• English
  • Login / Register

ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ

ಸ್ಕೋಡಾ ಸ್ಕೋಡಾ ಕುಶಾಕ್ ಗಾಗಿ shreyash ಮೂಲಕ ನವೆಂಬರ್ 30, 2023 02:59 pm ರಂದು ಪ್ರಕಟಿಸಲಾಗಿದೆ

  • 94 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಾಂಪ್ಯಾಕ್ಟ್‌ SUV ಯ ಸೀಮಿತ ಸಂಖ್ಯೆಯ ಎಲೆಗೆನ್ಸ್‌ ಆವೃತ್ತಿಯು ಇದಕ್ಕೆ ಅನುರೂಪವಾದ ನಿಯಮಿತ ಆವೃತ್ತಿಗಿಂತ ರೂ. 20,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ

Skoda Kushaq Elegance Edition

  • ಸ್ಕೋಡಾ ಕುಶಕ್‌ ಮಾದರಿಯ ಎಲೆಗೆನ್ಸ್‌ ಆವೃತ್ತಿಯು ಟಾಪ್‌ ಸ್ಪೆಕ್‌ ಸ್ಟೈಲ್‌ ವೇರಿಯಂಟ್‌ ಗೆ ಸೀಮಿತವಾಗಿದೆ.
  • ಇದು ಕೇವಲ 150 PS ಮತ್ತು 250 Nm ಉಂಟು ಮಾಡುವ 1.5 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್ ಜೊತೆ ಬರುತ್ತದೆ.
  • ಕಾಂಪ್ಯಾಕ್ಟ್‌ SUVಯ ಈ ವಿಶೇಷ ಆವೃತ್ತಿಯು ಡೀಪ್‌ ಬ್ಲ್ಯಾಕ್‌ ಹೊರಾಂಗಣ ಛಾಯೆಯನ್ನು ಪಡೆದಿದೆ.
  • ಎಲೆಗೆನ್ಸ್‌ ಆವೃತ್ತಿಗೆ ಗ್ರಾಹಕರು ನಿಯಮಿತ SUVಯ ಅದರ ಅನುರೂಪ ವೇರಿಯಂಟ್‌ ಗಿಂತ ರೂ. 20,000 ದಷ್ಟು ಹೆಚ್ಚಿನ ಮೊತ್ತವನ್ನು ಪಾವತಿಸಬೇಕು. 

 ಸ್ಕೋಡಾ ಕುಶಕ್ ಮಾದರಿಯು ಇತ್ತೀಚೆಗೆ ಸ್ಲಾವಿಯಾದ ಜೊತೆಗೆ ಎಲೆಗೆನ್ಸ್‌ ಆವೃತ್ತಿಯನ್ನು ಪಡೆದಿದ್ದು, ಹೊರಾಂಗಣದಲ್ಲಿ ಡೀಪ್‌ ಬ್ಲ್ಯಾಕ್‌ ಬಣ್ಣದ ಆಯ್ಕೆ ಮತ್ತು ಒಳಗೆ ಹಾಗೂ ಹೊರಗೆ  ಕೆಲವೊಂದು ಹೆಚ್ಚುವರಿ ಸೌಲಭ್ಯಗಳನ್ನು ಸೇರ್ಪಡೆಗೊಳಿಸುವ ಮೂಲಕ ಈ ಕಾರನ್ನು ಹೊರತರಲಾಗಿದೆ. ಈಗ ಈ ಕುಶಕ್‌ ಕಾರಿನ ವಿಶೇಷ ಆವೃತ್ತಿಯ ಘಟಕಗಳು ಡೀಲರುಗಳ ಬಳಿ ತಲುಪಿವೆ. ಕಾಂಪ್ಯಾಕ್ಟ್‌ SUV ಯ ಈ ವಿಶೇಷ ಆವೃತ್ತಿಯು ನೈಜ ಚಿತ್ರಗಳಲ್ಲಿ ಹೇಗೆ ಕಾಣಿಸುತ್ತದೆ ಮತ್ತು ಇದು ಏನೆಲ್ಲ ಹೊತ್ತು ತಂದಿದೆ ಎಂಬುದನ್ನು ನೋಡೋಣ.

