• English
  • Login / Register

ಸ್ಕೋಡಾ ಕುಶಕ್ ಪಡೆದಿದೆ ಸೀಮಿತ ಆವೃತ್ತಿಯ ಮ್ಯಾಟ್ ಬಣ್ಣದ ಆಯ್ಕೆ

ಸ್ಕೋಡಾ ಸ್ಕೋಡಾ ಕುಶಾಕ್ ಗಾಗಿ tarun ಮೂಲಕ ಜುಲೈ 05, 2023 10:25 pm ರಂದು ಪ್ರಕಟಿಸಲಾಗಿದೆ

  • 111 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಮ್ಯಾಟ್ ಆವೃತ್ತಿಯು ಕೇವಲ 500 ಯೂನಿಟ್‌ಗಳನ್ನು ಹೊಂದಿದೆ, ನೀವೂ ಬಯಸಿದರೆ ತ್ವರೆ ಮಾಡಿ

Skoda Kushaq Matte Edition

 

  •  ಹೊಸ ಸ್ಕೋಡಾ ಕುಶಕ್ ಮ್ಯಾಟ್ ಆವೃತ್ತಿ ರೂ 16.19 ಲಕ್ಷದ ಆರಂಭಿಕ ಬೆಲೆಗೆ ಬಿಡುಗಡೆಯಾಗಿದೆ.

  •  ಟಾಪ್-ಎಂಡ್ ಸ್ಟೈಲ್ ಟ್ರಿಮ್‌ಗಿಂತ ರೂ 40,000 ದಷ್ಟು ದುಬಾರಿಯಾಗಿದೆ.

  •  ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ 1-ಲೀಟರ್ ಮತ್ತು 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ಗಳೊಂದಿಗೆ ಲಭ್ಯವಿದೆ.

  •  ಕಾರ್ಬನ್ ಸ್ಟೀಲ್ ಮ್ಯಾಟ್ ಪೈಂಟ್‌ ಹೊಂದಿದ್ದು ORVMಗಳು, ಡೋರ್ ಹ್ಯಾಂಡಲ್‌ಗಳು ಮತ್ತು ರಿಯರ್ ಸ್ಪಾಯ್ಲರ್‌  ಗ್ಲಾಸ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಪಡೆದಿದೆ.

  •  ಇಂಟೀರಿಯರ್‌ನಲ್ಲಿ ಯಾವುದೇ ಡಿಸೈನ್ ಬದಲಾವಣೆಗಳು ಇರುವುದಿಲ್ಲ; ದೊಡ್ಡದಾದ 10-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಪಡೆದಿದೆ.

 ಪೆಪ್ಪಿ ಇಂಜಿನ್‌ಗಳನ್ನು ಹೊಂದಿರುವ ಪ್ರೀಮಿಯಂ SUVಗಳ ಖರೀದಿದಾರರು ಮ್ಯಾಟ್ ಫಿನಿಷ್ ಅನ್ನು ಇಷ್ಟಪಡುತ್ತಾರೆ ಮತ್ತು ಈಗ ಈ ಸ್ಕೋಡಾ ಕುಶಕ್ ಕೂಡಾ ಕಾರ್ಬನ್ ಸ್ಟೀಲ್ ಶೇಡ್‌ನಲ್ಲಿ ಹೊಸ ಮ್ಯಾಟ್ ಆವೃತ್ತಿ ಫಿನಿಶಿಂಗ್ ಅನ್ನು ಪಡೆಯುತ್ತದೆ. ಇದು ಟಾಪ್-ಎಂಡ್ ಸ್ಟೈಲ್ ಮತ್ತು ಮೋಂಟೆ ಕಾರ್ಲೋ ವೇರಿಯೆಂಟ್ ನಡುವಿನ ಸೀಮಿತ-ರನ್ ಆವೃತ್ತಿಯಾಗಿದೆ ಹಾಗೂ ಇದರಲ್ಲಿ ಕೇವಲ 500 ಯೂನಿಟ್‌ಗಳು  ಮಾತ್ರ ಲಭ್ಯವಿದೆ.

