ಹುರ್ರೇ! ತನ್ನ ಈ ಎರಡು ಕಾರುಗಳ ಆರಂಭಿಕ ಬೆಲೆಯನ್ನು ಕಡಿಮೆ ಮಾಡಿದ ಸ್ಕೋಡಾ
ಸ್ಕೋಡಾ ಸ್ಲಾವಿಯಾ ಗಾಗಿ ansh ಮೂಲಕ ಮಾರ್ಚ್ 30, 2023 06:46 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಈ ಮೊದಲು ಅವುಗಳ ಟಾಪ್ ಟ್ರಿಮ್‌ಗಳಿಗೆ ಸೀಮಿತವಾಗಿದ್ದ ಟರ್ಬೊ-ಪೆಟ್ರೋಲ್ ಪವರ್ ಯೂನಿಟ್ ಅನ್ನು ಈಗ ಎರಡೂ ಮಾಡೆಲ್‌ಗಳ ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್‌ನಲ್ಲಿ ಸೇರಿಸಲಾಗಿದೆ.
- ಈ 1.5-ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್‌ನ ಸಾಮರ್ಥ್ಯ 150PS ಮತ್ತು 250Nm ಆಗಿದೆ.
- 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆಗಳು ಎಂಜಿನ್‌ನೊಂದಿಗೆ ಲಭ್ಯವಿದೆ.
- ಎರಡೂ ಮಾಡೆಲ್‌ಗಳು ಈಗ ಆಂಬಿಷನ್ ಟ್ರಿಮ್‌ನೊಂದಿಗೆ ಡ್ಯುಯಲ್-ಟೋನ್ ಬಣ್ಣಗಳನ್ನು ಸಹ ಪಡೆದುಕೊಂಡಿವೆ.
- ಕುಶಾಕ್‌ನ ಆಂಬಿಷನ್ ಟ್ರಿಮ್‌ನ ಬೆಲೆ 14.99 ಲಕ್ಷ ರೂ.ದಿಂದ (ಎಕ್ಸ್ ಶೋರೂಂ) ಮತ್ತು ಸ್ಲಾವಿಯಾದ ಬೆಲೆ 14.94 ಲಕ್ಷ ರೂ.ದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ.
ಸ್ಕೋಡಾ ಆಟೋ ತನ್ನ 1.5-ಲೀಟರ್ ಟರ್ಬೊ-ಪೆಟ್ರೋಲ್ ಪವರ್ ಯೂನಿಟ್ ಅನ್ನು ಕುಶಾಕ್ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಸ್ಲಾವಿಯಾ ಸೆಡಾನ್‌ನ ಆಂಬಿಷನ್ ವೇರಿಯಂಟ್‌ನಲ್ಲಿ ನೀಡುತ್ತಿದೆ. ಈ ಎಂಜಿನ್ ಈ ಹಿಂದೆ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಎರಡರ ಟಾಪ್-ಸ್ಪೆಕ್ ಸ್ಟೈಲ್ (ಮತ್ತು ಕುಶಾಕ್‌ನ ಮಾಂಟೆ ಕಾರ್ಲೋ) ಟ್ರಿಮ್‌ಗಳೊಂದಿಗೆ ಮಾತ್ರ ಲಭ್ಯವಿತ್ತು.
