ಈ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಾರುಗಳಲ್ಲಿ ರೂ. 3 ಲಕ್ಷದಷ್ಟು ಉಳಿತಾಯ ಮಾಡಿ
ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ ansh ಮೂಲಕ ಡಿಸೆಂಬರ್ 12, 2023 04:30 pm ರಂದು ಪ್ರಕಟಿಸಲಾಗಿದೆ
- 22 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ ರೂ. 3 ಲಕ್ಷದಷ್ಟು ಗರಿಷ್ಠ ರಿಯಾಯಿತಿ ದೊರೆತರೆ ತದನಂತರ ಹ್ಯುಂಡೈ ಟಕ್ಸನ್ ನಲ್ಲಿ ರೂ. 1.5 ಲಕ್ಷದಷ್ಟು ಹಣವನ್ನು ಉಳಿಸಬಹುದು
- ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಕಾರಿನಲ್ಲಿ ರೂ. 48,000 ದಷ್ಟು ಪ್ರಯೋಜನವನ್ನು ಪಡೆಯಬಹುದು.
- ಹ್ಯುಂಡೈ ಔರಾ ಕಾರಿನಲ್ಲಿ ರೂ. 33,000ದಷ್ಟು ರಿಯಾಯಿತಿ ಇದೆ.
- ಹಳೆಯ ಮತ್ತು ಹೊಸ ಹ್ಯುಂಡೈ i20 ಕಾರುಗಳಲ್ಲಿ ರೂ. 50,000 ದಷ್ಟು ವರ್ಷಾಂತ್ಯದ ಪ್ರಯೋಜನ ಲಭ್ಯ.
- ಈ ಕೊಡುಗೆಗಳು 2023ರ ಕೊನೆಯ ತನಕ ದೊರೆಯಲಿವೆ.
ಅನೇಕ ಕಾರು ತಯಾರಕ ಸಂಸ್ಥೆಗಳು ಮಾಸಿಕ ಕೊಡುಗೆಗಳನ್ನು ನೀಡುವಂತೆಯೇ, ಹ್ಯುಂಡೈ ಸಂಸ್ಥೆಯು ವರ್ಷಾಂತ್ಯದ ಕೊಡುಗೆಗಳನ್ನು ಬಿಡುಗಡೆ ಮಾಡಿದೆ. ಕೊರಿಯಾದ ಈ ಕಾರು ತಯಾರಕ ಸಂಸ್ಥೆಯು ಎಕ್ಸ್ಟರ್, ವೆನ್ಯು, ವೆನ್ಯು N ಲೈನ್, ಕ್ರೆಟಾ ಮತ್ತು IONIQ 5 ಹೊರತುಪಡಿಸಿ ಬೇರೆ ಎಲ್ಲಾ ಕಾರುಗಳಲ್ಲಿ ಬೃಹತ್ ಪ್ರಮಾಣದ ರಿಯಾಯಿತಿ ಅಥವಾ ಕೊಡುಗೆಗಳನ್ನು ಘೋಷಿಸಿದೆ. ಒಂದು ವೇಳೆ ಈ ಬಾರಿ ನೀವು ಹ್ಯುಂಡೈ ಸಂಸ್ಥೆಯ ಕಾರುಗಳನ್ನು ಖರೀದಿಸಲು ಇಚ್ಛಿಸುವುದಾದರೆ, ಹ್ಯುಂಡೈ ಸಂಸ್ಥೆಯು 2023ರ ಕೊನೆಯ ತನಕ ನೀಡಲಿರುವ ರಿಯಾಯಿತಿಗಳನ್ನು ಒಮ್ಮೆ ಪರಿಶೀಲಿಸಿ.
ಹ್ಯುಂಡೈ ಗ್ರಾಂಡ್ i10 ನಿಯೋಸ್
ರಿಯಾಯಿತಿ |
ಮೊತ್ತ |
ನಗದು ರಿಯಾಯಿತಿ |
ರೂ. 35,000 ತನಕ |
ವಿನಿಮಯ ಬೋನಸ್ |
ರೂ. 10,000 |
ಕಾರ್ಪೊರೇಟ್ ವಿನಾಯಿತಿ |
ರೂ. 3,000 |
ಒಟ್ಟು ಲಾಭಗಳು |
ರೂ. 48,000 ತನಕ |
- ಈ ಕೋಷ್ಟಕದಲ್ಲಿ ಉಲ್ಲೇಖಿಸಲಾದ ನಗದು ರಿಯಾಯಿತಿಯು ಈ ಹ್ಯಾಚ್ ಬ್ಯಾಕ್ ನ CNG ವೇರಿಯಂಟ್ ಗೆ ಅನ್ವಯವಾಗುತ್ತದೆ. ಪೆಟ್ರೋಲ್ ಮ್ಯಾನುವಲ್ ವೇರಿಯಂಟ್ ಗಳು ರೂ. 20,000 ದಷ್ಟು ನಗದು ರಿಯಾಯಿತಿಯನ್ನು ಪಡೆದರೆ, AMT ವೇರಿಯಂಟ್ ಗಳಿಗೆ ಇದು ರೂ. 10,000ಕ್ಕೆ ಸೀಮಿತವಾಗಿದೆ.