 

ವೇರಿಯೆಂಟ್‌ವಾರು ಬೆಲೆಗಳು

ಮ್ಯಾಟ್ ಎಡಿಷನ್

ಮ್ಯಾನುವಲ್

ಆಟೋಮ್ಯಾಟಿಕ್

1-ಲೀಟರ್ TSI

ರೂ 16.19 ಲಕ್ಷ

ರೂ 17.79 ಲಕ್ಷ

1.5-ಲೀಟರ್ TSI

ರೂ 18.19 ಲಕ್ಷ

ರೂ 19.39 ಲಕ್ಷ

 ಈ ಮ್ಯಾಟ್ ಆವೃತ್ತಿ ಅನುಗುಣವಾದ ಸ್ಟೈಲ್ ವೇರಿಯೆಂಟ್‌ಗಳಿಗಿಂತ ರೂ 40,000 ದಷ್ಟು ದುಬಾರಿಯಾಗಿದೆ ಮತ್ತು ಟಾಪ್-ಸ್ಪೆಕ್ ಮೋಂಟೆ ಕಾರ್ಲೋಗಿಂತ ರೂ. 30,000ದಷ್ಟು ಅಗ್ಗವಾಗಿದೆ.

 

ಸ್ಟೈಲಿಂಗ್ ಬದಲಾವಣೆಗಳು

Skoda Kushaq Matte Edition Rear

ಸ್ಕೋಡಾ ಕುಶಕ್ ಈಗಾಗಲೇ ಕಾರ್ಬನ್ ಸ್ಟೀಲ್ ಶೇಡ್‌ನಲ್ಲಿ ಲಭ್ಯವಿದೆ, ಆದರೆ ಮ್ಯಾಟ್ ಪೈಂಟ್ ಫಿನಿಶ್ ತುಂಬಾ ಸ್ಪೋರ್ಟಿಯರ್ ಆಗಿ ಕಾಣುತ್ತದೆ. ಇದರೊಂದಿಗೆ ORVMಗಳು, ಡೋರ್ ಹ್ಯಾಂಡಲ್‌ಗಳು ಮತ್ತು ರಿಯರ್ ಸ್ಪಾಯ್ಲರ್ ಗ್ಲಾಸ್ ಬ್ಲ್ಯಾಕ್ ಫಿನಿಷಿಂಗ್ ಅನ್ನು ಹೊಂದಿದೆ. ಆದಾಗ್ಯೂ, ಇದು ಸಂಪೂರ್ಣ ಬ್ಲ್ಯಾಕ್ ಆಗಿರದೇ, ಗ್ರಿಲ್, ಟ್ರಂಕ್ ಗಾರ್ನಿಶ್ ಮತ್ತು ವಿಂಡೋ ಗಾರ್ನಿಶ್ ಕ್ರೋಮ್ ಫಿನಿಷಿಂಗ್ ಹೊಂದಿದೆ. 1.5-ಲೀಟರ್ TSI ವೇರಿಯೆಂಟ್‌ಗಳಿಗೆ ವಿಶಿಷ್ಟ ಬ್ಯಾಡ್ಜ್ ಕೂಡಾ ಇದ್ದು, 1-ಲೀಟರ್ TSI ವೇರಿಯೆಂಟ್‌ಗಿಂತ ಭಿನ್ನವಾಗಿ ಕಾಣಲು ನೆರವಾಗುತ್ತದೆ.

 