ಬೆಲೆಗಳು
ಸ್ಕೋಡಾ ಸ್ಲಾವಿಯಾ |
|||
ವೇರಿಯಂಟ್ |
1.5-ಲೀಟರ್ ಟರ್ಬೋ-ಪೆಟ್ರೋಲ್ |
1.0- ಲೀಟರ್ ಟರ್ಬೋ-ಪೆಟ್ರೋಲ್ |
ವ್ಯತ್ಯಾಸ |
ಸ್ಲಾವಿಯಾ ಅಂಬಿಷನ್ ಎಂಟಿ |
14.94 ಲಕ್ಷ ರೂ. |
12.99 ಲಕ್ಷ ರೂ. |
+ 1.95 ಲಕ್ಷ ರೂ. |
ಸ್ಲಾವಿಯಾ ಅಂಬಿಷನ್ ಎಟಿ |
16.24 ಲಕ್ಷ ರೂ. |
14.29 ಲಕ್ಷ ರೂ. |
+ 1.95 ಲಕ್ಷ ರೂ. |
ಇದನ್ನೂ ಓದಿ: ನೀವು ಸ್ಕೋಡಾ ಕುಶಾಕ್ ಓನಿಕ್ಸ್ ಆವೃತ್ತಿಯನ್ನು 12.39 ಲಕ್ಷ ರೂ.ಗೆ ಪಡೆಯಬಹುದು
ಸ್ಕೋಡಾ ಕುಶಾಕ್ |
|||
ವೇರಿಯಂಟ್ |
1.5- ಲೀಟರ್ ಟರ್ಬೋ-ಪೆಟ್ರೋಲ್ |
1.0- ಲೀಟರ್ ಟರ್ಬೋ-ಪೆಟ್ರೋಲ್ |
ವ್ಯತ್ಯಾಸ |
ಕುಶಾಕ್ ಅಂಬಿಷನ್ ಎಂಟಿ |
14.99 ಲಕ್ಷ ರೂ. |
13.19 ಲಕ್ಷ ರೂ. |
+ 1.8 ಲಕ್ಷ ರೂ. |
ಕುಶಾಕ್ ಅಂಬಿಷನ್ ಎಟಿ |
16.79 ಲಕ್ಷ ರೂ. |
14.99 ಲಕ್ಷ ರೂ. |
+ 1.8 ಲಕ್ಷ ರೂ. |
*ಎಲ್ಲವೂ ಎಕ್ಸ್ ಶೋರೂಂ ದೆಹಲಿಯ ಬೆಲೆಗಳಾಗಿವೆ
ಸ್ಲಾವಿಯಾದ 1.5-ಲೀಟರ್ ಆಂಬಿಷನ್ ಟ್ರಿಮ್ ಅನುಗುಣವಾದ 1.0-ಲೀಟರ್ ವೇರಿಯಂಟ್‌ಗೆ ಹೋಲಿಸಿದರೆ 1.95 ಲಕ್ಷ ರೂ.ಗಳ ಪ್ರೀಮಿಯಂ ಅನ್ನು ಹೊಂದಿದೆ ಮತ್ತು ಕುಶಾಕ್‌ನ ಪ್ರೀಮಿಯಂ 1.8 ಲಕ್ಷ ರೂ.ಅನ್ನು ಹೊಂದಿದೆ. ಮಿಡ್-ಸ್ಪೆಕ್ ಟ್ರಿಮ್‌ಗಳಲ್ಲಿ ಈ ಪವರ್‌ಟ್ರೇನ್ ಆಯ್ಕೆಯನ್ನು ನೀಡುವ ಮೂಲಕ, ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾದ 1.5-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯಂಟ್‌ಗಳ ಎಂಟ್ರಿ ಬೆಲೆಯನ್ನು ಕ್ರಮವಾಗಿ 2.8 ಲಕ್ಷ ಮತ್ತು 2.16 ಲಕ್ಷದವರೆಗೆ ಕಡಿಮೆ ಮಾಡಿದೆ.
ಎರಡೂ ಮಾಡೆಲ್‌ಗಳು ಈಗ ಆಂಬಿಷನ್ 1.5-ಲೀಟರ್ ಆಟೋಮ್ಯಾಟಿಕ್ ಟ್ರಿಮ್‌ಗಳಲ್ಲಿ ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು (ರೂ. 5,000 ಪ್ರೀಮಿಯಂನಲ್ಲಿ) ಪಡೆಯುತ್ತವೆ. ಸ್ಲಾವಿಯಾದ ಆಂಬಿಷನ್ 1.5-ಲೀಟರ್ ಆಟೋಮ್ಯಾಟಿಕ್ ವೇರಿಯಂಟ್ ಬ್ಲ್ಯಾಕ್ ರೂಫ್‌ನೊಂದಿಗೆ ಕ್ರಿಸ್ಟಲ್ ಬ್ಲೂ ಆಯ್ಕೆಯನ್ನು ಪಡೆಯುತ್ತದೆ ಮತ್ತು ಕುಶಾಕ್‌ನ ಅದೇ ವೇರಿಯಂಟ್ ಹನಿ ಆರೆಂಜ್ ಜೊತೆಗೆ ಬ್ಲ್ಯಾಕ್ ರೂಫ್ ಆಯ್ಕೆಯೊಂದಿಗೆ ಲಭ್ಯವಿದೆ. ಎರಡೂ ಮಾಡೆಲ್‌ಗಳಲ್ಲಿ ಬ್ಲ್ಯಾಕ್ ರೂಫ್‌ನೊಂದಿಗೆ ಕಾರ್ಬನ್ ಸ್ಟೀಲ್ ಬಣ್ಣದ ಆಯ್ಕೆ ಕೂಡ ಲಭ್ಯವಿದೆ.
