Kia Sonet Facelift ಅನ್ನು ಈಗ ಕಾಯ್ದಿರಿಸಿ, 2024ರ ಜನವರಿಯಲ್ಲಿ ಪಡೆಯಿರಿ!
ಕಿಯಾ ಸೊನೆಟ್ ಗಾಗಿ shreyash ಮೂಲಕ ಡಿಸೆಂಬರ್ 21, 2023 02:37 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
K-ಕೋಡ್ ಮೂಲಕ ಡಿಸೆಂಬರ್ 20ರಂದು ಹೊಸ ಸೋನೆಟ್ ಅನ್ನು ಬುಕ್ ಮಾಡುವ ಗ್ರಾಹಕರು ಡೆಲಿವರಿಯಲ್ಲಿ ಆದ್ಯತೆ ಪಡೆಯಲಿದ್ದಾರೆ
- ಹೊಸ ಸೋನೆಟ್ ಅನ್ನು ಬುಕಿಂಗ್ ಮಾಡುವುದಕ್ಕಾಗಿ ಪ್ರಸ್ತುತ ಗ್ರಾಹಕರು K-ಕೋಡ್ ಅನ್ನು ಸೃಷ್ಟಿಸಬಹುದಾಗಿದೆ.
- ಪ್ರತಿ K-ಕೋಡ್ ಅನ್ನು ಒಂದು ಬುಕಿಂಗ್ ಗೆ ಬಳಸಬಹುದಾಗಿದ್ದು ಅದನ್ನು ಗೆಳೆಯರು ಮತ್ತು ಕುಟುಂಬದ ಸದಸ್ಯರಿಗೆ ವರ್ಗಾಯಿಸಬಹುದು.
- ಪರಿಷ್ಕೃತ ಸೋನೆಟ್ ನಲ್ಲಿ ಕಿಯಾ ಸಂಸ್ಥೆಯು ಈಗಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಂಡಿದೆ.
- ಹೊಸ ಸೋನೆಟ್ ಕಾರು ಚಾಲಕನ ಹೊಸ ಡಿಜಿಟಲ್ ಡಿಸ್ಪ್ಲೇ ಮತ್ತು ಲೆವೆಲ್ 1 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ವೈಶಿಷ್ಟ್ಯಗಳನ್ನು ಹೊಂದಿದೆ.
- ಇದರ ಬೆಲೆಯು ಸುಮಾರು ರೂ. 8 ಲಕ್ಷದಿಂದ (ಎಕ್ಸ್ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.
ಪರಿಷ್ಕೃತ ಕಿಯಾ ಸೋನೆಟ್ SUVಯ ಪ್ರಿ ಆರ್ಡರ್ ಗಳು ಈಗಾಗಲೇ ತೆರೆದಿವೆ. ಗ್ರಾಹಕರು ರೂ. 25,000 ದಷ್ಟು ಟೋಕನ್ ಮೊತ್ತದ ಮೂಲಕ ಸೋನೆಟ್ ಫೇಸ್ ಲಿಫ್ಟ್ ಅನ್ನು ಕಾಯ್ದಿರಿಸಬಹುದು. ಈ ಪರಿಷ್ಕೃತ ಸೋನೆಟ್ ವಾಹನದ ಡೆಲಿವರಿಯು 2024ರಲ್ಲಿ ಪ್ರಾರಂಭಗೊಳ್ಳಲಿದ್ದು, ಡೀಸೆಲ್ ಮ್ಯಾನುವಲ್ ವೇರಿಯಂಟ್ ಗಳ ಡೆಲಿವರಿಯು 2024ರ ಫೆಬ್ರುವರಿಯಿಂದ ಪ್ರಾರಂಭಗೊಳ್ಳಲಿದೆ ಎಂದು ಕಿಯಾ ಸಂಸ್ಥೆಯು ಹೇಳಿದೆ.
ಡೆಲಿವರಿಯಲ್ಲಿ ಆದ್ಯತೆ ಪಡೆಯುವುದಕ್ಕಾಗಿ K-ಕೋಡ್
ಕಾಯುವಿಕೆಯ ಪಟ್ಟಿಯಲ್ಲಿ ಆದ್ಯತೆ ಪಡೆಯುವುದಕ್ಕಾಗಿ, ಪರಿಷ್ಕೃತ ಸೋನೆಟ್ ಅನ್ನು ಬುಕ್ ಮಾಡುವಾಗ ಗ್ರಾಹಕರು ಈಗಿನ ಕಿಯಾ ಗ್ರಾಹಕರ K-ಕೋಡ್ ಅನ್ನು ಬಳಸಿಕೊಳ್ಳಬಹುದು. ಈ K-ಕೋಡ್ ಬುಕಿಂಗ್ ಗಳು ಡಿಸೆಂಬರ್ 20, 2023ರಂದು 11:59 pm ತನಕ ಮಾತ್ರವೇ ಅನ್ವಯವಾಗುತ್ತವೆ.