- ವಿನಿಮಯ ಮತ್ತು ಕಾರ್ಪೊರೇಟ್ ಪ್ರಯೋಜನಗಳು ಎಲ್ಲಾ ವೇರಿಯಂಟ್ ಗಳಿಗೆ ಒಂದೇ ಸಮನಾಗಿ ಅನ್ವಯವಾಗುತ್ತವೆ.
- ಹ್ಯುಂಡೈ ಗ್ರ್ಯಾಂಡ್ i10 ಕಾರು ರೂ. 5.84 ರಿಂದ ರೂ. 8.51 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯುತ್ತದೆ.
ಹ್ಯುಂಡೈ ಔರಾ
ರಿಯಾಯಿತಿ |
ಮೊತ್ತ |
ನಗದು ರಿಯಾಯಿತಿ |
ರೂ. 20,000 ತನಕ |
ವಿನಿಮಯ ಬೋನಸ್ |
ರೂ. 10,000 |
ಕಾರ್ಪೊರೇಟ್ ವಿನಾಯಿತಿ |
ರೂ. 3,000 |
ಒಟ್ಟು ಲಾಭಗಳು |
ರೂ. 33,000 ತನಕ |
- ಗ್ರ್ಯಾಂಡ್ i10 ನಿಯೋಸ್ ಕಾರಿನಂತೆಯೇ ಹ್ಯುಂಡೈ ಔರಾ ಕಾರು ಸಹ ತನ್ನ CNG ವೇರಿಯಂಟ್ ಗಳ ಮೇಲೆ ಈ ಗರಿಷ್ಠ ರಿಯಾಯಿತಿಗಳನ್ನು ಪಡೆಯುತ್ತದೆ.
- ಇದರ ಮಾಮೂಲಿ ವೇರಿಯಂಟ್ ಗಳು ರೂ. 10,000 ದಷ್ಟು ನಗದು ರಿಯಾಯಿತಿಯನ್ನು ಮಾತ್ರವೇ ಪಡೆಯುತ್ತವೆ.
- ಔರಾ ಮಾದರಿಯ ಎಲ್ಲಾ ವೇರಿಯಂಟ್ ಗಳು ಒಂದೇ ಸಮನಾದ ವಿನಿಮಯ ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಪಡೆಯುತ್ತವೆ.
- ಹ್ಯುಂಡೈ ಔರಾ ರೂ. 6.44 ರಿಂದ ರೂ. 9 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಇದನ್ನು ಸಹ ಓದಿರಿ: ಮಾರುತಿ, ಹ್ಯುಂಡೈ, ಟಾಟಾ ಮತ್ತು ಇತರ ಕಾರುಗಳಿಗೆ 2024ರಲ್ಲಿ ತಟ್ಟಲಿದೆ ಬೆಲೆಯೇರಿಕೆಯ ಬಿಸಿ
ಹ್ಯುಂಡೈ i20 ಮತ್ತು i20 N ಲೈನ್
ರಿಯಾಯಿತಿ |
ಮೊತ್ತ |
||
ಹಳೆಯ ಹ್ಯುಂಡೈ i20 |
ಹೊಸ ಹ್ಯುಂಡೈ i20 |
ಹಳೆಯ ಹ್ಯುಂಡೈ i20 N ಲೈನ್ |
|
ನಗದು ರಿಯಾಯಿತಿ |
ರೂ. 30,000 ತನಕ |
ರೂ. 10,000 |
ರೂ. 50,000 |
ವಿನಿಮಯ ಬೋನಸ್ |
ರೂ. 10,000 |
ರೂ. 10,000 |
- |
ಒಟ್ಟು ಲಾಭಗಳು |
ರೂ. 40,000 ತನಕ |
ರೂ. 20,000 |
ರೂ. 50,000 |
- ಹ್ಯುಂಡೈ ಸಂಸ್ಥೆಯು i20 ಮತ್ತು i20 N ಲೈನ್ (ಪರಿಷ್ಕರಣೆಗೆ ಮೊದಲ ಆವೃತ್ತಿಗಳು), ಮತ್ತು ಹೊಸ ಪರಿಷ್ಕೃತ ಮಾದರಿಯ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ.