ಇಂಟೀರಿಯರ್‌ಗೆ ಯಾವುದೇ ಬದಲಾವಣೆಯಿಲ್ಲ

Skoda Kushaq Cabin

 ಇಂಟೀರಿಯರ್‌ನಲ್ಲಿ ಯಾವುದೇ ಸ್ಟೈಲಿಂಗ್ ಬದಲಾವಣೆ ಇರುವುದಿಲ್ಲ ಮತ್ತು ಇದು ಈಗಾಗಲೇ ಲೆದರೆಟ್ ಅಪ್‌ಹೋಲ್ಸ್‌ಟ್ರಿಯೊಂದಿಗೆ ಬ್ಲ್ಯಾಕ್ ಕ್ಯಾಬಿನ್ ಅನ್ನು ಪಡೆದಿದೆ. ಆದಾಗ್ಯೂ, 10-ಇಂಚು ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು, ಇದು ಬಿಡುಗಡೆಯ ಸಮಯದಲ್ಲೇ ಲಭ್ಯವಿತ್ತು. ಈ ಸಿಸ್ಟಮ್ ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಹಾಗೂ ಸಬ್‌ವೂಫರ್‌ನೊಂದಿಗೆ 6-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನೂ ಹೊಂದಿದೆ. 

 ಇದನ್ನೂ ಓದಿ: ಸಮೀಕ್ಷೆಯ ಪ್ರಕಾರ ಕಾರು ಖರೀದಿಸುವ ನಿರ್ಧಾರದಲ್ಲಿ ಇಂಧನ ದಕ್ಷತೆಗಿಂತಲೂ ಸುರಕ್ಷತಾ ರೇಟಿಂಗ್‌ಗಳು ಮತ್ತು ಏರ್‌ಬ್ಯಾಗ್‌ಗಳು ಹೆಚ್ಚು ಮುಖ್ಯವಾದವು

 ಫೀಚರ್‌ಗಳ ವಿಚಾರದಲ್ಲಿ, ಇದು ಇಲೆಕ್ಟ್ರಿಕ್ ಸನ್‌ರೂಫ್, ಆಟೋಮ್ಯಾಟಿಕ್ AC, 8-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜರ್, ಆರರ ತನಕ ಏರ್‌ಬ್ಯಾಗ್‌ಗಳು, ESC ಮತ್ತು ರಿಯರ್ ಕ್ಯಾಮರಾ ಹೊಂದಿದೆ.

ಎಲ್ಲಾ ಪವರ್‌ಟ್ರೇನ್ ಆಯ್ಕೆಗಳು

Skoda Kushaq Engine

ಈ ಕುಶಕ್ ಮ್ಯಾಟ್ ಆವೃತ್ತಿಯನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 115PS 1-ಲೀಟರ್ ಮತ್ತು 150PS 1.5-ಲೀಟರ್ ಟರ್ಬೋ ಪೆಟ್ರೋಲ್‌ ಇಂಜಿನ್‌ಗಳೊಂದಿಗೆ ನೀಡಲಾಗಿದೆ. 1-ಲೀಟರ್ ಇಂಜಿನ್ 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆ ಪಡೆದಿದ್ದರೆ, ದೊಡ್ಡ ಇಂಜಿನ್ 7-ಸ್ಪೀಡ್ DSG (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್) ಯೂನಿಟ್‌ನೊಂದಿಗೆ ಬರುತ್ತದೆ. 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಈ ಕುಶಕ್‌ನ ಬೆಲೆ ರೂ 11.59 ಲಕ್ಷದಿಂದ ರೂ 19.69 ಲಕ್ಷದ (ಎಕ್ಸ್-ಶೋರೂಂ) ತನಕ ಇದೆ, ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, MG ಎಸ್ಟರ್, ಟೊಯೋಟಾ ಹೈರೈಡರ್, ಮಾರುತಿ ಗ್ರ್ಯಾಂಡ್ ವಿಟಾರಾ, ಫೋಕ್ಸ್‌ವಾಗನ್ ಟೈಗನ್, ಮತ್ತು ಮುಂಬರುವ ಕಾರುಗಳಾದ ಹೋಂಡಾ ಎಲಿವೇಟ್ ಮತ್ತು ಸಿಟ್ರಾನ್ C3 ಏರ್‌ಕ್ರಾಸ್‌ಗೆ ಪೈಪೋಟಿ ನೀಡುತ್ತದೆ.

 ಇನ್ನಷ್ಟು ಓದಿ : ಕುಶಕ್‌ನ ಆನ್‌ರೋಡ್‌ ಬೆಲೆ

was this article helpful ?

Write your Comment on Skoda ಸ್ಕೋಡಾ ಕುಶಾಕ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience