Tata Curvv ಮತ್ತು Tata Curvv EV ಯ ಅನಾವರಣ, ಇವುಗಳಲ್ಲಿ ಇವಿ ಆವೃತ್ತಿಯನ್ನು ಮೊದಲು ಬಿಡುಗಡೆ
ಜುಲೈ 19, 2024 07:17 pm ರಂದು shreyash ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಕರ್ವ್ ಮತ್ತು ಟಾಟಾ ಕರ್ವ್ ಇವಿ ಭಾರತದಲ್ಲಿನ ಮೊದಲ ಮಾಸ್-ಮಾರ್ಕೆಟ್ ಎಸ್‌ಯುವಿ-ಕೂಪ್ ಕಾರು ಆಗಿದೆ ಮತ್ತು ಟಾಟಾದ ಕಾರಿನಲ್ಲಿ ಮೊದಲ ಬಾರಿಗೆ ಪರಿಚಯಿಸುತ್ತಿರುವ ಕೆಲವು ಫೀಚರ್‌ಗಳನ್ನು ಕರ್ವ್ ಹೋಡಿ ಹೊಂದಿದೆ.
- ಹೊರಭಾಗದ ಹೈಲೈಟ್ಸ್‌ಗಳು ಕೂಪ್ ಶೈಲಿಯ ರೂಫ್‌ಲೈನ್, ಕನೆಕ್ಟೆಡ್ ಎಲ್ಇಡಿ ಲೈಟಿಂಗ್ ಸೆಟಪ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿವೆ.
- ಒಳಭಾಗದಲ್ಲಿ ಇದು ನೆಕ್ಸಾನ್‌ನಿಂದ ಪ್ರೇರಿತ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಪ್ರಕಾಶಿತ ಟಾಟಾ ಲೋಗೋದೊಂದಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.
- ಕರ್ವ್ ಇವಿಯ ಬೆಲೆಗಳನ್ನು ಮೊದಲು ಘೋಷಿಸಲಾಗುವುದು ಮತ್ತು ಇದು 20 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಹುದು.
- ಇಂಧನ ಚಾಲಿತ ಕರ್ವ್ ಆವೃತ್ತಿಯ (ICE) ಬೆಲೆಗಳು 10.50 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ.
ಹಲವಾರು ಸ್ಪೈ ಶಾಟ್‌ಗಳು ಮತ್ತು ಟೀಸರ್‌ಗಳ ಸಿರೀಸ್‌ನ ನಂತರ, ಟಾಟಾ ಕರ್ವ್ ಮತ್ತು ಟಾಟಾ ಕರ್ವ್ ಇವಿ ಅಂತಿಮವಾಗಿ ಉತ್ಪಾದನೆಗೆ ಸಿದ್ಧವಾದ ರೂಪದಲ್ಲಿ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದೆ. ಆರಂಭದಲ್ಲಿ, ಟಾಟಾವು ತನ್ನ ಕರ್ವ್‌ನ ಎಲೆಕ್ಟ್ರಿಕ್ ಆವೃತ್ತಿಯ ಬೆಲೆಗಳನ್ನು ಘೋಷಿಸುತ್ತದೆ, ಮತ್ತು ICE (ಆಂತರಿಕ ದಹನಕಾರಿ ಎಂಜಿನ್) ಆವೃತ್ತಿಯನ್ನು ನಂತರ ಬಿಡುಗಡೆ ಮಾಡಲಾಗುವುದು.
ಡಿಸೈನ್
ಕರ್ವ್ ನಮ್ಮ ಮಾರುಕಟ್ಟೆಯಲ್ಲಿ ಮೊದಲ ಮಾಸ್ ಮಾರ್ಕೆಟ್ ಎಸ್‌ಯುವಿ-ಕೂಪ್ ಕಾರು ಆಗಿದೆ. ಹಾಗೆಯೇ, ಇದರ ಒಟ್ಟಾರೆ ವಿನ್ಯಾಸವು ಅಸ್ತಿತ್ವದಲ್ಲಿರುವ ಟಾಟಾ ಕಾರುಗಳಿಂದ ಸ್ಫೂರ್ತಿ ಪಡೆದಿದೆ. ಇಂಧನ ಚಾಲಿತ ಮತ್ತು ಇವಿ ಎರಡೂ ಆವೃತ್ತಿಗಳು ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಮತ್ತು ಬಂಪರ್‌ನಲ್ಲಿ ಎಲ್ಲಾ-ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಅನ್ನು ಒಳಗೊಂಡಿವೆ. ಇಂಧನ ಚಾಲಿತ ಆವೃತ್ತಿತು ಸಂಪೂರ್ಣ ಕಪ್ಪು ಗ್ರಿಲ್ ಅನ್ನು ಹೊಂದಿದೆ, ಆದರೆ ಇವಿ ಆವೃತ್ತಿಯು ಗ್ರಿಲ್‌ನಲ್ಲಿ ಬಾಡಿ-ಕಲರ್, ಮುಚ್ಚಿದ-ಆಫ್ ಪ್ಯಾನೆಲ್ ಅನ್ನು ಪ್ರದರ್ಶಿಸುತ್ತದೆ.