- ಹಳೆಯ i20 ಮಾದರಿಯು DCT ವೇರಿಯಂಟ್ ಗಳ ಮೇಲೆ ರೂ. 30,000 ದಷ್ಟು ನಗದು ರಿಯಾಯಿತಿಯನ್ನು ಪಡೆದರೆ, ಸ್ಪೋರ್ಟ್ಸ್ ಮ್ಯಾನುವಲ್ ಟ್ರಿಮ್ ರೂ. 25,000ದಷ್ಟು ನಗದು ರಿಯಾಯಿತಿಯನ್ನು ಹೊಂದಿದೆ. ಉಳಿದ ವೇರಿಯಂಟ್ ಗಳು ರೂ. 10,000 ದಷ್ಟು ರಿಯಾಯಿತಿಯನ್ನು ಹೊಂದಿವೆ.
- ಹ್ಯುಂಡೈ i20 ಮಾದರಿಯ ಎಲ್ಲಾ ವೇರಿಯಂಟ್ ಗಳಲ್ಲಿ ರೂ. 10,000 ದಷ್ಟು ನಗದು ರಿಯಾಯಿತಿ ದೊರೆತರೆ, ಹಳೆಯ i20 N ಲೈನ್ ಕಾರಿನ ಎಲ್ಲಾ ವೇರಿಯಂಟ್ ಗಳಲ್ಲಿ ರೂ. 50,000 ದಷ್ಟು ನಗದು ರಿಯಾಯಿತಿ ಲಭ್ಯವಿದೆ.
- ಹಳೆಯ ಹ್ಯುಂಡೈ i20 N ಲೈನ್ ಹೊರತುಪಡಿಸಿ, ಹಳೆಯ ಮತ್ತು ಹೊಸ i20 ಮಾದರಿಯ ಎಲ್ಲಾ ಇತರ ವೇರಿಯಂಟ್ ಗಳು ರೂ. 10,000 ದಷ್ಟು ನಗದು ಬೋನಸ್ ಅನ್ನು ಹೊಂದಿವೆ.
- ಹ್ಯುಂಡೈ i20 ಕಾರು ರೂ. 6.99 ರಿಂದ ರೂ. 11.16 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಹ್ಯುಂಡೈ ವೆರ್ನಾ
ರಿಯಾಯಿತಿ |
ಮೊತ್ತ |
ನಗದು ರಿಯಾಯಿತಿ |
ರೂ. 20,000 |
ವಿನಿಮಯ ಬೋನಸ್ |
ರೂ. 25,000 |
ಒಟ್ಟು ಲಾಭಗಳು |
ರೂ. 45,000 |
-
ಇದು ತನ್ನ ಎಲ್ಲಾ ವೇರಿಯಂಟ್ ಗಳ ಮೇಲೆ ರೂ. 20,000 ದಷ್ಟು ನಗದು ಬೋನಸ್ ಮತ್ತು ರೂ. 25,000 ದಷ್ಟು ವಿನಿಮಯ ಬೋನಸ್ ಅನ್ನು ಪಡೆಯಲಿದೆ.
-
ಹ್ಯುಂಡೈ ವೆರ್ನಾ ಕಾರು ರೂ. 10.96 ರಿಂದ ರೂ. 17.38 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಇದನ್ನು ಸಹ ಓದಿರಿ: ತಮಿಳುನಾಡಿನ ಚೆನ್ನೈ ನಗರದಲ್ಲಿ ಚಂಡಮಾರುತ ಬಾಧಿತ ವಾಹನಗಳ ನೆರವಿಗೆ ಬರಲಿರುವ ಹ್ಯುಂಡೈ, ಮಹೀಂದ್ರಾ ಮತ್ತು ಫೋಕ್ಸ್ ವ್ಯಾಗನ್ ಇಂಡಿಯಾ
ಹ್ಯುಂಡೈ ಅಲ್ಕಜಾರ್
ರಿಯಾಯಿತಿ |
ಮೊತ್ತ |
ನಗದು ರಿಯಾಯಿತಿ |
ರೂ. 15,000 ತನಕ |
ವಿನಿಮಯ ಬೋನಸ್ |
ರೂ. 20,000 |
ಒಟ್ಟು ಲಾಭಗಳು |
ರೂ. 35,000 |
- ಅಲ್ಕಜಾರ್ ಕಾರಿನ ಪೆಟ್ರೋಲ್ ವೇರಿಯಂಟ್ ಗಳಲ್ಲಿ ಈ ಕೊಡುಗೆಗಳು ಲಭ್ಯ.