ಅಪ್‌ಡೇಟ್ ಮಾಡಲಾದ ಪವರ್‌ಟ್ರೇನ್‌ಗಳು
ಎರಡೂ ಮಾಡೆಲ್‌ಗಳು 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ ಎಂಬ ಒಂದೇ ರೀತಿಯ ಎಂಜಿನ್ ಆಯ್ಕೆಗಳೊಂದಿಗೆ ಪಾದಾರ್ಪಣೆ ಮಾಡುತ್ತಿವೆ. ಸ್ಕೋಡಾ ಈ ಎಂಜಿನ್‌ಗಳನ್ನು ಮುಂಬರುವ ಆರ್‌ಡಿಇ ಮಾನದಂಡಗಳಿಗೆ ಅನುಗುಣವಾಗಿ ಅಪ್‌ಡೇಟ್ ಮಾಡಿದೆ ಮತ್ತು ಅವು ಈಗ E20 ಇಂಧನದೊಂದಿಗೆ ಹೊಂದಿಕೊಳ್ಳುತ್ತವೆ. ಈ ಅಪ್‌ಡೇಟ್ ಈ ಮಾಡೆಲ್‌ಗಳ ಇಂಧನ ದಕ್ಷತೆಯನ್ನು ಶೇಕಡಾ ಏಳರಷ್ಟು ಹೆಚ್ಚಿಸಿದೆ ಎಂದು ಕಾರು ತಯಾರಕರು ಹೇಳುತ್ತಾರೆ.
1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಸಾಮರ್ಥ್ಯ 115PS ಮತ್ತು 178Nm ಆಗಿದೆ ಮತ್ತು ಇದನ್ನು ಸಿಕ್ಸ್-ಸ್ಪೀಡ್ ಮ್ಯಾನ್ಯುವಲ್ ಅಥವಾ ಸಿಕ್ಸ್-ಸ್ಪೀಡ್ ಟಾರ್ಕ್ ಕನ್ವೆರ್ಟರ್‌ನೊಂದಿಗೆ ಜೋಡಿಸಲಾಗಿದೆ. 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಸಾಮರ್ಥ್ಯ 150PS ಮತ್ತು 250Nm ಆಗಿದೆ ಮತ್ತು ಇದನ್ನು ಸಿಕ್ಸ್-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಸೆವೆನ್-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಗೆ ಜೋಡಿಸಲಾಗಿದೆ. ಈಗ, ಎಲ್ಲಾ ಪವರ್‌ಟ್ರೇನ್‌ಗಳು ಸ್ಲಾವಿಯಾ ಮತ್ತು ಕುಶಾಕ್ ಎರಡರ ಆಂಬಿಷನ್ ವೇರಿಯಂಟ್‌ನೊಂದಿಗೆ ಲಭ್ಯವಿವೆ.
ಪ್ರತಿಸ್ಪರ್ಧಿಗಳು
11.29 ಲಕ್ಷ ರೂ.ದಿಂದ 18.40 ಲಕ್ಷ ರೂ. ವರೆಗಿನ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿರುವ ಸ್ಲಾವಿಯಾ, ಫೋಕ್ಸ್‌ವ್ಯಾಗನ್ ವರ್ಟಸ್, ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸಿಯಾಜ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. 11.59 ಲಕ್ಷ ರೂ.ದಿಂದ 19.69 ಲಕ್ಷ ರೂ. ವರೆಗಿನ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿರುವ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗನ್, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟೊಯೊಟಾ ಹೈರೈಡರ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದವುಗಳೊಂದಿಗೆ ಸ್ಪರ್ಧಿಸುತ್ತದೆ.
ಇನ್ನಷ್ಟು ಓದಿ : ಸ್ಲಾವಿಯಾದ ಆನ್ ರೋಡ್ ಬೆಲೆ