ ಗಳು |
|||||||
ಸೆಪ್ಟೆಂಬರ್ 2023 |
ಆಗಸ್ಟ್ 2023 |
MoM ಬೆಳವಣಿಗೆ |
ಮಾರುಕಟ್ಟೆ ಪಾಲು ಪ್ರಸ್ತುತ(%) |
ಮಾರುಕಟ್ಟೆ ಪಾಲು (% ಕಳೆದ ವರ್ಷ) |
YoY ಮಾರುಕಟ್ಟೆ ಪಾಲು (%) |
ಸರಾಸರಿ ಮಾರಾಟ (6 ತಿಂಗಳುಗಳು) |
|
ಟಾಟಾ ನೆಕ್ಸನ್ |
15,325 |
8,049 |
90.39 |
27.41 |
25.34 |
2.07 |
14,047 |
ಮಾರುತಿ ಬ್ರೆಜ್ಜಾ |
15,001 |
14,572 |
2.94 |
26.83 |
25.52 |
1.31 |
14,062 |
ಹ್ಯುಂಡೈ ವೆನ್ಯು |
12,204 |
10,948 |
11.47 |
21.82 |
18.88 |
2.94 |
10,371 |
ಕಿಯಾ ಸೋನೆಟ್ |
4,984 |
4,120 |
20.97 |
8.91 |
13.17 |
-4.26 |
8,079 |
ಮಹೀಂದ್ರಾ XUV300 |
4,961 |
4,992 |
-0.62 |
8.87 |
7.26 |
1.61 |
4,792 |
ನಿಸಾನ್ ಮ್ಯಾಗ್ನೈಟ್ |
2,454 |
2,528 |
-2.92 |
4.38 |
5.36 |
-0.98 |
2,564 |
ರೆನೋ ಕೈಗರ್ |
980 |
929 |
5.48 |
1.75 |
4.43 |
-2.68 |
1,522 |
ಒಟ್ಟು |
55,909 |
46,138 |
21.17 |
99.97 |
ಪ್ರಮುಖ ವೈಶಿಷ್ಟ್ಯಗಳು
-
ಟಾಟಾ ನೆಕ್ಸನ್ ಮಾದರಿಯ 15,300 ಕ್ಕಿಂತಲೂ ಹೆಚ್ಚಿನ ಘಟಕಗಳನ್ನು ಮಾರಲಾಗಿದ್ದು, ಈ ವಿಭಾಗದಲ್ಲಿ ಇದು ಅತ್ಯಂತ ಹೆಚ್ಚಿನ ಮಾರಾಟಕ್ಕಾಗಿ ಮಾತ್ರವಲ್ಲದೆ 2023ರ ಸೆಪ್ಟೆಂಬರ್ ತಿಂಗಳಲ್ಲಿ ಅತ್ಯಧಿಕವಾಗಿ ಮಾರಾಟಗೊಂಡ SUV ಯಾಗಿಯೂ ಗುರುತಿಸಿಕೊಂಡಿದೆ. ಇದರ MoM, 90 ಶೇಕಡಾಕ್ಕಿಂತಲೂ ಹೆಚ್ಚಿನ ಪ್ರಗತಿಯನ್ನು ದಾಖಲಿಸಿದ್ದು, 27.5 ಶೇಕಡಾದಷ್ಟು ಮಾರುಕಟ್ಟೆ ಪಾಲನ್ನು ಪಡೆಯಲು ಈ ಕಾರಿಗೆ ಸಾಧ್ಯವಾಗಿದೆ. ಈ ಸಂಖ್ಯೆಯಲ್ಲಿ ಟಾಟಾ ನೆಕ್ಸನ್ EVಯ ಮಾರಾಟವೂ ಸೇರಿದೆ. ಎರಡೂ ಮಾದರಿಗಳು ಇತ್ತೀಚೆಗೆ ಪರಿಷ್ಕರಣೆಗೊಳಗಾಗಿವೆ.