- ಇದರ ಡೀಸೆಲ್ ವೇರಿಯಂಟ್ ಗಳಿಗೆ ಯಾವುದೇ ನಗದು ರಿಯಾಯಿತಿಯು ದೊರೆಯದೆ ಇದ್ದರೂ, ರೂ. 20,000 ದಷ್ಟು ವಿನಿಮಯ ಬೋನಸ್ ಅನ್ನು ಪಡೆಯಲಿವೆ.
- ಹ್ಯುಂಡೈ ಅಲ್ಕಜಾರ್ ಕಾರು ರೂ. 16.77 ರಿಂದ ರೂ. 21.23 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಹ್ಯುಂಡೈ ಟಕ್ಸನ್
ರಿಯಾಯಿತಿ |
ಮೊತ್ತ |
ನಗದು ರಿಯಾಯಿತಿ |
ರೂ 1.5 ಲಕ್ಷ |
ಒಟ್ಟು ಲಾಭಗಳು |
ರೂ 1.5 ಲಕ್ಷ |
- ಟಕ್ಸನ್ ಕಾರಿನ ಪೆಟ್ರೋಲ್ ವೇರಿಯಂಟ್ ಗಳಲ್ಲಿ ಯಾವುದೇ ರೀತಿಯ ಪ್ರಯೋಜನವು ಲಭ್ಯವಿಲ್ಲ.
- ಇದೇ ವೇಳೆ ಡೀಸೆಲ್ ವೇರಿಯಂಟ್ ಗಳಲ್ಲಿ ರೂ. 1.5 ಲಕ್ಷದಷ್ಟು ನಗದು ರಿಯಾಯಿತಿ ಲಭ್ಯ.
- ಹ್ಯುಂಡೈ ಟಕ್ಸನ್ ಕಾರು ರೂ. 29.02 ರಿಂದ ರೂ. 35.94 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಇದನ್ನು ಸಹ ಓದಿರಿ: ಭಾರತದಲ್ಲಿ 2024ರಲ್ಲಿ ಹೊರಬರಲಿರುವ ಕಾರುಗಳು: ಮುಂದಿನ ವರ್ಷ ನೀವು ರಸ್ತೆಯಲ್ಲಿ ಕಾಣಲಿರುವ ಕಾರುಗಳ ಎಲ್ಲಾ ಮಾಹಿತಿ ಇಲ್ಲಿದೆ
ಹ್ಯುಂಡೈ ಕೋನಾ ಎಲೆಕ್ಟ್ರಿಕ್
ರಿಯಾಯಿತಿ |
ಮೊತ್ತ |
ನಗದು ರಿಯಾಯಿತಿ |
ರೂ 3 ಲಕ್ಷ |
ಒಟ್ಟು ಲಾಭಗಳು |
ರೂ 3 ಲಕ್ಷ |
-
ಈ ಪಟ್ಟಿಯಲ್ಲಿರುವ ಈ ಏಕೈಕ ಎಲೆಕ್ಟ್ರಿಕ್ ಕಾರಿನಲ್ಲಿ ರೂ. 3 ಲಕ್ಷದಷ್ಟು ನಗದು ರಿಯಾಯಿತಿ ದೊರೆಯಲಿದೆ.
-
ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ರೂ. 23.84 ರಿಂದ ರೂ. 24.03 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಬೆಲೆಗಳಾಗಿವೆ
ಗಮನಿಸಿ: ನಿಮ್ಮ ಸ್ಥಳ ಮತ್ತು ಆರಿಸಿಕೊಂಡ ಬಣ್ಣದ ಆಯ್ಕೆಯನ್ನು ಆಧರಿಸಿ ಈ ರಿಯಾಯಿತಿಗಳು ಬದಲಾಗಬಹುದು. ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ನಿಮ್ಮ ಪಕ್ಕದ ಹ್ಯುಂಡೈ ಡೀಲರ್ ಅನ್ನು ಸಂಪರ್ಕಿಸಲು ನಾವು ಶಿಫಾರಸ್ಸು ಮಾಡುತ್ತೇವೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಗ್ರಾಂಡ್ i10 ನಿಯೋಸ್ AMT