ಇದನ್ನು ಸಹ ನೋಡಿರಿ: ಟಾಟಾ ನೆಕ್ಸನ್ ನಲ್ಲಿ ಇಲ್ಲದ, ಆದರೆ ಪರಿಷ್ಕೃತ ಕಿಯಾ ಸೋನೆಟ್ ನಲ್ಲಿ ಇರುವ 8 ಸೌಲಭ್ಯಗಳು
ಹೊಸ ಸೋನೆಟ್ ವಾಹನದಲ್ಲಿ ಏನೆಲ್ಲ ಇದೆ?
ಪರಿಷ್ಕೃತ ಕಿಯಾ ಸೋನೆಟ್ ಕಾರು 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಡಿಸ್ಪ್ಲೇ, 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 70+ ಸಂಪರ್ಕಿತ ಕಾರ್ ಟೆಕ್ ವೈಶಿಷ್ಟ್ಯಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಸನ್ ರೂಫ್ ಮತ್ತು ವೈರ್ ಲೆಸ್ ಫೋನ್ ಚಾರ್ಜರ್ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ.
ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಮತ್ತು 360 ಡಿಗ್ರಿ ಕ್ಯಾಮರಾವನ್ನು ನೀಡಲಾಗಿದೆ. ಕಿಯಾ ಸಂಸ್ಥೆಯು ಪರಿಷ್ಕೃತ ಸೋನೆಟ್ ನಲ್ಲಿ ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಕೊಲಿಶನ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಲೆವಲ್ 1 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳನ್ನು (ADAS) ಒದಗಿಸಿದೆ.
ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲ
ಪರಿಷ್ಕೃತ ಸೋನೆಟ್ ನಲ್ಲಿ ಕಿಯಾ ಸಂಸ್ಥೆಯು ಈಗಿರುವ ಎಂಜಿನ್ ಆಯ್ಕೆಗಳನ್ನೇ ಉಳಿಸಿಕೊಂಡಿದೆ. ಇವು 6-ಸ್ಫೀಡ್ iMT ಅಥವಾ 7-ಸ್ಪೀಡ್ ಡ್ಯುವಲ್ ಕ್ಲಚ್ ಟ್ರಾನ್ಸ್ ಮಿಶನ್ (DCT) ಜೊತೆಗೆ ಹೊಂದಿಸಲಾದ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (120 PS / 172 Nm), 5-ಸ್ಪೀಡ್ ಮ್ಯಾನುವಲ್ ಜೊತೆಗೆ ಹೊಂದಿಸಲಾದ 1.2-ಲೀಟರ್ ಪೆಟ್ರೋಲ್ ಎಂಜಿನ್ (83 PS / 115 Nm) ಮತ್ತು 6-ಸ್ಪೀಡ್ iMT ಅಥವಾ 6-ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ 1.5-ಲೀಟರ್ ಡೀಸೆಲ್ ಯೂನಿಟ್ (116 PS / 250 Nm) ಅನ್ನು ಒಳಗೊಂಡಿವೆ. ಅಲ್ಲದೆ ಡೀಸೆಲ್ ಎಂಜಿನ್ ನಲ್ಲಿ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅನ್ನು ವಾಪಸ್ ತರಲಾಗಿದೆ.
ನಿರೀಕ್ಷಿತ ಬೆಲೆ ಮತ್ತು ಸ್ಪರ್ಧಿಗಳು
ಭಾರತೀಯ ಮಾರುಕಟ್ಟೆಯಲ್ಲಿ ಪರಿಷ್ಕೃತ ಕಿಯಾ ಸೋನೆಟ್ ಕಾರು ರೂ. 8 ಲಕ್ಷಕ್ಕಿಂತ (ಎಕ್ಸ್ - ಶೋರೂಂ) ಹೆಚ್ಚಿನ ಬೆಲೆಯಲ್ಲಿ ದೊರೆಯುವ ಸಾಧ್ಯತೆ ಇದೆ. ಬಿಡುಗಡೆಯಾದ ನಂತರ ಇದು ಟಾಟಾ ನೆಕ್ಸನ್, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ಮಹೀಂದ್ರಾ XUV300, ರೆನೋ ಕೈಗರ್, ನಿಸ್ಸಾನ್ ಮ್ಯಾಗ್ನೈಟ್, ಮತ್ತು ಮಾರುತಿ ಫ್ರಾಂಕ್ಸ್ ಕ್ರಾಸ್ ಓವರ್ ಜೊತೆಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕಿಯಾ ಸೋನೆಟ್ ಅಟೋಮ್ಯಾಟಿಕ್