-
ಸರಿಸುಮಾರು 15,000 ಘಟಕಗಳೊಂದಿಗೆ ಮಾರುತಿ ಬ್ರೆಜ್ಜಾ ಕಾರು ಎರಡನೇ ಸ್ಥಾನದಲ್ಲಿದೆ. ಇದರ ವರ್ಷವಾರು (YoY) ಮಾರುಕಟ್ಟೆ ಪಾಲು 1.3 ಶೇಕಡಾಕ್ಕಿಂತಲೂ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇದನ್ನು ಸಹ ನೋಡಿರಿ: ಮಾರುತಿ ಬ್ರೆಜ್ಜಾ vs ಟಾಟಾ ನೆಕ್ಸನ್
-
ಹ್ಯುಂಡೈ ವೆನ್ಯು ಮಾದರಿಯು 10,000 ಘಟಕಗಳ ಮಾರಾಟದ ಗುರಿಯನ್ನು ದಾಟಿದ ಕೊನೆಯ SUV ಎನಿಸಿದೆ. ಇದರ MoM 11 ಶೇಕಡಾದಷ್ಟು ಏರಿಕೆಯನ್ನು ಕಂಡಿದೆ. ಇದರ ಮಾರಾಟದ ಅಂಕಿಅಂಶವು ಇದೇ ಮಾದರಿಯ ಸ್ಪೋರ್ಟಿಯರ್ ಆವೃತ್ತಿ ಎನಿಸಲಾಗಿರುವ ಹ್ಯುಂಡೈ ವೆನ್ಯು N ಲೈನ್ ಕಾರಿನ ಮಾರಾಟ ಸಂಖ್ಯೆಯನ್ನು ಸಹ ಹೊಂದಿದೆ.
-
ಸುಮಾರು 5,000 ಘಟಕಗಳ ವಿತರಣೆಯೊಂದಿಗೆ ಕಿಯಾ ಸೋನೆಟ್ ಕಾರು ಸಹ ಶೇಕಡಾ 20ರಷ್ಟು MoM ಪ್ರಗತಿ ಸಾಧಿಸಿದೆ. ಇದು ಹ್ಯುಂಡೈಯ ಮಾರಾಟದ ಅರ್ಧಕ್ಕೆ ಸಮನಾಗಿದ್ದರೂ, ಕೇವಲ 9 ಶೇಕಡಾದಷ್ಟು ಮಾರುಕಟ್ಟೆ ಪಾಲಿನೊಂದಿಗೆ ನಾಲ್ಕನೇ ಅತ್ಯಂತ ಹೆಚ್ಚು ಮಾರಾಟಗಾರನಾಗಿ ಹೊರಹೊಮ್ಮಿದೆ.
ಇದನ್ನು ಸಹ ಓದಿರಿ: ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಒಳಾಂಗಣ
-
ಮಹೀಂದ್ರಾ XUV300 ಕಾರು ಈ ಕಿಯಾ SUV ಯ ಸಮೀಪದ ಪ್ರತಿಸ್ಪರ್ಧಿ ಎನಿಸಿದ್ದು, ಇವುಗಳ ನಡುವೆ ಕೇವಲ 20 ಘಟಕಗಳ ವ್ಯತ್ಯಾಸವಿದೆ. ಇದು ಆರು ತಿಂಗಳುಗಳ ಸರಾಸರಿ ಮಾರಾಟವನ್ನು ಸರಿಸುಮಾರು 170 ಘಟಕಗಳಿಂದ ಮೀರಿಸಲು ಸಫಲವಾಗಿದೆ.
-
ಈ ಪಟ್ಟಿಯ ಕೊನೆಯ ಎರಡು ಸ್ಥಾನಗಳನ್ನು ನಿಸಾನ್ ಮ್ಯಾಗ್ನೈಟ್ ಮತ್ತು ರೆನೋ ಕೈಗರ್ SUV ಗಳು ಪಡೆದಿವೆ. ಮ್ಯಾಗ್ನೈಟ್ ಕಾರಿನ ಮಾರಾಟವು ಸರಿಸುಮಾರು 2,500ದ ಆಸುಪಾಸಿನಲ್ಲಿ ಇದ್ದರೆ ಕೈಗರ್ ಕಾರಿಗೆ 1,000 ದ ಮಿತಿಯನ್ನು ದಾಟಲು ಸಹ ಸಾಧ್ಯವಾಗಿಲ್ಲ. ಹೀಗಾಗಿ ಇವು 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ತಲಾ 5 ಶೇಕಡಾಕ್ಕಿಂತಲೂ ಕಡಿಮೆ ಮಾರುಕಟ್ಟೆ ಪಾಲಿಗೆ ತೃಪ್ತಿಪಡಬೇಕಾಗಿದೆ. ನಿಸಾನ್ ಸಂಸ್ಥೆಯು ಇತ್ತೀಚೆಗೆ ಮ್ಯಾಗ್ನೈಟ್ ನಲ್ಲಿ AMT ಆಯ್ಕೆಯನ್ನು ಒದಗಿಸಿದ್ದು ಇದರ ಮಾರಾಟವು 2023ರ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಫಲಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ನೆಕ್ಸನ್ AMT