ಸೈಡ್‌ನಲ್ಲಿ, ಇವಿ ಮತ್ತು ಇಂಧನ ಚಾಲಿತ ಎರಡೂ ಆವೃತ್ತಿಗಳು ಏರೋಡೈನಾಮಿಕಲಿ ಶೈಲಿಯ ಅಲಾಯ್‌ವೀಲ್‌ಗಳನ್ನು ಹೊಂದಿವೆ. ಅವುಗಳು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಸಹ ಒಳಗೊಂಡಿವೆ, ಇದು ಟಾಟಾ ಕಾರಿನಲ್ಲಿ ಮೊದಲನೆಯ ಬಾರಿ ನೀಡಲಾಗುತ್ತಿದೆ. ಹಿಂಭಾಗದಲ್ಲಿ, ಕರ್ವ್‌ನ ಎರಡೂ ಆವೃತ್ತಿಗಳು ಕನೆಕ್ಟೆಡ್ ಟೈಲ್ ಲೈಟ್ ಸೆಟಪ್ ಅನ್ನು ಹೊಂದಿವೆ.
ಇಂಟಿರೀಯರ್
ಟಾಟಾವು ತನ್ನ ಕರ್ವ್ ಮತ್ತು ಕರ್ವ್ ಇವಿಯ ಒಳಭಾಗವನ್ನು ಪ್ರದರ್ಶಿಸದಿದ್ದರೂ, ಇದು ಟಾಟಾ ನೆಕ್ಸಾನ್‌ನಂತೆಯೇ ಇರುತ್ತದೆ. ಸ್ಟೀರಿಂಗ್ ಚಕ್ರವು ಹ್ಯಾರಿಯರ್-ಸಫಾರಿ ಜೋಡಿಯಲ್ಲಿ ನೀಡಿರುವ ಪ್ರಕಾಶಿತ ಟಾಟಾ ಲೋಗೋದೊಂದಿಗೆ 4-ಸ್ಪೋಕ್ ಯುನಿಟ್ ಅಗಿದೆ.
ಫೀಚರ್‌ಗಳು & ಸುರಕ್ಷತೆ
ತಂತ್ರಜ್ಞಾನದ ವಿಷಯದಲ್ಲಿ, ಇವಿ ಮತ್ತು ಇಂಧನ ಚಾಲಿತ ಎರಡೂ ಆವೃತ್ತಿಗಳು 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಎರಡರಲ್ಲೂ ಸುರಕ್ಷತಾ ವೈಶಿಷ್ಟ್ಯಗಳು ಆರು ಏರ್‌ಬ್ಯಾಗ್‌ಗಳು, ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್ ಅನ್ನು ಒಳಗೊಂಡಿರಬಹುದು.
ಪವರ್‌ಟ್ರೈನ್ ಆಯ್ಕೆಗಳು
ಕರ್ವ್‌ನ ಇಂಧನ ಚಾಲಿತ ಅವೃತ್ತಿಯು ಬಹುನಿರೀಕ್ಷಿತ 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ, ಆದರೆ ಇದು ನೆಕ್ಸಾನ್‌ನಿಂದ ಎರವಲು ಪಡೆದ 1.5-ಲೀಟರ್ ಡೀಸೆಲ್ ಎಂಜಿನ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ. ಇದರ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:
ಎಂಜಿನ್ |
1.2- ಲೀಟರ್ T-GDi ಟರ್ಬೋ-ಪೆಟ್ರೊಲ್ |
1.5 ಲೀಟರ್ ಡೀಸೆಲ್ |
ಪವರ್ |
125 ಪಿಎಸ್ |
115 ಪಿಎಸ್ |
ಟಾರ್ಕ್ |
225 ಎನ್‌ಎಮ್ |
260 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್, 7-ಸ್ಪೀಡ್ ಡಿಸಿಟಿ (ನಿರೀಕ್ಷಿತ) |
6-ವೇಗದ ಮ್ಯಾನುಯಲ್ |
ಮತ್ತೊಂದೆಡೆ ಕರ್ವ್ ಇವಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಬಹುದು, ಮತ್ತು ಇದು ಸುಮಾರು 500 ಕಿಮೀ ವರೆಗೆ ರೇಂಜ್ ಅನ್ನು ನೀಡಬಹುದು. ಕರ್ವ್ ಇವಿಗಾಗಿ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ಟಾಟಾ ಇನ್ನೂ ಬಹಿರಂಗಪಡಿಸಿಲ್ಲ.
ಬಿಡುಗಡೆ, ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಮೊದಲು ಕರ್ವ್ ಇವಿಯ ಬೆಲೆಗಳನ್ನು ಪ್ರಕಟಿಸುತ್ತದೆ ಮತ್ತು ಇದು 20 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು. ಕರ್ವ್‌ನ ಇಂಧನ ಚಾಲಿತ ಆವೃತ್ತಿಯ ಬೆಲೆಗಳು 10.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು. ಕರ್ವ್ ಇವಿಯು ಮಾರುಕಟ್ಟೆಯಲ್ಲಿ ಸಿಟ್ರೊಯೆನ್ ಬಸಾಲ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಇದರೊಂದಿಗೆ ಎಮ್‌ಜಿ ಜೆಡ್‌ಎಸ್ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಯಂತಗಳಿಗೂ ಸ್ಪರ್ಧೆಯನ್ನು ಒಡ್ಡುತ್ತದೆ. ಹಾಗೆಯೇ, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರ್ಡರ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಹೋಂಡಾ ಎಲಿವೇಟ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಎಂಜಿ ಆಸ್ಟರ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪರ್ಯಾಯವಾಗಿ ಇದನ್ನು ಪರಿಗಣಿಸಬಹುದು.
ಟಾಟಾ ಕರ್ವ್ ಕುರಿತ ಹೆಚ್ಚಿನ ಆಪ್‌ಡೇಟ್‌ಗಳಿಗಾಗಿ, ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.