ಹೊರಾಂಗಣ ಮತ್ತು ಒಳಾಂಗಣದಲ್ಲಿ ಹೊಸ ಸೇರ್ಪಡೆಗಳು

 ವಿಶಿಷ್ಟ ಡೀಪ್‌ ಬ್ಲ್ಯಾಕ್‌ ಹೊರಾಂಗಣದ ಛಾಯೆಯೊಂದಿಗೆ ಕುಶಕ್‌ ಮಾದರಿಯ ಎಲಿಗೆನ್ಸ್‌ ಆವೃತ್ತಿಯು ಮುಂಭಾಗದ ಗ್ರಿಲ್‌ ಮತ್ತು ಬಾಡಿ ಪಕ್ಕದ ಮೋಲ್ಡಿಂಗ್‌ ಗೆ ಕ್ರೋಮ್‌ ಟ್ರೀಟ್ಮೆಂಟ್‌, B ಪಿಲ್ಲರ್‌ ನಲ್ಲಿ ʻಎಲಿಗೆನ್ಸ್‌ʼ ಬ್ಯಾಜ್‌, ಮತ್ತು 17 ಇಂಚುಗಳ ಡ್ಯುವಲ್‌ ಟೋನ್‌ ಅಲೋಯ್‌ ವೀಲ್‌ ಗಳೊಂದಿಗೆ ಬರಲಿದೆ. ಒಳಗಡೆಗೆ ಸೀಟ್‌ ಬೆಲ್ಟ್‌ ಹೊದಿಕೆಗಳು, ನೆಕ್‌ ರೆಸ್ಟ್‌ ಗಳು, ಕುಶನ್‌ ಗಳು ಮತ್ತು ಸ್ಟೀಯರಿಂಗ್‌ ವೀಲ್‌ ಮಲೆ ಎಲಿಗೆನ್ಸ್‌ ಬ್ರಾಂಡಿಂಗ್‌ ಅನ್ನು ಹೊಂದಿದೆ. ಕಾಂಪ್ಯಾಕ್ಟ್‌ SUVಯ ಈ ಆವೃತ್ತಿಯು ಮಿನುಗುವ ʻಸ್ಕೋಡಾʼದೊಂದಿಗೆ ಪಡಲ್‌ ಲ್ಯಾಂಪ್‌ ಗಳು ಹಾಗೂ ಅಲ್ಯೂಮಿನಿಯಂ ಫಿನಿಶ್ಡ್‌ ಪೆಡಲ್‌ ಗಳನ್ನು ಒಳಗೊಂಡಿದೆ.

ಈ ಹೆಚ್ಚುವರಿ ವೈಶಿಷ್ಟ್ಯಗಳು ವಾಹನದ ಹಸ್ತಾಂತರದ ವೇಳೆಗೆ ಡೀಲರ್‌ ಗಳು ನಿಮ್ಮ ವಾಹನದಲ್ಲಿ ಅಳವಡಿಸುವ ಆಕ್ಸೆಸರಿ ಕಿಟ್‌ ನ ಭಾಗವೆನಿಸಿವೆ.

ಇದನ್ನು ಸಹ ನೋಡಿರಿ: ಕ್ಯಾಲೆಂಡರ್‌ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು

 

ಆನ್‌ ಬೋರ್ಡ್‌ ವೈಶಿಷ್ಟ್ಯಗಳು

ಸ್ಕೋಡಾ ಕುಶಕ್‌ ವಾಹನದ ಎಲಿಗೆನ್ಸ್‌ ಆವೃತ್ತಿಯು ಟಾಪ್‌ ಸ್ಪೆಕ್‌ ಸ್ಟೈಲ್‌ ವೇರಿಯಂಟ್‌ ಅನ್ನು ಆಧರಿಸಿರುವುದರಿಂದ, ಇದು ವೈರ್‌ ಲೆಸ್‌ ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇ ಜೊತೆಗೆ 10 ಇಂಚಿನ ಟಚ್‌ ಸ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ, ಚಾಲಕನಿಗಾಗಿ 8 ಇಂಚಿನ ಡಿಜಟಲ್‌ ಡಿಸ್ಪ್ಲೇ, ವೆಂಟಿಲೇಟೆಡ್‌ ಮತ್ತು ಪವರ್ಡ್‌ ಫ್ರಂಟ್‌ ಸೀಟ್‌ ಗಳು ಮತ್ತು ಮಿನುಗುವ ಫೂಟ್‌ ವೆಲ್‌ ಅನ್ನು ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), ಹಿಲ್‌ ಹೋಲ್ಡ್‌ ಅಸಿಸ್ಟ್‌, ಮತ್ತು ಟೈರ್‌ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಂ (TPMS) ಅನ್ನು ನೀಡಲಾಗಿದೆ.

ಇದನ್ನು ಸಹ ನೋಡಿರಿ: ಮತ್ತೆ ಕಾಣಿಸಿಕೊಂಡ 5 ಬಾಗಿಲುಗಳ ಮಾರುತಿ ಥಾರ್‌, ಉತ್ಪಾದನೆಗೆ ಸಿದ್ದವಾಗಿದೆ ಈ ಕಾರು

ಪವರ್‌ ಟ್ರೇನ್ ಗಳು

ಎಲಿಗೆನ್ಸ್‌ ಆವೃತ್ತಿಯು 1.5 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಗೆ (150 PS / 250Nm) ಮಾತ್ರವೇ ಸೀಮಿತವಾಗಿದ್ದು, 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಅಥವಾ 7 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಟ್ರಾನ್ಸ್‌ ಮಿಶನ್‌ (DCT) ಜೊತೆಗೆ ಇದನ್ನು ಹೊಂದಿಸಲಾಗುತ್ತದೆ. ಈ SUV ಯ ಸಾಮಾನ್ಯ ವೇರಿಯಂಟ್‌ ಗಳು, 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಅಥವಾ 6 ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಜೊತೆಗೆ ಹೊಂದಿಸಲಾದ 1 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ (115 PS / 178 Nm) ಜೊತೆಗೂ ಬರುತ್ತವೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಸ್ಕೋಡಾ ಕುಶಕ್‌ ನ ಎಲಿಗೆನ್ಸ್‌ ಆವೃತ್ತಿಯು ರೂ. 20,000 ರಷ್ಟು ಹೆಚ್ಚು ದುಬಾರಿಯಾಗಿದ್ದು ರೂ. 18.31 ಲಕ್ಷದಿಂದ ರೂ. 19.51 ಲಕ್ಷದವರೆಗಿನ (ಎಕ್ಸ್-ಶೋರೂಂ ಪಾನ್‌ ಇಂಡಿಯಾ) ಬೆಲೆಯನ್ನು ಹೊಂದಿದೆ. ಇದು ಫೋಕ್ಸ್‌ ವ್ಯಾಗನ್‌ ಟೈಗುನ್ಹ್ಯುಂಡೈ ಕ್ರೆಟಾಕಿಯಾ ಸೆಲ್ಟೊಸ್ಮಾರುತಿ ಗ್ರಾಂಡ್‌ ವಿಟಾರಟೊಯೊಟಾ ಹೈರೈಡರ್MG ಆಸ್ಟರ್ಹೋಂಡಾ ಎಲೆವೇಟ್, ಮತ್ತು ಸಿಟ್ರನ್ C3 ಏರ್‌ ಕ್ರಾಸ್‌  ಜೊತೆಗೆ ಸ್ಪರ್ಧಿಸಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ಕೋಡಾ ಕುಶಕ್‌ ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Skoda ಸ್ಕೋಡಾ ಕುಶಾಕ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience